ಇದು ಮೊಬೈಲ್ ಈ ಯುಗ. ಮೊಬೈಲ್ ಫೋನ್ ಇಲ್ಲದ ವ್ಯಕ್ತಿಗಳು ಕಾಣಸಿಗುವುದು ಅಪರೂಪವೇ ಸರಿ. ಕೂಲಿಕಾರ್ಮಿಕರಿಂದ ಉನ್ನತ ಉದ್ದೆಯ ಅಧಿಕಾರಿ ಹಾಗು ಉದ್ಯಮಿಯವರೆವಿಗೂ ಮೊಬೈಲ್ ಬಳಕೆ ಇಂದು ಅನಿವಾರ್ಯವೆನಿಸಿದೆ. ಇದರಿಂದ ಅನುಕೂಲವೇ ಹೆಚ್ಚೆಂದು ಹೆಚ್ಚೆನವರು ಹೇಳುತ್ತಾರಾದರೂ ಮೊಬೈಲ್ ಬಳಕೆಯ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಬಳಕೆಯ ಅನುಕೂಲಗಳು ಮತ್ತು ಅನಾನುಕೂಲಗಳು ಬಗ್ಗೆ ಚರ್ಚೆಗಿಂತ ಮೊಬೈಲ್ ಬಳಕೆದಾರರು ಪಾಲಿಸಿದರೆ ಸೂಕ್ತವೆನಿಸುವ ಕೆಲವು ನಾರೀಕ ನಿಯಮಗಳನ್ನು ಪಾಲಿಸಿದರೆ ಸೂಕ್ತವೆನಿಸುವ ಕೆಲವು ನಾಗರೀಕ ನಿಯಮಗಳನ್ನು ಎಲ್ಲಾ ಬಳಕೆದಾರರೂ ತಿಳಿದಿರಲೇ ಬೇಕಾದುದು ಇಂದು ಮೊಬೈಲ್ ಬಳಕೆಯಷ್ಟೇ ಮುಖ್ಯವಾದುದಾಗಿದೆ. ಇವುಗಳನ್ನೇ ಮೊಬೈಲ್ ಬಳಕೆಯಲ್ಲಿನ ಕಾಮನ್‌ಸೆಲ್ಸ್ ಎಂತಲೂ ಕರೆಯಬಹುದು. ಈ ಪಾಲನೆಗಳನ್ನು ನಾಗರಿಕ ನಿಯಮಗಳೆಂದು ಕರೆಯಲು ಕಾರಣವೇನಂದರೆ ಈ ನಾಗರೀಕ ಸಮಾಜದಲ್ಲಿ ವಾಸಿಸುತ್ತಿರುವ ಯಾವುದೇ ವ್ಯಕ್ತಿಯ ಯಾವುದೇ ವರ್ತನೆಗಳು ಅಥವ ಅವನು ಬಳಸುವ ಉಪಕರಣಗಳು ಬೇರೊಬ್ಬರಿಗೆ ಕಿರಿಕಿರಿ ಮಾಡದಂತೆ ಹಾಗು ಹಿಂಸೆಯೆನಿಸುವಂತೆ ಇರಬಾರದೆಂಬುದೇ ನಾಗರೀಕನೆಂಬುವವನ ಮುಖ್ಯ ಲಕ್ಷಣವಾಗಿರುತ್ತದೆ. ಇದು ಅವನಿಗಿರಲೇ ಬೇಕಾದ ಕಾಮನ್‌ಸನ್ಸ್ ಕೂಡ ಆಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ, ಸಾರ್ವಜನಿಕರು ಪ್ರಯಾಣಿಸುವ ವಾಹನಗಳಿಂದ ಅಥವಾ ಇಂತಹ ನಿಯಮಗಲು ಬಗ್ಗೆ ಅವರಿಗೆ ಜಾಗ್ರತಿ ಇಲ್ಲದಿರುವುದರಿಂದ ಹೆಚ್ಚಿನ ಕಿರಿ ಕಿರಿ ಉಂಟಾಗುತ್ತಿದೆ. ಕೆಲವು ಸಂದರ್ಭಗಳಲ್ಲಂತೂ ಹಿಂಸೆ ಯೆನಿಸುವಷ್ಟು ಕಿರಿ ಕರಿಯಾಗಿರುವುದನ್ನು ಯಾರುಬೇಕಾದರೂ ಕ್ಷಣಾರ್ಧದಲ್ಲೇ ನೆನಪು ಮಾಡಿಕೊಳ್ಳಬಹುದಾಗಿದೆ. ಆದುದರಿಂದ ಮೊಬೈಲ್ ಬಳಸುವವರು ಪಾಲಿಸಲು ಯೋಗ್ಯವಾಗಿರುವ ಕೆಲವು ನಿಯಮಗಳನ್ನು ಈ ಲೇಖನದ ಮೂಲಕ ತಿಳಿಸಲೆನ್ನಿಸುತ್ತೇನೆ.
ಮೊಬೈಲ್ ರಿಂಗ್‌ಟ್ಯೂನ್‌ಗೆ ಸಂಬಂದಿಸಿದ ಕಾಮನ್‌ಸೆನ್ಸ್: ನಿಮ್ಮ ಮೊಬೈಲ್ ರಿಂಗ್‌ಸೌಂಡ್‌ನ ವ್ಯಾಲುಮ್ ಸಾಧ್ಯವಾದಷ್ಟು ಕಡಿಮೆ ಇರಲಿ ಇದರಿಂದ ನಿಮಗೆ ಮತ್ತು ನಿಮ್ಮ ಪಕ್ಕದಲ್ಲಿರುವವರಿಗೆ ಹೆಚ್ಚಿನ ಕಿರಿಕಿರಿಯಾಗುವುದು ತಪ್ಪುತ್ತದೆ. ಕೆಲವರು ತಮ್ಮ ಮೊಬೈಲ್‌ನ ಮೆಸೇಜ್ ಅಲರ್‍ಟ್ ಟ್ಯೂನ್‌ನ್ನು ಕೂಡ ತುಂಬಾ ಜೋರಾಗಿಯೇ ಇಟ್ಟುಕೊಂಡಿರುತ್ತಾರೆ. ಪ್ರತಿ ನಿಮಿಷಕೊಮ್ಮೆ ಬರುವ ಹಲವು ಕಂಪನಿಗಳ ಅಥವಾ ಸ್ನೇಹಿತರ ಮೇಸೇಜ್‌ಗಳ ಟ್ಯೂನ್‌ಗಳಂತೂ ಕೇಳಗರಿಗೆ ಟಾರ್ಚರ್ ಕೊಡುತ್ತವೆ. ಆದುದರಿಂದ ಹೆಚ್ಚು ಮೇಸೇಜ್ ಸ್ವೀಕರಿಸುವವರು ಮೆಸೇಜ್ ಟ್ಯೂನ್‌ನನ್ನು ಅತ್ಯಂತ ಸಣ್ಣ ಶಬ್ದದ ಒಂದೇ ರಿಂಗ್ ಬರುವಂತೆ ಸೆಟ್ ಮಾಡಿಕೊಳ್ಳಿ. ಅಥವಾ ಮೇಸೇಜ್ ರಿಸೀವ್ ಟ್ಯೂನ್‌ನ್ನು ಸ್ಯಲೆಂಟ್ ಮೋಡ್‌ಗೆ ಸೆಟ್ ಮಾಡಿ ಹಾಗು ಪದೇ ಪದೇ ಪೀಡಿಸುವ ಕಂಪನಿ ಮೇಸೇಜ್‌ಗಳಿಂದ ಡಿಸ್‌ಕನಕ್ಟ್ ಮಾಡಿಸಿ ಇದರಿಂದ ಪ್ರತೀ ಮೆಸೇಜ್ ಬಂದಾಗಲೂ ನೀವು ಮೊಬೈಲ್ ಕಡೆ ಗಮನ ಹರಿಸುವುದೂ ತಪ್ಪುತ್ತದೆ. ಹಾಗು ಈ ಶಬ್ಧದಿಂದ ಬೇರೆಯವರಿಗಾಗುವ ಕಿರಿ ಕಿರಿಯೂ ತಪ್ಪುತದೆ. ಹಲವು ರೀತಿಯ ದುಃಖತಪ್ತ ಸಂದರ್ಭಗಳು, ಪ್ರಾರ್ಥನೆ, ಶೋಕಾಚಾರಣೆ ಮುಂತಾದೆಡೆ ನಿಮ್ಮ ಮೊಬೈಲ್ ಮೋಡ್‌ನಲ್ಲಿಡಿ. ಇಲ್ಲದ್ದಿದ್ದರೆ ನಿಮಗೆ ಯಾವುದೇ ಕರೆ ಬಂದಾಗ ರಿಂಗಣಿಸುವ ಡಿಂಗು ಡಾಂಗು ಮ್ಯೂಸಿಕ್ ಅಥವಾ ಹಾಡುಗಳು ಆ ಸನ್ನಿವೇಶದ ವಾತಾವರಣಕ್ಕೆ ಕಿರಿ ಕಿರಿ ಉಂಟು ಮಾಡುತ್ತವೆ.
ಕಾಲ್ ಮಾಡುವಾಗಿರಬೇಕಾದ ಕಾಮನ್‌ಸೆನ್ಸ್: ಬೇರೆ ಯಾವುದೇ ವ್ಯಕ್ತಿಗೆ ಕಾಲ್ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸುವುದು ಸೂಕ್ತವಾದುದಾಗಿದೆ. ಅವುಗಳೆಂದರೆ ನೀವು ಯಾರಿಗಾದರೂ ಕಾಲ್ ಮಾಡುವಾಗ ಅವರ ಮೊಬೈಲ್ ಬ್ಯುಸಿ ವಾಯ್ಸ್ ಕೇಳಿಬಂದರೆ ದಯವಿಟ್ಟು ಮತ್ತೆ ರಿಂಗ್ ಮಾಡಬೇಡಿ ಅದರ ಬದಲು ಒಂದೆರಡು ನಿಮಿಷಗಳ ನಂತರ ಪುನಃ ಪ್ರಯತ್ನಿಸಿ ನೀವು ಬ್ಯುಸಿ ಸಂದರ್ಭಗಳಲ್ಲಿ ಮತ್ತೆ ಮತ್ತೆ ರಿಂಗಣಿಸುವುದರಿಂದ ಮತ್ತೊಂದು ಬದಿಯಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿರುವವರ ಕಿವಿಗೆ ನಿಮ್ಮ ಮೊಬೈಲ್ ಕಾಲ್ ಕಿರಿ ಕಿರಿ ಉಂಟುಮಾಡುವುದಲ್ಲದೆ ಅವರ ಕಿವಿಯ ಆರೋಗ್ಯದ ದೃಷ್ಟಿಯಿಂದಲೂ ಕೂಡ ಅಪಾಯಕಾರಿ ಯಾದುದಾಗಿದೆ. ಅಂತಹ ಅನುಭವವು ನಿಮಗೆ ಆಗಿರುವುದನ್ನು ನೆನಪು ಮಾಡಿಕೊಳ್ಳಿ, ಅವರು ಬ್ಯಸಿ ಇದ್ದಾಗ ನೀವು ಕಾಲ್ ಮಾಡಿದರೆ ನಿಮ್ಮ ಮಿಸ್ಸ್ ಕಾಲ್ ಅವರ ಮೊಬೈಲ್‌ನಲ್ಲಿ ದಾಖಲಾಗುವ ವ್ಯವಸ್ಥೆ ಇರುವುದರಿಂದ ಅವರೇ ವಿಷಯವು ಮುಖ್ಯವೆನಿಸಿದ್ದರೆ ನಿಮಗೆ ಕಾಲ್ ಮಾಡಬಹುದು. ನೀವು ಕಾಲ್ ಮಾಡಿರುವ ವ್ಯಕ್ತಿಯು ಆ ಸಮಯದಲ್ಲಿ ಎಲ್ಲಿರಬಹುದು ಎಂಬುದು ನಿಮ್ಮ ಗಮನಕ್ಕೆ ಬಂದಿದ್ದರೆ ಅವರು ಇರುವ ಸಂದರ್ಭವನ್ನು ದಯಮಿಟ್ಟು ಅರ್ಥಮಾಡಿಕೊಳ್ಳಿ, ವೆಹಿಕಲ್ ಡ್ರೈವ್ ಮಾಡುತ್ತಿದ್ದರೆ, ಮೀಟಿಂಗ್‌ಗಳಲ್ಲಿ ಇದ್ದರೆ, ಅಥವಾ ತಕ್ಷಣವೇ ಮೊಬೈಲ್ ರಿಸೀವ್ ಮಾಡದಂತಹ ಯಾವುದೇ ಸನ್ನಿವೇಶಗಳಲ್ಲಿರಬಹುದಾಗಿದ್ದರೂ ಕೂಡ ಪದೇ ಪದೇ ಕಾಲ್ ಮಾಡಲೆಬಾರದು. ಅಗತ್ಯವಿದ್ದರೆ ಮೆಸೇಜ್ ಮಾಡಿ ವಿಷಯ ತಿಳಿಸಿ. ಅಥವಾ ನಾನು ನಿನ್ನ ತೊತೆ ಮಾತನಾಡ ಬೇಕು ನೀವು ಯಾವಾಗ ಫ್ರೀ ಆಗುತ್ತೀರಿ ಎಂದು ಮೆಸೇಜ್ ಮಾಡಿ. ಒಂದು ವೇಳೆ ವಿಷಯವು ತುಂಬ ತುರ್ತಾದುದಾಗಿದ್ದರೂ ಕೂಡ ಒಂದೆರಡು ಪ್ರಯತ್ನಗಳಲ್ಲಿ ರಿಸೀವ್ ಮಾಡದಿದ್ದರೆ ಆ ವಿಷಯವನ್ನೂ ಕೂಡ ಮೇಸೇಜ್‌ನಲ್ಲಿಯೆ ತಿಳಿಯ ಪಡಿಸಿ. ಪದೇ ಪದೇ ಕಾಲ್ ಮಾಡಿ ಪೀಡಿಸುವವರು ಯಾರಿಗೂ ಇಷ್ಟವಾಗುವುದಿಲ್ಲ ವೆಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು.
ಕಾಲ್ ಮಾಡಿ ಮಾತನಾಡುವಾಗಲೂ ಕೂಡ ಹಲೋ ನಂತರ ಎಲ್ಲಿದ್ದೀಯ? ಎಂದು ಕೇಳುವ ಬದಲು ನೀವು ನನ್ನ ಜಒತೆ ಮಾತನಾಡಲು ಫ್ರೀ ಇದ್ದೀರ ಎಂದು ಕೇಳುವುದು ಸೂಕ್ತ. ಏಕೆಂದರೆ ಅವರು ಯಾವುದಾದರು ಅತ್ಯಂತ ವೈಯಕ್ತಿಕವಾದ, ಬಹು ಮುಖ್ಯವಾದ ಅಥವಾ ಗುಪ್ತ ಸನ್ನಿವೇಶದಲ್ಲಿದ್ದಾಗ ನೀವು ಎಲ್ಲಿದ್ದೀಯ? ಎಂದು ಕೇಳಿದರೆ ಅವರಿಗೆ ತಕ್ಷಣವೇ ಕೋಪಬರಬಹುದು. ಒಂದು ವೇಳೆ ಅವರು ನಿಮಗೆ ಗೊತ್ತಿರುವ ಸ್ಥಳದಲ್ಲೇ ಇದ್ದು ಬೇರೊಂದೆಡೆ ಇದ್ದೇನೆಂದು ಸುಳ್ಳು ಹೇಳಿದಾಗ ಇಬ್ಬರಿಗೂ ಒಂದು ರೀತಿಯ ಮುಜುಗರ ಉಂಟಾಗಬಹುದು. ಏಕೆಂದರೆ ಅವರು ಸುಳ್ಳು ಹೇಳಲೇಬೇಕಾದಂತಹ ಅನಿವಾರ್ಯತೆಯೂ ಇದ್ದಿರಬಹುದು. ನಿಮಗೆ ಅವರು ಎಲ್ಲಿದ್ದಾರೆಂಬುದಕ್ಕಿಂತ ಅವರು ನಿಮಗೆ ಲಭ್ಯವಾಗುವುದು ಮಾತ್ರ ಮುಖ್ಯವಾಗಿರುತ್ತದೆ. ನೀವು ಮೊದಲ ಬಾರಿಗೆ ಕಾಲ್ ಮಾಡುತ್ತಿರುವುದಾದರೆ ಮೊದಲು ನಿಮ್ಮ ಹೆಸರು ಹಾಗು ಆ ನಂಬರು ನಿಮಗೆ ದೊರೆತ ಬಗ್ಗೆ ತಿಳಿಸಿ ಮಾತನ್ನು ಮುಂದುವರೆಸಿ. ಮಾತನಾಡುತ್ತಿರುವವರ ಸ್ಥಾನಮಾನ ಹಾಗು ನಿಮ್ಮೊಂದಿಗೆ ಅವರಿಗಿರುವ ಸಂಬಂದ ಹಾಗು ಪರಿಚಯವನ್ನು ಆದರಿಸಿಯೆ ಮಾತನ್ನು ಆರಂಬಿಸಿ.
ಕಾಲ್ ಮಾಡಿದಾಗ ಅಥವಾ ಕಾಲ್ ರಿಸೀವ್ ಮಾಡಿ ಮಾತನಾಡುವಾಗಿನ ಕಾಮನ್‌ಸೆನ್ಸ್: ಮೊಬೈಲ್ ನಿಶೇದಿಸಿದೆ ಎಂದು ಬೋರ್ಡ್ ಇರುವ ಕಡೆ ಅಥವಾ ನಿಶೇದದ ವಾತಾವರಣವಿರುವೆಡೆ ದಯಮಾಡಿ ಕಾಲ್ ಅಥವಾ ರಿಸೀವ್ ಮಾಡಿಲೆಬೇಡಿ. ಒಂದು ವೇಳೆ ಅದು ಅನಿವಾರ್ಯವೇ ಆಗಿದ್ದಲ್ಲಿ ಮೆಲುಧ್ವನಿಯಲ್ಲಿ ಒಂದೆರಡು ಮಾತಿನಲ್ಲಿ ಮುಗಿಸಿಬಿಡಿ. ಬೇರೆಯವರು ಅವರ ಮೊಬೈಲ್‌ನಲ್ಲಿ ಮಾತನಾಡುವಾಗ ಅಥವಾ ಮುಖಾಮುಖಿ ಮಾತನ್ನಾಡುತ್ತಿದ್ದಾಗ ಅವರ ಮುಂದೆಯೇ ಮತ್ತು ಪಂಕ್ತಿಯಲ್ಲಿ ಊಟಮಾಡುವಾಗ ಬಸ್ಸು ಟ್ರೈನ್‌ಗಳಲ್ಲಿ ಪ್ರಯಾಣಿಸುವಾಗ ಹೆಚ್ಚು ಕಾಲ್ ಜೋರಾಗಿ ಮಾತನಾಡಬೇಡಿ ಏಕೆಂದರೆ ನಿಮ್ಮ ಮಾತು ಬೇರೆಯವರಿಗೆ ತುಂಬಾ ಕಿರಿ ಕಿರಿ ಉಂಟು ಮಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮೆಲುಧ್ವನಿಯಲ್ಲಿ ಮಾತನಾಡುವುದನ್ನೂ ರೂಡಿಸಿಕೊಳ್ಳಿ. ನೀವು ಮಾತನಾಡಲು ಸಿದ್ದವಿಲ್ಲದ ಸ್ಥಿತಿಯಲ್ಲಿ ನಿಮ್ಮ ಬೊಬೈಲ್ ರಿಂಗಣಿಸಿದರೆ ಕೂಡಲೆ ರಿಸೀವ್ ಮಾಡಿ ನಾನು ಬ್ಯುಸಿಯಾಗಿದ್ದೇನೆ, ಕೆಲವು ಸಮಯದ ನಂತರ ಕಾಲ್ ಮಾಡು ಅಥವಾ ನಾನೆ ಕಾಲ್ ಮಾಡುತ್ತೇನೆಂದು ತಿಳಿಸಿ. ಯಾರಾದರೂ ನಿಮ್ಮೊಂದಿಗೆ ನೇರವಾಗಿ ಮಾತನಾಡಲು ಕುಳಿತ್ತಿದ್ದರೆ ಅಥವಾ ನಿಮಗಾಗಿ ಕಾಯುತ್ತಿದ್ದರೆ ಅವರನ್ನು ಸುಮ್ಮನೇ ಕುಳ್ಳಿರಿಸಿ ನಿಮ್ಮಪಾಡಿಗೆ ನೀವು ಮೊಬೈಲ್‌ನಲ್ಲಿ ಎಂಗೇಜ್ ಆದರೆ ಎದುರಿಗಿರುವವರಿಗೆ ನಿಮ್ಮ ಬಗ್ಗೆ ಕೋಪ ಬರುವುದು ಶತ ಸಿದ್ದ.
ಮೊಬೈಲ್‌ನಲ್ಲಿ ಹಾಡು ಕೇಳುವಾಗ ಇರಬೇಕಾದ ಕಾಮನ್‌ಸೆನ್ಸ್: ಇದು ಮೆಮೊರಿ ಕಾರ್ಡ್ ಸೌಲಭ್ಯವಿಲ್ಲದ ಮೊಬೈಲ್‌ಗಳೇ ಕಡಿಮೆ. ಸ್ನೇಹಿತರೊಂದಿಗಿದ್ದಾಗ, ಒಬ್ಬರೇ ಇದ್ದಾಗ, ಪ್ರಯಾಣ ಮಾಡುವಾಗ ಹಾಡುಕೇಳುವುದು ಇಂದು ಕಾಮನ್. ಆದರೆ ಸಾಮಾನ್ಯವಾಗಿ ಬಸ್ಸು ಟ್ರೈನ್‌ನಲ್ಲಿ ಪ್ರಯಾಣಿಸುವಾಗ ಒಂದೇ ಕಂಪಾರ್ಟ್‌ಮೆಂಟ್‌ನಲ್ಲಿನ ಐದಾರು ಜನರು ಐದಾರು ಹಾಡುಗಳನ್ನು ಕೆಲವೊಮ್ಮೆಯಂತೂ ಐದರು ಭಾಷೆಯ ಹಾಡುಗಳನ್ನೆ ಜೋರಾದ ಸೌಂಡ್‌ನಿಂದಲೇ ಕೇಳುತ್ತಿರುತ್ತಾರೆ. ಆದರೆ ಇಲ್ಲಿ ಅವರ್‍ಯಾರಿಗೂ ಕಾಮನ್‌ಸೆನ್ಸ್ ಇಲ್ಲದಿರುವುದನ್ನು ಗಮನಿಸಬಹುದು. ಏಕೆಂದರೆ ಅವರಲ್ಲಿ ಯಾರೂಕೂಡ ಸರಿಯಾದಗಿ ಹಾಡು ಕೇಳಲಾಗುತ್ತಿರುವುದಿಲ್ಲ. ಮತ್ತು ಅವರುಗಳನ್ನು ಹೊರತುಪಡಿಸಿ ಉಳಿದವರಿಗೆ ಆಗುವಂತಹ ಹಿಂಸೆ ಅನುಭವಿಸಿರುವವರಿಗೇ ಗೊತ್ತು. ಇಂತಹ ಸಂದರ್ಭಗಳಲ್ಲಿ ದಯಮಾಡಿ ಏರ್‍ಫೋನ್ ಬಳಸಿ ಅಥವಾ ಯಾರಿಗಾದರು ಒಬ್ಬನಿಗೆ ಮಾತ್ರ ಅವಕಾಶ ನೀಡಿ. ನಿಶಬ್ದ ಅಥವಾ ಶಾಂತಿಯನ್ನು ಕಾಪಾಡಬೇಕಾದ ಸನ್ನವೇಶಗಳಲ್ಲಿ ಒಬ್ಬರೇ ಇದ್ದರೂ ನಿಮ್ಮಿಷ್ಟ ಬಂದ ಹಾಡು ಹಾಕಿ ವಾತಾವರಣವನ್ನು ಕಲುಷಿತ ಮಾಡಬೇಡಿ.
ಇಂತಹ ಸಣ್ಣ ಸಣ್ಣ ವಿಷಯಗಳ ಕಡೆ ಗಮನಹರಿಸಿ ತಮಗೂ ಮತ್ತು ಇತರರಿಗೂ ಯಾವುದೇ ರೀತಿಯ ಕಿರಿ ಕಿರಿಯಾಗದಂತೆ ಮೊಬೈಲ್ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಲೆಂಬುದು ಲೇಖನದ ಆಶಯವಾಗಿದೆ.
– ಮಹಾಂತೇಶ ದುರ್ಗ. ಹೆಚ್.ಇ. ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿ,
ಸಮಾಜಶಾಸ್ತ್ರ ಅಧ್ಯಯನ ವಿಭಾಗ,
ಕುವೆಂಪು ವಿಶ್ವವಿದ್ಯಾನಿಲಯ,
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.೫೭೭೪೫೧  Mobile:9886308850