ಜನವರಿ 6 ರಂದು ಚಿತ್ರದುರ್ಗದಲ್ಲಿ ಮಡಿವಾಳ ಸಮಾಜದ ಜಾಗೃತಿ ಸಮ್ಮೇಳನ ಹಾಗೂ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳ ಪಟ್ಟಾಧಿಕಾರ ನಡೆಯಲಿದೆ.ಇದರ ಅಂಗವಾಗಿ ಶ್ರೀ ಬಸವ ಮಾಚಿದೇವ ಸ್ವಾಮೀಜಿಯ ಬಗ್ಗೆ. ಸಂಗಮೇಶ ಮ. ಕಲಹಾಳ ಎಂ. ಖ. ಅವರ ಲೇಖನ ಅಂತರಾಳದಲ್ಲಿ
ಎರಡು ಕಂತುಗಳಲ್ಲಿ ಪ್ರಕಟವಾಗಲಿದೆ.
-ಸಂ

ಬಸವಾದಿ ಶರಣರು12 ನೆಯ ಶತಮಾನದಲ್ಲಿಕೈಗೊಂಡಸಾಮಾಜಿಕಕ್ರಾಂತಿಯಲ್ಲಿಅಗ್ರಗಣ್ಯ ಶರಣರು ಹಾಗೂ ಮಡಿವಾಳ ಜನಾಂಗದ ಕುಲಗುರುಗಳಾದ ಶ್ರೀ ಮಡಿವಾಳ ಮಾಚಿದೇವರ ಹೆಸರಿನಲ್ಲಿಚಿತ್ರದುರ್ಗದಲ್ಲಿಸ್ಥಾಪಿತವಾಗಿರುವಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಮಠಾಧ್ಯಕ್ಷರು ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರು.ಚಿತ್ರದುರ್ಗದ ಶ್ರೀ ಮುರುಘಾಮಠದಡಾ. ಶಿವಮೂರ್ತಿ ಮುರುಘಾ ಶರಣರಿಂದಜಂಗಮ ದೀಕ್ಷೆ ಪಡೆದುಕನ್ನಡನಾಡಿನಾದ್ಯಂತಹಾಗೂ ಭಾರತದೇಶಾದ್ಯಂತಕಳೆದ ಇಪ್ಪತ್ತುವರ್ಷಗಳಿಂದ ನಿರಂತರ ಪ್ರವಾಸ ಮಾಡಿಜನಾಂಗವನ್ನು ಸಂಘಟಿಸಿ ಪ್ರಗತಿಯತ್ತ ಸಾಗಿಸುತ್ತಿದ್ದಾರೆ.

ನೆಯ ಶತಮಾನದಲ್ಲಿಕೈಗೊಂಡಸಾಮಾಜಿಕಕ್ರಾಂತಿಯಲ್ಲಿಅಗ್ರಗಣ್ಯ ಶರಣರು ಹಾಗೂ ಮಡಿವಾಳ ಜನಾಂಗದ ಕುಲಗುರುಗಳಾದ ಶ್ರೀ ಮಡಿವಾಳ ಮಾಚಿದೇವರ ಹೆಸರಿನಲ್ಲಿಚಿತ್ರದುರ್ಗದಲ್ಲಿಸ್ಥಾಪಿತವಾಗಿರುವಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಮಠಾಧ್ಯಕ್ಷರು ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರು.ಚಿತ್ರದುರ್ಗದ ಶ್ರೀ ಮುರುಘಾಮಠದಡಾ. ಶಿವಮೂರ್ತಿ ಮುರುಘಾ ಶರಣರಿಂದಜಂಗಮ ದೀಕ್ಷೆ ಪಡೆದುಕನ್ನಡನಾಡಿನಾದ್ಯಂತಹಾಗೂ ಭಾರತದೇಶಾದ್ಯಂತಕಳೆದ ಇಪ್ಪತ್ತುವರ್ಷಗಳಿಂದ ನಿರಂತರ ಪ್ರವಾಸ ಮಾಡಿಜನಾಂಗವನ್ನು ಸಂಘಟಿಸಿ ಪ್ರಗತಿಯತ್ತ ಸಾಗಿಸುತ್ತಿದ್ದಾರೆ.

ಗುರುಕಿರಣದಉದಯ !
ಪೂರ್ವಿಕರುದಾವಣಗೇರಿಜಿಲ್ಲೆಯ ಹರಿಹರತಾಲೂಕಿನಗುತ್ತೂರುಗ್ರಾಮದಜಮೀನುದಾರರಾದಉದಾರಿ ಹಾಲಪ್ಪನವರಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹಾಲಪ್ಪನವರು ದೀನರ ಹಾಗೂ ಜಂಗಮ ಪ್ರೇಮಿಯಾಗಿದ್ದರು. ಊರೂರುಅಲೆಯುತ್ತಾಗುತ್ತೂರಿಗೆ ಆಗಮಿಸಿ ಅಲ್ಲಿನ ಸಾಧು ಸಿದ್ಧಪ್ಪಜ್ಜನವರ ದರ್ಶನವಾಗಿ ; ಸಾಧುಗಳಿಗೆ ಖಾಯಂ ವಾಸವಿಲ್ಲವೆಂದು ತಿಳಿದ ಯಜಮಾನ ಹಾಲಪ್ಪನವರುಎರಡುಎಕರೆ ಭೂಮಿ ನೀಡಿಅದರಲ್ಲಿ ವಾಸಿಸುವಂತೆ ಮನವಿ ಮಾಡಿದರು. ಸಾಧುಗಳಾದ ಸಿದ್ದಪ್ಪಜ್ಜನವರು ನೆಲೆಸಿದ ಹಿನ್ನೆಲೆಯಲ್ಲಿ ಸಿದ್ಧಪುರುಷರ ನೆಲೆಯಾಯಿತು.ಈ ಕುಟುಂಬದವರು ನಾಯಕನಹಟ್ಟಿತಿಪ್ಪೇಸ್ವಾಮಿಯವರ ಭಕ್ತರಾಗಿ ಮನೆಯಲ್ಲಿ ನಿತ್ಯವೂ ಶ್ರೀ ಗುರು ಮಾಚಿದೇವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದರ ಫಲ ನೀಡಿತು.
ಹಾಲಿನಲ್ಲಿರುವತುಪ್ಪದಂತೆ, ಪುಷ್ಪದಲ್ಲಿನ ಸುಗಂಧದಂತೆ, ಬೀಜದಲ್ಲಿನ ಮರದಂತೆ ೧೯೮೪ರ ಜೂನ ೪ ರಂದು ಹಾವೇರಿಜಿಲ್ಲೆ ಹಿರೇಕೇರೂರತಾಲೂಕಿನ ಹಳ್ಳೂರು ಗ್ರಾಮದಲ್ಲಿಗುರುಕಿರಣವೊಂದು ಜನಿಸಿತು.ಹಾಲಪ್ಪನವರ ಪುತ್ರಚಂದ್ರಪ್ಪನವರಧರ್ಮ ಪತ್ನಿರತ್ನಮ್ಮನವರಪುಣ್ಯಉದರದಲ್ಲಿಜನಿಸಿದ ಶಿಸುವೇ ರಮೇಶ.

ಬಸವಮಾಚಿದೇವರಾದರಮೇಶ !
ಚಿತ್ರದುರ್ಗದ ಶ್ರೀ ಮುರುಘಾಶರಣರು೧೯೯೮ ರಲ್ಲಿದಾವಣಗೇರಿಯ ಶ್ರೀ ಮಾಚಿದೇವಕಲ್ಯಾಣ ಮಂಟಪಅಡಿಗಲ್ಲು ಸ್ಥಾಪನೆ ಕಾರ್ಯಕ್ರಮದಲ್ಲಿಮಡಿವಾಳ ಸಮುದಾಯಕ್ಕೊಬ್ಬ ಸ್ವಾಮೀಜಿಗಳನ್ನು ಮಾಡುವ ಸಂಕಲ್ಪ ವ್ಯಕ್ತಪಡಿಸಿದರು. ಇದರಿಂದ ಸ್ಪೂರ್ತಿಗೊಂಡ ಮಡಿವಾಳ ಬಂಧುಗಳೆಲ್ಲರೂ ಸೇರಿ ಸಮಾಲೋಚನೆ ನಡೆಸಿದರು.ಹಾಲಪ್ಪನವರಕುಟುಂಬದವರುಚಂದ್ರಪ್ಪರತ್ನಮ್ಮ ದಂಪತಿಗಳ ಪುತ್ರರಮೇಶನಿಗೆಜಂಗಮ ದೀಕ್ಷೆ ನೀಡಲುಸಮ್ಮತಿ ನೀಡಿದರು. ಬಂಧು ಬಳಗದವರ ಸಮ್ಮುಖದಲ್ಲಿಚಿತ್ರದುರ್ಗದ ಮುರುಘಾಮಠದಲ್ಲಿ ೧೯೯೯ ರಜೂನ ೧೪ ರಂದುರಮೇಶನಿಗೆಜಂಗಮ ದೀಕ್ಷೆ ನೀಡಿದಫಲದಿಂದಾಗಿರಮೇಶನಾಗಿದ್ದ ವ್ಯಕ್ತಿ ಮುಂದೆ ಶ್ರೀ ಬಸವಮಾಚಿದೇವ ಸ್ವಾಮೀಜಿಗಳಾಗಿ ಗುರುವಾದರು !
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಿಂದಲೇ ಸುಸಂಸ್ಕೃತ ಪೂರ್ವಿಕರಕುಟುಂಬದ ಹಿನ್ನೆಲೆಯುಳ್ಳ ಬಾಲಕ ಸಹಜವಾಗಿಆಧ್ಯಾತ್ಮಿಕ ಹಾಗೂ ಧಾರ್ಮಿಕಆಸಕ್ತಿಹೊಂದಿದ್ದ.ಅಜ್ಜಿಊರಾದ ಹಳ್ಳೂರಿನಲ್ಲಿ ೯ ನೇ ತರಗತಿವರೆಗೆಓದಿದರು.ಜಂಗಮದೀಕ್ಷೆ ನಂತರ ೧೦ ನೇ ತರಗತಿಯಿಂದಚಿತ್ರದುರ್ಗ ಮುರುಘಾ ಮಠದಲ್ಲಿ ಹೈಸ್ಕೂಲ ಶಿಕ್ಷಣ ಮುಂದುವರೆಸಿ, ಬಸವತತ್ವ ಪದವಿಧರರಾಗಿದ್ದಾರೆ.

ಸಮಷ್ಠಿ ಪ್ರಜ್ಞೆಯತ್ತ !
ಚಿತ್ರದುರ್ಗದಮುರುಘಾಮಠದಲ್ಲಿಡಾ ಶ್ರೀ ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿಅಧ್ಯಯನ ನಡೆಸಿದ ಬಸವಮಾಚಿದೇವ ಸ್ವಾಮಿಗಳವರುಕುಟುಂಬ ಪರಿಸರದಿಂದಶರಣಧರ್ಮ ಪರಿಸರದಲ್ಲಿ ಲೀನವಾಗುತ್ತಾ ನಡೆದರು. ಶ್ರೀ ಬಸವ ಮಾಚಿದೇವ ಸ್ವಾಮಿಗಳಿಗೆ ಮೊದಮೊದಲುಅನಾಥ ಪ್ರಜ್ಞೆಕಾಡಿದರೆ ಶ್ರೀ ಶಿವಮೂರ್ತಿ ಮುರುಘಾ ಶರಣರಗುರುಕುಲ ಸಮಷ್ಠಿ ಪ್ರಜ್ಞೆಯತ್ತಕೊಂಡೊಯ್ಯಿತು.ಶರಣರ ಮಾತೃ ಹೃದಯ ವಿಶಾಲ ಮನೋಭಾವಒಡನಾಟದಿಂದ ಶರಣರ ಸಂಸ್ಕಾರಗಳು ಗಟ್ಟಿಗೊಂಡವು.ಕ್ರಾಂತಿಯಕನಸುಗಾರರು,ಜೀವನವೇಅಗ್ನಿಗಾನದಂತಿರುವ ಶ್ರೀ ಶಿವಮೂರ್ತಿ ಶರಣರ ಶಿಷ್ಯ ಮಡಿವಾಳ ಜನಾಂಗದಗುರು ಶ್ರೀ ಬಸವ ಮಾಚಿದೇವರಾದರು.ಸ್ವಾಭಿಮಾನಿ ತೀವೃಗಾಮಿ ಸ್ವಭಾವದ ಮಡಿವಾಳ ಸಮಾಜತಾವೂಕಲಿಯುವದುಇನ್ನೊಬ್ಬರಿಗೆ ಪಾಠ ಕಲಿಸುವದುಇವರ ಸಹಜ ಬದುಕು.
ಇಂತಹ ಸಮಾಜ ಸುಮಾರು ೪೮ ಪಂಗಡಗಳಿಂದ ಕೂಡಿದ್ದು ವಿವಿಧಅಭಿರುಚಿ ಹವ್ಯಾಸಆಹಾರ ಪದ್ಧತಿ ಹಾಗೂ ಆಚರಣೆಗಳನ್ನು ಹೊಂದಿರುವವರು.ಈ ಸಮಾಜದ ಸಂಘಟನೆಒಂದು ಸವಾಲು ಹೊರತು ಸುಲಭವಾದುದಲ್ಲ. ಸವಾಲುಗಳನ್ನು ಗೆದ್ದವರು ಸಮಾಜದಲ್ಲಿಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.ಈ ಸವಾಲುಗಳನ್ನು ಎದುರಿಸಿ ನಿಲ್ಲಬೇಕುಎನ್ನುವದೃಢ ಸಂಕಲ್ಪ ಹೊಂದಿರುವ ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರು ಸಮಾಜದಲ್ಲಿತೀರಾ ಹಿಂದುಳಿದ ಸಮಾಜವಾದಮಡಿವಾಳ ಸಮಾಜವನ್ನು ಜಾಗೃತಿಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.