ಅಂದು ಪದವಿ ಕಾಲೇಜ್ ನ ಮೊದಲ ದಿನ, ನಾನು ಮೂರನೇ ಬೆಂಚಿನಲ್ಲಿ ಕುಳಿತುಕೊಳ್ಳುತಿದ್ದೆ,ಅಲ್ಲದೇ ಅದೇ ಸಾಲಿನ ಮೂರನೇ ಬೇಂಚಿಗೆ ಒಂದು ಸುಂದರವಾದ ಹುಡುಗಿಕುಳಿತುಕೊಳ್ಳುತ್ತಿದ್ದಳು . ಅಲ್ಲದೇ ನಾನು ಅವಳನ್ನು ಮಾತನಾಡಿಸಲು ತುಂಬಾ ಪ್ರಯತ್ನ ಪಟ್ಟಿದ್ದೆ,ಅಲ್ಲದೆ ಅವಳು ಕೊಡ ಆಗಾಗ ನನ್ನ ಕಡೆ ಕಿರು ನಗೆಯಿಂದ ನನ್ನ ನೊಡುತ್ತಿದ್ದಳು.ಒಂದು ದಿನ ನಾನು ಅವಳನ್ನು ಪೆನ್ನು ಕೇಳುವ ಮುಖಾಂತರ ಪರಿಚಯವನ್ನು ಮಾಡಿಕೊಂಡೆವು,ಅಲ್ಲದೆ ನಮ್ಮ ನಡುವೆ ಪ್ರೀತಿ ಚಿಗುರತೊಡಗಿತು.ನಂತರದ ದಿನಗಳಲ್ಲಿ ಸಿನಿಮಾ  ,ಪಾರ್ಕ್ ಎಂದು ಸುತ್ತಾಡತೊಡಗಿದೆವು, ತದನಂತರ ಅವಳಿಗೆ ನಮ್ಮಮನೆಯ ಸದಸ್ಯರುಗಳ ಪೋಟೋಗಳನ್ನುತೋರಿಸಿ,ಪರಿಚಯಿಸಿದೆನು.ನಂತರ ಅವಳು ಕೊಡ ಅವಳ ಮನೆಯ ಸದಸ್ಯರ ಫೋಟೋ ಗಳನ್ನು ತೋರಿಸಿ ಪರಿಚಯಿಸಿದಳು..ದಿನಗಳು ಉರುಳಿದ ಹಾಗೆ ಒಬ್ಬರನೊಬ್ಬರು ಬಿಟ್ಟು ಇರಲಾರದಷ್ಟು ಸಲುಗೆ ಬೆಳೆಯಿತು.ಒಂದು ದಿನನಾವು ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಚಿತ್ರದುರ್ಗಕ್ಕೆ ತೆರಳಿದ್ದೆವು.ಪರೀಕ್ಷೆ ಬರೆದು ಅಲ್ಲಿನ ಎಲ್ಲಾ ಪ್ರವಾಸಿ ಸ್ಥಳಗಳನ್ನು ನೋಡಿದ್ದೆವು ನಂತರ ಅಲ್ಲಿನ ನನ್ನ ಸ್ನೇಹಿತನ ಮನೆಯಲ್ಲಿ ಉಳಿದು ಕೊಂಡು ಮರುದಿನ ಊರಿಗೆ ವಾಪಸ್ ಆದೆವು,  ನಾನ್ನ ಮತ್ತು ಅವಳ ಜೊತೆಗಿನ ಒಡನಾಟ ಅವಳ ಮನೆಯವರಿಗೆ  ತಿಳಿಯಿತು ಜಾತಿಯ.  ವಿಷಯವಾಗಿ ಬೈದು ಹೊಡೆದರು,ಅವಳಿಗೆ ಅನ್ಯಜಾತಿಯ ಹುಡುಗನನ್ನು ಪ್ರೀತಿಸಬಾರದ ಹಗೆ ಅವಳ ಮನಸ್ಸನ್ನು ಬದಲಾಯಿಸಿದರು.ನಂತರ ಆ ಹುಡುಗಿ ನನ್ನ ಬಳಿ ಬಂದು ನನ್ನ ಮರೆತು ಬಿಡು ನಿನ್ನ ನನ್ನ ಮದುವೆಗೆ ಒಪ್ಪಲಿಲ್ಲ ಕಾರಣ ಜಾತಿ ಯಂತೆ ನಾನು ನನ್ನ ಮನೆಯವರ ವಿರುದ್ಧ ವಾಗಿರಲು ಇಷ್ಟವಿಲ್ಲ,ದಯವಿಟ್ಟು ನಾನು ನನ್ನ  ಮರೆತು ಬಿಡು  ,ಎಂದಾಗ ನನ್ನ ಮನಸ್ಸಿನಲ್ಲಿ ಅರಳಿದ ಹೊವಿನಂತ ಪ್ರೀತಿಯನ್ನು ಒಸಕಿದ ಹಾಗೆ ಆಯಿತು.ಆಗ ನನಗೆ ಪ್ರೀತಿ ಎಂಬುದು ನೋಡಲು ಒಂದು ಸುಂದರವಾದ ಗುಲಾಬಿ ಹೊ ವಿನಂತೆ,ಅದರಿಂದ ಬರೆ ನೋವೆ ವರತು ಸುಖ ಸಿಗುವುದು  ಕೇವಲ ಕ್ಷಣಿಕವಾದುದು ಆ ಸಂದರ್ಭ ಇಂದಿಗೂ  ಕೊಡ ನನಗೆ ಮರೆಯಲಾಗದ ಒಂದು ಕಹಿ ಘಟನೆಯಾಗಿದೆ.
 

ಮೌನೇಶ್ವರಚಾರಿ.    

ಪತ್ರಿಕೋದ್ಯಮ ವಿಭಾಗ

ದಾವಣಗೆರೆ ವಿಶ್ವವಿದ್ಯಾಲಯ