ಬೆಳೆಗಳನ್ನು ಬೆಳೆಯುವ ಜವಾಬ್ದಾರಿ ಮಣ್ಣಿನದು. ಮಣ್ಣಲ್ಲಿ ಆ ಸಾಮರ್ಥ್ಯ ಇರುವಂತೆ ಮಾಡುವ ಜವಾಬ್ದಾರಿ ನಮ್ಮದು. ಅಲ್ಲವೇ. . . ಹಾಗಿದ್ದಲ್ಲಿ ಮಣ್ಣಲ್ಲಿ ಬೆಳೆ ಬೆಳೆಸುವ ಸಾಮರ್ಥ್ಯ ಬರುವಂತೆ ಮಾಡುವುದು ಹೇಗೆ ?
ಮಣ್ಣಲ್ಲಿ ಸಾವಯವ ಅಂಶ – ತೇವಾಂಶ – ಜೀವಾಂಶ ಸದಾಕಾಲ ಇರುವಂತೆ ಮಾಡುವುದೇ ಮಣ್ಣನ್ನು ಬೆಳೆಸುವುದು ಎಂದರ್ಥ. ಇವೆಲ್ಲವನ್ನೂ ಮಣ್ಣು ಹೊದಿಕೆ ಮೂಲಕ ಮಾಡಬಹುದು.
Maintaining 3 Ms in the soil : MATTER (organic) – MOISTURE (soil) – MICROBES (soil). All these can be achieved with MULCHING.
ನಮಗೆ ಗೊತ್ತಿರಲಿ. ಮಣ್ಣುಜೀವಾಣುಗಳಿಗೆ ಸೂರ್ಯನೇ ಮೊದಲ ವೈರಿ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳೇ ಎರಡನೇ ವೈರಿ.
ಹೊಲ – ಗದ್ದೆ – ತೋಟಗಳಲ್ಲಿ ಸದಾಕಾಲ ನಿಂತುಬಿಡುವ ಕೆಸರು ನೀರೇ ಮೂರನೇ ವೈರಿ. ಗಿಡಗಳನ್ನು ಬೆಳೆಸಲು ಮಣ್ಣಲ್ಲಿ ತೇವಾಂಶ ಇರಬೇಕೇ ಹೊರತು ನೀರಲ್ಲ.
- ಆದಷ್ಟೂ ಯಾಂತ್ರಿಕ ಉಳುಮೆ ಮಾಡುವುದನ್ನು ನಿಲ್ಲಿಸಿ. ಕೆಳಮಣ್ಣನ್ನು
ಕದಲಿಸಬೇಡಿ. ಮಣ್ಣು ಜೀವಿಗಳು ಮಣ್ಣಲ್ಲಿ ಸಂಚರಿಸುತ್ತಾ ತಾವೇ ಸಹಜವಾಗಿ
ಉಳುಮೆ ಮಾಡಿಬಿಡುತ್ತವೆ. ಇದನ್ನೇ ಮಣ್ಣಿನ ಜೈವಿಕ ಉಳುಮೆ ಎನ್ನುವುದು.
- ಮಣ್ಣಲ್ಲಿ ಜೀವಮಂಡಲ ಇರುವಂತೆ ಮಾಡಲು ಕಾಂಪೋಸ್ಟ್ ಬಳಸಿ
- ಮಣ್ಣಲ್ಲಿ ಸಾವಯವ ವಸ್ತುಗಳು ಸದಾ ಇರುವಂತೆ ಮಾಡಲು ಮಣ್ಣು ಹೊದಿಕೆ ಮಾಡಿ
- ಆದಷ್ಟೂ ಬಹುಬೆಳೆಗಳನ್ನು ಬೆಳೆಸಿ – ಮಣ್ಣ ಮೇಲೆ ವೈವಿಧ್ಯಮಯ ಬೆಳೆಗಳಿದ್ದಷ್ಟೂ
ಮಣ್ಣೊಳಗೆ ವೈವಿಧ್ಯಮಯ ಜೀವಜಂತುಗಳಿರುತ್ತವೆ. Growing diversified
plants above the soil is building diversified soil organisms
below the soil.
- ಮಣ್ಣ ಮೇಲೆ ಸದಾಕಾಲ ಯಾವುದಾದರೂ ಗಿಡಗಳು ಇರುವಂತೆ ನೋಡಿಕೊಳ್ಳಿ.
ಅವು ‘ ಕಳೆ ಗಿಡಗಳಾಗಿದ್ದರೂ ಸರಿಯೇ.
- ಮಣ್ಣಿನ ಸ್ಥಿತಿಯನ್ನು ಸುಧಾರಿಸಲು ಹಸಿರೆಲೆ ಗೊಬ್ಬರವನ್ನು ಬಳಸಿ
- ಮಣ್ಣಿಗೆ ಮೈಕೋರೀಝಾ ಫಂಗೀ ಜೀವಾಣುವನ್ನು ಸೇರಿಸಿ
- ಫಂಗೀಗಳಿಗೆ ಆಹಾರವಾಗಿ ಮರದ ಹೊಟ್ಟು – ತೊಗಟೆ ಇತ್ಯಾದಿಗಳನ್ನು ಬಳಸಿ
- ಮಣ್ಣು ತನ್ನಷ್ಟಕ್ಕೇ ತಾನೇ ಫಲವತ್ತುಗೊಳ್ಳುವಂತಹ ವ್ಯವಸ್ಥೆಯನ್ನು ನಿಮ್ಮ ಹೊಲ
– ತೋಟಗಳಲ್ಲಿ ನಿರ್ಮಿಸಿ.
No comments!
There are no comments yet, but you can be first to comment this article.