2018 ರ ಜೂನ್ 5 ವಿಶ್ವ ಪರಿಸರ ದಿನ. ದುಗುಡ, ದುಮ್ಮಾನ, ಭಯ, ಆತಂಕಗಳಿಂದ ಪರಿಸರದ ಬಗ್ಗೆ ಚಿಂತಿಸುವ ದಿನ.  ವಿಶ್ವ ಸಂಸ್ಥೆಯ ಈ ಸಲದ ಘೋಷಣೆ,  “ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿ”.  ಮಾನವನ ಆಜ್ಞಾನದಿಂದಾಗಿ ಪ್ಲಾಸ್ಟಿಕ್,  ರಾಕ್ಷಸನಂತೆ ಜಲ, ನೆಲ, ಗಾಳಿ, ನೀರು ಮತ್ತು ಜೀವರಾಶಿಗಳನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಚಿತ್ರದುರ್ಗ ತಾಲೂಕು,  ಮದಕರಿಪುರದ ಎಸ್  ಗೀತ (ಶಿಕ್ಷಕಿ) ಹಾಗೂ ಎಂ. ಆರ್. ಬಸವರಾಜ ಇವರ ಪುತ್ರ ಬಿ.ಜಿ. ಸುಮನ್ ಗೌಡ (3) “ಪ್ಲಾಸ್ಟಿಕಾಸುರ” ನ ವೇಷದಲ್ಲಿ.
ಪ್ಲಾಸ್ಟಿಕಾಸುರ:-  ಗಾಳಿಯಂ ಕೆಡಿಸಿ, ನೀರಂ ಗಬ್ಬೆಬ್ಬಿಸಿ, ಸಕಲ ಜೀವಿಗಳು ನಿಶ್ಚೇಷ್ಟಿತರಾದರಾಯ್, ಈ ಧೀರ ಪ್ಲಾಸ್ಟಿಕಾಸುರ ನಿಗೆ ಸಮನುಂಟೆ ಜಗದೀ

-ದಾಸೇಗೌಡ