Posts From admin

ಪೊಲೀಸರಿಗೊಂದು ಗುಡ್ ನ್ಯೂಸ್.!

ಬೆಂಗಳೂರು: ಪೊಲೀಸರ ವೇತನ ಹೆಚ್ಚಳ, ಬಡ್ತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆಯಂತೆ. ಪೊಲೀಸರ ವೇತನ ಸಂಬಂಧ ರಾಜ್ಯ ಗೃಹ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಎಂ.ಬಿ.ಪಾಟೀಲ್​ ಸಭೆ ನಡೆಸಿದ್ದು, ಈ ವೇಳೆ ಪೊಲೀಸರ ವೇತನ ಹೆಚ್ಚಳ, ಬಡ್ತಿ ಹಾಗೂ ಔರಾದ್ಕರ್​ ಸಮಿತಿ ವರದಿ ಅನುಷ್ಠಾನಗೊಳಿಸುವ ಕುರಿತು ಶಿಫಾರಸ್ಸು ಮಾಡಿದ್ದು, ಅನುಷ್ಠಾನ ಕುರಿತು ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ.ಹಾಗಾಗಿ  ಶೀಘ್ರ ಪೊಲೀಸ್​ ಇಲಾಖೆಗೆ ಸಿಹಿ ಸುದ್ದಿ ಸಿಗಲಿದೆ.

ಮಳೆಯಾಟದ ನಡುವೆ ಭಾರತಕ್ಕೆ ಸೋತು ಶರಣಾದ ಪಾಕಿಸ್ತಾನ

ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ನಡೆದ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 89 ರನ್ ಗಳಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಬೀಸಿದ ಕೊಹ್ಲಿ ಪಡೆ ಪಾಕ್ ಗೆ 337 ರನ್ ಗುರಿ ನೀಡಿತ್ತು. ಮಳೆಯಿಂದಾಗಿ 302 ರನ್ ಗುರಿ ಬೆನ್ನಟ್ಟಿದ ಪಾಕ್ ನಿಗದಿತ 40 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಕ್ ಪರ ಫಕರ್ 62, ಬಾಬರ್ ಆಸಮ್ 48, ಇಮದ್ ವಾಸಿಮ್ 46 ರನ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಭಾರತದ ಪರ ವಿಜಯ್ ಶಂಕರ್, ಪಾಂಡ್ಯಾ, ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತಿದ್ದಾರೆ.

ವಿಶ್ವಕಪ್ ಕ್ರಿಕೆಟ್ : 336 ಕ್ಕೆ ತಡಗೋಡೆ ಕಟ್ಟಿದ ಭಾರತ..!

  ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಆಟದಲ್ಲಿ ಇಂದು ಭಾರತ 336 ರನ್ ಗಳನ್ನು ಗಳಿಸಿ ಪಾಕಿಸ್ತಾನಕ್ಕೆ ತಡೆಗೋಡೆ ನಿರ್ಮಿಸಿದೆ. ವಿಶ್ವಕಪ್ ಟೂರ್ನಿಯ ಇಂದಿನ ರೋಚಕ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 336 ರನ್ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಕೊಹ್ಲಿ ಪಡೆ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಎದುರಾಳಿ ಪಾಕಿಸ್ತಾನಕ್ಕೆ 337 ರನ್ ಗುರಿ ನೀಡಿದೆ. ಭಾರತದ ಪರ ಉತ್ತಮ ಜೊತೆಯಾಟವಾಡಿದ ರೋಹಿತ್ ಶರ್ಮಾ 140, ಕೆ.ಎಲ್. ರಾಹುಲ್ 57 & ವಿರಾಟ್ ಕೊಹ್ಲಿ 77 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಬಳ್ಳಾರಿಯಿಂದ ಶುರುವಾಗುತ್ತೆ ಆಪರೇಷನ್ ಕಮಲ: ಈಶ್ವರಪ್ಪ.!

ಬಳ್ಳಾರಿ: ನಾವೇನಾದರೂ ಆಪರೇಷನ್ ಕಮಲಕ್ಕೆ ಮುಂದಾದರೆ ಅದು ಬಳ್ಳಾರಿಯಿಂದಲೇ ಪ್ರಾರಂಭವಾಗುತ್ತದೆ ಎಂದು ಬಿಜೆಪಿ ನಾಯಕ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ಮೈತ್ರಿ ಸರ್ಕಾರದ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಈ ದೋಸ್ತಿ ಸಾಕಷ್ಟು ಅಕ್ರಮ ನಡೆಸಿದೆ. ಇದರಿಂದಾಗಿ “ಕೈ”-ದಳದಲ್ಲಿ ಹೊಂದಾಣಿಕೆಯಿಲ್ಲ. ಈ ಕಾರಣದಿಂದ ಅಲ್ಲಿನ ಶಾಸಕರೇ ನಮ್ಮನ್ನು ಸಂಪರ್ಕಿಸಿದ್ದಾರೆ. ಆಪರೇಷನ್ ಕಮಲ ಶುರುವಾದರೆ ಅದು ಬಳ್ಳಾರಿಯಿಂದಲೇ ಎಂದು ಈಶ್ವರಪ್ಪ ಹೇಳಿರುವ ಮಾತಿಗೆ ಕಾಂಗ್ರೆಸ್-ದಳದಲ್ಲಿ ನಡುಕ ಶುರುವಾಗಿದೆ ಎಂಬುದು ರಾಜಕೀಯ ಲೆಕ್ಕಾಚಾರದವರ ಮಾತು.!

ವಿದ್ಯೆ-ಅನ್ನದಾನ+ ಸ್ವಾಭಿಮಾನದ ಸಮಾಜಕ್ಕೆ ನಾಂದಿ: ಮುರುಘಾ ಶರಣರು

ಚಿತ್ರದುರ್ಗ: ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ ವಿದ್ಯೆದಾನದ ಜೊತೆಗೆ ಅನ್ನದಾವೂ ಆಗಬೇಕು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು. ಕುಂಚಿಗ ವೀರಶೈವ ಲಿಂಗಾಯತ ಸಮಾಜ ಚಿತ್ರದುರ್ಗ ಇದರ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಭಾನುವಾರ ಅಮೋಘ ಹೋಟೆಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಅನ್ನದಾನ ಮಾಡದೆ ಹೋದರೆ ವಿದ್ಯೆದಾನ ಮಾಡಲು ಆಗುವುದಿಲ್ಲ ಇವೆರಡು ಪರಸ್ಪರ ಪೂರಕ ಎಂಬ ಪ್ರಜ್ಞೆ ಜಯದೇವ ಜಗದ್ಗುರುಗಳಲ್ಲಿ ಇತ್ತು. ಅಂದಿನಿಂದ ಇಂದಿನಿವರೆಗೂ ನಮ್ಮ ಮಠ ಅನ್ನದಾನ ಅಕ್ಷರದಾನ ಎರಡನ್ನು ಮಾಡಿಕೊಂಡು ಬರುತ್ತಿದೆ. ನಾಡಿನ ಬಹುತೇಕ ಮಠಗಳು ಇಂತಹ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದರಿಂದ ಮಠಗಳಿಗೆ ಸೈದ್ದಾಂತಿಕ ಹಿನ್ನೆಲೆಯಿದೆ ಎಂದು ತಿಳಿಸಿದರು. ಕುಂಚಿಗ ವೀರಶೈವ ಲಿಂಗಾಯಿತ

ನಟಿ ಹರ್ಷಿತ ಪೂಣಚ್ಚ ಹೇಳಿಕೆ: ಸಾ.ರ.ಮಹೇಶ್ ಹೇಳಿದ್ದು ಹೀಗೆ.!

ಮೈಸೂರು: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಕುರಿತು ಆಕ್ಷೇಪಿಸಿದ್ದ ನಟಿ ಹರ್ಷಿಕಾ ಪೂಣಚ್ಚ ಅವರ ಹೇಳಿಕೆಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. ಹರ್ಷಿಕಾ ಪೂರ್ಣಚ್ಚ ಯಾರು? ಈಗ ಏನಾಗಿದ್ದಾರೆ. ಅವರು ಸಿನಿಮಾದವರು ಆ ಬಗ್ಗೆ ಮಾತನಾಡಲಿ. ಕೊಡಗು ಸಂತ್ರಸ್ತರ ಮನೆಗಳ ಕುರಿತು ಅವರಿಗೇನು ಗೊತ್ತಿದೆ. ವಾಸ್ತವ ತಿಳಿಯದೆ ಮಾತನಾಡುವುದು ಮೂರ್ಖತನ. ಕೊಡಗಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಕೆಲವರಿಗೆ ಪ್ರಚಾರದ ಗೀಳು ಅಂಟಿಕೊಂಡಿದೆ ಎಂದು ಹೇಳಿದರು.

ಸಿಡಿಲು ಬಂದಾಗ ನಮ್ಮನ್ನ ನಾವು ಹೇಗೆ ರಕ್ಷಣೆ ಮಾಡಿಕೊಳ್ಳ ಬೇಕು.?

ಬೆಂಗಳೂರು: ಗುಡುಗು–ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.) ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ.ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ( ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.) ಕೆರೆಯಲ್ಲಿ ಈಜುವುದು,ಸ್ನಾನ

ಸುಳ್ಳು ಸುದ್ದಿ ಹರಡುವವರಿಗೆ ವಾಟ್ಸಾಪ್ ನೀಡಿದೆ ಶಾಕ್!

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ, ಸುಳ್ಳು ಸುದ್ದಿ ಹರಡುತ್ತಿವೆ. ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು ವಾಟ್ಸಾಪ್ ಮುಂದಾಗಿದೆ. ವಾಟ್ಸಾಪ್ ಮೂಲಕ ಪ್ರಚೋದನಕಾರಿ ಸಂದೇಶ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಕೃತ್ಯದಲ್ಲಿ ಭಾಗಿಯಾದವರು ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಲಿದ್ದಾರೆ. ಸಂಸ್ಥೆಯ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಪ್ರಚೋದನಾಕಾರಿ ಸಂದೇಶ, ಸುಳ್ಳು ಸುದ್ದಿ ಬಿತ್ತರಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಸುಲಭವಾಗಲಿದೆ.  

ಬಿಜೆಪಿ ಅಹೋರಾತ್ರಿ ಹೋರಾಟಕ್ಕೆ ಸಿಎಂ ಟ್ವೀಟ್ ಏನು.?

ಬೆಂಗಳೂರು: ಬಿಜೆಪಿ ನಾಯಕರ ಅಹೋರಾತ್ರಿ ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆಯ ಅವಶ್ಯಕತೆಯಿಲ್ಲ. ಜಿಂದಾಲ್ ಹಾಗೂ ಬರ ಮತ್ತು ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ದ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ತೋಟಗಾರಿಕೆ : ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನಲ್ಲಿ 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಿಗೆ “ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ“ ಜಾರಿಗೊಳಿಸಿದ್ದು, ವಿಮೆಗೆ ನೊಂದಣಿ ಮಾಡಿಸಲು ಜೂ. 30 ಕೊನೆಯ ದಿನವಾಗಿದೆ. ಚಿತ್ರದುರ್ಗ ತಾಲ್ಲೂಕಿಗೆ ಮಾವು, ದಾಳಿಂಬೆ, ಅಡಿಕೆ ಬೆಳೆಗಳನ್ನು ವಿಮೆಗೆ ನಿಗದಿಪಡಿಸಿದೆ. ಈ ಬೆಳೆಗಳಿಗೆ ವಿಮೆಗಾಗಿ ನೊಂದಾಯಿಸಲು ಜೂನ್ 30 ಕೊನೆಯ ದಿನವಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿಗೆ ಈರುಳ್ಳಿ ನೀರಾವರಿ, ಮಳೆಯಾಶ್ರಿತ. ಹಿರೇಗುಂಟನೂರು ಹೋಬಳಿಗೆ ಈರುಳ್ಳಿ ನೀರಾವರಿ, ಮಳೆಯಾಶ್ರಿತ, ಭರಮಸಾಗರ ಹೋಬಳಿಗೆ ಈರುಳ್ಳಿ, ಟೊಮೆಟೋ. ತುರುವನೂರು ಹೋಬಳಿಗೆ ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ