ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎಸ್.ಎನ್. ಯೋಗೀಶ್ ಅವರ ಮಾರ್ಗದರ್ಶನದಲ್ಲಿ ಆಶಾ. ಟಿ. ಅವರು “ಕರ್ನಾಟಕದಲ್ಲಿ ನಗರಸಭೆಗಳು: ಚಿತ್ರದುರ್ಗ ನಗರಸಭೆಯ ಆರ್ಥಿಕ ಅಧ್ಯಯನ” ಎಂಬ ವಿಷಯ ಕುರಿತು ಸಂಶೋಧನಾ ಅಧ್ಯಯನ ಕೈಗೊಂಡು, ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ.

ಆಶಾ ಟಿ. ಅವರು ಚಿತ್ರದುರ್ಗ ತಾಲೂಕು ಬೆಳಗಟ್ಟ ಗ್ರಾಮದಲ್ಲಿರುವ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾಗಿರುವ ಪೂಜ್ಯ ಶ್ರೀ ಮಾತೆ ಮಹದೇವಮ್ಮ ಅವರ ಸುಪುತ್ರಿಯಾಗಿರುವರು.