ಜಾನುವಾರುಗಳು ಈ ಗಿಡದ ಸೊಪ್ಪು ತಿಂದಾಗ ಹಲವಾರು ಖಾಯಿಲೆಗೆ ತುತ್ತಾಗುತ್ತವೆ. ಹಾಗಾಗಿ ರಾಸುಗಳು  ಈ ಗಿಡದ ಸೊಪ್ಪು ತಿನ್ನುವುದನ್ನು ಗಮನಿಸ ಬೇಕಾಗಿದೆ.

ವಾಯುವಿಳಂಗ ಗಿಡದ ಸೊಪ್ಪು ಸೇವಿಸಿದರೆ ಜಾನುವಾರುಗಳು ಸಾವನ್ನಪ್ಪುತ್ತವೆ. ಈ ವಾಯುವಿಳಂಗ ಮರಗಳ ನಡುವೆ ಹಾಗೂ ಸ್ವಲ್ಪ ತೇವಾಂಶ ಇರುವ ಜಾಗದಲ್ಲಿ ಹುಲುಸಾಗಿ ಬೆಳೆಯುತ್ತದೆ.

ಜಾನುವಾರುಗಳು ಈ ಗಿಡದ ಸೊಪ್ಪು ಸೇವಿಸಿದಾಗ ಅದು ವಿಷವಾಗಿ ಪರಿಣಮಿಸಿ, ಸಾವನ್ನಪ್ಪುತ್ತವೆ. ರೋಗದ ಪ್ರಾರಂಭಿಕ ಲಕ್ಷಣಗಳೆಂದರೆ, ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಮತ್ತು ಶರೀರದ ತಾಪಮಾನ ಕಡಿಮೆಯಾಗುತ್ತದೆ. ಈ ಹಂತದಲ್ಲಿ ಜಾನುವಾರುಗಳು ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸುತ್ತವೆ. ಆದ್ದರಿಂದ ನಿಮ್ಮ ರಾಸುಗಳನ್ನು ಈ ಗಿಡದ ಸೊಪ್ಪಿನ್ನು ತಿನ್ನುವುದನ್ನು ರಕ್ಷಿಸಿ