Posts From admin

ನಡೆದಾಡುವ ಶ್ರೀಗಳು ಇಚ್ಛಾಮರಣಿ: ಯಡಿಯೂರಪ್ಪ..!

ತುಮಕೂರು: ನಡೆದಾಡುವ ಶ್ರೀಗಳು ಇಚ್ಚಾಮರಣಿ, ಅವರ ಮರಣ ಅವರೇ ನಿರ್ಧರಿಸುತ್ತಾರೆ: ಎಂದು ಬಿಎಸ್ ಯಡಿಯೂರಪ್ಪ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರೀಗಳ ದರ್ಶನ ಪಡೆದು, ಅವರ ಆರೋಗ್ಯ ವಿಚಾರಿಸಿ ಶ್ರೀಗಳು ಇಚ್ಛಾಮರಣಿ ಅವರು. ಶ್ರೀಗಳಿಗೆ ಆಸ್ಪತ್ರೆಗಳಲ್ಲಿ ನೀಡಲಾಗುವ ಚಿಕಿತ್ಸೆಯನ್ನು ಮಠದಲ್ಲೇ ನೀಡುತ್ತಿದ್ದಾರೆ ಎಂದರು. ಇಂದು ಸಂಜೆಯವರೆಗೂ ನಾವು ಸಿದ್ದಗಂಗಾ ಮಠದಲ್ಲೇ ಇರುತ್ತೇವೆ ಎಂದು ಯಡಿಯೂರಪ್ಪ ಅವರು ಹೇಳಿದರು

ಜನವರಿ 24 ರಂದು ಕೇಬಲ್ ಸೇವೆ ಇಲ್ಲ..! ನೋ ಪ್ರೋಗ್ರಾಂ..!

ಬೆಂಗಳೂರು: ನಿಮ್ಮ ಮನೆಯಲ್ಲಿ ಕೇಬಲ್ ಟೀವಿ ಕನೆಕ್ಷನ್ ಇದೆಯಾ. ಹಾಗಾದ್ರೆ ಇದೇ ತಿಂಗಳು 24 ರಂದು ನಿಮ್ಮ ಟೀವಿಯಲ್ಲಿ ಯಾವುದೇ ಪ್ರೋಗ್ರಾಂ ಬರುವುದಿಲ್ಲ. ಏಕೆಂದ್ರೆ ಕೇಬಲ್ ಆಪರೇಟರ್ ಗಳು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಹೊಸ ದರ ನಿಗದಿಮಾಡಿದ್ದನ್ನು ವಿರೋಧಿಸಿ ಜ. 24 ರಂದು ಕೇಬಲ್ ಸೇವೆ ಬಂದ್ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಕೇಬಲ್ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ 24 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದಕ್ಷಿಣ ಭಾರತದಾದ್ಯಂತ ಕೇಬಲ್ ಬಂದ್ ಮಾಡಲಾಗುವುದು ಎಂದು ಕೇಬಲ್ ಆಪರೇಟರ್ ಗಳು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷ ಮೀಟಿಂಗ್ ಗೆ ಗೈರು: ಶಿಸ್ತು ಕ್ರಮ- ಸಿದ್ದರಾಮಯ್ಯ..!

ಬೆಂಗಳೂರು:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 18 ರಂದು ನಡೆಯಲಿದ್ದು ಅಂದಿನ ಸಭೆಗೆ ಎಲ್ಲಾ ಶಾಸಕರು ಹಾಜರಾಗುವುದು ಕಡ್ಡಾಯ, ಯಾರಾದೂ ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್ ಪಿ ಸಭೆ ನಡೆಯಲಿದೆ. ಈ ಸಭೆಗೆ ಎಲ್ಲಾ ಶಾಸಕರು ತಪ್ಪದೇ ಹಾಜರಾಗಬೇಕು. ಇಲ್ಲದಿದ್ದರೆ ತಮ್ಮ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಕಾಂಗ್ರೆಸ್ ಸದಸ್ಯತ್ವ ತ್ಯಜಿಸಲು ಸ್ವ ಇಚ್ಛೆಯಿಂದ ನಿರ್ಧರಿಸಿದ್ದೀರೆಂದು ಭಾವಿಸಿ ಭಾರತೀಯ ಸಂವಿಧಾನದ ಅನುಚ್ಛೇದ 10 ರ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

18 ರಂದು ಕಾಂಗ್ರೆಸ್ ಶಾಸಕಾಂಗ ಸಭೆ: ಸಿದ್ದರಾಮಯ್ಯ..!

ಬೆಂಗಳೂರು: ದೋಸ್ತಿ ಸರಕಾರವನ್ನು ಉರಳಿಸುವ ತಂತ್ರಕ್ಕೆ ಪ್ರತಿತಂತ್ರವನ್ನು ಎಣೆದಿರುವ ಕಾಂಗ್ರೆಸ್. ಇದೇ ಜನವರಿ 18 ರಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನವರು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಪಕ್ಷೇತರ ಶಾಸಕರು ಈಗಾಗಲೇ ತಮ್ಮ ಬೆಂಬಲ ಹಿಂಪಡೆದಿದ್ದು, ಮೂವರು ಬಂಡಾಯ ಶಾಸಕರನ್ನು ಸಚಿವ ಡಿ.ಕೆ.ಶಿವಕುಮಾರ್ ಮುಂಬೈನಲ್ಲಿ ಭೇಟಿಯಾಗಲಿದ್ದು, ಮನವೊಲಿಸಿ ಕರೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪಕ್ಷದಲ್ಲಿ ಏನಾದರು ಸಣ್ಣ ಪುಟ್ಟ ಸಮಸ್ಯಗಳು ಇದ್ದೆರೆ ಬಗೆಹರಿಸಿಕೊಳ್ಳುವುದು ಹಾಗೂ ಎಲ್ಲಾ ಶಾಸಕರನ್ನು ಒಟ್ಟಾಗಿ ಸೇರಿಸುವ ಉದ್ದೇಶದಿಂದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ ಯಂತೆ..!

ಆಪರೇಶನ್ ಕಮಲದ ನಾಟಕ ಪ್ರಹಸನ ಎರಡು ದಿನಗಳಲ್ಲಿ ಮುಕ್ತಾಯ: ಕೆ.ಸಿ. ವೇಣುಗೋಪಾಲ್..!

ಬೆಂಗಳೂರು: ನಮ್ಮ ಎಲ್ಲಾ ಶಾಸಕರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಈ ನಾಟಕ(ಆಪರೇಶನ್ ಕಮಲ) ಒಂದು ಅಥವಾ ಎರಡು ದಿನಗಳಲ್ಲಿ ಕೊನೆಗೊಳ್ಳಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವೆಲ್ಲರೂ ಒಟ್ಟಿಗೆ ಇದ್ದೇವೆ, ಪಕ್ಷದಲ್ಲಿ ಯಾವುದೇ ಆಂತರಿಕ ಜಗಳ ಇಲ್ಲ. ಇವೆಲ್ಲಾ ಆಧಾರರಹಿತ ಸುದ್ದಿಗಳು ಎಂದು ಹೇಳಿ ಎರಡು ದಿನಗಳಲ್ಲಿ ಎಲ್ಲವೂ ಮುಕ್ತಾಯ.!

ಆಪರೇಷನ್ ಕಮಲ: ನಾವೇನು ಕೈ ಕಟ್ಟಿ ಕೂತಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಆಪರೇಷನ್ ಕಮಲದ ದಾರಿ ಸರಿಅಲ್ಲ ನಾವೇನು ಕೈ ಕಟ್ಟಿ ಕೂತಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆಪರೇಷನ್ ಕಮಲದ ನನಗೆ ಬಗ್ಗೆ ನಂಬಿಕೆಯೂ ಇಲ್ಲ, ಅದು ಸಾರಿಯೂ ಅಲ್ಲ. ಶಾಸಕರನ್ನು ಉಳಿಸಿಕೊಳ್ಳಲು ಏನು ಬೇಕೋ ಅದನ್ನ ಮಾಡ್ತೀವಿ. ಹಾಗಂತ ಕೌಂಟರ್ ಆಪರೇಷನ್ ಮಾಡುವುದಿಲ್ಲ ಎಂದರು.ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆಯಾಗಲ್ಲ ಎಂದರು.

ಸಮ್ಮಿಶ್ರ ಸರ್ಕಾರ 5 ವರ್ಷ ಭದ್ರ : ಬಂಡೆಪ್ಪ ಕಾಶೆಂಪೂರ್..!

ಬೀದರ್:ಕಾಂಗ್ರೆಸ್-ಜೆಡಿಎಸ್ ಶಾಸಕರು ಅವರವರ ಪಕ್ಷದಲ್ಲಿ ಭದ್ರವಾಗಿದ್ದಾರೆ. ಅವರೆಲ್ಲೂ ಹೋಗೋದಿಲ್ಲ. ಸಮ್ಮಿಶ್ರ ಸರ್ಕಾರ 5 ವರ್ಷಗಲ ಭದ್ರವಾಗಿರುತ್ತದೆ ಎಂದು ಸಹಕಾರ ಸಚಿವ, ಜೆಡಿಎಸ್ ನ ಹಿರಿಯ ಮುಖಂಡ ಬಂಡೆಪ್ಪ ಕಾಶೆಂಪೂರ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರು ಬಿಜೆಪಿಗೆ ಹೋಗೋದಿದ್ರೆ ಆರು ತಿಂಗಳ ಹಿಂದೆ ಹೋಗ್ತಿದ್ರು, ಈಗಾಗಲೇ ಅವರಿಗೂ ಗೊತ್ತಾಗಿದೆ ಬಿಜೆಪಿ ಮುಳುಗುವ ದೋಣಿಯಾಗಿದ್ದು, ಇದರಲ್ಲಿ ಯಾಕೆ ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನಾದೇಶ ಕೊಟ್ಟಿದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಕಂಠಕ ಇಲ್ಲ ಎಂದರು.

ದೋಸ್ತಿ ಸರಕಾರಕ್ಕೆ ಎಚ್ಚರಿಕೆ ಗಂಟೆ: ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡುಗರಲ್ಲಿ ಆತಂಕ..!

ಬೆಂಗಳೂರು; ಇಬ್ಬರು ಪಕ್ಷೇತರ ಶಾಸಕರು ದೋಸ್ತಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದು ರಾಜಕೀಯದಲ್ಲಿ ಸಂಚಲನ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಕಳೆದ ಮೂರು ದಿನಗಳಿಂದ ಚರ್ಚೆ ನಡೆಯುತ್ತಿದೆ ನೋಡುಗರು ಇನ್ನೇನು ಸರಕಾರ ಬಿದ್ದುಹೋಯಿತು ಎಂಬಷ್ಟರ ಮಟ್ಟಿಗೆ ಸುದ್ದಿ ಬಿತ್ತರವಾಗುತ್ತಿದೆ. ಅದು ಸತ್ಯವೋ ಸುಳ್ಳು ಎಂಬಷ್ಟರ ಮಟ್ಟಿಗೆ ವಿವೇಚನೆಗೂ  ಬಿಡದೆ ಆ… ಆಗಲೇ ಸರಕಾರ ಬಿದ್ದು ಹೋಯಿತು. ಇಂದು ಕಾಂಗ್ರೆಸ್ ನ 6 ಶಾಸಕರು ರಾಜೀನಾಮೆ ನಿಡುತ್ತಾರಂತೆ. .ದೋಸ್ತಿ ಸರ್ಕಾರದ 6 ಶಾಸಕರು ರಾಜೀನಾಮೆ ನೀಡುವ ವದಂತಿ ಹಬ್ಬಿದೆ.  ಮೂರನೇ ಹಂತದಲ್ಲಿ ಇನ್ನಷ್ಟು ಶಾಸಕರು ರಾಜೀನಾಮೆ ಮೂಲಕ ಸರ್ಕಾರವನ್ನು ಪತನಗೊಳಿಸುವ ರಣತಂತ್ರವನ್ನು ರೂಪಿಸಿದೆ ಎನ್ನಲಾಗಿದೆ. ಹೀಗೆ ಅಂತೆ ಕಂತೆಗಳ ಸುದ್ದಿ 

ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್: ಸರಕಾರಕ್ಕೆ ಏನು ತೊಂದರೆ ಆಗಲ್ಲ: ಸಿಎಂ..!

ಬೆಂಗಳೂರು: ದೋಸ್ತಿ ಸರ್ಕಾರಕ್ಕೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್‌ ನಾಗೇಶ್ ಹಾಗೂ ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್ ಶಂಕರ್ ಪಕ್ಷೇತರರಿಬ್ಬರು ಬೆಂಬಲ ವಾಪಸ್ ಪಡೆದಿರುವುದರಿಂದ ಸರಕಾರಕ್ಕೆ ಯಾವುದೇ ಆತಂಕವಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ಕೆಸಿ ವೇಣುಗೋಪಾಲ್ ತಂಗಿರುವ ಕುಮಾರಕೃಪಾ ಗೆಸ್ಟ್‌ಹೌಸ್‌ಗೆ ದಿಢೀರ್ ಧಾವಿಸಿದ ಕುಮಾರಸ್ವಾಮಿ ಈ ವೇಳೆ ಎದುರಾದ ಮಾಧ್ಯಮಗಳಿಗೆ ಉತ್ತರ ನೀಡುತ್ತಾ, ಇಬ್ಬರು ಶಾಸಕರ ಬೆಂಬಲ ವಾಪಪಸ್ ಪಡೆದಿರುವುದರಿಂದ ಸರ್ಕಾರಕ್ಕೆ ಏನೂ ಆಗುವುದಿಲ್ಲ ನಾನೀಗ ನಿರಾಳನಾಗಿದ್ದೇನೆ ಎಂದರು. ನನ್ನ ಸರ್ಕಾರಕ್ಕೆ ಬೇಕಾದ ಶಾಸಕರ ಸಂಖ್ಯಾಬಲವಿದೆ, ನನ್ನ ನಿಜವಾದ ಶಕ್ತಿ ಏನೆಂಬುದು ನನಗೆ ಗೊತ್ತು ಎಂದು ಹೇಳಿದರು.

ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್: ದೋಸ್ತಿ ಸರಕಾರಕ್ಕೆ ಶುವಾಯಿತು ಕಂಠಕ..!

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿರುವಾಗಲೇ ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಪಡೆದಿದ್ದಾರೆ. ಮುಳಬಾಗಿಲಿನ ಎಚ್.ನಾಗೇಶ್ ಹಾಗೂ ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್, ಈ ಇಬ್ಬರೂ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.. ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರು ಶಾಸಕರು , ಈ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ನಮ್ಮ ನಿರೀಕ್ಷೆಯಂತೆ ಅಭಿವೃದ್ಧಿ ಮಾಡಲಾಗದಿದ್ದ ಮೇಲೆ ಈ ಸರ್ಕಾರಕ್ಕೆ ಬೆಂಬಲ ಕೊಟ್ಟು ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ. ಇತ್ತ ಕಳೆದ ಎರಡು ದಿನಗಳಿಂದ ದೋಸ್ತಿ ಸರಕಾರವನ್ನು ಉರುಳಿಸಲು ಮುಂದಾಗಿದ್ದ  ಬಿಜೆಪಿಯ ತಂತ್ರ ಫಲಿಸಿದೆ ಎಂಬುದು ಇಬ್ಬರು ಶಾಸಕರು ರಾಜೀನಾಮೆ ನೀಡಿರುವ