ಮುಖ್ಯ ಮಂತ್ರಿ ಕುಮಾರಸ್ವಾಮಿಯರು ಮಂಡಿಸಿದ ಚೊಚ್ಚಲ ಬಜೆಟ್ ಬಗ್ಗೆ ವಿದ್ಯಾವಂತ ವೀರಭದ್ರಪ್ಪ ಪಾಟೀಲ್ ಅವರು ಬರೆದ ಲೇಖನ ನಿಮಗಾಗಿ.

-ಸಂ

ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್.ಡಿ.ಕುಮಾರಸ್ವಾಮಿ ಇವರು ದಿನಾಂಕ 05-07-2018 ರಂದು ಮಂಡಿಸಿರುವ ಬಜೆಟ್ ಪ್ರಮಖಾಂಶಗಳು ಮುಖ್ಯಮಂತ್ರಿಗಳು ಅಧಿಕಾರ ಜುಕ್ಕಾಣಿ ಹಿಡಿಯುವ ಮೊದಲು ತಮ್ಮ ಪ್ರಾಣಾಳಿಕೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳು ವ್ಯೆಕ್ತರಿಕ್ತವಾಗಿದೆ. ರೈತರ ಸಾಲ ಮನ್ನಾ ಕುರಿತು ಈ ನಾಡಿನ ರೈತಭಾಂದವರು ತುಂಬಾ ನಿರೀಕ್ಷೆಯನ್ನು ಇಟ್ಟಿದ್ದು ಬಜೆಟ್ ಮಂಡನೆಯ ನಂತರ ರೈತರಲ್ಲಿ ಆತಾಶೆಯನ್ನು ತಂದಿದೆ. ರೈತರ ಕುಟುಂಬದ ರೂ 2.00 ಲಕ್ಷಗಳವರೆಗೆ ಸುಸ್ತಿದಾರರ ಸಾಲವನ್ನು ಮಾತ್ರ ಮನ್ನಾ ಎಂದಿದ್ದು ರೈತರು ಈಗಾಗಲೇ ಬೆಳೆ ಸಾಲಗಳಿಗೆ ಬೆಸತ್ತು ಆತ್ಮಹತ್ಯೆಗೆ ಮುಂದಾಗಿದ್ದು ಆದರೆ ರಾಷ್ಟ್ರೀಯ ಬ್ಯಾಂಕ್‍ಗಳ ಸಾಲದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ನಾಡಿನ ರೈತರು ಮುಂಗಾರು ಮಳೆರಾಯನ ಮೇಲೆ ಸಂಪೂರ್ಣ ನಂಬಿಕೊಂಡು ಸಕಾಲದಲ್ಲಿ ಮಳೆ ಬಾರದೇ ಮತ್ತೆ ಮಳೆರಾಯನ ಮುಗಿಲತ್ತ ಮುಖ ಮಾಡಿದ್ದಾನೆ ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ಬಂದರೆ ರೈತರ ಎಲ್ಲಾ ಬಗೆಯ ಸಾಲವನ್ನು ಮನ್ನಾ ಮಾಡಲಾಗುವುದೆಂದು ಹೇಳಿಕೆಯನ್ನು ನೀಡಿದ್ದು ಇದನ್ನು ಗಾಳಿಗೆ ತೂರಿದ್ದಾರೆ ಇದು ರೈತರಲ್ಲಿ ನಿರಾಶಾದಾಯಕ ಮೂಡಿಸಿದೆ.
ಅಂತೆಯೇ ಪೆಟ್ರೋಲ್. ಡೀಸೆಲ್. ಮತ್ತು ವಿದ್ಯುತ್ಛಕ್ತಿಯ ಬೆಲೆ ಏರಿಕೆಯನ್ನು ಮಾಡುವುದಾಗಿ ಕರುಡು ಮಂಡಿಸಿದ್ದು ನಿಜಕ್ಕೂ ಜನಸಾಮಾನ್ಯರಿಗೆ ಆರ್ಥಿಕವಾಗಿ ಹೊರೆಯಾಗುವುದು ಕಟ್ಟಿದ್ದ ಬುತ್ತಿಯಾಗಿದೆ ಏಕೆಂದರೆ ಈಗಾಗಲೇ ಬೆಲೆ ಏರಿಕೆಯಿಂದ ತತ್ತಾರಿಸುತ್ತಿರುವ ಜನಸಾಮಾನ್ಯರು ಈಗ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡುವುದು ತುಂಬಾ ಅಕ್ರೋಶವಾಗಿದೆ.ಆರ್ಥಿಕ ಸಮತೋಲನೆಯನ್ನು ಗಮನದಲ್ಲಿಟ್ಟುಕೊಂಡು ಜಜೆಟ್ ಮಂಡಿಸಲು ಸನ್ಮನ್ಯ ಮುಖ್ಯಮಂತ್ರಿಗಳು ಸಂಪೂರ್ಣ ವಿಫಲರಾಗಿರುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ರೇಷ್ಮೆ ಸೀರೆ ಇತ್ಯಾದಿ ಐತಿಹಾಸಿಕತೆಗಳಿಗೆ ಪ್ರಸಿದ್ದ ಪಡೆದಿದ್ದು ಆದರೆ ತುಂಬಾ ಹಿಂದುಳಿದ ತಾಲ್ಲೂಕಾಗಿದ್ದು ಈ ತಾಲ್ಲೂಕಿನ ನಾಗರೀಕರಿಗೆ ಮೂಲಭೂತ ಸೌಲಭ್ಯಗಳ ಬಗ್ಗೆ ಬಜೆಟ್‍ನಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿರುವುದಿಲ್ಲ ಇದು ದುರಾಂತವೇ ಸರಿ.ಹಾಗೂ ಚಿತ್ರದುರ್ಗ ಜಿಲ್ಲೆಗೂ ಯಾವುದೇ ರೀತಿಯ ಹೊಸ ಅನುದಾನಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿರುವುಲ್ಲ ಮೂಲಭೂತಗಳಿಗೆ ವಂಚಿತವಾಗಿರುವ ನಗರಗಳಿಗೆ ಹೆಚ್ಚು ಪ್ರಧಾನ್ಯತೆ ತೋರದೆ ಕೇವಲ ಸೀಮಿತ ನಗರ ಅಭಿವೃದ್ದಿಗೆ ಮಾತ್ರ ಹೊಸ ಯೋಜನೆಗಳು ತಂದಿರುವುದು ಅಸಮಾಧಾನಕರವಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆ.ಜಿ.ಅಕ್ಕಿ ಬದಲಿಗೆ 5 ಕೆ.ಜಿ.ಗೆ ಇಳಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸಮಾಂಜಷ ಇದನ್ನು ಆರ್ಥಿಕ ತಜÐರು ಪರಮರ್ಶಿಸಬೇಕಾಗಿದೆ.
ಒಟ್ಟಾರೆಯಾಗಿ ಮಾನ್ಯ ನೂತನ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿರವರು ಮಂಡಿಸಿರುವ ಆಯ್ಯ-ವ್ಯಯ ಕೇವಲ ಕೆಲವು ಜಿಲ್ಲೆಗಳಿಗೆ ಸೀವಿತವಾಗಿದ್ದು ಸಮಾಗ್ರ ಕರ್ನಾಟಕ ಜನಸಾಮಾನ್ಯರಿಗೆ ಹಾಗೂ ನಾಡಿನ ರೈತಬಾಂಧವರ ಆಶಾದಾಯಕ ಮೂಡದೆ ನಿರಾಶಾದಾಯಕ ಬಜೆಟ್ ಇದಾಗಿದೆ.

ಜಿ. ವೀರಭದ್ರ ಪಾಟೀಲ್
ಬಿ.ಕಾಂ. ವಿಧ್ಯಾರ್ಥಿ, ದೇವಸಮುದ್ರ
ರಾಂಪುರ
ಮೊಳಕಾಲ್ಮೂರು