ಕನ್ನಡದ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪಾರ್ವತೀಶ ಬಿಳಿದಾಳೆ ’ಯಾನ’ ಎಂಬ ಹೊಸ ಅಂಕಣ ಬರಹವೊಂದನ್ನು ಶುರು ಮಾಡಿದ್ದಾರೆ. ಕಳೆದ ಎರಡು ದಶಕಗಳ ಪತ್ರಿಕೋದ್ಯಮ, ಚಳವಳಿಗಳು, ಹೋರಾಟ ಹಾಗೂ ಸಾಮಾಜಿಕ ಆಗು-ಹೋಗುಗಳೆಲ್ಲಾ ಇದರಲ್ಲಿ ಮೂಡಲಿವೆ.

ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಪಾರ್ವತೀಶ ಬಿಳಿದಾಳೆಯವರು ಬಿಸಿ ಸುದ್ದಿಯ ಹಿತೈಶಿಯೂ ಹೌದು ಹಾಗೂ ನನ್ನ ದೀರ್ಘಕಾಲೀನ ಮಿತ್ರರೂ ಹೌದು. ತಮ್ಮ ವೃತ್ತಿಜೀವನದ ಅನುಭವಗಳನ್ನು ಯುವಜನರಿಗಾಗಿ ಒಂದು ಕತೆಯ ರೂಪದಲ್ಲಿ ಅವರು ನಿರೂಪಿಸುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಇವು ಕೇವಲ ವ್ಯಕ್ತಿಗಳು, ಘಟನೆಗಳ ನಿರೂಪಣೆ ಮಾತ್ರವಲ್ಲ, ಒಂದು ಕಾಲಘಟ್ಟದ ಚಿಂತನೆಗಳನ್ನು ರೂಪಿಸಿದ ರಾಜಕೀಯ-ಸಾಮಾಜಿಕ ಹೋರಾಟಗಳಲ್ಲೂ ತೊಡಗಿಸಿಕೊಂಡ ಆಕ್ಮಿವಿಸ್ಟ್ ಬರಹಗಾರ-ಪತ್ರಕರ್ತರ ನೆನಪುಗಳ ನಿರೂಪಣೆಯಾಗಲಿದೆ.

ಇದೊಂದು ಸಾಮಾಜಿಕ – ರಾಜಕೀಯ ಸಂಕಥನವಾಗಿದೆ.

ಇನ್ನು ಮುಂದೆ ವಾರದಲ್ಲಿ ಎರಡು ಬಾರಿ (ಬುಧುವಾರ & ಭಾನುವಾರ) ಯಾನ ಬಿಸಿಸುದ್ದಿಯ ಅಂತರಾಳ ಅಂಕಣದಲ್ಲಿ ಪ್ರಕಟವಾಗಲಿದೆ.
-ಸಂ