ಶಂಕರಘಟ್ಟ: ಗಿರೀಶ್ ಟಿ ಇವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಂ“ANALYSIS OF PERSONALITY, INTELLIGENCE AND ACHIEVEMENT MOTIVATION ON THE BASIS OF KANNADA HANDWRITING OF POST GRADUATE STUDENTS (ಅನಾಲಿಸಿಸ್ ಆಫ್ ಪರ್ಸನಾಲಿಟಿ, ಇಂಟಲಿಜೆನ್ಸ್ ಅಂಡ್ ಅಚಿವ್‌ಮೆಂಟ್ ಮೊಟಿವೇಷನ್ ಆನ್ ದ ಬೇಸಿಸ್ ಆಫ್ ಕನ್ನಡ ಹ್ಯಾಡ್‌ರೈಟಿಂಗ್ ಆಫ್ ಪೊಸ್ಟ್ ಗ್ರಾಜುಯೇಟ್ ಸ್ಟೂಡೆನ್ಟಸ್) ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ. ಇವರು ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಜಗನ್ನಾಥ ಕೆ. ಡಾಂಗೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಗಿರೀಶ್ ಟಿ ಪ್ರಸ್ತುತ ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.