1.ಪಿಎಂ ಫಸಲ್ ಬಿಮಾ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕೆಲ ಬೆಳೆಗಳಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ. ಅಕಾಲಿಕ ಮಳೆ ಮತ್ತು ಪ್ರಕೃತಿ ವಿಕೋಪ ಸಂದರ್ಭ ಬೆಳೆ ನಷ್ಟವಾದರೆ ವಿಮೆ ಮಾಡಿಸಿದ ಬೆಳೆಗಳಿಗೆ ನಿಗದಿ ಮಾಡಲಾದ ಹಣವನ್ನು ರೈತರ ಖಾತೆಗೆ ಪಾವತಿ ಮಾಡಲಾಗುವುದು. ಮುಂಗಾರು ಅವಧಿಯಲ್ಲಿ ಬೆಳೆಯುವ ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ವಿಮಾ ಮೊತ್ತದ ಶೇ.2 ಹಾಗೂ ವಾರ್ಷಿಕ ವಾಣಿಜ್ಯ ಬೆಳೆಗಳಿಗೆ ಶೇ.5 ಪಾವತಿ ಮಾಡಬೇಕಾಗುತ್ತದೆ. ಹಿಂಗಾರು ಅವಧಿಯ ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ವಿಮಾ ಮೊತ್ತದ ಶೇ.1.5 ಹಾಗೂ ವಾರ್ಷಿಕ ಮತ್ತು ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ ಶೇ.5 ಹಣ ಪಾವತಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಇಲಾಖೆ ಸಂಪರ್ಕ ಮಾಡಬಹುದು. ರೈತರ ಸಹಾಯವಾಣಿ- 18004253553.

  1. ಕುರಿ ಸಂಘಕ್ಕೆ ಸಿಗಲಿದೆ ಷೇರು:

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು 15ರಿಂದ 25 ಸಾವಿರ ಕುರಿಗಳಿರುವ ಒಂದು ಸಂಘ ಸ್ಥಾಪಿಸಲು ಪ್ರೋತ್ಸಾಹ ನೀಡುತ್ತದೆ. ಪ್ರತಿ ಸಂಘಕ್ಕೆ 25 ಸಾವಿರ ರೂ. ಷೇರು ಧನ ನೀಡುತ್ತಿದೆ. ಸಂಘಗಳು ಷೇರು ಧನವನ್ನು 5 ವರ್ಷಗಳ ನಂತರ 5 ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿದೆ. 3 ವರ್ಷ ಪೂರೈಸಿದ ಸಂಘಗಳಿಗೆ 5 ಲಕ್ಷ ರೂ. ಪೋ›ತ್ಸಾಹಧನ ನೀಡಲಾಗುತ್ತದೆ. ಜತೆಗೆ ಸಂಘದ ಸದಸ್ಯರಿಗೆ ಉಣ್ಣೆ ಕಟಾವು ಯಂತ್ರ ಖರೀದಿ, ಕುರಿ ಸಾಗಣೆ ವಾಹನ, ತೂಕದ ಯಂತ್ರ ಖರೀದಿಗೆ ಕುರಿಮಿತ್ರ ಗೌರವಧನ ನೀಡಲಾಗುತ್ತದೆ. ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಮತ್ತು ಸ್ವಸಹಾಯ ಮಹಿಳಾ ಗುಂಪಿನ ಸದಸ್ಯರಿಗೆ ಕುರಿ ಅಥವಾ ಮೇಕೆ ಘಟಕ ಸ್ಥಾಪಿಸಲು 67,440 ರೂ. ನೀಡಲಾಗುತ್ತಿದೆ. ಇದರಲ್ಲಿ ಶೇ.90 ಸಹಾಯಧನ ದೊರೆಯಲಿದೆ. ಮಾಹಿತಿಗೆ ದೂ.ಸಂ.080-23417100 ಕರೆ ಮಾಡಿ.

 

  1. ಬಿಡಿ ಹೂ ಬೆಳೆಗೆ ಸಬ್ಸಿಡಿ:

 

ಪುಷ್ಪಗಳ ಪ್ರದೇಶಾಭಿವೃದ್ಧಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಬಿಡಿ ಹೂಗಳ ಬೆಳೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರ್ಗೆ16 ಸಾವಿರ ರೂ. ಹಾಗೂ ದೊಡ್ಡ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಗಡ್ಡೆ ಜಾತಿಯ ಹೂಗಳಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 60 ಸಾವಿರ ರೂ. ಮತ್ತು ದೊಡ್ಡ ರೈತರಿಗೆ 37,500 ರೂ. ಪ್ರೋತ್ಸಾಹಧನ ಸೌಲಭ್ಯ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ತೋಟಗಾರಿಕಾ ಇಲಾಖೆ ಕೇಂದ್ರಗಳನ್ನು ಸಂಪರ್ಕ ಮಾಡಬಹುದು ಅಥವಾ ಬೆಂಗಳೂರು ಕೇಂದ್ರ ಕಚೇರಿಯ ದೂ.ಸಂಖ್ಯೆ 080-22230060 ಸಂರ್ಪಸಬಹುದು.

 

 

  1. ಪಿಎಂ ಕಿಸಾನ್ ಸಮ್ಮಾನ್:

 

ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ದೇಶದ ಪ್ರತಿಯೊಬ್ಬ ರೈತನಿಗೂ ವಾರ್ಷಿಕ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ನೀಡಿದರೆ, ರಾಜ್ಯ ಸರ್ಕಾರ 4 ಸಾವಿರ ರೂ. ನೀಡುತ್ತದೆ. ರೈತರ ಖಾತೆಗೆ ಪ್ರತಿ 3 ತಿಂಗಳಿಗೊಮ್ಮೆ 2,500 ರೂ. ಜಮೆಯಾಗುತ್ತದೆ. ಈವರೆಗೆ 51 ಲಕ್ಷ ಅರ್ಜಿ ಬಂದಿದ್ದು, ಅದರಲ್ಲಿ 50.13 ಲಕ್ಷ ರೈತರ ನೋಂದಣಿ ಯಶಸ್ವಿಯಾಗಿದೆ. ಈಗಾಗಲೇ ಕೇಂದ್ರದಿಂದ 47 ಲಕ್ಷ ರೈತರ ಖಾತೆಗೆ 2,650 ಕೋಟಿ ರೂ. ಸಂದಾಯ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ 39 ಲಕ್ಷ ರೈತರಿಗೆ 785 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಈವರೆಗೂ ನೋಂದಣಿ ಮಾಡಿಸದವರು ನೋಂದಣಿಯಾಗಿ ಫಲಾನುಭವಿಗಳಾಗಬಹುದು. ಮಾಹಿತಿಗೆ ಸಹಾಯವಾಣಿ -18001801551.

  1. ಹಸು ಸಾಕಲು ಸಹಾಯಧನ:

ಪಶು ಭಾಗ್ಯ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗರಿಷ್ಠ 1.20 ಲಕ್ಷ ರೂ.ವರೆಗೆ ವಾಣಿಜ್ಯ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಸಿಗಲಿವೆ. ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.50 ಹಾಗೂ ಸಾಮಾನ್ಯ ವರ್ಗದವರಿಗೆ ಶೇ.33 ಸಹಾಯಧನ ಒದಗಿಸಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 5 ರಾಸುಗಳನ್ನು ಕೊಳ್ಳಲು, ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗೆ 18004250012 ಸಂರ್ಪಸಬಹುದು.

  1. ಬೇಸಾಯಕ್ಕೆ ‘ಕೃಷಿ ಭಾಗ್ಯ’:

ಮಳೆ ಆಶ್ರಿತ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆ ರೂಪಿಸಿದ್ದು, ಮಳೆ ನೀರನ್ನು ಸಂಗ್ರಹಿಸಿ ಕೃಷಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಇದರಲ್ಲಿ ಕೃಷಿ ಹೊಂಡ ರಚನೆ ಹಾಗೂ ನೀರು ಇಂಗದಂತೆ ಪಾಲಿಥೀನ್ ಹೊದಿಕೆಯನ್ನು ನೀಡಲಾಗುತ್ತಿದೆ. ಸಾಮಾನ್ಯವರ್ಗದ ರೈತರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ರೈತರಿಗೆ ಶೇ.90 ಸಹಾಯಧನ ದೊರೆಯುತ್ತದೆ. ಕೃಷಿ ಹೊಂಡದಿಂದ ನೀರು ಎತ್ತುವ ಡೀಸೆಲ್ ಪಂಪ್ ಕೊಳ್ಳಲು ಸಾಮಾನ್ಯವರ್ಗಕ್ಕೆ ಶೇ.50, ಮೀಸಲಾತಿಗೆ ಶೇ.80 ಹಾಗೂ ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಖರೀದಿಸಲು ಎಲ್ಲ ವರ್ಗದ ರೈತರಿಗೂ ಶೇ.50 ಪ್ರೋತ್ಸಾಹಧನ ನೀಡಲಾಗುತ್ತದೆ. ಮಾಹಿತಿಗೆ ಸಹಾಯವಾಣಿ- 1