ಶಂಕರಘಟ್ಟ: ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಘಟಕದ ವತಿಯಿಂದ ದಿ|| ಶ್ರೀ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಆಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಶು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಘಟಕದ ಸಂಚಾಲಕರಾದ ಡಾ. ವಿಜಯಕುಮಾರ್, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಷಣ್ಮುಖ, ಡಾ. ತಿಪ್ಪೇಸ್ವಾಮಿ ಡಾ. ಬೊಡ್ಕೆ ಮತ್ತು ಬಿಸಿಎಂ ಘಟಕದ ಅಧೀಕ್ಷಕರಾದ ಆರ್. ರೋಹಿದಾಸ್ ಉಪಸ್ಥಿತರಿದ್ದರು. ಸ್ಪರ್ಧೆ ವಿಜೇತರಾದ ಚಂದಸ್ವಿನಿ, ಕಲ್ಲೇಶಿ ಮತ್ತು ಸುಬ್ರಮಣ್ಯ ಪಾಂಡುರಂಗ ಆಚಾರಿ ಚಿತ್ರದಲ್ಲಿದ್ದಾರೆ.