ಮೊನ್ನೇ ಶನಿವಾರ ರಜೆ ಎಂದು ಬೈಕ್ ಸರ್ವಿಸ್‌ಗೆ ಬಿಡಲು ಗ್ಯಾರೇಜ್‌ಗೆ ಹೊಗಿದ್ದೆ, ಅಲ್ಲಿ ಹಿರಿಯ ಮುಸ್ಲಿಂ ಒಬ್ಬಾತ ಕೆಲಸ ಮಾಡುತ್ತಿದ್ದರು, ಹಾಗೇ ಅವರನ್ನು ಮಾತಿಗೆಳೆದೆ ಏನ್ ಬಯ್ಯಾ ಟಿವಿಯಲ್ಲಿ ಸರಿಗಮಪ ನೋಡುತ್ತೀರಾ ಎಂದು ಕೇಳಿದೆ ಆ ಮಾತಿಗೆ  ಹಾ ಜೀ ಗೊತ್ತಾಯಿತು ಬಿಡಿ ನೀವು ಆ ಹುಡುಗಿ ಹಾಡಿಂದು ಬಗ್ಗೆ ಕೇಳ್‌ತ್ತಿದ್ದೀರಾ, ಏನ್ ತಪ್ಪಿದೆ ಹಾಡೊದ್ರಲ್ಲಿ. ಅವಳ್ದು ಇಷ್ಟ ಅದು ಎಂದರು. ಹಾಗೆಯೇ ಮಾತು ಮುಂದುವರೆಯಿತು, ಆಗ ನಾನು ಯಾಕೆ ನಿಮ್ಮವರು ಹಾಗೆ ಮಾಡುತ್ತಾರೆ, ಜೀವ ಬೆದರಿಕೆ ಹಾಕುತ್ತಾರೆ ಅದು ತಪ್ಪಲ್ವ ಎಂದೇ. ಅದಕ್ಕವರು ನೀವೇ ನಮ್ಮವರು ನಿಮ್ಮವರು ಎಂದು ಭೇದ ಮಾಡುತ್ತೀರಲ್ಲ ಆ ರೀತಿಯೇ ಹಿಂದೂ ದೇವರ ಹಾಡು, ಮುಸ್ಲಿಂ ದೇವರ ಹಾಡು ಎಂದು ಅವರು ಭೇದ ಮಾಡಿದ್ದಾರಷ್ಟೆ ಎಂದರು.
ಆ ಮಾತು ನನಗೆ ಮುಖಕ್ಕೆ ಹೊಡೆದಂಗಾಯಿತು. ಮಾತನಾಡದೇ ಪೆಚ್ಚಗಿ ನಿಂತೆ ಮಾತು ಮುಂದುವರೆಸಿದ ಅವರು, ಎಲ್ಲಾ ದೇವರು ಒಂದೇ ಎಂದು ಅವರಿಗೆ ತಿಳಿದಿಲ್ಲ, ಅಂತಹ ಕೆಲವು ಮಂದಿ ಮಾಡಿರೋ ಕೆಲಸ ಅದು ಅಷ್ಟೇ ಆ ಮಾತ್ರಕ್ಕೆ ಮುಸ್ಲಿಂ ಎಲ್ಲಾರು ಧರ್ಮಾಂಧರು ಎಂದು ಎಂದು ಟಿ.ವಿ ನ್ಯೂಸ್ ನಲ್ಲಿ ತೋರಿಸ್ತಿದ್ದಾರೆ ಅದು ಎಷ್ಟು ಸರೀ. ಯಾವೂ ನ್ಯೂಸ್ ಇಲ್ಲ ಅಂತ ನಾಲ್ಕು ದಿನ ಅದ್ನೇ ತೋರಿಸದ್ರು ಇವತ್ತು ಎಲೆಕ್ಷನ್‌ದು ಹಿಡಕೊಂಡಾರೆ. ಅವರುಗಳು ಅದನ್ನ ಅಷ್ಟು ದೊಡ್ಡದು ಮಾಡೋದು ಬೇಕಿತ್ತಾ.
ಇನ್ನು ಬೆದರಿಕೆ ಹಾಕಿದವರು ಇವಳು ಅಮಾಯಕಿ ಎಂದು ಹಾಕಿದ್ದಾರೆ, ಅದೇ ದೊಡ್ಡ ದೊಡ್ಡವರ ಮೇಲೆ ಹಾಕ್ಲೀ? ಇವರನ್ನ ಅವರು ಸುಮ್ನೇ ಬಿಡ್ತಾರಾ! ಆ ಮಾತು ಕೇಳಿ ಮನೆಗೆ ಬಂದು ಯೋಚಿಸಿದೆ.
ಹೌದು ಎಲ್ಲರೂ ನಮ್ಮವರೇ ಎಂದರೆ ಭಿನ್ನಭಾವ ಬರೋದಿಲ್ಲ ಅಲ್ವಾ?  ನಾವೇಕೆ ಇನ್ನೂ ಮುಸ್ಲಿಂರನ್ನು ಬೇರೆಯೇ ನೋಡುತ್ತಿದ್ದೇವೆ. ಸುಹಾನ ಹಾಡಿಗೆ ಸಾಮಾನ್ಯವಾಗಿ ಸ್ಪಂದಿಸದೇ ದೊಡ್ಡ ದೊಡ್ಡ ಮಾತುಗಳನ್ನಾಡಿ ತೀರ್ಪುಗಾರರು ಭಿನ್ನಭಾವ ಮಾಡಿದರೆ? ಬೆದರಿಕೆ ವಿಷಯವನ್ನು ಸುದ್ದಿ ಮಾಡಿದ ವಾಹಿನಿಗಳು ಧರ್ಮಾಧಂತೆ ಎಂದು ಅತೀ ರಂಜಕತೆ ಮಾಡಿ ಭಿನ್ನಭಾವ ಮಾಡಿದರೆ? ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಭಾರತೀಯತೆ ಹೆಸರಿನಲ್ಲಿ ಅತ್ಯುಗ್ರ ರಾಷ್ಟ್ರೀಯಾತೆ ತೋರಿ ಮುಸ್ಲಿಂರನ್ನು ವಿರೋಧಿಸಿ ಭಿನ್ನಭಾವ ಮಾಡಿದರೆ? ಎಂದೆನಿಸಿತು.
ಕೆಲವು ಕಿಡಿಗೇಡಿಗಳು ಹಾಕಿದ ಬೆದರಿಕೆಗೆ ಇಡೀ ಧರ್ಮದ ಜನರನ್ನು ದೂಷಿಸುವುದು ಎಷ್ಟು ಸರೀ? ಗಾಯಕಿ ಸುಹಾನ ವಿಷಯದಲ್ಲಿ ಧರ್ಮಾಂಧತೆಯನ್ನು ವಿರೋಧಿಸುವ ನಮ್ಮ ಕೆಲ ಸುದ್ದಿ ವಾಹಿನಿಗಳು ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಒಂದು ಕೋಟಿಗೂ  ಹೆಚ್ಚಿನ ಜನಸಂಖ್ಯೆಯಲ್ಲಿರು ಮುಸ್ಲಿಂರ ಕುರಿತಾಗಿ ತಮ್ಮ ಕಾರ್ಯಕ್ರಮಗಳಲ್ಲಿ ಎಷ್ಟು ಆಧ್ಯತೆ ನೀಡಿದ್ದಾರೆ? ಹಿಂದೂ ಧರ್ಮ ಕುರಿತಾದ ಕಾರ್ಯಕ್ರಮಗಳೇ ಹೆಚ್ಚು. ಇದು ಧರ್ಮಾಂಧತೆಯನ್ನು ಪ್ರದರ್ಶಿಸುತ್ತಿಲ್ಲವೇ? ಒಂದಿಷ್ಟು ಯೋಚಿಸಬೇಕು…
ಈ ನಿಟ್ಟಿನಲ್ಲಿ ಎಲ್ಲರೂ ನಮ್ಮಿಂದಲೇ ಮೊದಲು ಬದಲಾಗಬೇಕಿದೆ. ಜ್ಯಾತ್ಯಾತೀತ ರಾಷ್ಟ್ರದಲ್ಲಿ ಎಲ್ಲವನ್ನೂ ಜಾತಿ ಧರ್ಮದ ದೃಷ್ಟಿ ಕೋನದಲ್ಲಿ ನೋಡವುದು ಪ್ರತ್ಯೇಕಿಸುವುದನ್ನು ಬಿಡಬೇಕು. ಆಗ ಮಾತ್ರವೇ ಕಲೆ, ಸಂಗೀತದಂತದಹ ಮುಂತಾದ ವಿಭಾಗಗಳಲ್ಲಿ ಯುವಪ್ರತಿಭೆಗಳು ಹೊರಬಂದು ಬೆಳೆಯಲು ಸಾಧ್ಯವಾಗುತ್ತದೆ.
ನಮ್ಮ ಸಂವಿಧಾನವೇ ನಮಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಕೊಟ್ಟ ಮೇಲೆ ಯಾರು ಅದನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಹತ್ತಿಕ್ಕುವ ಯಾವುದೇ ಪ್ರಯತ್ನಗಳಾದರೂ ಕಾನೂನಿನ ಬೆಂಬಲ ನಮಗಿದೆ ಎಂದು ಯಾರೂ ಮರೆಯಬಾರದು.
 

–  ಜಯಪ್ರಕಾಶ್ ಬಿರಾದಾರ್. ದಾವಣಗೆರೆ.

#೬೯೬/೭ ೧೦ನೇ ತಿರುವು ಶ್ರೀನಿವಾಸ ನಗರ ದಾವಣಗೆರೆ.
ದಾವಣಗೆರೆ. 8123003656, 7846039739