ಚಿತ್ರದುರ್ಗ: ದೇಶಭಕ್ತರ ಮತ್ತು ಹಿರಿಯ ಸ್ವಾತಂತ್ರ ಹೋರಾಟಗಾರರ ಬಗ್ಗೆ ಹರಳು ಉರಿದಂತೆ ಉಪನ್ಯಾಸ ನೀಡುವ ಚಿತ್ರದುರ್ಗದ ಬಾಲಪ್ರತಿಭೆ ಮಾರೂಫ್ ಸುಲ್ತಾನ ಸಿ.ಕೆ. ಇವರಿಗೆ ಭಾರತೀಯ ಸಾಂಸ್ಕೃತಿಕ ಅಕಾಡೆಮಿಯಿಂದ ರಾಜ್ಯ ಮಟ್ಟದ ಭಾರತ ಭೂಷಣ ಪ್ರಶಸ್ತಿ ನೀಡಿ ಬೆಂಗಳೂರಿನ ರವೀಂದ್ರ ಕಲಾ ಕ್ಷತ್ರದ ಆವರಣದಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಚಿತ್ರದುರ್ಗದ ಸಂತೆಮೈದಾನದಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆರನೇ ತರಗತಿ ಓದುತ್ತಿರುವ ಈ ಬಾಲಕಿ ಇಲ್ಲಿಯವರೆಗೂ ನೂರಾರು ಸಭೆ ಸಮಾರಂಭಗಳಲ್ಲಿ ದೇಶಭಕ್ತರ ಹಾಗೂ ಹಿರಿಯರ ಇತಿಹಾಸ ಕುರಿತು ಸರಾಗವಾಗಿ ಭಾಷಣ ಮಾಡುವ ಚಾಕಚಕ್ಯತೆ ಹೊಂದಿರುವುದರಿಂದ ಜ.೨೮ ರಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯ ಮಟ್ಟದ ಭಾರತ ಭೂಷಣ ಪ್ರಶಸ್ತಿಗೆ ಪಾತ್ರವಾಗಿರುವ ಬಾಲಕಿ ಮಾರೂಫ್‌ಸುಲ್ತಾನ ಪಿ.ಕೆ.ಚಿತ್ರದುರ್ಗದ ಕಾಂಗ್ರೆಸ್ ಮುಖಂಡ ಸೈಯದ್‌ವಲಿರವರ ಪುತ್ರಿಗೆ ಅಪಾರ ಅಭಿಮಾನಿಗಳು ಅಭಿನಂದಿಸಿದ್ದಾರೆ.