ಕೋಲಾರ: ಈಗ ಇಡೀ ವಿಶ್ವದಲ್ಲಿ ಕೊರೋನ ಎಂಬ ಮಹಾ ಮಾರಿಗೆ ತತ್ತರಿಸಿ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಯಾರೋ ಜನರು ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ಸುದ್ದಿಗಳನ್ನು ಜನ ಬಹು ಬೇಗ ನಂಬುತ್ತಾರೆ.

ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ  ನರಸಾಪುರದ ಬೆಳ್ಳೂರು ಮತ್ತು ಮಾಲೂರು ತಾಲ್ಲೂಕಿನ ತೊರನಹಳ್ಳಿಯ ಸುತ್ತಮುತ್ತ ಜನರಿಗೆ ದೊಡ್ಡ ತಿರುಪತಿಯಲ್ಲಿ ದೊಡ್ಡ ದೀಪ ಹಾರಿ ಹೋಗುತ್ತಿದೆ ಈ ದೀಪ ಹಾರಿ ಹೋಗುತ್ತಿರುವುದರಿಂದ ಒಬ್ಬ ಮಗ ಇರುವವರು ತಪ್ಪದೇ ಪೂಜೆ ಮಾಡಬೇಕು ಅದು ದೇವಸ್ಥಾನದಲ್ಲಿ ಇಲ್ಲ ಹತ್ತಿ ಮರಕ್ಕೆ ಹಾಗೂ 3 ಮನೆಗಳಲ್ಲಿ ನೀರು ತಂದು ಮನೆಯಲ್ಲಿ ಸಿಂಪಡಿಸಬೇಕು. ಇಲ್ಲವಾದಲ್ಲಿ ಅವರಿಗೆ ಕೆಟ್ಟದ್ದು ಆಗುತ್ತದೆ ಎಂಬ ವದಂತಿ ಊರಲ್ಲಿ ಹಬ್ಬಿದೆ.

ಆದ್ದರಿಂದ ಎಲ್ಲಾ ಪೋಷಕರು ಚಿಕ್ಕ ಮಕ್ಕಳು ಅಂತ ನೋಡದೇ ಚಳಿಯಲ್ಲೇ ಸ್ನಾನ ಮಾಡಿಸಿ ಪೂಜೆ ಮಾಡಿಸುತ್ತಿದ್ದಾರೆ. ಇದರಿಂದ ಜನ ಮರುಳೋ ಅಥವಾ ಜಾತ್ರೆ ಮರುಳೋ ಎನ್ನುವ ಸ್ಥಿತಿ ಬಂದಿದೆ. ಈಗಾಗಲೇ ಜನ ಕೊರೋನ ವೈರಸ್ ನಿಂದ ಮನೆಯಿಂದ ಹೊರಗೆ ಬರಬಾರದು ಅಂತ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿವೆ ಇಂತಹ ಸಂದರ್ಭದಲ್ಲಿ ಯಾರೊ ಪುಂಡರು ಈ ಥರ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

ಮುಗ್ಧರಾದ ಹಳ್ಳಿಯ ಜನ ಅದನ್ನು ನಿಜವೆಂದು ನಂಬಿ ರಾತ್ರಿ 10 ಗಂಟೆಯಲ್ಲೂ ಮಕ್ಕಳ ಕೈಯಿಂದ ಪೂಜೆ ಮಾಡಿಸಿದ್ದಾರೆ. ದಯವಿಟ್ಟು ಯಾರು ಈ ರೀತಿ ಸುಳ್ಳು ಸುದ್ದಿಗಳನ್ನು ನಂಬ ಬಾರದೆಂದು ವ್ಯಾಲಿ ಪಬ್ಲಿಕ್ ಶಾಲೆಯ ಶಿಕ್ಷಕರಾದ ತೊರಣಹಳ್ಳಿ ಗೋಪಾಲಕೃಷ್ಣ ಮತ್ತು ಜೀವನ ಜ್ಯೋತಿ ಚಾರಿಟೇಬಲ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ನಿರ್ದೇಶಕರಾದ ಅವಿನಾಶ್ ರವರು ಊರಿನ ಗ್ರಾಮಸ್ಥರು. ಹಿರಿಯರು. ಹಾಗೂ ಯುವ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.!

 

 

 

 

 

ಜೀವನ ಜ್ಯೋತಿ ಚಾರಿಟೇಬಲ್ ಸೋಷಿಯಲ್ ಸರ್ವೀಸ್ ಟ್ರಸ್ಟ್ ನಿರ್ದೇಶಕರಾದ                                           ಅವಿನಾಶ್