ಅಂದು ಬಿಎಂಟಿಸಿ ಸಿಇಟಿ ಪರೀಕ್ಷೆ ನಿಮಿತ್ತ ಮಹಾನಗರಬೆಂಗಳೂರಿಗೆ ಬಂದಿಳಿದೆ.ಮಾಯ ಲೋಕಕ್ಕೆ ಕಾಲಿಟ್ಟಂತೆ ಭಾಸವಾಯಿತು.ನಾನು ಕಡುಬಡತನದಲ್ಲಿಹುಟ್ಟಿಬೆಳೆದಿದ್ದು, ಹಳ್ಳಿ ಪ್ರದೇಶವಾದ್ದರಿಂದ ಮಹಾನಗರದ ಬಗ್ಗೆ ತಿಳಿದಿರಲಿಲ್ಲ. ಒಂದು ಸರ್ಕಾರಿ ನೌಕರಿ ಪಡೆಯಲೆ ಬೇಕು ಎಂಬುದು ನನ್ನ ಹೆಬ್ಬಯಕೆಯಾಗಿತ್ತು.
ನನ್ನಕುಟುಂಬದ ಹೊಣೆ ನಾನೆ ಹೊರಬೇಕಾದ ಪರಿಸ್ಥಿತಿ ಎದುರಾಗಿತ್ತು.ಏಕೆಂದರೆ ನನ್ನತಂದೆ ಕೆಲಸ ಮಾಡಲು ನಿಶ್ಯಕ್ತರಾಗಿದ್ದರು.ನಾನೇ ಹಿರಿಯ ಮಗ.ನನಗಿಬ್ಬರುತಂಗಿಯರು.ಅವರಿಗೆ ಮದುವೆ ಮಾಡುವ ಹೊಣೆಗಾರಿಕೆಯೂ ನನ್ನ ಮೇಲಿತ್ತು.
ಆದ್ದರಿಂದ ಈ ಪರೀಕ್ಷೆ ನನಗೆ ಅನಿವಾರ್ಯತೆಯಿತ್ತು.ಸುಮಯ ಸಮೀಪಿಸಿತು.ಎಕ್ಸಾಂ ಸೆಂಟರ್ ಬಳಿಗೆ ಬರಲು ಬಸ್ ಹತ್ತಿದೆ.ಕುಮಾರ ಪಾರ್ಕ್ ನಾಗಪ್ಪ ಸ್ಟ್ರೀಟ್ ಎಂದುಇತ್ತು.ಅಲ್ಲಿಗೆ ಬಂದುಕುಮಾರ ಪಾರ್ಕ್ ಹೈಸ್ಕೂಲ್‌ಎಲ್ಲಿದೆಎಂದು ಕೇಳಿದೆ.ಅಲ್ಲಿದೆಇಲ್ಲಿದೆಎಂದು ಹೇಳಿದರು, ಒಂದುಗಂಟೆಹುಡುಕಿದರು ಸಿಗಲೇ ಇಲ್ಲ.ಇನ್ನು ಕೆಲವರುಕುಮಾರ ಪಾರ್ಕ್ ಹೈಸ್ಕೂಲ್‌ಇಲ್ಲಿಇಲ್ಲವೇಇಲ್ಲಎಂದರು. ನನಗೆ ಒಮ್ಮೆಲೆ ಸಿಡಿಲು ಬಡಿದಂತಾಯಿತು.ಪರೀಕ್ಷೆ ಬರೆಯಲುಇನ್ನೊಂದೆಗಂಟೆ ಸಮಯ ಬಾಕಿ ಇತ್ತು.ಕುಮಾರ ಪಾರ್ಕ್‌ಅನ್ನು ೪ ಬಾರಿತಿರುಗಾಡಿದರು ಸಿಗಲೇ ಇಲ್ಲ. ಹುಡುಕಿ ಹುಡುಕಿ ನಾನೇ ಸೋತು ಹೋದೆ.ತುಂಬಾ ಸುಸ್ತಾಯಿತು.ಎಲ್ಲರನ್ನು ಕೇಳಿದ್ದಾಯಿತು.ಸಿಗಲೇ ಇಲ್ಲ. ನನಗೆ ತಿಳಿಯದಂತೆಯೇ ಕಣ್ಣಲ್ಲಿ ನೀರು ಬಂದಿತು.ಏನು ಮಾಡಬೇಕುಎಂದು ದಿಕ್ಕು ತೋಚದೆತಲೆ ಮೇಲೆ ಕೈಯಿಟ್ಟು ಅಳುತ್ತಾ ಕುಳಿತೆ.
ಆ ಕ್ಷಣದಲ್ಲಿ ನನ್ನದುರಿಗೆ ಬಂದಆ ವ್ಯಕ್ತಿಏನಾಯಿತುಎಂದು ವಿಚಾರಿಸಿದೆ. ನಾನು ಎಲ್ಲ ತಿಳಿಸಿದೆ. ಆ ವ್ಯಕ್ತಿಗೂ ಆ ಎಕ್ಸಾಂ ಸೆಂಟರ್ ತಿಳಿದಿರಲಿಲ್ಲ. ಮತ್ತೆಚಿಂತಾಕ್ರಾಂತನಾದೆ.ಆ ವ್ಯಕ್ತಿ ನನ್ನ ಸಂಕಷ್ಟ ಕಂಡುಇಬ್ಬರು ಸೇರಿ ಹುಡುಕೋಣಎಂದರು.ಇಬ್ಬರುಅವರ ಸ್ಕೂಟಿಯಲ್ಲಿ ಹುಡುಕಲು ಪ್ರಾರಂಭಿಸಿದೆವು.ಇನ್ನು ೧೪ ನಿಮಿಷಗಳೇ ಇರುವುದು ನನಗೆ ಮತ್ತಷ್ಟುಚಿಂತೆಯಾಯಿತು.ಇನ್ನುನನ್ನಕತೆ ಮುಗಿತೂಎಂದುಕೊಂಡೆ.
ಹುಡುಕುತ್ತಾ ಮುನ್ನಡೆದೆ. ಕೊನೆಗೆ ಎಕ್ಸಾಂ ಸೆಂಟರ್‌ಒಂದುಕಣ್ಣಿಗೆ ಬಿತ್ತು, ಅಲ್ಲಿಗೆ ಹೋಗಿ ನೋಡಿದರೆ, ಅದು ನಾನು ಬರೆಯುವಎಕ್ಸಾಂ ಸೆಂಟರ್‌ಅಲ್ಲಎಂದರು.ಮತ್ತೆ ಹುಡುಕುತ್ತಾ ಸಾಗಿದೆವು, ಕೊನೆಗೆ ಎಕ್ಸಾಂ ಸೆಂಟರ್ ಸಿಕ್ಕಿತು ಎನ್ನುವಷ್ಟರಲ್ಲಅದುಕೂಡಅಲ್ಲವೆಂದರು.ಆದರೆಅಲ್ಲಿರುವಒಬ್ಬ ಮೇಡಂ ನಮಗೆ ಉಪಯುಕ್ತ ಮಾಹಿತಿ ನೀಡಿದರು.ಸರ್‌ಕುಮಾರಪಾರ್ಕ್ ಹೈಸ್ಕೂಲ್‌ಎಂದರೆಅದುಕುಮಾರ ಪಾರ್ಕ್‌ನಲ್ಲಿಲ್ಲ, ಅದರ ಹೆಸರು ಸಿಬಿಎಸ್‌ಇ ವಿಜ್ಞಾನ ಮತ್ತು ಕಲಾ ಕಾಲೇಜುಆನಂತರಅದುಕುಮಾರ ಪಾರ್ಕ ಹೈಸ್ಕೂಲ್‌ಎಂದರು.ಆನಂತರ ನನ್ನಜೊತೆಗಿರುವ ಆ ವ್ಯಕ್ತಿಇದನ್ನು ನಾನು ನೋಡಿದ್ದೇನೆ, ಧನ್ಯವಾದಗಳು ಮೇಡಂಎಂದು ಹೇಳಿ ಅಲ್ಲಿಂದ ಬೀಳ್ಕೊಂಡೆವು.ಪರೀಕ್ಷೆ ಪ್ರಾರಂಭವಾಗಲುಇನ್ನು ೨ ನಿಮಿಷ ಇರುವಂತೆಎಕ್ಸಾಂ ನನ್ನಎಕ್ಸಾಂ ಸೆಂಟರ್ ಸೇರಿದೆವು.ಆಗ ನನ್ನ ಮನಸ್ಸಿಗೆ ನೆಮ್ಮದಿಯಾಯಿತು.ಕಾಲೇಜನ್ನು ನೋಡುತ್ತಾ ಹೊಮ್ಮೆಲ್ಲೆ ನಿಟ್ಟಿಸಿರು ಬಿಟ್ಟೆ.ಎಕ್ಸಾಂ ಸೆಂಟರ್‌ಅದೇಎಂದು ತಿಳಿದಾಕ್ಷಣ ಆ ವ್ಯಕ್ತಿಅಲ್ಲಿಂದತನ್ನ ಸ್ಕೂಟಿಯಲ್ಲಿ ಹೊರಟೇ ಬಿಟ್ಟರು.ಸಾರ್, ಸಾರ್‌ಎಂದುಕೂಗುತ್ತಾ, ಕೂಡಲೇ ಆ ಸ್ಕೂಟಿಯತ್ತಓಡಿದರು ಕೊನೆಗೂ ಆ ವ್ಯಕ್ತಿ ಸಿಗಲೇ ಇಲ್ಲ.
ಆ ದಿನ ಆ ಕ್ಷಣಅವರು ಸಿಗದೇ ಇದ್ದರೆ ನಾನು ಆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಇಂದುಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂದು ಸಮರ್ಥವಾಗಿ ನಾನು ನನ್ನಕುಟುಂಬವನ್ನು ನಿಭಾಯಿಸುತ್ತಿದ್ದೇನೆ. ಒಂದೊಳ್ಳೆ ಜೀವನ ನಡೆಸುತ್ತಿದ್ದೇನೆ. ಇಷ್ಟೇಲ್ಲಾ ಸಾಧ್ಯವಾಗಿದ್ದು ಆ ಮೂರೇ ನಿಮಿಷದ ಮನುಷ್ಯನಿಂದ.ಆ ವ್ಯಕ್ತಿಗೆ ನಾನು ಸದಾಚಿರಋಣಿ.

ನಿಮ್ಮ ವಿಶ್ವಾಸಿ
ಪ್ರಭಾಕರ.ಪಿ
ರಾಂಪುರ.

9980796846