ಚಿತ್ರದುರ್ಗ: ಕುಮಾರಿ ಮಾನಸ ಮಂಜುನಾಥ್, ಇವರು 2016-2018ನೇ ಸಾಲಿನಲ್ಲಿ ಎಂ.ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ದಿನಾಂಕ: 29-08-2018 ರಂದು ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಇವರು ಡಾನ್ ಬಾಸ್ಕ್ ಶಾಲೆಯಲ್ಲಿ 1 ರಿಂದ ಪಿಯುಸಿ ರವರೆಗೆ ವಿದ್ಯಾಭ್ಯಾಸ ಮಾಡಿದ್ದು ಚಿತ್ರದುರ್ಗ ಜಿಲ್ಲೆಗೆ ಹೆಸರು ತಂದಿರುತ್ತಾರೆ.