ಇತಿಹಾಸವೇ ಹೇಳುತ್ತದೆ ಚಿತ್ರದುರ್ಗ ಬರಪೀಡಿತ ಜಿಲ್ಲೆಯೆಂದು. ಈ ಭಾಗದ ಸುತ್ತಮುತ್ತಲು ಮಳೆಯ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಅತಿ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಚಿತ್ರದುರ್ಗವು ಒಂದು. ಮಳೆಯಿಲ್ಲದೆ ಬೆಳೆಯಿಲ್ಲದೆ ರೈತರು ನೇಣಿಗೆ ಶರಣಾಗುತ್ತಿದ್ದಾರೆ. ಏಕೆಂದರೆ ರೈತರಿಗೆ ಕೃಷಿಯೇ ಜೀವನಾಧಾರವಾಗಿದೆ.

 ಈ ಭಾಗದ ಜನರಿಗೆ ಮಳೆಯಾಗದಿರುವುದು ಒಂದು ರೀತಿಯ ಶಾಪವಾದಂತಿದೆ.ಅನಾವೃಷ್ಟಿ ರೈತರ  ಚೆಲ್ಲಾಟವಾಡುತ್ತಿದೆ. ಕೃಷಿಕರು ಗ್ರಾಮಗಳನ್ನು ತೊರೆದು ಮಹಾನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಹೈನುಗಾರಿಕೆ ಎಂಬ ವಿಭನ್ನ ಆಲೋಚನೆ ಮಾಡಿ ರಾಷ್ಟ್ರ  ಪ್ರಶಸ್ತಿ ಪಡೆದ ಚಿತ್ರದುರ್ಗದ ಕೂಸು ರೋಜಾ ಅವರ ಸಾಹಸ ಮೆಚ್ಚಲೆ ಬೇಕಾದಂತಹುದು ಹಾಗೂ ಇತರರಿಗೂ ಮಾದರಿಯಾಗಿದೆ.

ಮಳೆ ಇಲ್ಲ ಬೆಳೆ ಇಲ್ಲ, ಬೆಳೆ ಇಲ್ಲದ್ದರಿಂದ ಅನ್ನವಿಲ್ಲ ಎಂದು, ದೇವರಿಗೆ ನಾವು ಕಾಣಲ್ಲವಾ ಏನು ಮಾಡುವುದು ಎಂದು ಕೈಕಟ್ಟಿ ಕುಳಿತಿರುವವರ ಸಂಖ್ಯೆ ಏನು ಕಡಿಮೆಯಿಲ್ಲ. ಮಳೆಯಾಗದೆ ಕೃಷಿಯಲ್ಲಿ ಸೋತವರ ಸಂಖ್ಯೆಯೂ ಕಡಿಮೆಯಿಲ್ಲ. ಹೀಗಾದ ಮಾತ್ರಕ್ಕೆ ಜೀವನವೇ ಸೋತು ಹೋದಂತಲ್ಲ ಎಂದು ಒಂದು ಮಹಿಳೆ ತೋರಿಸಿಕೊಟ್ಟಿದ್ದಾಳೆ ಎಂದರೇ ನಾವೆಲ್ಲಾ ಗರ್ವಪಡುವ ವಿಷಯವಾಗಿದೆ. ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ನೀವಾಸಿ ಅಮರೇಶ ಅವರಿಗೆ ಆಂಧ್ರಪ್ರದೇಶದ ಗುಂತಕಲ್ಲು ಗ್ರಾಮದ ನಿವಾಸಿಗಳಾದ ರೋಜಾ ಅವರು ಪತ್ನಿಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಸು.40 ಹಸುಗಳನ್ನು ಸಾಕುತ್ತಾ ಹಾಲು ಉತ್ಪಾದನೆಯಿಂದ ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದಾರೆ. ತೋಟಕ್ಕೆ ಬೇಕಾಗುವ ನೀರು ಸಂಪೂರ್ಣ ನಿಂತು ಹೋದ ಮೇಲೆ ಮುಂದೆ ಜೀವನ ನಡೆಸುವುದು ಹೇಗೆ? ಎಂಬ  ಪ್ರಶ್ನೆ ಎದುರಾಯಿತು. ಆಗ ರೋಜಾ ಅವರಿಗೆ ಹಾಲಿನ ಉತ್ಪಾದನೆಯ ಆಲೋಚನೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ 4 ಎಮ್ಮೆಗಳಿದ್ದವು, ಅವುಗಳನ್ನು ಮಾರಾಟ ಮಾಡಿ ಹಸುಗಳನ್ನು ತಂದರು. 4 ಹಸುಗಳಿಂದಲೂ ಕೂಡ ಜೀವನ ನಡೆಸುವುದು ಕಷ್ಟಸಾಧ್ಯವೆನಿಸಿತು.

ಪಿ.ಎಲ್.ಡಿ ಬ್ಯಾಂಕಿನಲ್ಲಿ ಸು.8 ಲಕ್ಷ ಲೋನ್ ಪಡೆದು ಆಂಧ್ರಪ್ರದೇಶ, ತಮಿಳುನಾಡು, ದೊಡ್ಡಬಳ್ಳಾಪುರ ದಿಂದ ನಂದಿನಿ ಎಚ್.ಎಫ್ ತಳಿಯ ಹಸುಗಳನ್ನು ತಂದರು. ಒಂದು ದಿನಕ್ಕೆ ಒಂದು ಹಸು ಸು.30ಲೀಟರ್ ಹಾಲು ನೀಡುತ್ತಿವೆ. ಪ್ರಸ್ತುತ ಈಗ ಈ ದಂಪತಿ 40 ಹಸುಗಳ ಮಾಲೀಕರು. ಬೆಳ್ಳಗ್ಗೆ ಮತ್ತು ಸಾಯಂಕಾಲ ಹಾಲು ಕರೆದು ರಾಂಪುರದ ಕೆ.ಎಂ.ಎಫ್ ಡೈರಿಗೆ ಹಾಲು ಹಾಕುವುದರ ಮೂಲಕ ಉತ್ತಮ ಜೀವನ ನಡೆಸುತ್ತಿದ್ದಾರೆ. ಹಸಿ ಹುಲ್ಲು, ಮೇವು, ಡೈರಿ ಪುಡ್ ಅಥವಾ ಹಿಂಡಿ, ದಿನಕ್ಕೆ ನಾಲ್ಕೈದು ಬಾರಿ ನೀರು ಕುಡಿಸುವುದು, ಹಸುಗಳ ಮೈ ತೊಳೆಯುವುದು ಮಾಡುತ್ತಾರೆ.  ರೋಜಾ ಅವರು ಅಮರೇಶ್ ಅವರಿಗೆ ಎಲ್ಲ ರೀತಿಯಾ ಸಹಕಾರ ನೀಡಿದ್ದಾರೆ. ತಮ್ಮ ಪತ್ನಿಯ ಬಗ್ಗೆ ಅಮರೇಶ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಮಳೆಯನ್ನು ನಂಬಿ ಕೂರುವ ಬದಲು ಈ ರೀತಿಯ ಉಪಕಸುಬುಗಳನ್ನು ಮಾಡುವುದರ ಮೂಲಕ ಜೀವನ ಕಂಡುಕೊಳ್ಳುವುದು ಉತ್ತಮವೆಂದು ತಿಳಿಸುತ್ತಾರೆ.

ಅತಿ ಹೆಚ್ಚು ಹಾಲಿನ ಉತ್ಪಾದನೆ ಮಾಡುತ್ತಿರುವುದರಿಂದ ಹೈನುಗಾರಿಕೆಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರ ಜೊತೆಗೆಯೇ ಸ್ಥಳೀಯವಾಗಿ ಸನ್ಮಾನಗಳು ನಡೆದಿವೆ. ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಯನ್ನು ಗಳಸಿದ್ದಾರೆ.


ಪ್ರಭಾಕರ ಪಿ
ಪತ್ರಿಕೋದ್ಯಮ ವಿಭಾಗ
ಸರಳಾದೇವಿ ಪ್ರಥಮ ದರ್ಜೆ ಕಾಲೇಜ್ ಬಳ್ಳಾರಿ.
9980796846.