ಜೀವನದಲ್ಲಿಎಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ, ಸಮಸ್ಯೆಗಳೆಂಬ ಸಾಗರದಲ್ಲಿ ಈಜಾಡಿ ಕೊನೆಗೆ ಜಿಗುಪ್ಸೆ ಬಂದು ಸಾಯಲು ಮುಂದಾಗುತ್ತಿದ್ದಾರೆ ಯುವಕರು. ದಿನೇ ದಿನೇ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾನೆ. ಪ್ರೇಮ ವಿಫಲ, ಅಂಕಪಟ್ಟಿಯಲ್ಲಿ ಸೊನ್ನೆ ಸುತ್ತಿದ್ದಕ್ಕೆ ಆತ್ಮಹತ್ಯೆ, ಮನೆಯಲ್ಲಿ ಹೇಳಿದ್ದು ಕೊಡಿಸಿಲ್ಲವೆಂದು, ಬೈದರೆಂದೂ, ಮುಂತಾದ ಸಣ್ಣ ಸಣ್ಣ ಕಾರಣಗಳನಿಟ್ಟುಕೊಂಡು ಹೀನವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಯುವಕರು. ಕಿನ್ನತೆಗೆ ಒಳಗಾಗುತ್ತಿದ್ದಾರೆ. ಅವರ ಶಕ್ತಿ ಸಾಮಥ್ರ್ಯಗಳನ್ನು ಅವರೇ ಅರಿಯುತ್ತಿಲ್ಲ. ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ತಮ್ಮತಂದೆತಾಯಿಯನ್ನು ಸಾಕಿ ಸಲುಹಬೇಕಾದ ವಯಸ್ಸಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ, ತಾನು ಗಳಿಸಿದ ಅಂಕಗಳಿಗೆ ಸರಿಯಾದ ಉದ್ಯೋಗ ಸಿಗಲಿಲ್ಲವೆಂದು ಸಾವನ್ನಪ್ಪುತ್ತದೆ ಅವರತಂದೆ ತಾಯಿಗಳಿಗೆ ಇನ್ನಿಲ್ಲದ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸಾಯುವುದರಿಂದ ಯಾವುದೇ ತರಹದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಸಮಸ್ಯೆಗಳಿಗೆ ಹೆಚ್ಚಾಗುತ್ತವೆ. ಒಂದು ಗಾಯಗೊಂಡ ಸಿಂಹವು ಘರ್ಜಿಸ ಬಯಸುತ್ತದೆ ಎಂದಾದರೆ ಆಲೋಚನಾ ಶಕ್ತಿಯುಳ್ಳ ಮನುಷ್ಯನಿಗೇಕಿರಬಾರದು. ಜೀವಿಸಬೇಕು, ಜೀವಿಸಿ ಏನನ್ನಾದರು ಸಾಧಿಸಿ ತೋರಿಸಬೇಕು ಎಂಬ ಅದಮ್ಯ ಆತ್ಮ ವಿಶ್ವಾಸ ವಿರಬೇಕು ಆಗ ಮಾತ್ರಯಶಸ್ಸನ್ನು ಸಾಧಿಸಲು ಸಾಧ್ಯ.

ಯಶಸ್ಸಿನ ‘ಮಾರ್ಗ’-ದರ್ಶನ:
• ಗೆದ್ದವನಿಗೆಒಂದೇದಾರಿ, ಸೋತವನಿಗೆ ಸಾವಿರದಾರಿ: ಗೆದ್ದವರುಯಾವಗಲೂ ಒಂದೇ ದಿಕ್ಕಿನಡಿ ಸಾಗುತ್ತಿರುತ್ತಾರೆ. ಅವರಿಗೆ ಸೋಲಿನ ಅನುಭವ ಇರುವುದಿಲ್ಲ. ಆದರೆ ಸೋತವನು ಪ್ರಪಂಚವನ್ನು ಅರ್ಥೈಸಿಕೊಳ್ಳುತ್ತಾನೆ. ಅವನ ಮುಂದಿನ ನಡೆ ಸಾವಿರಾರು ದಾರಿಗಳಿರುತ್ತವೆ. ಸತತ ಪ್ರಯತ್ನವಿದ್ದರೆ ಯಾವುದನ್ನೇ ಆಗಲಿ ಗೆಲ್ಲಬಹುದು. ಸೋತವರು ಎದೆಗುಂದದೆ, ತನ್ನಲ್ಲಿರುವ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾ, ಗೆಲುವಿನತ್ತ ಮುನ್ನಡೆಯಬೇಕು.

• ಸತತ ಪ್ರಯತ್ನವೆ ಯಶಸ್ಸಿಗೆ ಶ್ರೀರಕ್ಷೆ: ನನ್ನಜೀವನ ಇಷ್ಟೇ, ಇನ್ನು ಬದಲಾಗುವುದಿಲ್ಲ, ಇಷ್ಟೇ ಈ ಜನ್ಮದಲ್ಲಿ ನಾನು ಪಡೆದು ಬಂದ ಭಾಗ್ಯಗಳೆಂದು ಜೀವನದ ಆಶೆಯನ್ನುತೊರೆದು ಕೊನೆಗೆ ಸಾಯಲು ಮುಂದಾಗುವಯುವಕ ಕೊನೆಗೆ ಒಂದು ಬೆಟ್ಟದತುತ್ತತುದಿಯಲ್ಲಿ ಕುಳಿತು ಸಾಯುವ ಮುನ್ನ ನನ್ನ ಜೀವನದ ಎಲ್ಲ ಘಟನೆಗಳನ್ನು ಒಮ್ಮೆ ನೆನೆದು ಬಿಡೋಣವೆಂದು ಕುಳಿತು ಒಂದೊಂದೆ ನೆನಪಿಸಿಕೊಳ್ಳುತ್ತಿರುತ್ತಾನೆ. ಆಗ ಎದುರಿಗೆ ಇರುವ ಒಂದು ಬೃಹದಾಕಾರದ ಬಂಡೆಯ ಮೇಲೆ ಏರಲು ಬಲ್ಲಿಯೊಂದು ಪ್ರಯತ್ನಿಸುತ್ತದೆ, ಪ್ರಯತ್ನಿಸುತ್ತದೆ, ಆದರೆ ಪದೇ ಪದೇ ಕೆಳಗೆ ಬೀಳುತ್ತದೆ. ಈಗೆ ಸತತವಾಗಿ 16ಬಾರಿ ಅದು ಕೆಳಗೆ ಬೀಳುತ್ತದೆ. ಆದರೆಅದರ ಪ್ರಯತ್ನ ಮಾತ್ರ ನಿಲ್ಲಿಸುವುದಿಲ್ಲ. ಕೊನೆಗೆ 17ನೇ ಬಾರಿಅದು ಆ ಬೃಹತ್ ಬಂಡೆಯ ಮೇಲೆ ಏರಿಯೇ ಬಿಡುತ್ತದೆ. ಇದನ್ನು ಗಮನಿಸಿದ ಆ ಯುವಕ ತನ್ನಜೀವನದ ಮೇಲೆ ಮತ್ತೇ ಭರವಸೆ ಬರುತ್ತದೆ. ಜೀವಿಸಿ ಸಾಧಿಸಬೇಕೆಂಬ ಆಸೆಯಾಗುತ್ತದೆ.

• ಸ್ವಸಾಮಥ್ರ್ಯದ ಮೇಲೆ ಪೂರ್ಣ ಭರವಸೆ:ಜೀವನದಲ್ಲಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳಲು, ಯಶಸ್ಸನ್ನು ಸಾಧಿಸಲು ಸ್ವಸಾಮಥ್ರ್ಯದ ಮೇಲೆ ಪೂರ್ಣ ಭರವಸೆ ಇರಬೇಕು. ನನ್ನ ಸಾಮಥ್ರ್ಯಇದು, ನನ್ನ ದೌರ್ಬಲ್ಯ ಇದು ಎಂಬುದನ್ನು ಅರಿತಿರಬೇಕು. ತನ್ನ ಸಾಮಥ್ಯ ಏನು, ನಾನು ಏನು ಮಾಡಬಲ್ಲೆ? ಏನು ಸಾಧಿಸಲು ನನ್ನಿಂದಾಗುತ್ತದೆ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಅವನಲ್ಲಿದ್ದರೆ, ಖಂಡಿತ ಅವನು ಏನನ್ನಾದರು ಸಾಧಿಸೇ ಸಾಧಿಸುತ್ತಾನೆ.

• ಆತ್ಮವಿಮರ್ಶೆ: ಜೀವನದಲ್ಲಿ ಯಶಸ್ಸಿನ ಮಾರ್ಗದಲ್ಲಿ ನಾನು ಸಾಗಬೇಕಾಗಿದೆ. ಪ್ರಸ್ತುತ ನಾನು ಮಾಡುತ್ತಿರುವುದು ಸರಿಯೇ? ಅಥವಾತಪ್ಪೇ? ಇದರಿಂದ ಸಮಾಜಕ್ಕೆ ಯಾವುದೇರೀತಿಯ ಹಾನಿಯುಂಟಾಗದಿರುವುದು? ನಾನು ಮಾಡುತ್ತಿರುವುದು ಅನುಭವಿಗಳ ಜೊತೆಚರ್ಚಿ ಸುತ್ತಿದ್ದೇನೆಯೇ? ಇದರಲ್ಲಿ ನನಗೆ ತೃಪ್ತಿಇದೆಯಾ? ಇಲ್ಲವಾ? ಎಂಬ ಪ್ರಶ್ನೆಗಳನ್ನು ನಮ್ಮ ಮನಸ್ಸಿನಲ್ಲೇ ಹಾಕಿಕೊಂಡಾಗ ಉತ್ತರ ಸಿಗುತ್ತದೆ. ಆ ಉತ್ತರ ನಮ್ಮನ್ನುತೃಪ್ತಿ ಪಡಿಸಿದ್ದೇ ಆದರೆ ನಾವು ಸರಿಯಾದ ಮಾರ್ಗದಲ್ಲೇ ಇದ್ದೇವೆ ಎಂದರ್ಥ.
• ಸಮಸ್ಯೆಗಳಿಗೆ ಎದೆಗುಂದಬಾರದು: ನಾವು ಮಹಾತ್ ಕಾರ್ಯಗಳನ್ನು ಸಾಧಿಸಲು ಹೊರಟಾಗ ನೂರಾರು ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ. ನಾವು ಊಟ ಮಾಡುವಾಗಅನ್ನದಲ್ಲಿಕಲ್ಲು ಸಿಕ್ಕಾಗ ಆ ಕಲ್ಲನ್ನು ಬೀಸಾಡುತ್ತೇವೆ ಹೊರತು ಅನ್ನವನ್ನಲ್ಲ, ಅದೇರೀತಿ ಮಹಾತ್ ಕಾರ್ಯಗಳನ್ನು ಸಾಧಿಸಲು ಹೊರಟಾಗ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಎದುರಾಗುತ್ತವೆ, ಅವೆಲ್ಲವನ್ನು ಮೆಟ್ಟಿನಿಲ್ಲಬೇಕು. ಸಮಸ್ಯೆಗಳು ನಮ್ಮನ್ನು ಮತ್ತಷ್ಟು ಸದೃಡವನ್ನಾಗಿ ಮಾಡುತ್ತವೆ. ಆದ್ದರಿಂದಎಂತಹದೇ ಸಮಸ್ಯೆ ಇರಲಿ ನಮ್ಮ ಆಲೋಚನಾ ಶಕ್ತಿಯಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು.

• ಮಹತ್ ಕಾರ್ಯಗಳಿಗೆ ಸ್ಪೂರ್ತಿಯೇಒಂದು ಸಾಧನ: ಮಹಾತ್ ಕಾರ್ಯಗಳನ್ನು ನಾವು ಸಾಧಿಸಲು ಹೊರಟಾಗ ಕೆಲವರಿಗೆ ಕೆಲವರು ಸ್ಪೂರ್ತಿದಾಯಕವಾಗಿರುತ್ತಾರೆ. ಇನ್ನು ಕೆಲವರಿಗೆಅವರಜೀವನದಕನಸಾಗಿರುತ್ತದೆ. ಮುಖ್ಯವಾಗಿ ನಮಗೆ ಬೇಕಾಗಿರುವುದು ಸ್ಪೂರ್ತಿ. ಮಹತ್ ಕಾರ್ಯಗಳಿಗೆ ಸ್ಪೂರ್ತಿಯೇಅತಿದೊಡ್ಡ ಸಾಧನ. ಸಾಧನೆಗೈದ ವ್ಯಕ್ತಿಗಳನ್ನು ನೆನೆದು ಸ್ಪೂರ್ತಿಯಾಗಿಟ್ಟುಕೊಂಡು ಮಹತ್ ಕಾರ್ಯಗಳನ್ನು ಸಾಧಿಸಲು ಮುನ್ನಡೆಯಬೇಕು.

• ಮಹತ್ವದ ಆಕಾಂಕ್ಷೆಗಳಿಗೆ ಆದ್ಯತೆ: ಬಾಲ್ಯದಿಂದಲೂ ನೂರಾರು ಕನಸುಗಳನ್ನು ಕಂಡಿರುತ್ತೇವೆ. ಆದರೆಒಂದು ನಿರ್ದಿಷ್ಟ ವಯಸ್ಸಿಗೆ ಬಂದ ತಕ್ಷಣ ಒಂದುಕನಸನ್ನು ನನಸಾಗಿಕೊಳ್ಳಲು ಹೋಗುತ್ತೇವೆ. ಇನ್ನು ಕೆಲವರುಎಲ್ಲಾ ಕನಸುಗಳನ್ನು ನನಸಾಗಿಸಲು ಮುಂದಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಯಾವುದನ್ನು ಸರಿಯಾಗಿ ನಿರ್ವಹಿಸದೇ ವಿಫಲವಾಗುತ್ತಾರೆ. ನಮ್ಮ ನೂರಾರು ಆ. ನಮ್ಮ ನೂರಾರು ಆಕಾಂಕ್ಷೆಗಳಲ್ಲಿ ಮಹತ್ವದ ಆಕಾಂಕ್ಷೆಗಳಿಗೆ ಮೊದಲುಆದ್ಯತೆಯನ್ನು ನೀಡಬೇಕು. ಅದು ಕೆಲಸವೇ ಆಗಿರಲಿ ಮತ್ತೊಂದೆಆಗಿರಲಿ. ಆಗ ಅದು ಫಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

• ಕಲಿಕೆ ಮತ್ತು ನಿರ್ದಿಷ್ಟಕಲ್ಪನೆಗೆಕೊನೆಯೆಂಬುದೇಇರಬಾರದು: ನಾವು ಪ್ರತಿನಿತ್ಯನಡೆಯುವುದನ್ನುಕಲಿಯುತ್ತಲೇಇರುತ್ತೇವೆ. ಕಲಿಕೆ ಎಂಬುದು ನಿತ್ಯ ನಿರಂತರ. ಅದೇರೀತಿ ನಿರ್ದಿಷ್ಟವಾಗಿ ನಡೆಯುತ್ತಿರುವದ ಬಗ್ಗೆ ನಮಗೆ ಮೊದಲೆಕಲ್ಪನೆಇರಬೇಕು. ಆಗ ಮಾತ್ರ ಪ್ರಸ್ತುತ ಸನ್ನಿವೇಶದಲ್ಲಿಏನಾಗುತ್ತಿದೆ, ಏನಾಗಬಹುದುಎಂದು ಅರ್ಥೈಸಿಕೊಂಡು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದು.

• ಪ್ರತಿದಿನವೂ ಪ್ರತಿಕ್ಷಣವೂ ಶ್ರಮವಹಿಸಿ ಕೆಲಸ ಮಾಡುವುದು: ಯಶಸ್ಸೆಂಬುದು ಅಷ್ಟು ಸುಲಭವಾಗಿ ನಮ್ಮ ಸ್ವತ್ತಾಗುವುದಿಲ್ಲ, ಆದ್ದರಿಂದ ನಾವು ಪ್ರತಿದಿನವೂ, ಪ್ರತಿಕ್ಷಣವೂ ಶ್ರಮವಹಿಸಿ ಕೆಲಸ ಮಾಡಬೇಕು. ಇದರಿಂದ ನಮ್ಮಕಾರ್ಯಕ್ಷೇತ್ರದಲ್ಲಿ ನಮಗೆ ಅನುಭವ ಹೆಚ್ಚಾಗುತ್ತದೆ. ಅತಿ ಶೀಘ್ರವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು.
• ಕನಸನ್ನು ಬೆನ್ನತ್ತಿ, ಯಶಸ್ಸು ನಿಮ್ಮ ಹೆಗಲೇರುತ್ತದೆ: ನಮ್ಮಕನಸನ್ನು ಸಕಾರಗೊಳಿಸಿಕೊಳ್ಳು ನಾವು ಸದಾ ಕಾಲ ಕಠಿಣ ಪರಿಶ್ರಮ ಪಡುತ್ತಲೇಇರಬೇಕು. ನಮ್ಮಕನಸ್ಸನ್ನು ಬೆನ್ನತ್ತಿ ಮುನ್ನಡೆಯಬೇಕು. ಪ್ರತಿ ಆಲೋಚನೆಗಳು ನಮ್ಮ ಕನಸಿಗೆ ಸಕಾರದೆಡೆಗೆಇರಬೇಕು. ಕನಸ್ಸನ್ನು ಬೆನ್ನತ್ತಿದ್ದೇಆದರೆಯಶಸ್ಸು ಹೆಗಲೇರುವುದುಖಚಿತ.ನಾವು ಯಾವುದೇಕನಸನ್ನುಕಂಡರುಅದನ್ನುಕಾರ್ಯರೂಪಕ್ಕೆತರಬೇಕು, ಆಗ ಮಾತ್ರಅದು ನಮಗೆ ಹೆಚ್ಚಿನ ಮಾನ್ಯತೆತಂದುಕೊಂಡುತ್ತದೆ.
• ಗುರಿಮುಟ್ಟುವಇಚ್ಚಾಶಕ್ತಿಯಿದ್ದರೆದಾರಿಯೊಂದುಖಂಡಿತಇದ್ದೇಇರುತ್ತದೆ: ನಮ್ಮಗುರಿಯತ್ತ ನಮ್ಮ ದಿಟ್ಟ ಹೆಜ್ಜೆಗಳನಿಟ್ಟಾಗ ಆ ಸೋಲು ಕೂಡ ನಮ್ಮನ್ನು ನೋಡಿದೂರಓಡುತ್ತದೆ. ಅಷ್ಟರ ಮಟ್ಟಿಗೆ ನಮಗೆ ಇಚ್ಚಾಶಕ್ತಿ ಇರಬೇಕು. ನಮ್ಮ ಇಚ್ಚಾಶಕ್ತಿ ಬಲವಾಗಿದ್ದರೆಅದನ್ನು ಸಾಧಿಸಲುದಾರಿಯೊಂದುಖಂಡಿತ ನಮಗೆ ಗೋಚರಿಸುತ್ತದೆ.

• ಎಲ್ಲವನ್ನು ಪ್ರಾಯೋಗಿಕದೃಷ್ಠಿಕೋನದಲ್ಲಿ ನೋಡುವುದು: ನಮ್ಮಗುರಿಯೆಡೆಗೆ ಸಾಗುತ್ತಿರುವಾಗ ಕೆಲವು ವಿಷಯಗಳು ನಮ್ಮನ್ನು ಹಿಂತಿರುಗುವಂತೆ ಮಾಡಬಹುದು. ಆದ್ದರಿಂದ ಅವುಗಳ ಬಗ್ಗೆ ನಾವು ದೃತಿಗೆಡಬಾರದು. ಎಲ್ಲವನ್ನು ಪ್ರಾಯೋಗಿಕದೃಷ್ಠಿಕೋನದಲ್ಲಿ ನೋಡುತ್ತಾನಮ್ಮಗುರಿಯೆಡೆಗೆ ಸಾಗಬೇಕು.
• ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಸದೃಡವಾಗಿರಬೇಕು: ನಾವು ಮಾಡಬೇಕಾಗಿರುವ ಕಾರ್ಯಗಳ ಕುರಿತು, ಕೆಲಸಗಳ ಕುರಿತು, ನಮ್ಮಕಠಿಣ ಪರಿಶ್ರಮಕ್ಕೆ ಸಹಕಾರಿಯಾಗುವಂತೆದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಿರಬೇಕು. ಭಾವನಾತ್ಮಕ ವಿಚಾರಗಳಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಾಳ್ಮೆ, ಸಂಯಮ, ಅನಂತವಾಗಿರಬೇಕು.ಯೋಗದಿಂದಇದನ್ನು ಸಾಧಿಸಬಹುದು.

• ಗೆಲ್ಲಲಾಗದೆಇರುವ ಪರಿಸ್ಥಿತಿಯೊಂದಿದೆ ಎಂದು ಊಹಿಸಿಕೊಳ್ಳುವುದೂ ತಪ್ಪು: ನಾವು ಮಹತ್ ಕಾರ್ಯಗಳನ್ನು ಮಾಡಲು ಹೊರಟಾಗಗೆಲ್ಲುತ್ತೇವಾ? ಇಲ್ಲವಾ? ಎನ್ನುವಂತಹ ಸಂದೇಹಗಳು ನಮ್ಮನ್ನುಕಾಡುತ್ತಲೇಇರುತ್ತವೆ. ಆದ್ದರಿಂದ ನಾವು ಮಾನಸಿಕವಾಗಿ ಮೊದಲೆ ‘ಗೆಲ್ಲಲಾಗದೆಇರುವ ಪರಿಸ್ಥಿತಿಯೊಂದಿದೆ ಎಂದು ಊಹಿಸಿಕೊಳ್ಳಬಾರದು’. ಎಲ್ಲವನ್ನುಗೆಲ್ಲಬಹುದುಆದರೆಅದಕ್ಕೆತಕ್ಕಂತೆ ಪೂರ್ವತಯಾರಿ, ತಾಳ್ಮೆ, ಕಠಿಣ ಪರಿಶ್ರಮ, ಅದಮ್ಯಆತ್ಮವಿಶ್ವಾಸಇರಬೇಕು.
ಈ ಎಲ್ಲಾಅಂಶಗಳನ್ನು ಅರಿತುಅದಮ್ಯಆತ್ಮವಿಶ್ವಾಸದಿಂದಕಠಿಣ ಪರಿಶ್ರಮದಿಂದಗುರಿಯತ್ತ ದಿಟ್ಟ ಹೆಜ್ಜೆಗಳನಿಟ್ಟಾಗ ಯಶಸ್ಸೆಂಬುದು ನಮ್ಮ ನಿರೀಕ್ಷೆ ಮೀರಿ ನಮ್ಮನ್ನುಗೆಲ್ಲಿಸುತ್ತದೆ.ಇದರಲ್ಲಿಯಾವುದೇ ಸಂದೇಹಗಳು ಬೇಡ.ಈ ಅಂಶಗಳು ಜೀವನದ ನಂಬಿಕೆ ಕಳೆದುಕೊಂಡಿರುವ ಒಬ್ಬ ವ್ಯಕ್ತಿಯಲ್ಲಿ ಚೈತನ್ಯ ಶಕ್ತಿ ತುಂಬಿ, ಎಚ್ಚರಗೊಳಿಸಿ ಜೀವನವನ್ನು ಯಶಸ್ವಿಯಾಗಿಸುತ್ತದೆ.

ಪ್ರಭು
9980796846.