ಮಾನವನ ಸೃಷ್ಠಿಯೇ ಅಂಥಹದ್ದು ಅಲ್ಲವೇ…! ಮನುಷ್ಯ ಎಂಬ ಪ್ರಾಣಿ ಈ ಭೂಮಿಯ ಮೇಲೆ ಸೃಷ್ಠಿಯಾಗುತಿದ್ದಂತೆ ಕ್ರೂರ ವೆನಿಸಿದ ಪ್ರಾಣಿಗಳೆಲ್ಲಾ ಅವನಿದ್ದ ಸ್ಥಳದಿಂದ ಸ್ಥಳಾಂತರಗೊಂಡವು. ಆದರೆ ಇದರೆ ಬಗ್ಗೆ ಇತಿಹಾಸದಲ್ಲಿ ಇರುವ ಕಲ್ಪನೆಯೆ ಬೇರೆ, ಮಾನವನೇ ಕಾಡನ್ನು ಬಿಟ್ಟು ನಾಡಿಗೆ ಬಂದ, ಒಂದು ಕಡೆ ನೆಲೆ ನಿಂತು ತನ್ನ ಜೀವನವನ್ನು ಸಾಗಿಸಿದ ಎಂಬುದು ಪುಸ್ತಕದಲ್ಲಿ ಓದಿದ ನೆನಪು. ಅದು ಏನೇ ಇರಲಿ ಮಾನವ ಭೂಮಿ ಮೇಲೆ ವಾಸಿಸುವಂತ ಅಷ್ಟು ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಪ್ರಾಣಿ ಆದರೆ ಅತಿಯಾದ ಬುದ್ಧಿವಂತಿಕೆಯಿಂದ ತಾನು ತನ್ನವರನೆಲ್ಲಾ ದೂರ ಮಾಡಿಕೊಳ್ಳುತ್ತಾ ಸ್ವಾರ್ಥ ಜೀವನವನ್ನು ಸಾಗಿಸುತ್ತಿದ್ದಾನೆ.
ಇಂತಹ ಸ್ವಾರ್ಥ ಜೀವನದಲ್ಲಿ ನನ್ನ ಪಾತ್ರವು ಒಮ್ಮೆ ಸಿಕ್ಕಿಹಾಕಿದ ಕಥೆ ಇದು. ಕಳೆದು ಎರಡು ವರ್ಷಗಳ ಹಿಂದೆ ಪರಿಚಯವಾದ ಇಬ್ಬರು ಸ್ನೇಹಿತೆರು ನಾನೆಂದು ಜೀವನದಲ್ಲಿ ಮರೆಯಲಾಗದ ವ್ಯಕ್ತಿತ್ವ ಉಳ್ಳವರು. ಉನ್ನತ ಶಿಕ್ಷಣಕ್ಕಾಗಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಪರಿಸ್ಥಿತಿ, ಹಳ್ಳಿಯಿಂದ ನಗರದತ್ತ ಹೋಗಿದ್ದ ನಮಗೆ ಅಲ್ಲಿನ ಜನರ ನಡವಳಿಕೆಯಲ್ಲವೂ ವಿಚಿತ್ರವೆನಿಸಿದರು ಒಪ್ಪಿಕೊಳ್ಳಬೇಕಾಗಿತ್ತು. ಅಂತ ಸಂದರ್ಭದಲ್ಲಿ ಪರಿಚಯವಾದ ಸ್ನೇಹಿತೆರೆ ಒಬ್ಬಳು ರುಭಿಯಾ ಮತ್ತೋಬ್ಬಳು ಮೇರಿ. ಈ ಹೆಸರುಗಳೆ ಸೂಚಿಸುತ್ತವೆ ಒಬ್ಬಳು ಮುಸ್ಲಿಂ ಧರ್ಮದವಳು ಮತ್ತೋರ್ವಳು ಕ್ರೈಸ್ತ ಧರ್ಮದವಳು. ನಮ್ಮ ಮದ್ಯೆ ಎಂದಿಗೂ ಧರ್ಮದ ಬಗ್ಗೆ ಮಾತುಗಳು ಸೃಷ್ಠಿಯಾಗಿರಲಿಲ್ಲ. ಹೀಗೆ ನಮ್ಮ ಸ್ನೇಹ ಕೆಲವು ದಿನಗಳು ಕಳೆದಂತೆ ಮೇರಿಯ ಅಕ್ಕನ ಮದುವೆ ಬಂತು ಅಲ್ಲಿಗೆ ನಾನು ರುಭಿಯಾ ಹೋಗಬೇಕಾಯಿತು ಅವರ ಸಂಪ್ರದಾಯ ನೋಡಿ ನಮಗೆ ಆಶ್ಚರ್ಯವಾಯಿತು. ಇದರ ಮದ್ಯೆ ರುಭಿಯಾ ಅದೇ ದಿನ ಅವರ ಧರ್ಮದಲ್ಲಿ ಇರುವಂತ ಕೆಲವು ಸಂಪ್ರದಾಯಗಳು ಕೇಳಿದಾಗ ನನಗೆ ಅವರಿಬ್ಬರಿಗಿಂತ ನಮ್ಮ ಧರ್ಮದ ಆಚರಣೆಗಳೆ ಕೆಲವು ಸರಿ ಎನಿಸಿದವು ಕೆಲವು ತಪ್ಪು ಎನಿಸಿದವು. ಆದರೆ ನಾನು ಹೇಳಹೊರಟಿರವ ವಿಚಾರ ಅದಲ್ಲ. ಹೀಗೆ ವಿಶ್ವವಿದ್ಯಾನಿಲಯದಲ್ಲಿ ಕೆಲವು ತಿಂಗಳುಗಳು ಕಳೆದಂತೆ ನಮ್ಮ ನಡುವೆ ಇದ್ದಂತಹ ಸ್ನೇಹದ ನಡುವೆ ಅವರ ಕುಟುಂಬಗಳಿಂದ ದೂರಗಳು ಬಂದವು ಅಲ್ಲಿಗೆ ನಾವುಗಳು ದೂರವಾಗಬೇಕಾಯಿತು.
ಇದ್ದಕಿದಂತೆ ಏಕೆ ಹೀಗಾಯಿತು ಎನ್ನುವ ಬಗ್ಗೆ ತಿಳಿಯುವ ಹುಚ್ಚುತನ ನನ್ನಲ್ಲಿ ಬಂದಾಗ ರುಭಿಯಾ ಅವರ ಕುಟುಂಬದ ಬಳಿ ಹೋದಗ ಅವರ ಹಿರಿಯದಾದ ಅಜ್ಜಿ ನನಗೆ ಹೇಳಿದ ಮಾತುಗಳೆಂದರೆ ನೋಡಪಾ ಬೇಟಾ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ ನಾವುಗಳು ಅದೇಷ್ಟೇ ನಿಖರವಾಗಿದ್ದರು ಸಂಶಯವನ್ನು ಪಡುತ್ತದೆ. ನಾಲ್ಕಾರು ದಿನಗಳಿಂದ ರುಭಿಯಾ ನೀನು ಒಟ್ಟಿಗೆ ಸುತ್ತಾಡುತ್ತಿರವುದು ಯಾರೋ ಮೂರನೇಯ ವ್ಯಕ್ತಿ ಬಂದು ನನಗೆ ಹೇಳಿದ್ದು ಸರಿ ಎನಿಸಲಿಲ್ಲ ಅದಕ್ಕಾಗಿ ಅವಳನ್ನು ಅಂದಿನ ದಿನದಿಂದಲೇ ಓದುವುದನ್ನು ಬಿಡಿಸಿ ನಿಖಾ ಮಾಡವುದಾಗಿ ನಿರ್ಧಾರ ಮಾಡಲಾಗಿದೆ ಎಂದು ಹೇಳದರು ನಾನು ಸರಿ ಅಜ್ಜಿ ಎಂದು ಅಲ್ಲಿಂದ ಹೊರಬಂದೆ. ನಿಜವಾಗಿಯು ಹೇಳುತ್ತೇನೆ ನನ್ನ ಹಾಗೂ ರುಭಿಯಾ ಮದ್ಯೆ ಯಾವ ತರನಾದ ಸಂಶಯ ಪಡುವಂತ ವಿಚಾರಗಳು ಇರಲಿಲ್ಲ ಅವಳು ನನ್ನ ನೆಚ್ಚಿನ ಸ್ನೇಹಿತೆ ರೂಪದಲ್ಲಿರುವ ತಂಗಿಯಾಗಿದ್ದಳು. ಈ ಸಮಾಜ ಸ್ಥಿತಿ ಯಾವ ರೀತಿಯಾಗಿದೆ ಎಂದರೆ ಯಾರ ಗೊತ್ತು ಗುರಿ ಇಲ್ಲದವರು ಹೇಳುವ ಮಾತುಗಳನ್ನು ನಂಬುತ್ತದೆ ನಾವು ಹೇಳಿದ್ದನ್ನು ಸಂಶಯ ಪಡುತ್ತದೆ.
ಆದರೆ ಕೆಲವರ ಸ್ವಾರ್ಥದಿಂದ ಮತ್ತೋರ್ವರಿಗೆ ಅನ್ಯಾಯವಾಗುತ್ತಿದೆ ಇಲ್ಲಿ ಯಾವ ತಪ್ಪು ಮಾಡದ ರುಭಿಯಾ ಉನ್ನತ ಶಿಕ್ಷಣದಿಂದ ವಂಚಿತವಾಗಿದ್ದು ಎಷ್ಟು ಸರೀ..? ಇನ್ನು ಇದಾದ ಕೆಲವು ದಿನಗಳ ನಂತರ ಮೇರಿಯು ಸಹ ಸರಿಯಾದ ಕಾರಣಗಳನ್ನು ಕೊಡದೇ ನನ್ನಿಂದ ದೂರವಾಗಿದ್ದು ನನಗೆ ತುಂಬಾ ಬೇಸರವಾಗುತ್ತಿದೆ.
ನಿಜಕ್ಕೂ ನನಗೆ ಕೆಲವರ ಸ್ವಾರ್ಥದಿಂದ ಸದಾ ನನ್ನ ಓಳಿತನ್ನೆ ಬಯಸುತ್ತಿದ್ದು ಆ ಎರಡು ಮನುಸ್ಸುಗಳು ದೂರವಾಗಿವೆ. ಇದರಿಂದ ಹೊಸ ಸ್ನೇಹಿತರೊಂದಿಗೆ ಸ್ನೇಹ ಮಾಡಲು ಹಿಂಜರಿಕೆಯಾಗುತ್ತಿದೆ. ನಾನು ಮೊದಲಿನ ತರ ನನ್ನ ಹತ್ತಿರವಿದ್ದಂತಹ ಆ ಸ್ವಚ್ಛಂದ ಮನಸ್ಸುಗಳು ನನ್ನಿಂದ ದೂರವಾಗಿದ್ದು ನನಗೇನು ಬೇಜಾರಿಲ್ಲ ಆದರೆ ಅಂತಹ ಮನಸ್ಸುಗಳು ಮರಳಿ ನನ್ನ ಜೀವನದಲ್ಲಿ ಸಿಗಬಹುದೇ ಎನ್ನು ಪ್ರಶ್ನೆ ಸದಾ ನಾನು ಒಂಟಿಯಾಗಿ ಇರುವಾಗಲೆಲ್ಲಾ ಕಾಡುತ್ತಿರುತ್ತದೆ.

-ಮಧುಕುಮಾರ್ ಬಿಳಿಚೋಡು

ಮೊ :7353900950

( ಸಾಂದರ್ಭಿಕ ಚಿತ್ರ)