ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಪ್ರಯೋಗಾಲಯದಲ್ಲಿ ಸೂಕ್ಷ್ಮಾಣು ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಭರತ್ ಎಂ.ಡಿ. ಇವರಿಗೆ ಬಿಜಾಪುರದ ಬಿ.ಎಲ್.ಡಿ.ಇ. ಯೂನಿವರ್ಸಿಟಿಯಿಂದ “ಸಿರಾಲಾಜಿಕಲ್ ಅಂಡ್ ಮೊಲೆಕ್ಯುಲರ್ ಡಯಾಗ್ನಸಿಸ್ ಆಫ್ ಚಿಕನ್‌ಗುನ್ಯಾ ಇನ್ ಅಂಡ ಅರೌಂಡ್ ಆಫ್ ಬಿಜಾಪುರ್ (ನಾರ್ತ್ ಕರ್ನಾಟಕ)“ ವಿಷಯದ ಮೇಲೆ ಮೈಕ್ರೋ ಬಯಾಲಜಿ ವೈದ್ಯಕೀಯ ಅಧ್ಯಯನದಲ್ಲಿ ನಡೆಸಿದ ಸಂಶೋಧನೆಗೆ ಪಿ.ಹೆಚ್.ಡಿ. ಪದವಿಯನ್ನು ಪ್ರದಾನ ಮಾಡಲಾಗಿದೆ ಎಂದು ಯೂನಿವರ್ಸಿಟಿಯ ಪ್ರಕಟಣೆ ತಿಳಿಸಿದೆ.