ನೀವು ಕಾಶಿ ಯಾತ್ರೆಗೆ ಹೋರಡಲು ಸಿದ್ಧರಿದ್ದೀರ. ಹಾಗಾದರೆ ಈ ಸುದ್ದಿಯ ಬಗ್ಗೆ ಒಮ್ಮೆ ಓದಿ ನಿಮಗೆ ಅನುಕೂಲವಾಗಬಹುದು.
-ಸಂ
ಹಿಂದೂಗಳ ಪುಣ್ಯಕ್ಷೇತ್ರಗಳಲ್ಲಿ ಕಾಶಿ ಅತ್ಯಂತ ಮಹತ್ವ ಪಡೆದಿದ್ದು  ಸಾಯೋದ್ರೊಳಗೆ ಒಮ್ಮೆ ಕಾಶಿಯಾತ್ರೆ ಮಾಡ್‌ಬೇಕು ಎಂಬುದು ಹಿಂದೂಧರ್ಮದ ಪ್ರತಿಯೊಬ್ಬ ಮನೆ ಹಿರಿಯರ ಆಸೆಯಾಗಿರುತ್ತದೆ. ಈ ಆಸೆಯು ಎಷ್ಟೋ ಜನರಿಗೆ  ಕನಸಾಗೇ ಉಳಿದಿದ್ದು ಅದಕ್ಕೆ ಅನೇಕ ರೀತಿಯ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಹಣ ಎಷ್ಟು ಖರ್ಚಾಗುತ್ತದೆಯೋ, ದೂರದದಾರಿ, ಭಾಷೆಯ ಸಮಸ್ಯೆ ಇದರ ಜೊತೆ ಒಂದಿಷ್ಟು ತಂಗುವ, ಊಟದಂತವುಗಳ ಕುರಿತಾದತಪ್ಪು ಕಲ್ಪನೆಗಳು ಎನ್ನಬಹುದು.
ಇಂತಹವುಗಳಿಂದ ಆಚೆ ಬಂದು ಸರಿಯಾದ ಯೋಜನೆಯನ್ನು ರೂಪಿಸಿಕೊಂಡರೆ ಅತೀಕಡಿಮೆ ಖರ್ಚಿನಲ್ಲಿ, ಸುಲಭವಾಗಿ ಕಾಶಿಯಾತ್ರೆ ಮುಗಿಸಿಕೊಂಡು ಬರಬಹುದು. ಹೆಚ್ಚೆಂದರೆ ಒಬ್ಬರ ಬಜೆಟ್ ಮೂರ್‍ನಾಲ್ಕು ಸಾವಿರವಾಗಬುದಷ್ಟೆ.
ಮುನ್ನೆಚರಿಕೆ ಕ್ರಮಗಳು
ಟ್ರಾವೆಲ್ಸ್‌ಗಳಿಂದದೂರ ಉಳಿಯುವುದು: ಹತ್ತು ದಿನಗಳ ಉತ್ತರ ಭಾರತ ಪ್ರವಾಸ, ಕಾಶಿ ಪ್ರವಾಸ ಕೇವಲ ಹತ್ತು ಸಾವಿರ ರೂಪಾಯಿಗಳಲ್ಲಿ ಎಂದು ಆನೇಕ ಟ್ರಾವೆಲ್ಸ್‌ಗಳು ಪ್ರವಾಸ ಆಯೋಜಿಸಿರುತ್ತಾರೆ. ಇವುಗಳಿಂದದೂರ ಉಳಿದರೆ ೫-೬ ಸಾವಿರ ಉಳಿಸಬಹುದು.
ಕಡಿಮೆ ವೆಚ್ಚದರೈಲು ಪಯಣ: ವಯಸ್ಕರೊಬ್ಬರಿಗೆ ಮೈಸೂರಿ ನಿಂದ ಟಿಕೇಟ್ ೧೧೦೦ ಇದ್ದು, ಚಿತ್ರದುರ್ಗದಿಂದ ೯೦೦ ಇದೆ. ಹಿರಿಯ ನಾಗರೀಕರಿಗೆ ೪೦% ವಿನಾಯ್ತಿಯಿಂದ ಟಿಕೇಟ್‌ದರ ಸುಮಾರು ೫೦೦ರೂ ಆಗುಬಹುದಷ್ಟೆ. ಇದರಿಂದ ಕಡಿಮೆ ಹಣದಲ್ಲಿ ಮಲಗಿಕೊಂಡು ಸುಖಕರ ಪ್ರಯಾಣ ಮಾಡಬಹುದು.
ರೈಲ್ವೇ ಮಾಹಿತಿ ಪಡೆದು ಸೀಟು ಕಾಯ್ದಿರಿಸುವುದು: ಕರ್ನಾಟಕದಿಂದ ವಾರಣಾಸಿಗೆ ಮೂರು ರೈಲುಗಳಿದ್ದು ಎರಡು ಬೆಂಗಳೂರಿನಿಂದ, ಒಂದು ಮೈಸೂರಿನಿಂದ ಹೊರಡುತ್ತದೆ. ಅವುಗಳ ಕುರಿತಾಗಿ ವಿಚಾರಿಸಿ ಮಾಹಿತಿ ಪಡೆದು ತಿಂಗಳ ಮುಂಚೆಯೇ ಸೀಟ್‌ನ್ನು ಕಾಯ್ದಿರಿಸಬೇಕು.
ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್: ಈ ರೈಲು ಮಧ್ಯಕರ್ನಾಟಕ ಉತ್ತರಕರ್ನಾಟಕದವರಿಗೆ ಅನುಕೂಲವಾಗಿದದ್ದು ಪ್ರತಿ ಮಂಗಳವಾರ, ಗುರುವಾರ ಮೈಸೂರಿನಿಂದ ೬ ಕ್ಕೆ ಬಿಟ್ಟುತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ,ಕಲಬುರ್ಗಿ ಮಾರ್ಗವಾಗಿ ಮಾಹರಾಷ್ಟ್ರ ಪ್ರವೇಶಿಸಿ ಮಧ್ಯಪ್ರದೇಶದಾಟಿಕೊಂಡುಉತ್ತರ ಪ್ರದೇಶದ ಕಾಶಿಯನ್ನು ತಲುಪುತ್ತದೆ. ವಾರಣಾಸಿಯಿಂದ ಮರಳಿ ಗುರುವಾರ, ಶನಿವಾರ ಇರುವುದರಿಂದ ಇದರಲ್ಲೇ ವಾಪಸ್ಸಾಗಬಹುದು. ಪ್ರಯಾಣಿಕರಲ್ಲಿ ಬಹುಸಂಖ್ಯಾತರು ಕಾಶಿಯಾತ್ರಿಗಳೇ ಇದ್ದು ಅನುಕೂಲಕರ ವಾತವರಣವಿರುತ್ತದೆ.
ಊಟದ ವಿಷ್ಯ: ರೈಲಿನಲ್ಲಿ ಊಟ ತುಂಬಾದುಬಾರಿ ಮತ್ತು ರುಚಿಕರವಾಗಿಯೂ ಇರುವುದಿಲ್ಲ. ನಮ್ಮದು ಮೊದಲೇ ಬಜೆಟ್‌ಯಾತ್ರೆಯಾಗಿರುವುದರಿಂದ ನಾಲ್ಕು ದಿನದ ರೈಲ್ವೇ ಪ್ರಯಾಣಕ್ಕಾಗುವಷ್ಟು ಹಣ್ಣು, ತರಕಾರಿ, ಕಡುಕಲುರೊಟ್ಟಿಯಿಚಿದ ಕುರುಕಲು ತಿಂಡಿಗಳವರೆಗೆ ಮನೆಯಲ್ಲೇ ಸಿದ್ಧ ಪಡಿಸಿಕೊಂಡು ಹೋಗುವುದು ಒಳಿತು. ನಿಲ್ದಾಣಗಳಲ್ಲಿ ಮೊಸರು, ಸಾಗುಗಳನ್ನು ಕೊಂಡುಕೊಳ್ಳಬಹುದು. ಮನೆ ಊಟವನ್ನು ರೈಲಿನಲ್ಲಿ ಮಾಡುವ ಮಜಾನೇ ಬೇರೆಯಾಗಿರುತ್ತದೆ.
ಕಾಶಿಯಲ್ಲಿ ತಂಗಲು: ಅನೇಕ ಹೋಟೆಲ್‌ಗಳು, ಧರ್ಮಶಾಲೆಗಳು, ಮಠಗಳಿದ್ದು  ಹೋಟೆಲ್ ತುಸು ದುಬಾರಿಯಾಗುವುದರಿಂದ ನಮ್ಮ ಆಯ್ಕೆ  ಧರ್ಮಶಾಲೆಗಳು, ಮಠಗಳಾಗಬೇಕು. ರೈಲ್ವೇ ನಿಲ್ದಾಣ ಬಳಿಯ ಶ್ರೀಕೃಷ್ಣ ಧರ್ಮಶಾಲಾ, ವಿಶ್ವನಾಥ ಮಂದಿರದ ಬಳಿಯ ಜಂಗಮವಾಡಿ ವ್ಮಠ ಕರ್ನಾಟಕ ಜನರ ಫೇವರೇಟ್ ಪ್ಲೇಸ್. ಇಲ್ಲಿ ಸ್ವಚ್ಚತೆಯಿಂದ ಹಿಡಿದುಎಲ್ಲಾ ಸೌಕರ್ಯಗಳು ಉತ್ತಮವಾಗಿವೆ. ಒಬ್ಬರಿಗೆ ದಿನಕ್ಕೆ ೫೦ ರೂ ಮಾತ್ರವಿದ್ದು ೫-೬ ಜನರಿಗೆ ಸೇರಿ ಒಚಿದು ರೂಮ್‌ಕೊಡುತ್ತಾರೆ.
ಜಂಗಮವಾಡಿ ಮಠ: ಇದುಕರ್ನಾಟಕದವರಿಗೆ ಸೇರಿದ ಮಠವಾಗಿದೆ. ಇಲ್ಲಿಂದ ವಿಶ್ವನಾಥದೇವಾಲಯ, ಗಂಗಾ ನದಿಯು ಕಾಲ್ನಡಿಗೆಯಷ್ಟು ದೂರವಿದ್ದು ರೈಲ್ವೇ ನಿಲ್ದಾಣದಿಂದ ಒಮ್ಮೆ ಆಟೋದಲ್ಲಿ ಬಂದುಸೇರಿದರೆ ಸಾಕು. ಉತ್ತಮದ ಸೌಕರ್ಯಗಳೊಂದಿಗೆ ಇಲ್ಲಿ ಮಠದ ವತಿಯಿಂದ ತಂಗಿದವರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಊಟವು ಅಷ್ಟೇ ಸೊಗಸಾಗಿದ್ದು, ಇಲ್ಲಿ ಉಳಿದುಕೊಂಡರೆ ಊಟದಯಾವುದೇ ತೊಂದರೆ ಆಗುವುದಿಲ್ಲ
ಗಂಗಾರತಿ : ಪ್ರತಿನಿತ್ಯವೂನದಿಯದಡದಲ್ಲಿ ಸಂಜೆ ೭ ರಿಂದ ೮ರ ವರೆಗೆ ಗಂಗಾರತಿ ನಡೆಯುತ್ತದೆ. ವಿವಿಧ ರೀತಿಯಲ್ಲಿ ಅದ್ಭತವಾಗಿ ಪೂಜೆ ನಡೆಯುತ್ತದೆ. ಉಚಿತ ಪ್ರವೇಶವಿದ್ದು ಸ್ವಲ್ಪ ಜನಜಂಗುಳಿ ಇರುವುದರಿಂದ ನಮ್ಮ ಎಚ್ಚರಿಕೆಯಲ್ಲಿರಬೇಕು.
ವಿಶ್ವನಾಥದರ್ಶನ: ಪ್ರತಿದಿನ ಬೆಳಗ್ಗೆ ೩ ಗಂಟೆಯ ಮೊದಲ ಪೂಜೆ ನಂತರದರ್ಶನ ಪ್ರಾರಂಭವಾಗಿರಾತ್ರಿ ೧೨ ಗಂಟೆ ವರೆಗೂಇರುತ್ತದೆ. ನದಿ ಮತ್ತು ದೇವಸ್ಥಾನಗಳಿಗೆ ಬೆಳಗಿನ ಜಾವ ಬೇಗನೇ ಹೋದಷ್ಟು ಅನುಕೂಲ. ಭದ್ರತೆ ಹೆಚ್ಚಿರುವುದರಿಂದ ಹೂ ಮತ್ತು ನೀರನ್ನು ಬಿಟ್ಟು ಯಾವ ವಸ್ತುವನ್ನು ದೇವಸ್ಥಾನದೊಳಗೆ ತೆಗೆದುಕೊಂಡು ಹೋಗುವಂತಿಲ್ಲ.
ಇತರೆ ಪ್ರವಾಸಿ ಸ್ಥಳ: ಸುತ್ತ-ಮುತ್ತಲು ಅನೇಕ ಭೇಟಿನೀಡಲೇ ಬೇಕಾದ ಸ್ಥಳಗಳಿದ್ದು ಒಂದು ದಿನ ಅದಕ್ಕೆ ಮೀಸಲಿಡಬೇಕು. ಅವುಗಳಿಗೆ ತೆರಳಲು ಸಾಕಷ್ಟು ಸ್ಥಳೀಯ ಟ್ರಾವೆಲ್ಸ್‌ಗಳು ಕಾರ್ ಮತ್ತು ರಿಕ್ಷಾಗಳಲ್ಲಿ ಕಡಿಮೆದರದಲ್ಲಿ ಪ್ರವಾಸ ಆಯೋಜಿಸಿದ್ದು ೫ , ೮ ಜನರಗುಂಪಿದ್ದರೆಕಾರ್‌ನಲ್ಲೇಒಬ್ಬರಿಗೆ ೧೦೦ ರೂಆಗುತ್ತದೆ. ಇದರಲ್ಲಿ ಸಾರನಾಥ, ಬನಾರಸ್ ವಿಶ್ವವಿದ್ಯಾಲಯ, ರಾಮನಗರಕೋಟೆ, ದೇವಸ್ಥಾನಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಐತಿಹಾಸಿಕ ಸುಂದರಸ್ಥಳಗಳು ಒಳಗೊಂಡಿರುತ್ತವೆ.
ಮುಂಜಾಗ್ರತೆದೃಷ್ಟಿಯಿಂದ ಅಗತ್ಯ ಔಷಧಿ ಜೊತೆಗಿರಿಸಿಕೊಂಡು, ಇಂತಹಯೋಜನೆಯೊಂದಿಗೆ ಅನಗತ್ಯ ಖರ್ಚನ್ನು ಮಾಡದೇ, ಶಾಪಿಂಗ್‌ಗೆಕಡಿವಾಣ ಹಾಕಿಕೊಂಡು ಪ್ರವಾಸ ಮಾಡಿದರೆ. ಕಡಿಮೆ ಖರ್ಚಿನಲ್ಲಿ ಕಾಶಿಯಾತ್ರೆಯಾಗುದರಲ್ಲಿ ಎರಡು ಮಾತಿಲ್ಲ.
ಇದರಜೊತೆ ಸಮಯ ಮಾಡಿಕೊಂಡು ಒಂದು ದಿನದ ಅಲಹಾಬಾದ್‌ನ ಪ್ರವಾಸವನ್ನೂ ಮಾಡಿಕೊಂಡು ಬರಬಹುದು.

Jayaprakash biradar.

Davanagere University.

7846039739