Posts From admin

ಪತ್ರಕರ್ತರಿಗೆ ವಿಮೆ ಸೌಲಭ್ಯಕ್ಕೆ ಆಗ್ರಹ: ಮಂಜುನಾಥ್

ಚಿತ್ರದುರ್ಗ : ಆಂಧ್ರಪ್ರದೇಶದಲ್ಲಿ  ಎಲ್ಲಾ ಪತ್ರಕರ್ತರಿಗೂ ಆರೋಗ್ಯ ವಿಮೆ ಕಲ್ಪಿಸಲಾಗಿದೆ. ರಾಜ್ಯದಲ್ಲಿಯೂ  ಆರೋಗ್ಯ ವಿಮೆ  ಕಲ್ಪಿಸುವಂತೆ ಮನವಿ ಮಾಡಿದರೆ ಕೇವಲ ಮಾನ್ಯತೆ ಪತ್ರಕರ್ತರಿಗೆ ಮಾತ್ರ ವಿಮೆ ಸೌಲಭ್ಯ. ಅಲ್ಲದೆ ಶೇಕಡ ೩೦ ರಷ್ಟು  ಪತ್ರಕರ್ತರು ಭರಿಸಬೇಕೆಂಬ  ವಿಶುಕುಮಾರ್ ಅವರ ಹೇಳಿಕೆಯಿಂದ ಯಾರಿಗೂ  ವಿಮೆ ಸೌಲಭ್ಯ ಸಿಗುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ  ಎನ್.ಮಂಜುನಾಥ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೬೨ ರಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ  ಪ್ರತಿಭಟನೆ  ನಡೆಸಲಾಗುತ್ತಿದೆ. ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಬೇಕು ಎಂದು  ಮನವಿ ಮಾಡಿದರು.

ಹೀಗೂ ಸಾಧನೆ ಮಾಡಬಹುದು.? ಭರತನಾಟ್ಯದಲ್ಲಿ ಸಾಧನೆಗೆ ಶಿವಪ್ರಕಾಶ್ ಸ್ಪೂರ್ತಿ

ಚಿತ್ರದುರ್ಗ ಜಿಲ್ಲೆಯಲ್ಲಿ ಭರತನಾಟ್ಯ ಎಂದ ತಕ್ಷಣ ಎಲ್ಲರಿಗೂ ನೆನಪಾಗುವ ಮೊದಲ ಹೆಸರುಗಳು ಶಿವಪ್ರಕಾಶ್ ಮತ್ತು ನಂದಿನಿ ಶಿವಪ್ರಕಾಶ್ ದಂಪತಿಗಳದು. ಕಳೆದ ೩೧ ವರ್ಷಗಳಿಂದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯವರೆಗೂ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ವಿದ್ಯೆಯನ್ನು ಧಾರೆಯೆರೆದು, ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ. ಅಂತಹ ಸಂಸ್ಥೆಯ ನಂದಿನಿ ಶಿವಪ್ರಕಾಶ್‌ರವರ ಬಗ್ಗೆ ಒಂದು ಕಿರುನೋಟ. ಹುಬ್ಬಳ್ಳಿ ಹತ್ತಿರದ ಕುಂದುಗೋಳ ಇವರ ಮೂಲ. ತಾಯಿ ಶ್ರೀಮತಿ ಗೀತಾ ಕುಲಕರ್ಣಿಯವರೇ ಮೊದಲ ಗುರು. ಆಗಿನ ಕಾಲದ ಪ್ರಸಿದ್ಧ ಭರತ ನಾಟ್ಯ ಕಲಾವಿದರಾದ ದಿ|| ನಾಟ್ಯಾಚಾರಿ ಶ್ರೀನಿವಾಸ್ ಕುಲಕರ್ಣಿಯವರು ನಂದಿನಿಯವರ ತಾಯಯ ದೊಡ್ಡಪ್ಪ. ಹೀಗೆ, ಮನೆಯಲ್ಲಿ ನೃತ್ಯ ಕಲಿಯಲು ಪೂರಕವಾದ

ಸಕ್ಕರೆ ಖಾಯಿಲೆ ನಿಯಂತ್ರಣ

ಹಾಗಲಕಾಯಿಯ ನಿಯಮಿತ ಬಳಕೆಯಿಂದ ಮೂತ್ರಕೋಶದಲ್ಲಿ ಕಲ್ಲು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. ಮೆಧುಮೇಹ ನಿಯಂತ್ರಣಕ್ಕೆ ಸಹಕಾರಿ ಆಹಾರದಲ್ಲಿ ನಿಯಮಿತವಾಗಿ ಮೆಂತ್ಯಸೋಪ್ಪನ್ನು ಬಳಸುವುದರಿಂದ ಮಧುಮೇಹನಿಯಂತ್ರಣದಲ್ಲಿರುತ್ತದೆ. ಕೊಬ್ಬಿನ ಅಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮದ್ಯವಯಸ್ಸಿನಲ್ಲಿ ಬರಬಹುದಾದ ಮಧುಮೇಹ ವನ್ನು ನಿಯಂತ್ರಿಸಬಹುದು -ಸಂಗ್ರಹ

ಸಮಾಜತಿದ್ದುವಲ್ಲಿ ಶಿಕ್ಷಕರ ಪಾತ್ರ ಹಿರಿಮೆ: ಕೆ.ಎಂ.ವೀರೇಶ್

ಚಿತ್ರದುರ್ಗ: ಸಮಾಜವನ್ನು ತಿದ್ದುವಲ್ಲಿ ಶಿಕ್ಷಕರ ಪಾತ್ರ ಮಹತ್ವವೆಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದರು. ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಹತ್ತು ಬೆಳದಿಂಗಳು ಹಾಗೂ ಶಿಕ್ಷಕರ ದಿನಾಚರಣೆಯನ್ನು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ) ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜವನ್ನು ತಿದ್ದುವವರೇ ಶಿಕ್ಷಕರು, ಈ ಕಲುಷಿತ ವಾತಾವರಣದಲ್ಲಿ ದೇಶ ಮೌಲ್ಯ ಮತ್ತು ಸಂಸ್ಕೃತಿಗಳನ್ನು ಕಳೆದುಕೊಳ್ಳುತ್ತಿದೆ, ದರೋಡೆ, ವಂಚನೆ ಪ್ರಕರಣಗಳು ಹೆಚ್ಚುತ್ತಿವೆ, ಅವಿಭಕ್ತ ಕುಟುಂಬಗಳ ಪರಿಕಲ್ಪನೆಯು ಕಡಿಮೆಯಾಗುತ್ತಿದೆ. ಇಂತಹ ಸಮಾಜವನ್ನು ತಿದ್ದುವಲ್ಲಿ ಶಿಕ್ಷಕನ ಪಾತ್ರ ಬಹು ಮುಖ್ಯ ಮತ್ತು   ಗಂಡ ಹೆಂಡತಿ ಮಕ್ಕಳು ಕೂಡಿದರೇ ಅವಿಭಕ್ತ ಕುಟುಂಬ ಎಂದು

ಏಕರೂಪ ಶಿಕ್ಷಣ ನೀತಿ ಜಾರಿಗೆ ಸರ್ಕಾರದ ಒತ್ತು; ಸಚಿವ ಹೆಚ್.ಆಂಜನೇಯ

ಚಿತ್ರದುರ್ಗ:  ಜನರು ಕಾನ್ವೆಂಟ್ ಶಿಕ್ಷಣಕ್ಕೆ ಹೆಚ್ಚು ಮಾರು ಹೋಗುತ್ತಿದ್ದು ಖಾಸಗಿ ಆಡಳಿತ ಮಂಡಳಿ ಸದಸ್ಯರ ಬಾಗಿಲು ತಟ್ಟುವಂತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಶಿಕ್ಷಣ ಸಿಗುವಂತಾಗಲು ಎಲ್ಲಾ ಶಾಲೆಗಳಲ್ಲಿಯು ಏಕರೂಪ ಶಿಕ್ಷಣ ನೀತಿ ಜಾರಿಗೆ ಬರಬೇಕೆಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ ತಿಳಿಸಿದರು. ಅವರು (ಸೆಪ್ಟೆಂಬರ್.೦೫) ರೆಡ್ಡಿ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಮತ್ತು ಸರ್ವಪಲ್ಲಿ ಡಾ;ರಾಧಾಕೃಷ್ಣನ್‌ರವರ ಜನ್ಮ ದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ

ಶಿವಮೂರ್ತಿ ಶರಣರಿಗೆ ಮತ್ತೊಂದು ಗರಿ: ಪೆರಿಯಾರ್ ಪ್ರಶಸ್ತಿ

ಚಿತ್ರದುರ್ಗ: ವಿಚಾರವಾದಿಗಳ ವೇದಿಕೆ-ಕರ್ನಾಟಕ ಇವರಿಂದ ನೀಡುವ ಪೆರಿಯಾರ್ ಪ್ರಶಸ್ತಿಯನ್ನು ಈ ಬಾರಿ ವೈಚಾರಿಕ ಚಿಂತಕರಾದ ಮುರುಘಾಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶರಣರಿಗೆ ನೀಡಲಾಗಿದೆ ಎಂದು ವೇದಿಕೆ ಮುಖಂಡರು, ಸಾಹಿತಿಗಳಾದ ತಲಕಾಡು ಚಿಕ್ಕರಂಗೇಗೌಡ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮಿಳುನಾಡಿನಲ್ಲಿ ವೈಚಾರಿಕ ಕ್ರಾಂತಿಯ ಹರಿಕಾರ ಆದ ಪೆರಿಯಾರ್ ಅವರ ಹಿರಿಯರು  ಇದೇ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರು ಎಂಬುದು ವಿಶೇಷ. ಅಂತಹ ಮಹಾನ್ ವ್ಯಕ್ತಿತ್ವ ಹಾಗೂ ಪ್ರಗತಿಪರ ವಿಚಾರಗಳನ್ನು ನಾಡಿನ ಉದ್ದಗಲಕ್ಕೂ ಬಿತ್ತಿದ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದ್ದು, ರಾಜ್ಯದಲ್ಲಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಪ್ರಗತಿಪರರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು. ೨೦೦೮

ಕಿತ್ತಳೆ ಹಣ್ಣಿನಿಂದ ಏನು ಉಪಯೋಗ.

ಹೇರಳವಾಗಿ ಸಿ ವಿಟಮಿನ್ ಹೊಂದಿರುವ ಕಿತ್ತಳೆ ಹಣ್ಣನ್ನು ಚಳಿಗಾಲದಲ್ಲಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನೀಲಗಿರಿ ಎಣ್ಣೆಯ ಪರಿಮಳವನ್ನು ಆಗಾಗ ಆಘ್ರಾಣಿಸುವುದರಿಂದ ಮೂಗು ಕಟ್ಟುವ ಸಮಸ್ಯ ನಿವಾರಣೆಯಾಗುತ್ತದೆ. ಗಂಟಲು ಕೆರೆತಕ್ಕೆ ಕಾಳುಮೆಣಸು ಬೆಲ್ಲ ಹಾಕಿ ತಯಾರಿಸಿದ ಕಷಾಯ ಸೇವಿಸಬೇಕು . -ಸಂಗ್ರಹ

ಕ್ಷೇತ್ರದ ತುಂಬೆಲ್ಲಾ ಶುದ್ಧ ಕುಡಿಯುವ ನೀರಿನ ಭರವಸೆ: ಶಾಸಕ ತಿಪ್ಪಾರೆಡ್ಡಿ

ಚಿತ್ರದುರ್ಗ : ಮುಂದಿನ ವರ್ಷಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜನತೆ ಶುದ್ದವಾದ ಕುಡಿಯುವ ನೀರನ್ನು ಕುಡಿಯಲು ಅನುಕೂಲವಾಗುವಂತೆ ಎಲ್ಲಾ ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು, ಜೊತೆಗೆ ಚಿತ್ರದುರ್ಗದ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ಸುಮಾರು ೧೫೦ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅದರಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡುವ ಸಂಬಂಧ ಪ್ರಕ್ರಿಯೇ ನಡೆಯುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು. ಚಿತ್ರದುರ್ಗ ನಗರದ ಬುರುಜನಹಟ್ಟಿ ಏಕನಾಥೇಶ್ವರಿ ಪಾದಗುಡಿಯ ಬಳಿಯಲ್ಲಿ ಸುಮಾರು ೧೮ ಲಕ್ಷ ರೂ,ಗಳ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಗರದಲ್ಲಿ ವಿವಿಧ ಕಂಪನಿಗಳು,ಖಾಸಗಿಯವರು ಶುದ್ದ ಕುಡಿಯುವ ನೀರಿನ

ನೆಗಡಿ -ಕೆಮ್ಮು ಹಾಲಿನೊಂದಿಗೆ ……………

ನೆಗಡಿ ಕೆಮ್ಮು ಗಂಟಲು ನೊವುಗಳಲ್ಲಿ ಅರಿಶಿನ ದ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿಕೊಡ ಎ.ಬಿಸಿ.ಇ ವಿಟಮಿನ್ ಗಳನ್ನು ಕ್ಯಾರೆಟ್ ಹೊಂದಿದ್ದು ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಬಹುದು. -ಸಂಗ್ರಹ

ಕಲೆ ಜೀವಂತಿಕೆ; ವಿದ್ಯಾರ್ಥಿಗಳಲ್ಲಿ ಕಲೆ ಮೈಗೂಡಿಸಿಕೊಳ್ಳಲು ಕರೆ

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಗೆ ಬರವಿರಬಹುದು ಆದರೆ ಕಲೆ, ಸಂಸ್ಕೃತಿ, ನಾಟಕದಲ್ಲಿ ಶ್ರೀಮಂತರ ನಾಡು ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಸಂಜೆ  ಕಾಲೇಜು ರಂಗ ತರಬೇತಿ ಶಿಬಿರ, ಕರ್ನಾಟಕ ನಾಟಕ ಅಕಾಡೆಮೆ ಬೆಂಗಳೂರು, ಇಂಪನಾ ಕಲಾ ತಂಡ, ಚಿತ್ರದುರ್ಗ ರಂಗಸೌರಭ ಕಲಾ ಸಂಘ ಸಂಯುಕ್ತ ಆಶ್ರಯದಲ್ಲಿ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಡ್ರಂ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಕಲೆಗೆ ಪ್ರೋತ್ಸಾಹಕ್ಕಾಗಿ ೩೮ ಲಕ್ಷ ರೂಪಾಯಿ