ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ನಲ್ಲಮುತ್ತು ಅನುಸೂಯಮ್ಮನವರ ಮಗನಾದ ರಂಗನಾಥ ಎನ್ ಇವರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಯು ಪಿಹೆಚ್‌ಡಿ ಪದವಿಯನ್ನು   ದಿನಾಂಕ ೨೫.೦೭.೨೦೧೮ ರಂದು  ಘೋಷಿಸಿದೆ.

ವಿಶ್ವವಿದ್ಯಾಲಯದ   ಕನ್ನಡ ವಿಭಾಗದ ಪ್ರೊ. ವಿಕ್ರಮ ವಿಸಾಜಿಯವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ” ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ” ಎಂಬ ಮಹಾ ಪ್ರಬಂಧಕ್ಕೆ  ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಆರನಕಟ್ಟೆ ರಂಗನಾಥ ಎಂಬ ಹೆಸರಿನಲ್ಲಿ ಕವಿಯಾಗಿ ಗುರುತಿಸಿಕೊಂಡಿರುವ ರಂಗನಾಥ ಕನ್ನಡ ಮತ್ತು ತಮಿಳು ಭಾಷೆಯ ಸಾಹಿತ್ಯ ಅನುವಾದಕರಾಗಿಯು ಗುರುತಿಸಿಕೊಂಡಿದ್ದಾರೆ.