‘ಚಾಲಕ’ ಅವನು ಮನೆಯಿಂದ ಹೊರಡುವಾಗ ತನ್ನ ಮನೆ, ಕುಂಟುಬದವರ ಮುಖವನ್ನ ಓಮ್ಮೆ ನೋಡಿ ಮುಗುಳು ನಗುತ್ತಲೇ ಮತ್ತೇ ಮನೆಗೆ ಹಿಂದಿರುಗುತ್ತೇನೆಯೋ ಇಲ್ಲವೆಂಬ ಭಯದಿಂದ ತನ್ನ ಮನ ಬಯಸಿದ ದೇವರನ್ನು ಮನದಲ್ಲೆ ಸ್ಮರಿಸುತ್ತಾ ತನ್ನ ಕಾರ್ಯಕ್ಕೆ ಸಿದ್ಧನಾಗುತ್ತಾನೆ. ವಾಹನ ಚಲಾಯಿಸುವ ಮುನ್ನ ಕೈ ಮುಗಿದು ಇಂದೆನು ಅಸಂಭವಗಳು ಜರುಗದಿರಲಿ ಎಂದು ತನ್ನಲ್ಲೆ ತಾನು ಸಂವಹನಿಸುತ್ತಾವಾಹನ ಓಡಿಸಲು ಮುಂದಾಗುತ್ತಾನೆ. ಅದು ಅವನಿಗೆ ಬರೀ ವಾಹನ ಮಾತ್ರವಲ್ಲ ಅವನ ಪಾಲಿಗೆ ಅದೊಂದು ಅನ್ನ ನೀಡುವ ರಥ ಆ ರಥಕ್ಕೆ ಅವನೆ ಸಾರಥಿ ದಿನನಿತ್ಯ ಅದರೊಂದಿಗೆ ಅವನ ಜೀವದ ಜೊತೆಗೆ ಪರರ ಜೀವಗಳ ಜೊತೆಗೆ ಚದುರಂಗದ ಆಟ….!
ವಾಹನಗಳು ಓಮ್ಮೊಮ್ಮೆ ತಾಂತ್ರಿಕ ತೊಂದರೆಯಿಂದ ಸುಗಮ ಚಾಲನೆಗೆ ಅಡ್ಡಿಯಾಗುವುದೇ ಜಾಸ್ತಿ ಅಲ್ಲವೇ..? ಏಕೆಂದರೆ ಚಾಲಕನಿಗೆ ವಾಹನದಲ್ಲಿನ ಗೇರು, ಬ್ರೇಕ್, ಎಕ್ಸಿಲೇಟರ್, ಎಡಬಲ ಕನ್ನಡಿಗಳೇ ಅವನ ಸುಗಮ ಚಾಲನೆಗೆ ಆಧಾರಸ್ತಂಭಗಳು. ಅವನಿಗೆ ಅವನದ್ದೆ ಆದ ನೂರೆಂಟು ಕಷ್ಟಗಳುಂಟು ಅದು ನಮಗೇನು ಗೊತ್ತು, ಆದರೆ ಅವನು ರೋಡ್‍ನಲ್ಲಿ ಸ್ವಲ್ಪ ಎಡವಿದರೂ ಶಾಪಹಾಕುವುದು ತಪ್ಪು ಅಲ್ಲವೆ… ಹೌದು ನಿಜಕ್ಕೂ ತಪ್ಪು ಏಕೆಂದರೆ ಕಳೆದು ಕೆಲವು ದಿನಗಳಿಂದ ಉದ್ಯೋಗವನ್ನು ಹರಿಸಿ ಬೆಂಗಳೂರಿಗೆ ಬಂದೆ ಅಂತು ಇಂತು ಎಲ್ಲೋ ಒಂದು ಕಡೆ ಉದ್ಯೋಗವನ್ನು ಪಡೆದುಕೊಂಡೆ ಆದರೆ ವಿಷಯ ಅದು ಅಲ್ಲ. ನಾನು ದಿನ ನಿತ್ಯ ಕೆಲಸಕ್ಕೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್‍ಗಾಗಿ ಕಾಯುವುದು ಸರ್ವೆಸಾಮಾನ್ಯವಾಗಿದೆ. ಅದರಲ್ಲೂ ಬೆಂಗಳೂರು ಅಂದರೆ ಸುಮ್ಮೆನೆನಾ ಇದೊಂದು ಬೃಹತ್‍ನಗರವಾಗಿರುವುದರಿಂದ ಇಲ್ಲಿ ನೂರಾರು ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆ ಸಂಚಾರಿಸುವುದು ಸಾಮಾನ್ಯ ಅದರಲ್ಲಿ ನಾನು ಒಬ್ಬ ಅಷ್ಟೇ. ಅಂತಹ ಸಂದರ್ಭ ಹಲವು ಪ್ರಯಾಣಿಕರು ಚಾಲಕನಿಗೆ ಬಾಯಿಗೆ ಬಂದತೆ ಅವನ ವ್ಯಕ್ತಿತ್ವಕ್ಕೆ ದ್ಯುತಿಗೇಡುವಂತೆ ಹಿಯ್ಯಾಳಿಸುವುದು ಅವನನ್ನ ಕಠೋರ ಮಾತುಗಳಿಂದ ಕೆಣಕುವುದು ಕಂಡು ಹತಾಶಯಕ್ಕೆ ಒಳಗಾಗಿದ್ದೇನೆ. ತಪ್ಪು ಪ್ರಯಾಣಿಕರದ್ದೋ.? ಚಾಲಕನದ್ದೋ.?ಎಂದು.
ಸಮಯಕ್ಕೆ ಸರಿಯಾಗಿ ಬಾರದೆ ತಡವಾದರೆ, ವಾಹನ ಚಲಾವಣೆ ವೇಳೆ ಏನಾದರೂ ಸಣ್ಣಪುಟ್ಟ ತಪ್ಪುಗಳಾದರೆ ಒಮ್ಮಲೆ ಬ್ರೇಕ್ ಹಾಕಿದರೆ, ಕೈ ತೋರಿಸದರು ನಿಲ್ಲಿಸದಿದ್ದರೆ, ಇನ್ನೂ ಇಂತ ಹತ್ತಾರು ತಪ್ಪುಗಳು ಅವನು ತಾನಾಗಿಯೇ ಮಾಡದಿದ್ದರು ಅವು ನಡೆಯುತ್ತಿರುತ್ತವೆ ಆದರೆ ಅದನ್ನೆ ನೆಪವಾಗಿ ಇಟ್ಟುಕೊಂಡು ಅವನಿಗೆ ಬಾಯಿಗೆ ಬಂದತೆ ಶಾಪಹಾಕುವುದು ನಿಜಕ್ಕೂ ಮುರ್ಖರೆ. ದಟ್ಟವಾಹನಗಳು ಚಲಿಸುವುದು ಒಂದೆಡೆಯಾದರೆ ನಗರದಲ್ಲಿ ಟ್ರಾಪಿಕ್ ಎಂಬುದು ಚಾಲಕನಿಗೆ ಮತ್ತೊಂದು ಸಮಸ್ಯೆ ಅದಲ್ಲದೇ ಅಕ್ಕಪಕ್ಕದ ವಾಹನಗಳು ನೂರೆಂಟು ತಿರುವುಗಳು, ಇಕ್ಕಟ್ಟಾದ ರಸ್ತೆಗಳು, ಸಂಚಾರಿ ನಿಯಮಗಳು ಇಂತ ಸಮಸ್ಯೆಗಳ ನಡುವೆ ನಮ್ಮನ್ನು ತಲುಪಬೇಕಾದ ಸ್ಥಳಕ್ಕೆ ನಿಯತ್ತಾಗಿ ತಲುಪಿಸುವ ವ್ಯಕ್ತಿಯೇ ಈ ಚಾಲಕ ಆಗಾಗಿ ಅವನಿಗೆ ಅವನದ್ದೆ ಆದ ಜವಬ್ದಾರಿಗಳ ನಡುವೆ ನಿಮ್ಮ ಶಾಪ ಸರಿಯೇ.?
ವಾಹನದೊಂದಿಗೆ ಚಾಲಕ ಸಮನಾದ ಹೊಂದಾಣಿಕೆಯನ್ನು ಮಾಡಿಕೊಂಡು ನೀವಾಕುವುವ ಶಾಪಗಳ ಅವಲೋಕಿಸದೆ ಆಯಾ ಪರಿಸ್ಥಿತಿಗೆ ತಕ್ಕಂತೆ ನಡೆ ಮುಂದೆ ನಡೆ ಮುಂದೆ ಎನ್ನಾತ್ತಾ ಸಾಗುವ ಚಾಲಕನಿಗೆ ಹೇಳಿ ಮೊದಲೊಂದು ಸಲಾಂ..!
ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಅವನ ಕರ್ತವ್ಯಕ್ಕೆ ಸಾವಿರ ಸಲಾಂಗಳು. ಅನ್ನ ಕೊಟ್ಟ ವೃತ್ತಿಗೆ ದಕ್ಕೆ ಮಾಡಬಾರದೆಂಬ ಉದ್ದೇಶದಿಂದ ತಾನು ಕಷ್ಟಪಟ್ಟು ಮತ್ತೊಬ್ಬರ ಕಷ್ಟಕ್ಕೆ ಅಳಿಲು ಸೇವೆ ಮಾಡುವ ಅವನ ಕಾರ್ಯಕ್ಕೆ ಸರಸಾಟಿ ಮತ್ತೊಂದಿಲ್ಲ ನಿತ್ಯ ಸಾವಿರಾರು ಅಪಘಾತಗಳು ಸಂಭವಿಸಿ ನೂರಾರು ಜನ ಸಾವಿಗೀಡಾದರೆ ಅದಕ್ಕೆ ಅಂಜದೆ ಅಳುಕದೆ ಚಾಲಕ ತನ್ ಜೀವವನ್ನು ಪಣಕಿಟ್ಟು ವಾಹನ ಚಲಾಯಿಸುವು ಕೇವಲ ಅವನ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅದು ನಿಜಕ್ಕೂ ದೇವರಸೃಷ್ಟಿಯು ಅಂದರೆ ತಪ್ಪಾಗಲಾರದು. ಆದರೆ ಸಿನಿಮಾ ದಂತಕತೆಯಂತೆ ಅಲ್ಲ ಅವನ ದಿನನಿತ್ಯದ ಬದುಕು ನಿರಂತರ ನೈಜ ಹೋರಾಟ ಜನಸಮೂಹವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುವುದೆ ಅವನ ಗುರಿ ಇಲ್ಲದ ಗುರಿ. ಅವನ ಹಣೆ ಮೇಲೆ ಇತ್ತಡದಿಂದ ಬರುವ ಬೆವರನ್ನು ತನ್ನ ತೋಳುಗಳಿಂದ ಓರೆಸುತ್ತಾ ಮಳೆ ಗಾಳಿ ಬಿಸಿಲು ಚಳಿ ಎನ್ನದೆ ವಾತವರಣದಲ್ಲಿ ವಾಹನ ಚಲಿಸುವ ಪಾಡು ಯೋಚಿಸಿದರೆ ನಮ್ಮಯಾವ ಶತ್ರುಗಳಿಗೆ ಬೇಡ ಎನಿಸುತ್ತದೆ. ಆದರೆ ಅದನ್ನೆಲ್ಲಾ ಲೆಕ್ಕಿಸದೆ ನಾವು ಅವನಿಗೆ ನೋವಾಗುವಂತೆ ಮಾತಾಡುವುದು ತಪ್ಪು ಕ್ಯಾಲೆಂಡರ್‍ಗಳಲ್ಲಿ ಎಲ್ಲಾ ದಿನಗಳಲ್ಲಿ ಅವನ ಕಾರ್ಯ ಸಕಾಲವುಂಟು ಆದರೆ ಅವನಿಗೆ ಒಂದು ದಿನದ ಮೀಸಲಿಲ್ಲ ಅದಕ್ಕೆ ಅವನ ಕಾರ್ಯ ಶೌರ್ಯಕ್ಕೆ ಸರಿಯಾದ ಪ್ರತಿಫಲವಿಲ್ಲ. ಅವನು ಒಂದು ದಿನ ತನ್ನ ಕಾರ್ಯ ಸರಿಯಾಗಿ ನಿರ್ವಹಿಸದಿದ್ದರೆ ಹಾಗೂವ ಅವಾಂತರಗಳ ಬಗ್ಗೆ ಊಹಿಸಲು ಆಗದು ಹಾಗಗಿ ಇನ್ನು ಮುಂದೆಯಾದರು ಅವನಿಗೆ ಒಂದು ಸಲಾಂ ಹೇಳುತ್ತಾ ಗೌವರವದಿಂದ ಕಾಣುವ ಮನೋಭಾವವನ್ನು ಬೆಳಸಿಕೊಳ್ಳೋಣ.
ರಾಮಾಯಣ ಮಹಾಭಾರತ ಮುಂಚೆಗಿಂತಲು ಅವನ ಕಾರ್ಯಗಳು ಅಮೋಘ ಅದಕ್ಕೆ ಹಿಂದಿನ ಕಾಲದಲ್ಲಿ ರಥಗಳಿಗೆ ಮಾನವನೆ ಸಾರಥಿ…. ಅಷ್ಟೇ ಏಕೆ ದೈವಾನು ದೇವತೆಗಳೆಲ್ಲಾ ತಮಗೆಲ್ಲಾ ಒಂದೊಂದು ವಿವಿಧ ಸಾರಥಿಯನ್ನು ಮಾಡಿಕೊಂಡ ಸಂಗತಿಗಳು ನಮಗೆ ಗೊತ್ತಿವೆ, ಅವುಗಳ ಕಾರ್ಯಕ್ಕೆ ಪೂಜಿಸುತ್ತಿರಿ ಆದರೆ ನಿತ್ಯದ ಬದುಕಿನಲ್ಲಿ ನಮ್ಮನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಚಾಲಕನನ್ನು ತೆಗಳುತ್ತಿರಾ ಇದು ನಿಜಕ್ಕೂ ಮಾನವೀಯತೆ ದಕ್ಕೆ ಉಂಟುಮಾಡಿದಂತೆ. ಅವನಿಗೆ ನಾವು ಅಂದುಕೊಂಡಿರುವುದಕ್ಕಿಂತ ಸಾವಿರಾರು ಜವಬ್ದಾರಿಗಳು ಚಾಲಕನಿಗುಂಟು ಅವುಗಳಿಗೆ ಬೆಲೆಕೊಡಬೇಕಾಗಿರುವುದು ನಮ್ಮ ನಿಮ್ಮೇಲರ ಕರ್ತವ್ಯ…

ಮಧುಕುಮಾರ್ ಬಿಳಿಚೋಡು
ಮೊ : 7353900950

 

(ಸಾಂದರ್ಭಿಕ ಚಿತ್ರ)