-ಚಳ್ಳಕೆರೆ ವೀರೇಶ್,

ಬರುವ ಸ್ವಲ್ಪ ಮಳೆ, ಪೈಪೋಟಿಯ ಮಾರುಕಟ್ಟೆಯಲ್ಲಿ ತಾನು ಬೆಳೆದ ಬೆಳೆಗೆ ಉತ್ತಮ ಲಾಭ ಪಡೆಯುವ ಆಸೆ. ತಾನು ಬೆಳೆದ ಫಸಲಿನ ಮೇಲೆ ವಿವಿಧ ಪ್ರಯೋಗಗಳನ್ನು ಮಾಡಿ ಇತರರಿಗಿಂತ ಭಿನ್ನ ನೆನ್ನಿಸಿಕೊಳ್ಳುವ ರೈತರಲ್ಲಿ ಚನ್ನಕೇಶವನೂ ಒಬ್ಬ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕೆಲವೇ ಕಿ.ಮಿ.ದೂರದಲ್ಲಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತ ಸಿ.ಚನ್ನಕೇಶವ ಕಳೆದ ಎರಡು ವರ್ಷಗಳಿಂದ ವಿವಿಧ ತರಹೇವಾರಿ ಹೂಗಳನ್ನು ಬೆಳೆದು ಹೆಚ್ಚಿನ ಲಾಭವನ್ನು ಕಂಡು ಅಕ್ಕಪಕ್ಕ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ. ಅದಕ್ಕೇಲ್ಲಾ ಕಾರಣ ಅವರು ಹೂಗೆ ಬಳಸುವ ಮದ್ಯ(ಬ್ರಾಂದಿ) ಹಾಗೂ ಶ್ಯಾಂಪು ಅವರು ಬೆಳೆಯುವ ಹೂವಿನ ಒಳಪು ಹೆಚ್ಚಿಸುವುದಲ್ಲದೆ, ಕೀಟಬಾಧೆಯಿಂದಲೂ ತಪ್ಪಿಸಿಕೊಂಡು ಉತ್ತಮ ಲಾಭದತ್ತ ನಡೆಯುತ್ತಿದ್ದಾನೆ.

ಕಳೆದ ಎರಡು ವರ್ಷಗಳಿಂದ ಎರಡು ಎಕರೆ ಜಮೀನಿಗೆ, 2 ಇಂಚು ನೀರಿನಲ್ಲಿ ಚಾಂದಿನಿ, ಸೇವಂತಿ, ವೈಟ್‍ರೋಜ್, ಬೆಳ್ಳಿಟ್ಟಿ, ಬಿಳಿ ಸೇವಂತಿ, ಚೆಂಡೂವು, ವೆಲ್ವೇಟ್ ರೋಜ್ ಸೇರಿದಂತೆ ಜವಳಿಕಾಯಿ, ಈರೆ, ಆಗಲ, ಮೆಣಸೀನಕಾಯಿ ಸೇರಿದಂತೆ ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯುವ ಮೂಲಕ ವರ್ಷ ಪೂರ್ತಿ ಕೃಷಿಯಲ್ಲಿಯೇ ತೊಡಗಿಕೊಳ್ಳುವ ಇವರ ಕೃಷಿ ನಿರಂತರವಾದರೂ ಕೆಲವೊಮ್ಮೆ ಬರುತ್ತಿದ್ದ ಕೀಟಗಳ ಬಾಧೆಗೆ ನಲುಗುತ್ತಿದ್ದರು. ಬುಡಕಟ್ಟು ಜನಾಂಗವಾದರಿಂದ ಹೂವಿನ ಬೆಳೆ ರಕ್ಷಣೆಗೆ ಮನೆಯಲ್ಲೇ ಕಂಡುಕೊಂಡು ಔಷಧಿ ಎಂದರೆ ಮದ್ಯ(ಬ್ರಾಂದಿ) ಹಾಗೂ ಶ್ಯಾಂಪು. ಇದರ ಬಳಕೆಯಿಂದ ಶೈನಿಂಗ್, ದೃಢವಾದ ಹೂ, ಕೀಟಗಳಿಂದ ತಪ್ಪಿಸಿಕೊಳ್ಳಲು ಹೊಸ ವಿಧಾನವನ್ನು ಕಂಡುಕೊಂಡಿದ್ದೇವೆ ಎನ್ನುತ್ತಾರೆ ರೈತ ಚನ್ನಕೇಶವರ ತಂದೆ ಚನ್ನಯ್ಯ.

ನಾಟಿ ವಿಧಾನ :– ಕಳೆದ 5 ತಿಂಗಳ ಹಿಂದೆ ತಮಿಳುನಾಡಿ ಪರ್ಟಿಲೈರ್ಜರ್‍ವೊಂದರಲ್ಲಿ ಗಿರಿರಾಜ್(ಕುಪ್ಪಂ) ತಳಿಯ ಒಂದು ಸಸಿಗೆ 2 ರೂ ನಂತೆ 2000 ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ನಾಟಿಗೂ ಮುನ್ನ ಕೊಟ್ಟಿಗೆ ಗೊಬ್ಬರದಲ್ಲಿ ಟಿಲ್ಲರ್ ಹೊಡೆಸಿ 15 ದಿನಗಳು ಭೂಮಿಯನ್ನು ಒಣಗಿಸಿ, ಹದ ಮಾಡಿ, ರಿಂಗ್ ಬದು ನಿರ್ಮಿಸಿ 2 ಅಡಿಗಳ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ. ನಾಟಿ ಮಾಡಿ ತಿಂಗಳವರೆಗೂ ಭೂಮಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಸಿ ದೃಢವಾಗಿ ಬರಲಾರದು.

ಔಷದೋಪಚಾರ ಹೇಗೆ :– ನಾಟಿ ಮಾಡಿ 15 ದಿನದ ನಂತರ ಭೂಮಿಗೆ ಹೀರೆ ಗೊಬ್ಬರ ನೀಡಬೇಕು, ಒಂದು ತಿಂಗಳ ನಂತರ ಹೂ ಆರಂಭದ ದಿನಮಾನದಲ್ಲಿ ಆನೆಮಾರ್ಕ್ ಔಷಧಿಯನ್ನು ಗಿಡಕ್ಕೆ ಸಿಂಪಡಣೆ ಮಾಡಲಾಗಿದೆ. ಹೂವು ಪ್ರಾರಂಭದಿಂದ 15 ದಿನಗಳಿಗೊಮ್ಮೆ ಕೃಷಿ ಇಲಾಖೆಯ ಸಲಹೆಯಂತೆ ಔಷಧಿಯನ್ನು ಸಿಂಪಡೆ ಮಾಡಿದ್ದು, ಹಸಿರು ಹುಳ, ಚಿಟ್ಟೆ, ಎಲೆಕೊರಕ ಹುಳುಗಳ ಬಾಧೆಯಿಂದ ತಪ್ಪಿಕೊಂಡಿದ್ದೇನೆ.
ಹೊಸ ವಿಧಾನ :- ಮೊಗ್ಗು ದಪ್ಪವಾಗಲು ಹಾಗೂ ಶೈನಿಂಗ್ ಕಾಣಸಿಗಲು ನಾನು ಹೊಸ ವಿಧಾನ ರೂಡಿಸಿಕೊಂಡಿದ್ದೇನೆ. “ಗಿಡಗಳಿಗೆ ನೀರು ಹಾಯಿಸುವ 15 ಲೀಟರ್ ಡ್ರಂನಲ್ಲಿ ಎರಡ್ಮೂರು ಆಲ್‍ಕ್ಲಿಯರ್ ಶ್ಯಾಂಪು, ಯಾವುದಾದರೂ 5 ರಿಂದ 10 ಎಂ.ಎಲ್ ಮದ್ಯ(ರಾಜ ಬಳಕೆ ಮಾಡಿದ್ದಾರೆ) ಮಿಕ್ಸ್ ಮಾಡಿ ಹೂ ಬಿಟ್ಟ ನಂತರ ಗಿಡಗಳಿಗೆ ಸಿಂಪಡೆ ಮಾಡಿ ಗಿಡಕ್ಕೆ ಬರಬಹುದಾದ ರೋಗಗಳಿಂದ ಮುಕ್ತನಾಗಿದ್ದೇನೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.

ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು :– ನನ್ನ ಹೊಸ ವಿಧಾನದಿಂದ ಹೂಗಳು ಆಕರ್ಷಣೆಯಾಗಿ ಕಾಣುತ್ತಿವೆ. ಬಹುಬೆಳೆ ವಿಧಾನದಿಂದ ನನಗೆ ಎಂದೂ ನಷ್ಟವಾಗಿಲ್ಲ. ಗಿರಿರಾಜ್ ಕುಪ್ಪಂ ಸೇವಂತಿ ನಾಟಿಗೆ 15 ರಿಂದ 20 ಸಾವಿ ರೂ ಖರ್ಚು ಬಂದಿದೆ. 6 ತಿಂಗಳ ಬೆಳೆ ಇದಾಗಿದ್ದು ಈಗಾಗಲೇ ದಸರಾ, ದೀಪಾವಳಿಯಲ್ಲಿ ಮಾರಿಗೆ 25 ರಿಂದ 30 ರೂವರೆಗೂ ಮಾರಾಟವಾಗಿವೆ. ಇನ್ನೂ ಕೊನೆಯ ಎರಡ್ಮೂರು ಬೀಡ್ ಹೂ ಸಿಗುವ ನಿರೀಕ್ಷೆ ಇದ್ದು 45 ರಿಂದ 60 ಸಾವಿರ ಲಾಭ ಕಂಡಿದ್ದೇನೆ. ಹೆಚ್ಚಿನ ಮಾಹಿತಿಗಾಗಿ 91083 38927ಗೆ ಸಂಪರ್ಕಿಸಬಹುದು.