ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅತ್ಯೂತ್ತಮ ಉದಾಹರಣೆ ಧರ್ಮಣ್ಣ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ.
ಪ್ರಾರಂಭದಲ್ಲಿ ಗುಡ್ಡಗಾಡು ಸಮೀಪದ ತೋಟವಾಗಿದ್ದು, ಇದನ್ನು ಸಮತೋಲನವಾಗಿಸಲು ಇವರು ಸು.೪೦೦ ಟ್ರಾಕ್ಟರ್ ಮಣ್ಣು, ನೂರು ಗಂಟೆಗಳ ಜೆಸಿಬಿ ಬಳಸಿ, ವಿದ್ಯೂತ್ ಸಂಪರ್ಕಕ್ಕೆ ಖರ್ಚುಮಾಡಿದ್ದು ಬರೋಬ್ಬರಿ ಒಂದುವರೆ ಲಕ್ಷ ರೂಪಾಯಿಗಳು, ಒಂದು ಲಕ್ಷರೂ ನಿಂದ ಕೊಳಗೆ ಬಾವಿ ಕೊರಸಿ ನೀರು ತರಸಿ, ಆರೇಳು ವರ್ಷಗಳಿಂದ ಇವರು ಈರುಳ್ಳಿ, ಶೇಂಗಾ, ಹತ್ತಿ ಇತರೆ ಬೆಳೆಗಳು ತುಂಬಾ ನಷ್ಟವನ್ನುಂಟು ಮಾಡಿದ್ದವು. ನಾಲ್ಕು ವರ್ಷಗಳ ಹಿಂದೆ ಇವರ ತೋಟದಲ್ಲಿ ಒಂದುವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದು ೧೫೦ಕ್ವಿಟಾಂಲ್, ಪ್ರತಿಕ್ವಿಂಟಾಲ್‌ಗೆ ೪೩೦೦ರೂ ನಂತೆ ಮಾರಾಟ ಮಾಡಿ ೬ಲಕ್ಷ ೪೫ಸಾವಿರ ಮೊತ್ತವಾಗಿ ತಾನೂ ಮಾಡಿರುವ ಸಾಲವನ್ನು ತೀರಿಸಿದರು. ನಾಲ್ಕು ವರ್ಷಗಳಿಂದ ಇಷ್ಟೊಂದುದೊಡ್ಡ ಮಟ್ಟದಲ್ಲಿ ಬೆಳೆದ ಬೆಳೆ ಇದೆ ಕೊನೆಯದಾಗಿತ್ತು.

 

ಆ ನಂತರದ ನಾಲ್ಕು ವರ್ಷಗಳ ಕಾಲ ಯಾವುದೇ ಬೆಳೆ ಸಂಪೂರ್ಣವಾಗಿ ನಷ್ಟವನ್ನುಂಟು ಮಾಡಿದ್ದವು. ಇದರಿಂದ ಧರ್ಮಣ್ಣ ಜೀವನದಲ್ಲಿ ನೊಂದಿದ್ದರು. ಕೃಷಿಯ ಮೇಲಿನ ನಂಬಿಕೆ ಕಡಿಮೆಯಾಗಿತ್ತು. ಇದರಿಂದ ಸಾಲದ ಮೊತ್ತ, ಬಡ್ಡಿ ದಿನೇ ದಿನೇ ಹೆಚ್ಚಾಗುತ್ತು ಹೋಯಿತು. ಚಿಂತಾಕ್ರಾಂತಿಯಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿತ್ತು.
ಕೆಲ ದಿನಗಳ ನಂತರ ಪಕ್ಕದ ಗ್ರಾಮ ಜೆ.ಬಿಹಳ್ಳಿ ಸರೋವರ ಅವರ ಕನಕಾಂಬರ ತೋಟವನ್ನು ನೋಡುತ್ತಿ ದ್ದಧರ್ಮಣ್ಣ, ನಾನೇಕೆ ಕನಕಾಂಬರ ಬೆಳೆ ಬೆಳೆಯಬಾರದು ಎಂದು ಆಲೋಚಿಸಿದರು. ಇದೇ ಆಲೋಚನೆಯನ್ನು ಕಲವೇ ದಿನಗಳಲ್ಲಿ ಕಾರ್ಯರೂಪಕ್ಕೆತಂದರು. ನಂತರಎರಡುಎಕರೆ ಕನಕಾಂಬರ ಹೂವಿನ ಬೀಜವನ್ನು ನೆಟ್ಟರು. ಡ್ರಿಪ್ ಮಾಡಿಸಿ, ನೀರು ಹಾಯಿಸಿದರು. ಔಷದಿ, ಗೊಬ್ಬರಗಳನ್ನು ಸರ್ಮಪಕವಾಗಿ ನಿರ್ವಹಿಸಿದರು. ಆರು ತಿಂಗಳಿಗೆ ಹೂ ಬಿಡಲು ಪ್ರಾರಂಭಿಸಿತು. ಆರಂಭದಲ್ಲಿ ಸು.೫ ಕೆ.ಜಿಇಂದ ಶುರುವಾಗಿ ಇದೀಗ ೪೦ಕ್ಕೂ ಹೆಚ್ಚು ಕೆ.ಜಿ ಹೂ ಬಿಡುತ್ತಿದೆ. ಹೂ ಬಿಟ್ಟ ಕೇವಲ ೬ ತಿಂಗಳಿಗೆ ಒಟ್ಟು ೭ಲಕ್ಷ ೨೦ಸಾವಿರ ಮೊತ್ತ ಬಂದಿದೆ. ಇದರಿಂದ ಧರ್ಮಣ್ಣ ಜೀವನ ಸುಂದರವಾಗಿ ಅರ್ಥಪೂರ್ಣವಾಗಿ ಸಾಗುತ್ತಿದೆ.
ಪ್ರಾರಂಭದಲ್ಲಿ ಪಟ್ಟ ಕಷ್ಟ-ಕಾರ್ಪಣ್ಯಗಳು: ಧರ್ಮಣ್ಣನ ತೋಟದಲ್ಲಿ ಕಲ್ಲು-ಗುಂಡುಗಳೇ ಅತಿ ಹೆಚ್ಚಾಗಿದ್ದರಿಂದ ೨೦೦೦ ಇಸವಿಯಲ್ಲಿ ಭೂಮಿಯನ್ನು ಹದಗೊಳಿಸಲು ಎರಡು ಗಡಾಗಿಗಳನ್ನು ಮುರಿಯುವಷ್ಟು ಕೆಲಸ ಮಾಡಿ, ಸಾಹಸ ಮೆರದಿದ್ದರು. ಆಗಿನ್ನು ಕೊಳಗೆ ಬಾವಿ ಇರಲಿಲ್ಲ. ವಾಸವಿರಲು ಸ್ವತಃ ಮನೆಯಿರಲಿಲ್ಲ. ಅಂತಹ ಸಂದರ್ಭದಲ್ಲಿ ಬೆವರು ಸುರಿಸಿ, ಕಷ್ಟಪಟ್ಟು ಭೂಮಿಯನ್ನು ಸಿದ್ದಗೊಳಿಸಿ ಹುಳುಮೆಗೆ ಯೋಗ್ಯವಾಗುವಂತೆ ಮಾಡಿದರು. ವಿದ್ಯೂತ್ ಸಂಪರ್ಕವಿರಲಿಲ್ಲ. ಅಲ್ಲಿಲ್ಲಿ ಸಾಲಸೋಲ ಮಾಡಿ ೬ಜರ್ಸಿ ಆಕಳು ಕಟ್ಟಿ, ಅದರ ಹಾಲಿನಿಂದ ಬಂದದುಡ್ಡಿನಲ್ಲಿ ಭೂಮಿಯನ್ನು ಉಳುಮೆಗೆ ಯೋಗ್ಯವಾಗುವಂತೆ ಮಾಡಿದರು. ನಂತರಒಂದೊಂದೆ ಬೆಳೆ ಬೆಳೆದು ಮನೆ ಕಟ್ಟಿದರು.ಸಾಲಗಳನ್ನು ತೀರಿಸುತ್ತಾ ನಡೆದರು. ಪ್ರಸ್ತುತಎಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಮೆಟ್ಟಿನಿಂತು ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಧರ್ಮಣ್ಣ ಇಷ್ಟೇಲ್ಲಾ ಕೃಷಿಯಲ್ಲಿ ಸಾಧನೆ ಮಾಡಲು ಇವರಿಗೆ ಬೆನ್ನೆಲೆಬು, ಮಾರ್ಗದರ್ಶಕರು, ಸಲಹೆಗಾರರು, ಸದಾ ಕಾಲ ಸ್ಪೂರ್ತಿಯಾಗಿದ್ದವರು ಅವರ ಓಬಳಾಪುರ ಗ್ರಾಮದ ದೊಡ್ಡಮಜಲ್ಲಿರತ್ನಮ್ಮ.
ಚಿತ್ರದುರ್ಗಮೊಳಕಾಲ್ಮೂರು ತಾಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ. ಅದೇನೋ ಬಂಡು ಧೈರ್ಯದಿಂದ ಎರಡುಎಕರೆ ಕನಕಾಂಬರ ಹೂವಿನ ಬೆಳೆ ಬೆಳೆಯಲು ತೀರ್ಮಾನಿಸಿದ. ಧರ್ಮಣ್ಣ ಕೆಲವರ ಸಲಹೆ ಪಡೆದು ಬೀಜ ಹಾಕಿಯೇ ಬಿಟ್ಟರು. ಕನಕಾಂಬರ ಹೂವು ಪ್ರಾರಂಭದಲ್ಲಿ ಹೂವು ಬರಲು ನಾಲ್ಕೈದು ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಧರ್ಮಣ್ಣ ಎಲ್ಲಾಗೊಬ್ಬರ, ಔಷದಿ, ಸಿಂಪಡಿಸಿ ಸುಮಾರು ನಾಲ್ಕೈದು ತಿಂಗಳು ಕಳೆದರು ಕೂಡ ಬೆಳೆ ಕೈಗೆ ಬರದೇ ಇರುವುದು ಕಂಗಾಲಾಗುವಂತೆ ಮಾಡಿತ್ತು. ಇದರಿಂದ ಧರ್ಮಣ್ಣನ ಮುಖವು ಬಾಡಿ ಹೋಗಿತ್ತು. ಹಾಗೇ ದಿನಕಳೆದವು. ಆರು ತಿಂಗಳ ನಂತರ ದಿನೇ ದಿನೇ ಹೂವು ಬರಲು ಪ್ರಾರಂಭವಾಯಿತು.ಈಗ ಧರ್ಮಣ್ಣನ ಮುಖವು ಸ್ವಲ್ಪ ಅರಳಿತು.
೩೦ಜನರಿಗೆಕೂಲಿಕೆಲಸ: ಪಕ್ಕುರ್ತಿಗ್ರಾಮದ ೩೦ಕ್ಕು ಹೆಚ್ಚು ಮಹಿಳೆಯರಿಗೆ ಪ್ರತಿ ನಿತ್ಯಧರ್ಮಣ್ಣನಕನಕಾಂಬರ ಹಾಗೂ ಅವರ ಈರುಳ್ಳಿ, ಮೆಣಸಿನಕಾಯಿತೋಟದಲ್ಲಿ ಕೆಲಸ ಸಿಗುತ್ತದೆ. ಮಳೆ ಬಾರದೆ ಬೆಳೆ ಬೆಳಯದ ಸಂದರ್ಭದಲ್ಲಿ, ಜನರು ಮಹಾನಗರಗಳತ್ತ ವಲಸೆ ಹೋರಟಿದ್ದಾರೆ.ಇಂತಹ ಸನ್ನಿವೇಶದಲೂ ಕೂಡ ಧರ್ಮಣ್ಣ ೩೦ ಮಹಿಳೆಯರಿಗೆ ಪ್ರತಿನಿತ್ಯ ಕೆಲಸ ಕೊಟ್ಟುಅವರ ಪಾಲಿನ ಮಹಾತ್ಮನಾಗಿದ್ದಾರೆ. ಈ ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳಲ್ಲಿ ಒಂದೇ ತೋಟದಲ್ಲಿ ಇಷ್ಟು ಜನಕ್ಕೆಯಾರೂ ಕೆಲಸ ಕೊಡುತ್ತಿಲ್ಲ. ಆದರೆ ಧರ್ಮಣ್ಣ ಕೆಲಸ ನೀಡಿ, ಮಾನವತ್ವ ಮೆರೆದಿದ್ದಾರೆ. ಇವರೆಲ್ಲರೂ ಒಂದೇ ಫ್ಯಾಮಿಲಿಯಂತೆ ಇರುವುದು ನಿಜಕ್ಕೂ ಅದ್ಬುತವಾಗಿದೆ. ಗೌರಮ್ಮ, ಮಂಜಮ್ಮ, ನೀಲಮ್ಮ, ಅನಂತಮ್ಮ, ಸಾಕಮ್ಮ, ತಿಮ್ಮಕ್ಕ, ಶಂಕ್ರಮ್ಮ, ಹೇಮಾಕ್ಷಿ, ಶ್ರೀದೇವಿ, ಅಂಜಿನಮ್ಮ, ಹೆಚ್.ಶ್ರೀದೇವಿ, ಮುಕ್ಕಮ್ಮ, ಲಕ್ಷ್ಮಿ, ಮುಂತಾದವರು ಪ್ರತಿನಿತ್ಯ ಹೂ ಬಿಡಿಸುವವರು.
ಆಟೋದಲ್ಲಿ ಪ್ರಯಾಣ:ತೋಟಕ್ಕೆ ಹೋಗಿ ಬರಲು ಸು.೩ಕಿ.ಮೀ ಇರುವುದರಿಂದ ಸ್ವತಃಧರ್ಮಣ್ಣನೇ ಒಂದು ಆಟೋ ಖರೀದಿಸಿ ಪ್ರತಿನಿತ್ಯ ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಲು ಬರಲು ಬಳಸುತ್ತಾರೆ.
ಸಾವಯವಗೊಬ್ಬರಗಳ ಬಳಕೆ: ಕನಕಾಂಬರ ಹೂವಿನ ತೋಟಕ್ಕೆಯಾವುದೇರೀತಿಯ ಹಾನಿಕಾರಕ ಔಷದಿಗಳ ಸಿಂಪಡಣೆ ಮಾಡದೆ, ಸ್ವತಃದನದ ಕೊಟ್ಟಿಗೆ ಗೊಬ್ಬರವನ್ನು ಜೊತೆಗೆ ಸಾವಯವ ಗೊಬ್ಬರಗಳನ್ನು ಮಾತ್ರ ಬಳಸುತ್ತಾರೆ.
ನೀರಿನ ವ್ಯವಸ್ಥೆ: ಧರ್ಮಣ್ಣನ ತೋಟದಲ್ಲಿಒಂದು ಬೋರ್‌ವೆಲ್ ನೀರು ಬರುತ್ತದೆ. ಗುಡ್ಡಗಾಡುಸಮೀಪದ ಪ್ರದೇಶ ಹಾಗೂ ಸುತ್ತಮುತ್ತಲೂ ಸದಾ ಹಚ್ಚಹಸಿರಿನಿಂದ ಕೂಡಿರುವುದರಿಂದ, ತೋಟದ ಪಕ್ಕದಲ್ಲೇ ಹಳ್ಳ ಹರಿಯುವುದರಿಂದ ನೀರು ಸದಾ ಕಾಲ ಸಿಗುತ್ತವೆ. ಕುಡಿಯಲು ಸಹ ಯೋಗ್ಯವಾಗಿವೆ.
ದಿನಕ್ಕೆ ೪೦ಕ್ಕು ಹೆಚ್ಚು ಕೆ.ಜಿ ಹೂವು:ಪ್ರತಿನಿತ್ಯವೂಕನಕಾಂಬರ ೪೦ಕ್ಕೂ ಹೆಚ್ಚು ಕೆ.ಜಿ ಹೂವಾಗುತ್ತದೆ.ವೀರೇಶ್, ಮಂಜಣ್ಣ ಎಂಬ ಖರೀದಿದಾರರುತೋಟಕ್ಕೆ ಬಂದು ಹೂವನ್ನುತೆಗೆದುಕೊಂಡು ಹೋಗುತ್ತಾರೆ. ರೈತರಿಗೆ ಎಲ್ಲಾರೀತಿಯ ಅನುಕೂಲಗಳನ್ನು ಮಾಡಿಕೊಡುತ್ತಿದ್ದಾರೆ. ಅತಿಯಾಗಿ ಮಳೆಯಾದಾಗ ಮಾತ್ರ ಹೂವು ಹೆಚ್ಚುಕಡಿಮೆಯಾಗುತ್ತದೆ. ಪ್ರಾರಂಭದಲ್ಲಿ ೫ರಿಂದ ಪ್ರಾರಂಭವಾಗಿ ಪ್ರಸ್ತುತ ೪೦ಕ್ಕು ಹೆಚ್ಚು ಕೆ.ಜಿ ಹೂವಾಗುತ್ತದೆ. ಕೆ.ಜಿ ಹೂವಿಗೆ ೧೯೦ರೂ ನೀಡುತ್ತಾರೆ.
ಶ್ರೀಮತಿ ಶಕುಂತಲ ಅವರಸಹಕಾರ:ಧರ್ಮಣ್ಣ ಇಷ್ಟೇಲ್ಲಾ ಕನಕಾಂಬರ ಬೆಳೆದು ಹೆಸರುವಾಸಿಯಾಗಲು ಮುಖ್ಯ ಕಾರಣೀಕರ್ತರೆಂದರೆ ಅದುಅವರ ಶ್ರೀಮತಿ ಶಕುಂತಲ. ಅವರ ಸಹಕಾರದಿಂದಲೇ ಇಷ್ಟೇಲ್ಲಾ ಆಗಲು ಸಾಧ್ಯವಾಗಿದ್ದು. ಗೆದ್ದಾಗಖುಷಿಯನ್ನು ಹಂಚಿಕೊಂಡು, ಕಷ್ಟದ ಸಂದರ್ಭ ಸನ್ನಿವೇಶಗಳಲ್ಲಿ ಪತಿಗೆ ಧೈರ್ಯತುಂಬಿ ಮುನ್ನಡೆಸಿದ್ದು ಶಕುಂತಲ. ತೋಟದಲ್ಲಿ ಕೂಲಿಕೆಲಸಗಾರರ ನಿರ್ವಹಣೆ, ಕೆಲಸ ಮಾಡಿಸುವುದು ಎಲ್ಲವು ಶಕುಂತಲ ಅವರು ನೋಡಿಕೊಳ್ಳುತ್ತಾರೆ.
ನುಗ್ಗೆಕಾಯಿ ಬೆಳೆ:ಕನಕಾಂಬರ ೨ಎಕರೆ ತೋಟವಿದ್ದು, ಇದೇ ಬೆಳೆಯ ಜೊತೆಯಲ್ಲೇ ನುಗ್ಗೇಕಾಯಿ ಬೆಳೆಯನ್ನು ಬೇಳೆದಿದ್ದಾರೆ.ಈಗಾಗಲೆ ಒಂದು ಬೆಳೆಯನ್ನು ಬೆಳೆದಿದ್ದು, ಇದು ಸುಮಾರು ೮ಸಾವಿರ ರೂಪಾಯಿಗಳನ್ನು ಲಾಭತಂದುಕೊಟ್ಟಿದೆ.
ಆಲ್ ಕುಂಬಳೇಕಾಯಿ ಬೆಳೆ:ಇದೇ ಕನಕಾಂಬರತೋಟದ ಸುತ್ತಲೂ ಆಲ್ ಕುಂಬಳೆಕಾಯಿ ಬೆಳೆ ಬೆಳೆದಿದ್ದು ಇದು ಎರಡೇ ತಿಂಗಳಲ್ಲಿ ೩೦೦೦೦ ರೂಪಾಯಿಗಳಷ್ಟು ಬೆಳೆದಿದೆ. ಇದರಿಂದಲೂ ಇವರು ಸಾಕಷ್ಟು ಲಾಭಗಳನ್ನು ತಂದುಕೊಟ್ಟಿದೆ.

ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ರೈತರಿಗೆಗುರಿ ಮುಖ್ಯ. ಕನಕಾಂಬರ ಹೂವಿನ ಬೆಳೆ ನನಗೆ ಜೀವನದಲ್ಲಿ ತೃಪಿ ತಂದುಕೊಟ್ಟಿದೆ.ತೋಟ ನೋಡಿದಾಗಲೆಲ್ಲಾ ಮನಸ್ಸು ಉಲ್ಲಾಸಗೊಳ್ಳುತ್ತದೆ. ೩೦ಜನರಿಗೆ ಕೂಲಿ ನೀಡುವುದು ಅವರ ಜೀವನ ವೃದ್ಧಿಗೆ ಸಹಕಾರವಾಗಿದೆ.

– ಧರ್ಮಣ್ಣ
ಕನಕಾಂಬರ ಹೂವಿನ ಬೆಳೆಗಾರರು
ಪಕ್ಕುರ್ತಿ.
ಮೊಬೈಲ್ ನಂ: 9731165248

-ಬರಹಗಾರರು

– ಪ್ರಭಾಕರ.ಪಿ
ಓಬಳಾಪುರ, ರಾಂಪುರ.

ಮೊಬೈಲ್ ನಂ: 9980796846.