ಸರ್ಕಾರವು ರಾಜ್ಯದಲ್ಲಿ ಬರದ ಛಾಯೇ ಅವರಿಸಿದ್ದರಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿಯು ಯೋಜನೆಯ ಕಾಯ್ದೆಯಲ್ಲಿ ನೂರು ದಿನಗಳ ಉದ್ಯೋಗವನ್ನು ನೂರ ಐವತ್ತಕ್ಕೆ ವಿಸ್ತರಣೆ ಮಾಡಿರುವುದು ಸ್ವಾಗತರ್ಹ ವಿಷಯ. ಬರದ ಛಾಯೇ ಯಿಂದ ಜನರು ಒಂದು ಕಡೆ ಯಿಂದ ಮತ್ತೋಂದು ಕಡೆಗೆ ಗುಳ್ಳೆ ಹೋರಟಿರುವ ಕಾರಣ ಸರ್ಕಾರ ಚಿಂತನೆ ಮಾಡಿ ಈ ಕಾರ್ಯಕ್ಕೆ ಮುಂದಾಗಿರುವುದರಲ್ಲಿ ತಪ್ಪೇನೂ ಇಲ್ಲ ಆದರೆ ಈ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮಗಳಲ್ಲಿ ಇರುವಂತಹ ಪ್ರಭಾವಿ ವ್ಯಕ್ತಿಗಳು ಇದನ್ನು ಬಂಡವಾಳವನ್ನು ಮಾಡಿಕೊಂಡಿದ್ದಾರೆ. ಗ್ರಾಮಗಳಲ್ಲಿ ಜನರಿಗೆ ಉದ್ಯೋಗಗಳನ್ನು ಕೊಡದ್ದೆ ಅವರ ಹತ್ತಿರ ಜಾಬ್ ಕಾರ್ಡಗಳನ್ನು ತೆಗೆದು ಕೊಂಡು ಊರಿನ ಯಾವುದೋ ಮೂಲೆಯಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡಿ ಲಕ್ಷಾಂತರ ಬಡವರ ಹಣವನ್ನು ಲೂಟಿ ಮಾಡುವಂತಹ ಕೆಲಸ ಕಾರ್ಯಗಳು ನೆಡೆಯುತ್ತಿದೆ. ಸುಮಾರು ಮೂರು ಲಕ್ಷದ ಕೆಲಸ ವಿದ್ದರೆ ಅದರಲ್ಲಿ ಇಂತಿಷ್ಟು ಹಣವಂತೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಧ್ಯಕ್ಷರು, ಇಂಜಿನಿಯರ್‌ಗಳು, ಸಹ ಪಾಲುದರರಾಗಿದ್ದಾರೆ. ಹೀಗೆ ಕರ್ನಾಟಕದ ಉದ್ದಗಲಕ್ಕೂ ಸಹ ಇಂತಹ ಕೃತ್ಯಗಳು ಉದ್ಯೋಗ ಖಾತ್ರಿಯಲ್ಲಿ ನೆಡೆಯುತ್ತಿದೆ ಅಲ್ಲದೆ ಸರ್ಕಾರವು ಮಾನವ ದಿನಗಳ ಸೃಜನೆಯ ಗುರಿಯನ್ನು ೮.೫ ಕೋಟಿಯಿಂದ ೧೦ ಕೋಟಿ ಹೆಚ್ಚು ಮಾಡಿದೆ ಮತ್ತು ಬಾಕಿ ಇದ್ದ ೯೫೦ ಕೋಟಿ ರೂ ಹಾಗೂ ಪ್ರಸಕ್ತ ವರ್ಷ ೨೫೦ ಕೋಟಿಯನ್ನು ರಾಜ್ಯಕ್ಕೆ ನೀಡಿದೆ ಮತ್ತು ೧,೧೯೩ ಕೋಟಿ ರೂ ಅನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಈ ಹಣವು ಸಹ ಉದ್ಯೋಗ ಖಾತ್ರಿಯ ಖಜಾನೆಗೆ ಬಂದು ಬಿಳುವ ನಿರೀಕ್ಷೆಯಲ್ಲಿದೆ. ಬರದ ಛಾಯೆ ಅವರಿಸಿದ ಹಿನ್ನಲೆಯಲ್ಲಿ ಜನರು ಗುಳ್ಳೆ ಹೋಗುವುದನ್ನು ತೆಡೆಯುವುದಕ್ಕೆ ಸರ್ಕಾರ ಇಷ್ಟೆಲ್ಲ ಕಾರ್ಯ ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಯ ತೆರೆಮರೆಯಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಪಾಲಗುತ್ತಿದೆ. ಈ ಯೋಜನೆಯ ಹಣವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಮಾತ್ರ ತಿಂದು ತೆಗುತ್ತಿದ್ದಾರೆ. ಆದ್ದರಿಂದ ಮೊದಲು ಸರ್ಕಾರ ಇಂತಹವರ ವಿರುದ್ಧವಾಗಿ ಕೆಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಕೆಲಸದ ಅವಧಿ ಹೆಚ್ಚು ಮಾಡಿ ಇಲ್ಲವದಲ್ಲಿ ಇನ್ನೂ ೨೦೦ ದಿನ ಕೆಲಸದ ಅವಧಿಯನ್ನು ಹೆಚ್ಚು ಮಾಡಿದರು ಜನರು ಗುಳ್ಳೆ ಹೋಗುವುದನ್ನು ಮತ್ತು ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಕೆಲಸ ಹಾಗೂ ಹಣವನ್ನು ಒದಗಿಸುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಅರ್ಹ ಫಲಾನುಭವಿಗಳಿಗೆ ಸದುಪಯೋಗ ಮಾಡಿ ಕೊಡಿ.
ಸಂದೀಪ ಹೆಚ್ ಚಿಕ್ಕಮಲ್ಲನಹೊಳೆ ಜಗಳೂರು