Posts From admin

ಡಿ ಬಾಸ್ ದರ್ಶನ್- ಸಾಧು ಕೋಕಿಲ ಜೋಡಿಯ ಹೊಸ ಚಿತ್ರ ಬರಲಿದೆ

ಬೆಂಗಳೂರು: ಸ್ಯಾಂಡಲ್’ವುಡ್’ನಲ್ಲಿ ಅನೇಕ ಪ್ರಾಜೆಕ್ಟ್’ಗಳಲ್ಲಿ ಸದ್ಯ ಬ್ಯುಸಿಯಾಗಿರುವ ನಟ ದರ್ಶನ್ ಅತ್ಯಂತ ಬೇಡಿಕೆಯ ನಟ. ಆದರೆ, ವಿಷಯವೇನೆಂದರೆ ಅನೇಕ ವರ್ಷಗಳ ನಂತರ ಡಿ ಬಾಸ್ ಮತ್ತು ಸಾಧು ಕೋಕಿಲ ಒಂದಾಗುತ್ತಿದ್ದಾರೆ. ಸುಂಟರಗಾಳಿ ಸಿನಿಮಾದ ನಂತರ ಡಿಬಾಸ್ ದರ್ಶನ್’ಗೆ ಸಾಧು ಕೋಕಿಲ ಅಕ್ಷನ್ ಕಟ್ ಹೇಳುತ್ತಿರುವುದು ಇಂಟ್ರಸ್ಟಿಂಗ್ ವಿಷಯ. ಹೌದು, ನಟ ದರ್ಶನ್ ಕೈಯಲ್ಲಿ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಅತ್ಯಂತ ಬ್ಯುಸಿ ಇರುವ ನಟ ದರ್ಶನ್ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದಾಗಿ ಖಾಸಗಿ ವಾಹಿನಿವೊಂದರಲ್ಲಿ ಹೇಳಿಕೊಂಡಿದ್ದಾರೆ. ರಕ್ತ ಕಣ್ಣೀರು’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಸಾಧು ಕೋಕಿಲ ಅವರು, ದರ್ಶನ ನಟನೆಯ ಅನಾಥರು, ಸುಂಟರಗಾಳಿ ಸಿನಿಮಾಗಳಿಗೂ ಅಕ್ಷನ್ ಕಟ್ ಹೇಳಿದ್ದರು. ಈಗ

ಭೀಕರ ರಸ್ತೆ ಅಪಘಾತ ನಾಲ್ವರ ದುರ್ಮರಣ.!

ಬೆಂಗಳೂರು: ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಮಿಳುನಾಡಿದ ಹೊಸೂರು ಬಳಿ ಇಂದು ಬಳಗ್ಗೆ ನಡೆದಿದೆ.  ತಿರುಚ್ಚಿಯಿಂದ ಆಂಬ್ಯಲೆನ್ಸ್‌ನಲ್ಲಿ ಇಬ್ಬರು ರೋಗಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿತ್ತು ಎಂದು ತಿಳಿದು ಬಂದಿದೆ.  ಮೃತರನ್ನು ಆಂಬ್ಯುಲೆನ್ಸ್ ಚಾಲಕ ಜೈಸೂರ್ಯ, ಸಹಾಯಕ ಮದನ್ ಕುಮಾರ್ ಎಂದು ಗುರುತಿಸಲಾಗಿದೆ.ಇಬ್ಬರು ರೋಗಿಗಳು ಸಹ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೊಸೂರು ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರಿ ವೈದ್ಯರ ಬೇಡಿಕೆ: ಅಗತ್ಯ ಕ್ರಮಗಳ ಬಗ್ಗೆ ಭರವಸೆ- ಸಿಎಂ

ದಾವಣಗೆರೆ: ಸರ್ಕಾರಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಸಲ್ಲಿಸಿರುವ ಅನೇಕ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಆಯೋಜಿಸಿದ್ದ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿನ ಮನಃಸ್ಥಿತಿ ಬದಲಾಗಬೇಕು. ಸೇವೆಗಾಗಿಯೇ ಸರ್ಕಾರಿ ನೌಕರಿ ಎನ್ನುವ ಭಾವನೆ ಮೂಡಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರಕಾರದಿಂದ ಫಸಲ್ ಭೀಮಾ ಯೋಜನೆ ಜಾರಿಗೆ ಚಿಂತನೆ.!

ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಹಿನ್ನಲೆ ಹಾಗೂ ಸಾಕಷ್ಟು ತೊಂದರೆಗಳು ಇರುವುದರಿಂದ, ರೈತರಿಗೆ ಅನುಕೂಲವಾಗಲು ರಾಜ್ಯ ಸರಕಾರ ಫಸಲ್ ಭೀಮಾ ಯೋಜನೆಯನ್ನ ಜಾರಿಗೆ ತರುವುದಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಕೃಷಿ ಸಚಿವ ಶಿವಶಂಕರ‍ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಈಗಾಗಲೇ ಇದೇ ತರದ ವಿಮಾಯೋಜನೆಯನ್ನು ಬಿಹಾರ ಸರಕಾರ ಜಾರಿಗೆ ತಂದಿದ್ದು, ಅಲ್ಲಿನ ಮಾದರಿಯನ್ನೇ ಇಲ್ಲೂ ಕೂಡ ಜಾರಿಗೆ ತರಲಿದೆ ಎನ್ನಲಾಗಿದ್ದು, ಈ ಬಗ್ಗೆ ಮೊದಲು ಅಲ್ಲಿ ಅಧ್ಯಯನ ನಡೆಸಿ, ಬಳಿಕ ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಭಗವಂತನ ಕೃಪೆಯಿಂದ ನಾನು ಮುಖ್ಯ ಮಂತ್ರಿ ಆದೆ.;

ದಾವಣಗೆರೆ : ಭಗವಂತನ ಕೃಪೆಯಿಂದ ನಾನು ಮತ್ತೊಮ್ಮೆ ಸಿಎಂ ಆಗಿದ್ದು ಎಂದು ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಮಾತನಾಡುತ್ತಾ, ನಾನು ಸಾಂದರ್ಭಿಕ ಶಿಶು ದೇವರ ಅನುಗ್ರಹದಿಂದ ಮುಖ್ಯ ಮಂತ್ರಿ ಆಗಿದ್ದೇನೆ ಎಂದರು‌.  ನೀವು ಯಾವಾಗಲು ಸಾಂದರ್ಭಿಕ ಶಿಶು ಎಂದೇ ಉಚ್ಚರಿಸುತ್ತೀರಿ ಏಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿಎಂ ಆಗಿದ್ದೇ ವಿಚಿತ್ರ. ಹಾಗಾಗಿ ಸಾಂದರ್ಭಿಕ ಶಿಶು ಎನ್ನುತ್ತೇನೆ. ಸಾಂದರ್ಭಿಕ ಶಿಶು ಎಂಬುದೇ ತಪ್ಪಾ ? ಎಂದು ಮರು ಪ್ರಶ್ನೆ ಹಾಕಿದರು.

ಭಗವಂತನ ಕೃಪೆಯಿಂದ ನಾನು ಮುಖ್ಯ ಮಂತ್ರಿ ಆದೆ.;

ದಾವಣಗೆರೆ : ಭಗವಂತನ ಕೃಪೆಯಿಂದ ನಾನು ಮತ್ತೊಮ್ಮೆ ಸಿಎಂ ಆಗಿದ್ದು ಎಂದು ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಮಾತನಾಡುತ್ತಾ, ನಾನು ಸಾಂದರ್ಭಿಕ ಶಿಶು ದೇವರ ಅನುಗ್ರಹದಿಂದ ಮುಖ್ಯ ಮಂತ್ರಿ ಆಗಿದ್ದೇನೆ ಎಂದರು‌.  ನೀವು ಯಾವಾಗಲು ಸಾಂದರ್ಭಿಕ ಶಿಶು ಎಂದೇ ಉಚ್ಚರಿಸುತ್ತೀರಿ ಏಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿಎಂ ಆಗಿದ್ದೇ ವಿಚಿತ್ರ. ಹಾಗಾಗಿ ಸಾಂದರ್ಭಿಕ ಶಿಶು ಎನ್ನುತ್ತೇನೆ. ಸಾಂದರ್ಭಿಕ ಶಿಶು ಎಂಬುದೇ ತಪ್ಪಾ ? ಎಂದು ಮರು ಪ್ರಶ್ನೆ ಹಾಕಿದರು.

ಕಾಂಗ್ರೆಸ್ ನಾಯಕರುಗಳಿಗೆ “ನಾ” ಅಂದರೆ ನಡುಕ : ಶ್ರೀರಾಮುಲು.!

  ಕೊಪ್ಪಳ: ಕಾಂಗ್ರೆಸ್ ನಾಯಕರುಗಳಿಗೆ ನಾ ಅಂದರೆ  ನಡುಗುತ್ತಾರೆ ಎಂದು  ಶ್ರೀರಾಮುಲು ಕೊಪ್ಪಳ ಜಿಲ್ಲೆಯ ಯಲಬುರಗಾ ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ನಾನು ಬಹಳ ಎತ್ತರಕ್ಕೆ ಬೆಳೆದಿದ್ದೇನೆ. ಹೀಗಾಗಿಯೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ದುರುದ್ದೇಶದಿಂದ ಬಂಧಿಸುವ ಮೂಲಕ ಸೇಡಿನ ರಾಜಕಾರಣ ಮಾಡಿದ್ದಾರೆ. ಆದರೆ ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣದಲ್ಲಿ ರೆಡ್ಡಿಯ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ರೈತರಿಗೆ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡಿದ್ರೆ ನಮ್ಮ ಬಳಿ ಇವೆ ಅಸ್ತ್ರ: ಮುಖ್ಯ ಮಂತ್ರಿ ಕುಮಾರಸ್ವಾಮಿ.!

ದಾವಣಗೆರೆ: ರೈತರಿಗೆ ಬ್ಯಾಂಕ್‍ಗಳು ಕಿರುಕುಳ ನೀಡಿದರೆ ಸಹಿಸುವುದಿಲ್ಲ. ಈ ಉದ್ಧಟತನ ಮುಂದುವರೆದರೆ ನಮ್ಮ ಬಳಿ ಕೆಲವು ಅಸ್ತ್ರಗಳಿವೆ. ಅದನ್ನು ಪ್ರಯೋಗಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‍ನವರು ನಮ್ಮ ಆದೇಶಕ್ಕೆ ಬೆಲೆ ಕೊಡದಿದ್ದರೆ ಸರ್ಕಾರದ ಎಫ್‍ಡಿ ಖಾತೆಯನ್ನು ವಾಪಸ್ ಪಡೆಯುವ ಪರಿಸ್ಥಿತಿ ಬರುತ್ತದೆ ಉಷಾರ್ ಎಂದು ಹೇಳಿದ್ದಾರೆ.

ತಿಂಗಳಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್.!

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಖಾಲಿ ಇರುವ ಸಚಿವ ಸ್ಥಾನಗಳ ನ್ನು ಇದೇ ತಿಂಗಳಲ್ಲಿ ಭರ್ತಿಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆನಡೆಯುತ್ತಿದೆ. ಅಧಿಕಾರ ವಹಿಸಿಕೊಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೇಲೆ ಶಾಸಕರು ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆ ವೇಣುಗೋಪಾಲ್ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂಬುದು ಸುದ್ದಿ ಹರಿದಾಡುತ್ತಿದೆ. ಈ ವೇಳೆ ಚಳಿಗಾಲದ ಅಧಿವೇಶನ ಆರಂಭ ಆಗುವುದಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದು, ತಿಂಗಳಾಂತ್ಯಕ್ಕೆ ವಿಸ್ತರಣೆ ಮಾಡಲು ನಿರ್ಧರಿಸಿದ್ದಾರಂತೆ.!

ಸ್ಪರ್ಧಾತ್ಮಕ ಪರೀಕ್ಷೆ: ರಾಜ್ಯ ಸರಕಾರ ಆದೇಶ: ಸಿದ್ದರಾಮೇಶ್ವರಸ್ವಾಮೀಜಿ ಖಂಡನೆ..!

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಅಡಿ ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ತೀವ್ರವಾಗಿ ಖಂಡಿಸಿದರು. ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಸುಪ್ರೀಂಕೋರ್ಟ್ ಮೂಲಕ ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ., ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹಕ್ಕನ್ನು ಮೊಟುಕುಗೊಳಿಸುವ ಕೆಲಸ ಮಾಡುತ್ತಿದೆ. ೨೦೧೨ ರಲ್ಲಿ ಹೈಕೋರ್ಟ್ ೧೯೯೮-೯೯, ೨೦೦೪-೦೫ ರಲ್ಲಿ ಕೆ.ಎ.ಎಸ್. ಹುದ್ದೆಗಳ ನೇಮಕಕ್ಕೆ ಮಾತ್ರ ಅನ್ವಯವಾಗುವಂತೆ ತೀರ್ಪು ನೀಡಿದ್ದನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಆದೇಶ ಮಾಡುವ ಮೂಲಕ ಮೀಸಲಾತಿಯಡಿಯಲ್ಲಿ ಬರುವ