ಪ್ರತಿಯೊಬ್ಬರು ಇತರರು ತಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇಟ್ಟಿಕೊಂಡಿರುತ್ತಾರೆಂಬ ಭಾವನೆ ಎಲ್ಲರಲ್ಲಿಯೂ ಮೂಡುವ ಪ್ರಶ್ನೆ
ಈ ಪ್ರಶ್ನೆಯನ್ನು ಸುದೀರ್ಘವಾಗಿ ನೋಡಿದರೆ ಅಭಾಸಕ್ಕೆ ಎಡೆ ಮಾಡಿವುದಲ್ಲಿ ಎರಡು ಮಾತಿಲ್ಲ. ನಮ್ಮ ಪ್ರಸ್ತುತಿ ಹಾಗೂ ಅನುಪಸ್ಥಿತಿಯಲ್ಲಿ ಏನಲ್ಲಾ ಮಾತನಾಡುತ್ತಾರೆ ಎಂಬುದೇ ಒಂದು ಬಗೆಯ ಕುತೊಹಲಕಾರಕ ಇಂಹದೇ ಒಂದು ಗಮನೀಯ ಘಟನೆಯನ್ನು ಓದಿ…….ಒಮ್ಮೆ ಕಂಪನಿಯ ಮಾಲೀಕರು ಸಂಜೆಯ ವಾಯುವಿವಾಹಕ್ಕೆಂದು ಬಾರಯ್ಯ ವಾಕ್ ಮಾಡೋಣ ಅಂದ್ರು ಕಾಲ್ನಡಿಗೆಯನ್ನು ಪ್ರಾರಂಭಿಸಿದ ಮಾಲೀಕರು ಏನಯ್ಯಾ ಕಂಪನಿ ಸಿಬ್ಬಂದಿಯವರೆಲ್ಲ ನನ್ನ ಬಗ್ಗೆ ಯಾವ ಅಭಿಪ್ರಾಯ ಇಟ್ಟುಕೊಂಡಿದ್ದಾರೆ.
ನಾನೆಂದೆ ಸಾರ್ ನಿಮ್ಮ ಬಗ್ಗೆ ಕಂಪನಿ ಸಿಬ್ಬಂದಿಯವರು ಒಳ್ಳೇಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಈ ಹಿಂದೆ ಇದ್ದ ಮಾಲೀಕರಗಿಂತ ಒಳ್ಳೆಯವರು. ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಕೆಲಸಗಾರರ ಕಷ್ಟ-ಸುಖವನ್ನು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಕೇಳಿದಾಗ ರಜೆ ಮಂಜೂರು ಮಾಡುತ್ತಾರೆ ಎಂದೆಲ್ಲ ಹೇಳಿದಾಕ್ಷಣವೇ ಸಾಹೇಬ್ರ ಮುಖದಲ್ಲಿ ಮಂದಾಹಾಸದ ಮುಗಳ್ನಗೆ ಬೀರಿದರು ಅಷ್ಟಕ್ಕೆ ಸುಮ್ಮನೆಗಾಗದ ಮಾಲೀಕರು ಎಲ್ಲಿ ನಿನ್ನ ಮೊಬೈಲ್‍ನಿಂದ ಲೌಡ್ ಸ್ಫೀಕರ್ ಆನ್ ಮಾಡಿ ಸಹಪಾಠಿಗೆ ಫೋನ್ ಮಾಡಿ ನನ್ನ ಬಗ್ಗೆ ಅಭಿಪ್ರಾಯ ಕೇಳಿ ಎಂದರು ಅದಕ್ಕೆ ಅವರು ಮನೆಗೆ ಹೋಗಿರುತ್ತಾರೆ ಬಿಡಿ ಸಾರ್ ಆಮೇಲೆ ಮಾಡುತ್ತೀನಿ ಅಂದೆ ಕುಪಿತರಾದ ಮಾಲೀಕರು ನಾನು ಹೇಳಿದ್ದು ಮಾಡು ಅಂದರು ನಾನು ಫೋನಾಯಿಸಿ ಸಾರ್ ಕಾಫೀಯಾಯಿತ ಎಂದೆ ಅದಕ್ಕೆ ಕಾಫೀಯಾಯಿತು ಏನೂ ಈಗ ಫೋನ್ ಮಾಡಿದ್ದು ವಿಷಯ ಅಂದರು ಏನೂ ಇಲ್ಲ ಸಾರ್ ನಮ್ಮ ದೊಡ್ಡ ಮಾಲೀಕರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಾರ್ ಎಂದು ಕೇಳಿದೆ ಅದಕ್ಕೆ ಅವರು ಹೇಳಿದ್ದು ಏನೇಂದರೆ “ಅವನೊಬ್ಬ ಶತÀಮುಠಾಳ.ಇಡಿಯೇಟ್ ಯಾವಾಗಲೂ ಡುಡ್ಡು ಅಂತಾನೇ ಏನು ಇವನು ಸತ್ತಾಗ ಹೊತ್ತಕೊಂಡು ಹೋಗುತ್ತಾನಾ” ಎಂದಲ್ಲ ಏಕವಚನ ಸಂಭಾಷಣೆಯನ್ನು ಮಾತನಾಡಿದ್ದನ್ನು ಕೇಳಿದ ಮಾಲೀಕರು ಮುಖ ಸೋತ ಮುಖವಾಯಿತು ಏನಾಯ್ಯ ಕಂಪನಿಯಲ್ಲಿ ನನ್ನ ಬಗ್ಗೆ ಒಳ್ಳೇ ಅಭಿಪ್ರಾಯ ಇದೆ ಅಂದೆ ಇದೇನಾ ಅಭಿಪ್ರಾಯವೆಂದು ಗೊಣಗಾಡುತ್ತಾ ತಮ್ಮ ಮನೆಯತ್ತ ಹೊರಟರು ಇಂತಹ ಒಂದು ಸನ್ನಿವೇಶವನ್ನು ನಾವೆಲ್ಲರೂ ತಿಳಿಯಬೇಕಾದ ವಿಷಯವೇನೆಂದರೆ ಬೇರೆಯವರು ಏನು ಮಾತನಾಡುತ್ತಾರೆ ಎಂಬ ಕುತೂಹಲ ಕಾಡುವುದು ಮನುಷ್ಯನ ಸಹಜಗುಣಗಳಲ್ಲಿ ಇದು ಒಂದಾಗಿದೆ ನಾವು ಸ್ನೇಹಿತರ ಜೊತೆ ಇದ್ದಾಗ ಅವರ ಬಗ್ಗೆ ಮಾತನಾಡದೇ ಅಪ್ರಸ್ತುತಿಯಲ್ಲಿರುವ ಸ್ನೇಹಿತನ ಬಲಹೀನತೆ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತೀವಿ ಅದ್ದರಿಂದ ನಾವು ಈ ಬಗ್ಗೆ ವಿಶ್ಲೇಷಣೆ ಮಾಡುವುದಕ್ಕಿಂತ ಕೇಳಲೇ ಇಲ್ಲ ಎಂಬ ಭಾವನೆಗೆ ಹೋದರೆ ನಮ್ಮ ಮನಸ್ಸಿಗೆ ನೆಮ್ಮದಿ ಕಂಡಿತಾ ಸಿಗುತ್ತದೆ ಹಾಗೂ ನಮ್ಮ ಬಗ್ಗೆ ಯಾವು ರೀತಿಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಬೇರೆಯವರು ಎಂಬ ಉಹೆ-ಪುಹಿಗಳು ಬೇಡ ಇದು ಕೂಡ ನಮ್ಮನ್ನು ಸಂಕಟಕ್ಕೆ ಸಿಲುಕಿಸಿಬಿಡುತ್ತದೆ ಹಾಗೂ ಮೊಬೈಲ್ ಬಳಕೆ ಎಷ್ಟು ಪ್ರಮುಖ ಪಾತ್ರವಹಿಸುತ್ತದೆಯೊ ಅಷ್ಟೇ ಅಪಾಯಕ್ಕೆ ಸಿಲುಕಿಸಿಬಿಡುತ್ತದೆ ಇದರಿಂದ ಗಟ್ಟಿ ಸಂಬಂಧಗಳು ಬಿರುಕು ಬಿಡುತ್ತದೆ ಈ ಬಗ್ಗೆ ಎಚ್ಚರ ಅಗತ್ಯ……,

– ಎ.ಜಿ.ಸುರೇಂದ್ರಬಾಬು.

ರಾಂಪುರ ಮೊಬೈಲ್ ಸಂ:9008805123