ಚೆನ್ನಕೇಶವಸ್ವಾಮಿ ಕಲ್ಯಾಣಿ
ನಾನು ಚೆನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿದ್ದೇನೆ. ನನ್ನಿಂದ ಜನಗಳಿಗಷ್ಟೇ ಅಲ್ಲದೆ ನೂರಾರು ಗಿಡಮರಗಳು ನೀರನ್ನು ಪಡೆಯುತ್ತಿದ್ದವು. ಈಗ ಸಂಪೂರ್ಣ ಬತ್ತಿರುವ ನಾನು ಪ್ಲಾಸ್ಟಿಕ್ ಎಸೆಯುವ ಕಸದ ಗುಂಡಿಯಾಗಿದ್ದೇನೆ. ನನ್ನ ಸುತ್ತಲೂ ಬೆಳೆದಿರುವ ಆಲದ ಮರಗಳು ನನ್ನನ್ನು ಸಂಪೂರ್ಣ ನುಂಗಬಹುದು.ವನದ ಮಧ್ಯಯೇ ಇದ್ದರೂ ಇಂದು ನಾನು ಸಂಪೂರ್ಣ ಬತ್ತಿ ಹೋಗಿದ್ದೇನೆ. ದೇಹ ಇದ್ದರೂ ಸತ್ತಂತಿದ್ದೇನೆ.
ನಾನು ಸಂತೇ ಹೊಂಡ
ನಿಮಗೆ ನೆನಪಿರಬೇಕು. ಕೆಲ ವರ್ಷಗಳ ಹಿಂದೆ ಬಸ್ಸೊಂದು ನನ್ನಲ್ಲಿ ಬಿದ್ದು ೬೧ ಜನ ಬಲಿಯಾಗಿ ಅಂತರ್ ರಾಷ್ಟ್ರೀಯ ಸುದ್ದಿಯಾಗಿದ್ದರು. ತಪ್ಪು ನನ್ನದೇ ಎಂದು ಅನೇಕರು ಶಪಿಸಿದ್ದೂ ಉಂಟು. ನನ್ನ ಸುತ್ತ ಇದ್ದ ಶಿಥಿಲ ತಡೆಗೋಡೆಯನ್ನು  ಸುಸ್ಥಿತಿಯಲ್ಲಿ ಇಡದಿರುವುದು ನನ್ನ ತಪ್ಪಾ? ಬಸ್‌ನ ಚಾಲಕನ ಅಜಾಗರೂಕತೆಯಿಂದ ಜನರ ಜಲಸಮಾಧಿ ಆಗಿದ್ದು ನನ್ನ ತಪ್ಪಾ?
ನಾನು ಚಿತ್ರದುರ್ಗದಲ್ಲಿಯೇ ಅತ್ಯಂತ ದೊಡ್ಡ ಪುಷ್ಕರಣಿ. ನೂರಾರು ಅಡಿಗಳ ಅಗಲ, ಅಷ್ಟೇ ಉದ್ದ. ಅಷ್ಟೇ ಆಳವಾಗಿರುವ ನಾನು ಸಂಪೂರ್ಣ ನೀರಿನಿಂದ ತುಂಬಿದಾಗ ಅತ್ಯಂತ ಸುಂದರವಾಗಿ, ಜನಾಕರ್ಷಕವಾಗಿ ಕಾಣುತ್ತೇನೆ. ನನ್ನನ್ನು ಕಟ್ಟಿಸಿದ್ದು ಪಾಳೆಗಾರ ಬರಮಣ್ಣ ನಾಯಕರು. ಬೆಟ್ಟದ ಮೇಲೆ ಸುರಿದ ಮಳೆ ನೀರನ್ನು ಭೂಗತ  ಕಾಲುವೆಯ ಮುಖಾಂತರ ಪಡೆದುಕೊಳ್ಳುತ್ತೇನೆ.
ಅಂದು ಸಮರೋಪಾದಿಯಲ್ಲಿ ನನ್ನಲ್ಲಿದ್ದ ನೀರನ್ನೆಲ್ಲ ಖಾಲಿ ಮಾಡಿದ್ದರು. ಇಂದು ನಿಧನವಾಗಿ ನಾನು ಖಾಲಿಯಾಗಿದ್ದೇನೆ ಮತ್ತೆ ಮಳೆಗಾಲದಲ್ಲಿ ತುಂಬಿಕೊಳ್ಳುತ್ತೆನೆ ಆದರೆ ಮೊದಲಿನ ಸೌಂದರ್ಯ, ಮೊದಲಿನ ಗಾಂಭೀರ್ಯ ದೊರಕಿಸಿಕೊಡಬಲ್ಲವರು ಯಾರಾದರೂ ಇದ್ದಾರಾ?

Bcsuddi.com