ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ವಿದ್ಯಾರ್ಥಿ ಜೀವನ ಎಂದರೆ ನೆನಪಾಗುವುದು ಹಾಸ್ಟೆಲ್, ವಿದ್ಯಾಭ್ಯಾಸವನ್ನು ಮುಂದುವರಿಸುವಲ್ಲಿ ಹಾಸ್ಟೆಲ್ ಬಹು ಮುಖ್ಯವಾದಂತಹ ಪಾತ್ರವನ್ನು ವಹಿಸುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆಂದು ಮನೆಯವರನ್ನು ಬಿಟ್ಟು ತೊರೆದು ಹೋದಾಗ ಎರಡನೇ ನಿವಾಸಿಯಾಗಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವಂತಹ ದೊಡ್ಡ ತಂಗುದಾಣ. ಮನೆಯವರನ್ನು ಬಿಟ್ಟು, ಚಿಕ್ಕವರಿಂದ ಹಾಡಿ ಕುಣಿದ ಬಾಲ್ಯದ ಸ್ನೇಹಿತರನ್ನು, ಹಾಗೂ ಹುಟ್ಟಿ ಬೆಳದ ಊರನ್ನು ತೊರೆದು ಬೇರೊಂದು ಹೊಸ ಸ್ಥಳಕ್ಕೆ ಹೋಗಿ ಉಳಿಯುವುದು ಅನಿರ್ವಾಯ. ಇದು ಪ್ರಾರಂಭದಲ್ಲಿ ತುಸು ಕಷ್ಟವಾದರು ನಂತರ ಅಲ್ಲಿ ಒಂದು ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ಈ ಮೊದಲು ಇದ್ದ ಎಲ್ಲಾ ತುಡಿತಗಳನ್ನು ದಿನ ಕಳೆದಂತೆ ಮರೆಸಿ ಹೊಸದಾದ ದಿಕ್ಕಿಗೆ ಕೊಂಡೊಯುತ್ತದೆ. ಹಾಸ್ಟಲ್‌ನಲ್ಲಿ ವಿವಿಧ ಸ್ಥಳಗಳಿಂದ ವಿವಿಧ ರೀತಿಯಾದಂತಹ ವಿದ್ಯಾರ್ಥಿಗಳು ಇರುತ್ತಾರೆ ಮೊದಲು ಅಪರಿಚಿತರಾಗಿ ನಂತರ ಪರಿಚಯವಾಗಿ ಒಂದೇ ಹಕ್ಕಿಯ ಗೂಡಿನಂತೆ ಇರುವುದರಲ್ಲಿ ಏನೋವಂತರ ಹಿತ, ನಾನು ಮತ್ತು ಮಧು, ಕರ್ಣ, ಹನುಮೇಶ್ ನಾಗ ಹಾಗೂ ತಿಪ್ಪು ಆರು ಜನ ಗೆಳೆಯರ ಒಂದು ಗುಂಪು ಕಾಲೇಜಿನಲ್ಲಿ ಅಷ್ಟೋಂದು ಕ್ಲೋಸಾಗಿ ಇರದಿದ್ದರು, ಹಾಸ್ಟೆಲ್‌ನಲ್ಲಿ ತುಂಬಾ ಕ್ಲೋಸ್ ಅಗಿದ್ದೆವು.

ಆತ್ಮೀಯ ಸ್ನೇಹಿತ ಮಧು ತುಂಬಾ ಹೃದಯವಂತಿಕೆಯಿಂದ ಕೊಡಿದ ಯಾರನ್ನು ಭೇದಬಾವ ದಿಂದ ಕಾಣದೆ ಎಲ್ಲಾರ ಜೊತೆ ಯಾವಾಗಲು ತಮಷೆ ಮಾಡಿತ್ತಿದ್ದವನು ಅವನು ನಾನು ಒಂದೇ ರೂಮ್, ಆದರೆ ನಮ್ಮ ರೂಮಿನ ಎದರುಗಡೆಯ ರೂಮ್‌ನಲ್ಲಿ ಹನುಮೇಶ ತಂಗಿದ್ದನು. ಒಂದು ದಿನ ಮಧು ಮತ್ತು ಹನುಮೇಶ್ ಮದ್ಯಪಾನ ಮಾಡಿದ ಹಾಗೇ ನಟನೆ ಮಾಡಿ ಎಲ್ಲಾ ಸ್ನೇಹಿತರನ್ನು ಬಕರ ಮಾಡಲು ಗುಟ್ಟಾಗಿ ಸ್ಕೆಚ್ ಒಂದನ್ನು ಹಾಕಿಕೊಳ್ಳುವಷ್ಠರಲ್ಲಿ ನಾನು ಸಹ ಅವರ ಹತ್ತಿರ ಸುಳಿದೆ ಆಗ ಅವರು ನೀ ಯಾರಿಗೂ ಹೇಳಬೇಡ ನಮ್ಮ ತಾಳಕ್ಕೆ ಕುಣಿ ಎಂದು ಮಧು ಹೇಳಿದ ಆಗ ಹನುಮೇಶ್ ಕುಡುಕನ ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡ, ಊಟದ ಸಮಯ ಆಗಿದ್ದರಿಂದ ಎಲ್ಲಾ ಸ್ನೇಹಿತರು ಊಟಕ್ಕೆ ಬರುವ ದಾರಿಯಲ್ಲಿಯೇ ಅವನ ರೂಮ್ ಆದ್ದರಿಂದ ಅಲ್ಲಿಯೇ ಕುಡಿತದ ಹಮಾಲಿನಲ್ಲಿ ಬಿದ್ದವನಾಗಿ ಬಿದ್ದುಕೊಂಡ ಅವನ ಜೊತೆಯಲ್ಲಿದ್ದ ನಾವು ಹನುಮೇಶ ಡ್ರಿಂಕ್ಸ್ ಮಾಡಿದ್ದಾನೆ ನೋಡ್ರೋ ಎಂದು ಬರುವವರಿಗೆಲ್ಲಾ ಹೇಳುತ್ತಿದ್ದೇವು, ಅಬ್ಬಾ ಹನುಮೇಶ ಅಂತವನಲ್ಲಾ ಎಂದು ಕೆಲವರು, ಇನ್ನೂ ಕೆಲವರು ನಂಬದೆ ಹನುಮೇಶಿಯ ಬಾಯಿ ಹತ್ತಿರ ಮೂಗನ್ನು ಹಿಟ್ಟು ಡ್ರಿಂಕ್ ವಾಸನೆಯನ್ನು ಗ್ರಹಿಸುತ್ತಿದ್ದರು, ಆಗ ಅಲ್ಲಿಯೇ ಇದ್ದ ಮತ್ತೊಬ್ಬ ಗೆಳೆಯ ಅವನ ಮೇಲೆ ಮೂರುನಾಲ್ಕು ಬಕೇಟ್ ನೀರನ್ನು ಸುರಿದರು ಹನುಮೇಶ್ ಗಪ್ಪು ಚಿಪ್ಪು ಎನ್ನದೇ ಅವನ ನಟನೆಯಲ್ಲಿ ಮುಳಗಿದ್ದರಿಂದ ಎಲ್ಲಾ ಹುಡುಗರು ಕುಡುದಿರುವುದು ನಿಜ ಎಂದು ನಂಬಿದ್ದರು ಆಗ ಸಲ್ಪ ಕಾಮಿಡಿ ಮಾಡಲು ಹೋಗಿ ಹಾಸ್ಟೆಲ್‌ಗೆ ಹಾಸ್ಟೆಲ್ ನಂಬಿದ್ದರಿಂದ ನಮಗೆ ಸ್ವಲ್ಪ ಭಯವು ಶುರುವಾಯಿತು. ಅವನನ್ನು ರೂಮ್‌ಗೂ ಎತ್ತೋಯ್ದರು ಇದೆ ಸುಲಭದ ಸಮಯ ಎಂದು ಅವನ ಡ್ರಸ್ ಬದಲಿಸುವುದಾಗಿ ಹೇಳಿ ರೂಮ್ ಬಾಗಿಲು ಹಾಕಿ ಅವನನ್ನು ಎದೇಳ್ಳಿಸಿ ಎಲ್ಲಾರು ನಂಬಿ ಬಕರವಾದರು ಆದರೆ ಹೀಗಲು ಸಹ ಅದೇ ನಟನೆಯನ್ನು ಮುಂದುವರಿಸು ಎಂದು ಹೇಳಿದೆವು ಹಾಗೇ ಮುಂದುವರಿಸಿದ ಆದರೆ ಮರುದಿನ ಬೆಳಿಗ್ಗೆ ಆಗುವಷ್ಟರಲ್ಲಿ ಅವನಿಗೆ ಹನುಮೇಶ್ ಹೆಸರು ಹೋಗಿ ಯಾವತ್ತು ಡ್ರಿಂಕ್ಸ್ ರುಚಿಯ ನೋಡದೆ ಇರುವನಿಗೆ ಕುಡುಕ ಎಂಬ ಹೊಸ ಹೆಸರು ಇಡೀ ಯುನಿವರ್‌ಸಿಟಿಯ ಹಾಸ್ಟೆಲ್ ತುಂಬೆಲ್ಲಾ ಅಬ್ಬಿತ್ತು. ಆ ನೆನಪನ್ನು ಜೀವನದಲ್ಲಿ ಯಾವತ್ತು ಮರೆಯಲು ಸಾಧ್ಯವಿಲ್ಲ ಹೀಗೆ ಸಾಕಷ್ಟು ಸವಿ ನೆನಪುಗಳೊಂದಿಗೆ ಅಷ್ಟೇ ಕಹಿ ನೆನಪುಗಳನ್ನು ಹಾಸ್ಟೆಲ್ ಕಟ್ಟಿಕೊಡುತ್ತದೆ. ಒಟ್ಟಿನಲ್ಲಿ ಮುದುಕನಿಗೆ ಊರುಗೋಲು ಯಾವ ರೀತಿ ನಡೆಯಲು ಸಹಾಯ ಮಾಡುತ್ತದೆಯೋ ಅದೇ ರೀತಿ ವಿದ್ಯಾರ್ಥಿ ಜೀವನವನ್ನು ಕೈಹಿಡಿದು ಮುನ್ನಡೆಸುವಂತಹ ವಿದ್ಯಾರ್ಥಿ ನಿಲಯಕ್ಕೆ ನನ್ನದೊಂದು ಸೆಲ್ಯೂಟ್.
ಸಂದೀಪ ಚಿಕ್ಕಮಲ್ಲನಹೊಳೆ, ದಾವಣಗೆರೆ
9731899315