ಭಾರತ ದೇಶ ದಾರ್ಶನಿಕರು, ಚಿಂತಕರು, ಜ್ಞಾನಿಗಳನ್ನು ಒಳಗೊಂಡ ರಾಷ್ಟ. ಬುದ್ಧ, ಬಸವಣ್ಣ, ಫುಲೆ ಮೊದಲಾದವರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಇಂಥ ಮಹಾನ್ ವ್ಯಕ್ತಿಗಳ ಪ್ರಭಾವ ಹಲವು ವ್ಯಕ್ತಿಗಳ ಮೇಲೆ ಬೀರುತ್ತದೆ. ಪ್ರತಿಯೊಬ್ಬ ದಾರ್ಶನಿಕನು ಒಂದು ವ್ಯವಸ್ಥೆಯಲ್ಲಿನ ತೊಡಕುಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. ಭಾರತ ದೇಶ ಹಲವು ಸಮಸ್ಯೆಗಳ ಗೂಡಾಗಿದೆ. ಇಲ್ಲಿ ಸಾಮಾಜಿಕ ನ್ಯಾಯ, ಅಸ್ಪೃಶ್ಯತೆ, ಲಿಂಗತಾರತಮ್ಯ ಇತ್ಯಾದಿಯಾಗಿ ಬೇರುಬಿಟ್ಟಿವೆ. ಇಂತಹ ಜಲ್ವಂತ ಸಮಸ್ಯೆಗಳಿಗೆ ಸರಿಯಾದ ಉತ್ತರ ನೀಡಲು, ಮಾನವೀಯ ಸಂಬಂಧಗಳನ್ನು ಕಟ್ಟಿಕೊಡಲು ಕೆಲವು ನಾಯಕರು, ಕವಿಗಳು, ಚಿಂತಕರು, ದಾರ್ಶನಿಕರು ಪ್ರಮುಖ ಪಾತ್ರವಹಿಸುತ್ತಾರೆ. ಕನ್ನಡದ ಪಂಪ, ರನ್ನ, ಪೊನ್ನ, ಜನ್ನ, ಬಸವಣ್ಣ, ಕುವೆಂಪು ಇತ್ಯಾದಿ ಕವಿಗಳು ಮಾನವೀಯತೆಯೊಂದೇ ತನ್ನ ಜಾತಿ ಮತ್ತು ಜೀವನ ಧರ್ಮ ಎಂದು ತಿಳಿಸಿದವರು. ಪಂಪ ತನ್ನ ಕಾಲದಲ್ಲಿ ಮನುಷ್ಯ ಜಾತಿ ತಾನೋಂದೆ ವಲಂ ಎಂದು ಹೇಳುವ ಮೂಲಕ ಇಡಿ ಮಾನವ ಕುಲವನ್ನೇ ಒಟ್ಟು ಗೂಡಿಸುತ್ತಾನೆ. ೧೨ನೇ ಶತಮಾನದ ಬಸವಣ್ಣನ ಕಾಲದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಮಹಾಕ್ರಾಂತಿಯೆ ನೆಡೆಯುತ್ತದೆ. ವೃತಿಯಿಂದ ಜಾತಿಗಳಾದವೆ ಹೊರತು ವ್ಯಕ್ತಿಯಿಂದಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ೨೦ ರ ದಶಕದ ಕುವೆಂಪು ಅವರು ’ವಿಶ್ವಪತ, ಮನುಜಮತ, ಸರ್ವೊದಯ, ಸಮನ್ವಯ, ಪೂರ್ಣದೃಷ್ಟಿ’ ಎಂಬ ವಿಶ್ವಸಂದೇಶವನ್ನು ಸಾರುತ್ತಾರೆ. ಈ ಎಲ್ಲಾ ಕವಿಗಳ, ಚಿಂತಕರ, ದಾರ್ಶನಿಕರ ವಿಶ್ವ ಸಂದೇಶ ಸರ್ವರನ್ನು ಸಮಾನತೆಯೆಡೆಗೆ ಕೊಂಡಯ್ಯುವ ಆಶಯವಾಗಿದೆ.
ಈ ರೀತಿಯ ಆಶಯ, ಕನಸುಗಳ ಒಳಗೊಂಡ ವ್ಯಕ್ತಿ. ನಮ್ಮ ದೇಶದ ಮಾಹಾನ್ ಮನವತಾವಾದಿ, ವಿಶ್ವದ ಶ್ರೇಷ್ಟ ಜ್ಞಾನಿ, ಮುತ್ಸದ್ಧಿ, ಶ್ಟೇಷ್ಟ ಇತಿಹಾಸಕಾರ, ಅರ್ಥಶಾಸ್ತ್ರಜ್ಞ, ರಾಜನೀತಿ ಪಂಡಿತ, ಸಂವಿಧಾನ ಶಿಲ್ಪಿಡಾ. ಬಿ.ಆರ್.ಅಂಬೇಡ್ಕರ್ ಅವರು. ೨೦ನೇ ಶತಮಾನದ ಶ್ರೇಷ್ಟ ಮಹಾಪುರುಷರಲ್ಲಿ ಅಂಬೇಡ್ಕರ್ ಅವರು ಸಮಸ್ತ ಭಾರತೀಯರ ಸಬಲೀಕರಣಕ್ಕೆ ಪೂರಕವಾದ ಐತಿಹಾಸಿಕ ಹೋರಾಟಗಳನ್ನು ಕಂಡುಕೊಂಡವರು. ಅಂಬೇಡ್ಕರ್ ಅವರ ಬಹುಮುಖಿ ವಿಚಾರಧಾರೆಗಳು ಮತ್ತು ಹೋರಾಟಗಳು ಇಂದಿಗೂ ಕೂಡ ಭಾರತದ ಕೋಟ್ಯಾನುಕೋಟಿ ಶೋಶಿತರ ಶಿಕ್ಷಣ, ಸಂಘಟನೆ, ವಿಮೋಚನೆ, ಮತ್ತು ಸಬಲೀಕರಣಗಳಿಗೆ ದಾರಿದೀಪವಾಗಿದೆ. ಭಾರತದ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗಳ ವಿರುದ್ಧ ’ಸಾಮಾಜಿಕ ನ್ಯಾಯಪರ’ ಹೋರಾಟಗಳನ್ನು ದಿಟ್ಟತನದಿಂದ ನೆಡೆಸಿದವರು. ತಮ್ಮ ಜೀವನದುದ್ದಕ್ಕೂ ಹೋರಾಟದ ರಾಜಕಾರಣ ಮಾಡಿದರೆ ಹೊರತು ಅವಕಾಶವಾದಿ ರಾಜಕಾರಣ ಮಾಡಿದವರಲ್ಲ. ಶೋಷಿತ ಭಾರತೀಯರ ಹಿತರಕ್ಷಣೆ ಮಾಡುವ ಸಲುವಾಗಿ ಸಿಹಿಗಿಂತ ಕಹಿಯನ್ನೆ ಉಂಡಿದ್ದು ಹೆಚ್ಚು. ಜಗತ್ತಿನ ರಾಜಕೀಯ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಭಾರತೀಯ ಪರಂಪರೆ ಮತ್ತು ಸಂದರ್ಭಗಳಿಗೆ ಸೂಕ್ತವಾಗುವಂತ ಸಾಮಾಜಿಕ ನ್ಯಾಯ, ಸಾಮಾಜಿಕ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳನ್ನು ಒಳಗೊಂಡ ವ್ಯವಸ್ಥೆಯನ್ನು ರೂಪಿಸುವಂತೆ ಬರಹಗಳು ಭಾಷಣಗಳಲ್ಲಿ ಸ್ಪಷ್ಟವಾಗಿ ತಿಳಿಸಿದವರು. ಇಂತಹ ಮಹಾನ್ ಚಿಂತಕ ಅಂಬೇಡ್ಕರ್ ಅವರು ಮಹಾರಾಷ್ಟದ ’ಮಹರ್’ ಎಂಬ ಅಸ್ಪೃಶ್ಯ ಸಮುದಾಯದಲ್ಲಿ ಏಪ್ರಿಲ್ ೧೪,೧೮೯೧ ರಂದು ರಾಮ್ ಜೀ ಸಕ್ಪಾಲ್ ಮತ್ತು ಭಿಮಾಬಾಯಿ ದಂಪತಿಗಳಿಗೆ ಜನಿಸಿದರು. ಚಿಕ್ಕವಯಸ್ಸಿನಲ್ಲೆ ಓದುವ ಹವ್ಯಾಸವನ್ನು ಚೆನ್ನಾಗಿ ಬೆಳಸಿಕೊಂಡಿದ್ದರು. ಬರೋಡದ ಮಹಾರಾಜರಿಂದ ಉನ್ನತ ವ್ಯಾಸಂಗಕ್ಕೆ ನೆರವನ್ನು ಪಡೆದು, ಭಾರತದ ನೇತಾರರಲ್ಲಿ ಮೊಟ್ಟ ಮೊದಲಿಗೆ ವಿದೇಶಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದರು. ಅವರು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಿ ಉನ್ನತ ವ್ಯಾಸಂಗವನ್ನು ಮುದುವರಿಸಿದರು. ಈ ಶಿಕ್ಷಣ ಸಂಸ್ಥೆಯಲ್ಲಿ ಲಿಂಕನ್, ಬೂಕರ್, ವಾಷಿಂಗ್ಟನ್, ಮೊದಲಾದ ಮಹಾನೀಯ ಶಿಕ್ಷಣ ತಪಸ್ವಿಗಳ ಪರಿಚಯವಾಯಿತು. ಇವರಿಗೆ ’ದಿ ಗ್ರೇಟ್ ಎಪಿಕ್ ಆಫ್ ಇಂಡಿಯಾ’ ಈಯರ್‍ಲಿ ಹಿಸ್ಟರಿ ಆಫ್ ಇಂಡಿಯಾ’ ’ಹಿಂದೂ ಮ್ಯಾನರ್‍ಸ್ ಅಂಡ್ ಕಸ್ಟಂಸ್’ ’ದಿ ಒರಿಜಿನ್ ಹೋಮ್ ಆಫ್ದ ಆರ್ಯನ್ಸ್’ ’ಹಿಂದೂ ಕಸ್ಟಂಸ್ ಅಂಡ್ ದೇರ್ ಅರಿಜನ್ಸ್’ ಮೊದಲಾದ ಪುಸ್ತಕಗಳು ಅಂಬೇಡ್ಕರ್ ಭಾರತದ ಸಾಮಾಜಿಕ ಅನಿಷ್ಟಗಳು, ಜಾತಿವ್ಯವಸ್ಥೆಯ ಉಗಮ, ಅಸ್ಪೃಶ್ಯತೆ ಕಾರಣಗಳು,, ಆರ್ಯರ ಮೂಲ ಸ್ಥಾನ ಮೊದಲಾದ ವಿಚಾರಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ನೆರವಾದವು.
ಅಂಬೇಡ್ಕರ್ ಅವರು ಭಾರತೀಯ ಸಂವಿಧಾನವನ್ನು ರಚಿಸಿ ’ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲ’ನ್ನು ಒದಗಿಸುವ ಆಶಯ ಒಳಗೊಂಡವರು. ೧೯೧೮ ರಲ್ಲಿ ಭಾರತಕ್ಕೆ ಆಗಮಿಸಿದ ’ಸೌಬರೋ’ ಸುಧರಣಾ ಸಮಿತಿಯ ಮುಂದೆ, ಭಾರತದ ವಿವಿಧ ಸಮುದಾಯಗಳಿಗೆ ನೀಡಬೆಕಾದ ಮತದಾನದ ಹಕ್ಕನ್ನು ಅಧಿಕಾರದ ವಿಚಾರಧಾರೆಗಳ ಮಂಡಿಸಿ ಶೋಷಿತ ವರ್ಗಗಳ ಅಪ್ರತಿಮ ನಾಯಕನೆಂದು ಸಾಬೀತುಪಡಿಸಿದರು. ಅಸ್ಪೃಶ್ಯತೆಯು ದಲಿತರ ವ್ಯಕ್ತಿತ್ವ ವಿಕಾಸವನ್ನು ಕುಂಠಿತಗೊಳಿಸುವುದಲ್ಲದೆ, ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿದೆ-ಎಂದು ಅಂಬೇಡ್ಕರ್ ಅವರು ಬ್ರಿಟೀಷರಿಗೆ ಮಾಡಿದ ವಾದ ಅಂದು ಅವರ ಮನ ಕಲಕುವಂತೆ ಮಾಡಿತು. ಪೌರತ್ವ ಎಂದರೆ ಹಕ್ಕುಗಳ ಪಟ್ಟಿ, ವೈಯಕ್ತಿಕವಾದ ಸ್ವಾತಂತ್ರ್ಯ, ಭದ್ರತೆ, ಆಸ್ತಿಹಕ್ಕು, ಅಭಿಪ್ರಾಯ ಸ್ವಾತಂತ್ರ್ಯ, ಆಡಳಿತದಲ್ಲಿ ಪ್ರಾತಿನಿದ್ಯ, ಸಾಮಾಜಿನ್ಯಾಯ, ಸಮಾನತೆ, ಸಂಘಟನಾಸ್ವಾತಂತ್ರ್ಯ ಮೊದಲಾದ ಹಕ್ಕುಗಳನ್ನು ದಲಿತರಿಗೆ ಕೊಡುವುದು ಅತ್ಯವಶ್ಯಕ-ಎಂದು ಅಂಬೇಡ್ಕರ್ ಪ್ರತಿಪಾದಿಸಿ ಅಸ್ಪೃಶ್ಯರನ್ನು ನಾಗರಿಕ ಸಮಾಜದಲ್ಲಿ ಪೌರರೆಂದು ಪರಿಗಣಿಸುವಂತೆ ಮಾಡಿದರು. ಭಾರತದ ನಿಮ್ನವರ್ಗಗಳಿಗೆ, ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಹಿತವನ್ನು ಕಾಯುವಂತ ಪ್ರಾತಿನಿದ್ಯವನ್ನು ನೀಡಬೇಕೆಂದು ಬೇಡಿಕೆಗಳನ್ನು ಇಟ್ಟಿದ್ದರು. ’ದಲಿತರು ನದಿಯಲ್ಲಿ ಹರಿಯುವ ನೀರಿನಂತೆ ಆಗದೆ ತಡೆದು ನಿಲ್ಲುವ ಬಂಡೆಗಳಾಗಬೇಕು ಎಂಬುದು ದಲಿತರು ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸ್ಥಾನ ಪಡೆದುಕೊಳ್ಳಲು ನೆರವಾಗುವಂತೆ ಮಾಡಿದ್ದಾರೆ. ಇಂದು ಇಡೀ ಜಗತ್ತು ಒಪ್ಪಿಕೊಂಡಿರುವ ಸ್ವಾಂತತ್ರ್ಯ, ಸಮಾನತೆ, ಭಾತೃತ್ವ ಮತ್ತು ಸರ್ವೋದಯದ ಮೌಲ್ಯಗಳನ್ನಧರಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಕೊಟ್ಟ ಬುದ್ಧನಿಗೆ ಎಲ್ಲರೂ ಋಣಿಗಳಾಗಿದ್ದಾರೆ. ಇಂತಹ ಬೌದ್ಧ ಧರ್ಮನ್ನು ಸ್ವೀಕರಿಸಿ ಬುದ್ಧನ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಉದಾರವಾದಿ ರಾಜಕೀಯ ಚಿಂತನೆಗಳನ್ನು ಮೈಗೂಡಿಸಿಕೊಂಡರು. ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಳು ಹೆಚ್ಚಾಗಿ ಕೇಳಿಸುತ್ತಾವೆಯೋ ಆ ದೇಶದಲ್ಲಿ ಅಜ್ಞಾನ ತುಂಬಿರುತ್ತದೆ’ -ಎಂಬ ಅಂಬೇಡ್ಕರ್ ವಿಚಾರ ದೇಶದ ಮೌಢ್ಯ, ಕಂದಾಚಾರಗಳನ್ನು ಎತ್ತಿ ಹಿಡಿಯುಯತ್ತದೆ. ’ಧರ್ಮ ವಿರುವುದು ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ’ -ಎಂದು ಧರ್ಮ ಮತ್ತು ಮನುಷ್ಯನಿಗೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾರೆ. ಹಿಂದೂ ಸಮಾಜದ ತೊಡಕುಗಳನ್ನು ತಿಳಿಸುತ್ತಾ ಹೀಗೆ ಹೇಳುತ್ತಾರೆ’ಹಿಂದೂ ಸಮಾಜ ಅಸಮಾನತೆಯ ತವರು. ಅದು ಏಣಿ ಇಲ್ಲದ, ಪ್ರವೇಶದ್ವಾರವಿಲ್ಲದ, ಅನೇಕ ಮಹಡಿಗಳುಳ್ಳ ಗೊಪುರ. ಒಂದು ಮಹಡಿಯಲ್ಲಿ ಹುಟ್ಟಿದ ಜನ ಅಲ್ಲಿಯೇ ಸತ್ತು ಕೊಳೆಯಬೇಕು’.-ಶತಮಾನದಿಂದ ಶಿಕ್ಷಣ ವಂಚಿತರಾಗಿ ಮೂಲೆಯಲ್ಲಿ ಕೊಳೆಯುತ್ತಿರುವ ದಲಿತರ ಪರಿಸ್ಥಿತಿಯನ್ನ ತೊರಿಸುತ್ತದೆ.
ಮುಟ್ಟಲಾಗದೆ ಕಟ್ಟಾಲಾಯಿತೆ
ಸಮಸಮಾಜವ ಬೆನ್ನು ತಟ್ಟಿ ಹಿತೈಷಿಯನ್ನೆಳಿದರೆ
ಬೆಟ್ಟವನ್ನು ಕುಟ್ಟಿ ಪುಡಿ ಪುಡಿ ಮಾಡಬಹುದು ಎನ್ನುವ ಕವಿತೆ ಅಂಬೇಡ್ಕರ್ ಸಮ ಸಮಾಜ ನಿರ್ಮಾಣ ಮಾಡುವ ಕನಸಿನ ಭಾಗವಾಗಿ ಕಂಡು ಬರುತ್ತದೆ. ದಲಿತರು, ಅಸ್ಪೃಷ್ಯರು, ಹಿಂದುಳಿದವರಿಗೆ, ಬೆನ್ನು ತಟ್ಟಿ ಅವರನ್ನು ಸಮಾಜದ ಮುಖವಾಣಿಗೆ ತರುವಂತೆ ಮಾಡುವ ಕಾರ್ಯ ಅಂಬೇಡ್ಕರ್‌ರವರದ್ದಾಗಿತ್ತು. ’ವರ್‍ಡ್ ನಾಲೇಡ್ಜ್ ಪರ್ಸನ್ ವಿಶ್ವ ಜ್ಞಾನಿ ಎಂದು ಜಗತ್ತಿನಿಂದ ಕರೆಸಿಕೊಂಡಿರುವ ಅಂಬೇಡ್ಕರ್ ಇಂದಿಗೂ ಅವರ ಚಿಂತನೆಗಳು ದೇಶಕ್ಕೆ ಪೂರಕವಾಗಿವೆ.

 

 


ಕೃಷ್ಣಮೂರ್ತಿಆರ್ ಉಡೇವಾ.
ಸಂಶೋಧನಾ ವಿಭಾಗ
ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ
ಶಿವಮೊಗ್ಗ
ಜಂಗಮ ವಾಣಿ:  9611184944

Email Id:-  krisharmykrish@gmail.com