ಈ ಗೊಂದಲಗಳಿಗೆ ಸ್ಪಷ್ಟವಾಗಿ ಉತ್ತರಿಸಲು ಬಹುಶಃ ಎಲ್ಲರಿಗೂ ಕಷ್ಟವಾಗಬಹುದು. ಆದರೆ ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಏಳುವ ಸಂದೇಹಗಳನ್ನು ಒಬ್ಬರು ಅನಾಮಿಕ ಹಂಚಿಕೊಂಡಿದ್ದಾರೆ. ಆ ವಾಟ್ಸ್ ಆಪ್ ನಲ್ಲಿ ಬಂದ ಮನದಾಳದ ವಿಚಾರಗಳನ್ನು ಒಮ್ಮೆ ಓದು ಬಿಡಿ

-ಸಂ

ನಾವು ಪಂಚಪೀಠಗಳಿಗೂ ನಡೆದುಕೊಳ್ಳುತೇವೆ  ಹಾಗೆಯೆ  ವಿರಕ್ತ    ಮಠಗಳಿಗೂ ಹೋಗುತ್ತೇವೆ  ಬಸವಪೀಠಗಳಿಗೂ  ಹೊಗುತ್ತೇವೆ.ನಮ್ಮಗಳಮನೆಯಲ್ಲಿ ಬಸವಣ್ಣ  ಅಕ್ಕಮಹಾದೇವಿ  ಯರ ಫೋಟೋ ಇದೆ .ಪಂಚಪೀಠಾದೀಶರ ಫೋಟೋ ಇದೆ .ವಿರಕ್ತ ಮಠಾಧೀಶರ  ಫೋಟೊಯಿದೆ .ಚಿತ್ರದುರ್ಗದ  ಮುರುಘಾಶರಣರ ಫೋಟೋ ವನ್ನು ಸೇರಿಸಿ  .
ನಾವು ಲಿಂಗದರಿಸಿದ  ಯಾವುದೇ  ಕಾವಿಧಾರಿಗಳು ಸಿಕ್ಕರೂ  ಕಾಲಿಗೆ  ಬೀಳುತ್ತೇವೆ  ಯಾವತ್ತೂ ಕೇಳಿಲ್ಲ ನೀವು  ಯಾರು ಎಂದು.ಕಾಯಕವೇ  ಕೈಲಾಸ  ಎಂದು ನಂಬಿ  ದುಡಿದಿದ್ದರಲ್ಲಿ  ಯಾವ ಮತದವರು  ಬಂದರು ಕೈಲಾದ ದಾನ  ಮಾಡುತ್ತೇವೆ  ಯಾವುದೇ ಭೇದ ಮಾಡದೆ.

ಸಿದ್ದಂತಾ ಶಿಖಾಮಣಿಯ ಹೆಸರು   ಹೆಸರು ಕೇಳಿದ್ದೇವೆ  ಆದ್ರೆ ಓದಿಲ್ಲ  ಕಾರಣ ನಮಗೆ ಅರ್ಥ ಆಗುವುದಿಲ್ಲ  .ಆದರೆ ನಮಗೆ ವಚನಗಳು  ಗೊತ್ತು ಓದುತ್ತೇವೆ  ಬಾಯಿಪಾಠ ಮಾಡುತ್ತೇವೆ.
ನಾವು ಇಷ್ಟ ಲಿಂಗವನ್ನು  ಎದೆಯೆ  ಮೇಲೆ ದರಿಸುತ್ತೇವ , ಕಾಯಕವೇ ಕೈಲಾಸ ಎಂದು ನಂಬುತ್ತೇವೆ  ,ಾವು ಸೂತಕವನ್ನು  ಆಚರಿಸುವುದಿಲ್ಲ  ,ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಮುಟ್ಟಾದರೆ  ಅಡುಗೆ  ಮಾಡುತ್ತಾರೆ ,ಹುಟ್ಟಿದರೆ  ಸತ್ತರೆ  ಸೂತಕ  ಇಲ್ಲ .ಸತ್ತವರ  ಮನೆಯಲ್ಲೇ ದಾಸೋಹ  ಏರ್ಪಡಿಸುತ್ತೇವೆ  ,ಮರಣವೇ  ಮಹಾನವಮಿ  ಎಂದು .
ಎಲ್ಲರು ಹೇಳುತ್ತಿದ್ದರು  ಲಿಂಗದರಿಸಿದವರೆಲ್ಲ  ಒಂದೇ ಇಂದು.ಅದನ್ನು ನಂಬಿದೆವು  .ಹೆಣ್ಣು ಕೊಡುವಾಗ   ತರುವಾಗ  ಕೇಳಲಿಲ್ಲ  ನೀವು ಲಿಂಗಾಯ್ತರೋ  ವೀರಶೈವರೋ  ಎಂದು.ಈಗ ನಮ್ಮ ಮಕ್ಕಳು ಯಾರು?
ದಯವಿಟ್ಟು ನಾವು ಗೊಂದಲದಲ್ಲಿ  ಇದ್ದೇವೆ  ನಾವು ಲಿಂಗಾಯ್ತರೋ ವೀರಶೈವರೋ ಎಂದು.ದಯವಿಟ್ಟು ಹೇಳಿ ನಾವು ಯಾರೂ?
ಬೇರೆ ಜನ ನಮ್ಮನ್ನು  ಕೇಳುತ್ತಿದ್ದಾರೆ ನೀವು ಯಾರು ಎಂದು .
ಒಂದು ವೇಳೆ ನಾವು ಲಿಂಗಾಯ್ತರು  ಎಂದರೆ ಪಂಚಪೀಠಾದೀಶರ  ಫೋಟೋವನ್ನು  ನಮ್ಮಗಳ ಮನೆಯಿಂದ  ತೆಗಿಯ  ಬೇಕಾ  ,ವೀರಶೈವರು  ಎಂದಾದರೆ  ಬಸವಾದಿಶರಣಾರ   ವಿರಕ್ತರ  ಬಸವ  ಪೀಠಾದೀಶರ  ಫೋಟೋವನ್ನು ತಂಗಿಯ  ಬೇಕ.ವಚನಾಭ್ಯಾಸ  ವನ್ನ ನಿಲಿಸ  ಬೇಕಾ ದಯವಿಟ್ಟು ತಿಳಿಸಿ  .
ಕಾವಿದರಿಸಿ ಭಕ್ತರಿಗೆ  ಆಶೀರ್ವಚನ  ನೀಡಬೇಕಾದವರ  ಬಾಯಲ್ಲಿ  ರಾಜಕಾರಣಿಗಳಿಗೂ  ಮೀರಿದ ಸಭ್ಯತೆ  ಮೀರಿದೆ  ಮಾತು ಬರುತ್ತಿವೆ  .ಬೀದಿಯಲ್ಲಿ ನಿಂತು ಜಗಳ  ಆಡುತಿದ್ದೀರಿ  ನಾವು ಲಿಗಾಯಿತರೋ  ವೀರಶೈವ ಲಿಂಗಾಯ್ತರೋ ಎಂದು ಹೆಮ್ಮೆ ಇಂದ ಹೇಳಿಕೊಳುತಿದ್ದೆವು ಈಗ  ನಾಚಿಕೆ  ಆಗುತ್ತಿದೆ.ನಿಮ್ಮ ಹಾದಿ ರಂಪ  ಬೀದಿ  ರಂಪ ನೋಡಿ  .
ನಮಗೆ ಅಲ್ಪಸಂಖ್ಯಾತ  ಸ್ಥಾನಮಾನ  ಕೊಡಿಸಿ ಉದ್ದಾರ  ಮಾಡುವ ಮೊದಲು ನಮ್ಮ ನಿಮ್ಮ ಕಚ್ಚಾಟ  ನಿಲ್ಲಿಸಿ ನಮ್ಮ ಮಾನ ಉಳಿಸಿ  ನಮಗೆ ಬಸವಣ್ಣ  ಹೇಳಿದ್ದಾನೆ  ಕಾಯಕವೇ ಕೈಲಾಸಾ ಎಂದು ಅದನ್ನ ನಂಬಿ ದುಡಿದು  ಬದುಕುತ್ತೇವೆ  ,  ಯಾರ ಬಳಿ ಕೈಚಾಚುವ  ಅವಶ್ಯಕತೆ  ಇಲ್ಲಾ.ನಮ್ಮನ್ನು ಸ್ವಾಭಿಮಾನದಿಂದ  ಬದುಕಲು  ಬಿಡಿ.ನಮ್ಮ ಸಂಬಂಧ  ಗಳ ನಡುವೆ ಹುಳಿ ಹಿಂಡ ಬೇಡಿ .
ದಯವಿಟ್ಟು ಉತ್ತರಿಸಿ ಎರಡೂಕಡೆಯವರು  ನಾವು ಯಾರು ಎಂದು.

ವಾಟ್ಸ್ ಆಪ್ ಸಂದೇಶ