ಭಾಗ-೨ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಬಗ್ಗೆ ನಿಮಗೆಷ್ಟು ಗೊತ್ತು.!

ಸಮಾಜ ಸುಧಾರಣೆಯತ್ತ !
ಕಳೆದ ಹದಿನೇಳು ವರ್ಷಗಳಿಂದ ರಾಜ್ಯಾದ್ಯಂತದೇಶಾದ್ಯಂತ ಹಂತಹಂತವಾಗಿಪಾದಯಾತ್ರೆ, ಬಸ್ ಸಂಚಾರಹಾಗೂ ವಾಹನ ಮೂಲಕ ಕಟ್ಟಕಡೆಯಮಡಿವಾಳರನ್ನು ಮುಟ್ಟುತ್ತ ಸಾಗಿದ್ದಾರೆ. ಸಂಘಟನಾಚತುರರುಎಲ್ಲಾ ವರ್ಗದಜನರೊಂದಿಗೆ ಬೆರೆಯುವ ಸ್ವಭಾವ ಹೊಂದಿರುವಸ್ವಾಮೀಜಿಗಳು ಹಿಂದುಳಿದ ಜನಾಂಗವಾಗಿರುವ ಮಡಿವಾಳರ ಜನಜಾಗೃತಿ ಮಾಡುತ್ತ ಸಾಗಿದ್ದಾರೆ.ಬಹುಮುಖ ಉದ್ದೇಶಗಳನ್ನು ಇಟ್ಟುಕೊಂಡು ನಿರಂತರ ಶ್ರಮಿಸುತ್ತಿದ್ದಾರೆ.

ಬಹುಮುಖ ಉದ್ದೇಶಗಳು :
೧. ಬಿಜಾಪೂರಜಿಲ್ಲೆಯ ಸಿಂದಗಿ ತಾಲೂಕಿನದೇವರ ಹಿಪ್ಪರಿಗೆಗ್ರಾಮದಲ್ಲಿರುವ ಮಡಿವಾಳ ಮಾಚಿದೇವರಜನ್ಮ ಹಾಗೂ ಐಕ್ಯ ಸ್ಥಳಗಳನ್ನು ಹಾಗೂ ಗೊಡಚಿ, ಕಾರಿಮನಿ, ಇತ್ಯಾದಿ ಮಾಚಿದೇವರ ಕುರುಹುಗಳನ್ನು ಸ್ಮಾರಕಸ್ಥಳಗಳನ್ನಾಗಿಅಭಿವೃದ್ಧಿ ಪಡಿಸಲು;ದೇವರ ಹಿಪ್ಪರಿಗೆಅಭಿವೃದ್ಧಿ ಪ್ರಾಧಿಕಾರರಚಿಸಬೇಕುಅಥವಾಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ ಸಾರ್ವಜನಿಕರಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲುಅವಶ್ಯಕ ಪ್ರಯತ್ನಗಳನ್ನು ಮಾಡುವದು.


೨. ಪ್ರತಿತಾಲೂಕಿನಲ್ಲಿಸಮುದಾಯ ಭವನಗಳ ನಿರ್ಮಾಣ, ವಸತಿ ಮನೆಗಳು, ಧೋಬಿ ಘಾಟಗಳು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದು.
೩. ಮಡಿವಾಳರನ್ನು ಪರಿಶಿಷ್ಠರ ಜಾತಿಗೆ ಸೇರ್ಪಡೆ ಮಾಡಲುದೃಢ ಪ್ರಯತ್ನಗಳನ್ನು ಮಾಡುವುದು.

೪. ಉದ್ಯೋಗ ಶಿಕ್ಷಣ ಆರ್ಥಿಕ ಸೌಲಭ್ಯ, ವಸತಿ ಸೌಕರ್ಯ, ಧೋಬಿ ಘಾಟಗಳ ಅಭಿವೃದ್ಧಿ, ಹಾಸ್ಟೇಲ ನಿರ್ಮಾಣಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಬಹುದಾದಕರ್ನಾಟಕರಾಜ್ಯ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪಿಸಲು ಪ್ರಯತ್ನಿಸುವದು.

೫. ಶ್ರೀ ಮಾಚಿದೇವ ಮಹಾಸಂಸ್ಥಾನ ಮಠವನ್ನು ಅಭಿವೃದ್ಧಿಗೊಳಿಸುವುದು.
೬. ಎಲ್ಲಾಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವದು.
೭. ಅನಾಥರಅಂಗವಿಕಲರ ಅಬಲೆಯರ ವೃದ್ಧರ ಆಶ್ರಮಗಳನ್ನು ತೆರೆಯುವದು.
೮. ಮಹಿಳೆಯರಿಗೆ ಎಲ್ಲಾ ವಿವಿಧ ಸಮಾನತೆ ಸಮಬಾಳು ಸಿಗಬಲ್ಲ ಕಾರ್ಯಕ್ರಮಗಳನ್ನು ನಡೆಸುವದು.
೯. ಮಕ್ಕಳ, ಯುವಜನರಹಾಗೂ ಮಹಿಳೆಯರ ಸಮಗ್ರ ವಿಕಾಸ ಕೇಂದ್ರಗಳನ್ನು ಸ್ಥಾಪಿಸುವದು.

೧೦. ಸ್ವಯಂಪ್ರೇರಣೆಯಿಂದ ಆಸಕ್ತಿ ಹೊಂದಿರುವವ್ಯಕ್ತಿಅಥವಾತಂದೆ ತಾಯಿಗಳು ಇಚ್ಛಿಸಿದ ಮಕ್ಕಳನ್ನು ಮಠಕ್ಕೆದತ್ತುತೆಗೆದುಕೊಂಡುಜಂಗಮ ದೀಕ್ಷೆ ನೀಡುವದು.
೧೧. ಮಾಚಿದೇವರ ಸಮಗ್ರ ವಚನ ಸಾಹಿತ್ಯ ಹಾಗೂ ಜೀವನಕುರಿತಾಗಿಅಧ್ಯಯನ ಸಂಶೋಧನೆ ಪ್ರಕಟಣೆಗಾಗಿಶ್ರೀ ಮಾಚಿದೇವರಅಧ್ಯಯನ ಪೀಠ ಸ್ಥಾಪಿಸುವದು.
೧೨. ಅಂತರ್‌ರಾಷ್ಟ್ರೀಯ ಮಟ್ಟದ ವೈಯಕ್ತಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಸಮುದಾಯಿಕ ಸಮಗ್ರ ವಿಕಾಸ ಕೇಂದ್ರಸ್ಥಾಪಿಸುವದು.

ಸಾಧನೆಗಳ ಪರ್ವ !!
ಮನುಷ್ಯ ಮನಸ್ಸು ಮಾಡಿದರೆಏನನ್ನಾದರೂ ಸಾಧಿಸಬಹುದುಎನ್ನುವುದಕ್ಕೆ ಕಳೆದ ಹತ್ತು ವರ್ಷಗಳು ಸಾಕ್ಷಿಯಾಗಿವೆ. ಇದೊಂದುಅಭೂತಪೂರ್ವವಾದದಶಮಾನ. ಈ ದಶಮಾನ ಅನೇಕ ಅನುಭವಗಳನ್ನು ತಂದುಕೊಟ್ಟಿದೆ.ಅನೇಕ ಸಾಧನೆಗಳ ಮೆಟ್ಟಿಲುಗಳಾಗಿಯೂ ಮೂಡಿಬಂದಿದೆ.

೧. ಗ್ರಾಮದರ್ಶನಗಳ ಮೂಲಕ ತೀರದೂರದ ಹಳ್ಳಿಯವರೆಗೆ ತಲುಪಿ ಜನಮನಗೆಲ್ಲುವಂತಾಗಿದೆ. ಭಾರತಯಾತ್ರೆಯ ಮೂಲಕ ದೇಶಾದ್ಯಂತ ಸುತ್ತಾಡಿದಿಲ್ಲಿಯಜನತಾಜನಾರ್ಧನನವರೆಗೆ ಹೋಗಿ ಮಡಿವಾಳರ ಏಳ್ಗೆಗಾಗಿ ಶ್ರಮಿಸಲಾಗಿದೆ. ಇದರಿಂದಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಮಡಿವಾಳಜನಜಾಗೃತಿಉಂಟಾಗಿದೆ.
೨. ಗ್ರಾಮ, ಹೋಬಳಿ, ತಾಲೂಕಾ, ಜಿಲ್ಲಾ ಮಟ್ಟದ ಸಮಾವೇಶಗಳನ್ನು ಸಂಘಟಿಸಲಾಗಿದೆ. ಇದರಿಂದಾಗಿ ಮಡಿವಾಳರು ಒಟ್ಟುಗೂಡುತ್ತಿದ್ದಾರೆ. ಒಗ್ಗಟ್ಟಿನ ಮಹತ್ವಮನವರಿಕೆಯಾಗಿದೆ.
೩. ನಿವೇಶನಗಳ, ಮಾಚಿದೇವ ದೇವಸ್ಥಾನಗಳ, ದೋಭಿಘಾಟಗಳ ಆಸ್ತಿಪಟ್ಟಾ ಇತ್ಯಾದಿ ಮಡಿವಾಳ ಸಮುದಾಯದ ಸಮಸ್ಯೆಗಳು ಪರಿಹಾರವಾಗುತ್ತಿವೆ.
೪. ಸಮುದಾಯ ಭವನಗಳು, ಮಾಚಿದೇವ ದೇವಸ್ಥಾನಗಳು, ದೋಭಿಘಾಟಗಳು ನಿರ್ಮಾಣವಾಗಿವೆ.
೫. ಗ್ರಾಮ-ತಾಲೂಕಾ-ಜಿಲ್ಲಾ-ಪಂಚಾಯತಿ-ವಿಧಾನಸಭೆ-ಲೋಕಸಭೆಗಳ ಜನಪ್ರತಿನಿಧಿಗಳು ಮಡಿವಾಳ ಸಮುದಾಯದವರನ್ನುತಾವೇಕರೆದುನಿವೇಶನ ಸಮುದಾಯ ಭವನ, ಮಾಚಿದೇವದೇವಸ್ಥಾನ ನಿರ್ಮಾಣಗಳಿಗೆ ಅನುದಾನಇತ್ಯಾದಿ ಸರ್ಕಾರಿ ಸೌಲಭ್ಯಗಳನ್ನು ನೀಡುವ ವಾತಾವರಣ ನಿರ್ಮಾಣವಾಗಿದೆ.
೬. ಬೆಂಗಳೂರು, ಕೂಡಲಸಂಗಮ, ಮೈಸೂರುಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗಿದೆ.ಮಡಿವಾಳರನ್ನು ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಲುಒತ್ತಾಯಿಸಲಾಗಿದೆ. ೫-೬ ಜನರಿಗೆ ವಿವಿಧ ಹುದ್ದೆಗಳನ್ನು ಸರ್ಕಾರ ನೀಡಿದೆ.
೭. ಫೆಬ್ರುವರಿ ೧ ದಿನದಂದು ಮಾಚಿದೇವಜಯಂತಿಯನ್ನುಆಚರಿಸಲು ಸರ್ಕಾರಘೋಷಣೆ ಮಾಡಿದೆ.

  • ಡಾ. ಸಂಗಮೇಶ ಮ. ಕಲಹಾಳ ಎಂ. ಡಿ (ಆಯು)