ಚಿತ್ರದುರ್ಗ: ಸಕರ್ಾರವು ಸುಸ್ಥಿರ ಕೃಷಿಗಾಗಿ ಹಲವು ಯೋಜನೆ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವುಗಳನ್ನು ಜನರಲ್ಲಿಗೆ ಕೊಂಡೊಯ್ಯಬೇಕೆಂದು ಕೃಷಿ ಅಭಿಯಾನದ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಹೊಸದುರ್ಗ  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಲಾ ಗಿರೀಶ್ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ ಹಾಗೂ ವಾತರ್ಾ ಇಲಾಖೆಯಿಂದ ಹಮ್ಮಿಕೊಳ್ಳಲಾದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬೇಕಾದ ಬೀಜ, ಗೊಬ್ಬರ ವಿತರಣೆಯ ಕೆಲಸವನ್ನು ಮಾಡಲಾಗಿದೆ. ಮತ್ತು ಕೃಷಿಯಲ್ಲಿ ಯಾಂತ್ರೀಕರಣ ಸೌಲಭ್ಯ ಕಲ್ಪಿಸಲು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಲ್ಪಿಸಲಾಗಿರುವ ಆಧುನಿಕ ಕೃಷಿ ಯಂತ್ರಗಳ ಉಪಯೋಗ ಮಾಡಿಕೊಳ್ಳುವ ಮೂಲಕ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಉತ್ತಮ ಕೃಷಿ ಕೈಗೊಳ್ಳಬಹುದಾಗಿದೆ. ಈ ರೀತಿ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಮತ್ತೋಡು ಜಿಲ್ಲಾ ಪಂಚಾಯತ್ ಸದಸ್ಯೆ ಚೇತನ ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅನೇಕ ಸಂಶೋಧನೆಗಳ ಮೂಲಕ ಕೃಷಿಯಲ್ಲಿ ಹೊಸ ಹೊಸ ಪದ್ದತಿಗಳ ಬಗ್ಗೆ ಪರಿಚಯ ಮಾಡಿಸಲಾಗಿದೆ. ಕಡಿಮೆ ಜಮೀನಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆಯಲು ಅರಿವು ಮೂಡಿಸಲು ಅಭಿಯಾನ ಸಹಕಾರಿಯಾಗಿದ್ದು ಇದರ ಉಪಯೋಗ ಪಡೆಯುವ ಮೂಲಕ ಅನ್ನಬಾಂಧವರಾಗಿ ಎಂದು ರೈತರಿಗೆ ಕರೆ ನೀಡಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಡಾ; ರುದ್ರೇಗೌಡ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ ಬಿತ್ತನೆಗೂ ಪೂರ್ವದಲ್ಲಿ ಬೀಜೋಪಚಾರ ಮಾಡಿಕೊಳ್ಳುವ ವಿಧಾನ ಮತ್ತು ಬೀಜದ ಆಯ್ಕೆ, ಕೊಟ್ಟಿಗೆ ಗೊಬ್ಬರದ ಉಪಯೋಗದ ಬಗ್ಗೆ ಭೂಮಿ ಜೀವಂತವಾಗಿರಲು ಇದಕ್ಕಾಗಿ ಯಾವ ಯಾವ ಪೋಷಕಾಶಂಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.
ವಿವಿಧ ಬ್ಯಾಂಕ್ಗಳ ತಾಲ್ಲೂಕು ಮಟ್ಟದ ಹಣಕಾಸು ಶಿಕ್ಷಣದ ಸಲಹೆಗಾರರಾದ ಕಾಂತರಾಜ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಸಹಯೋಗದಲ್ಲಿ ಕೃಷಿ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಈ ಹಿಂದಿನ ವಿಮೆ ಪದ್ದತಿಗಿಂತ ಸುಧಾರಣಾ ಕ್ರಮವಾಗಿ ಪ್ರಧಾನಮಂತ್ರಿಗಳ ಫಸಲ್ ಭಿಮಾ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಜಾರಿಗೆ ತರಲಾಗಿದೆ. ರೈತರು ಶೇ 2 ರಷ್ಟು ವಿಮಾ ಕಂತು ಪಾವತಿ ಮಾಡಿದಲ್ಲಿ ಉಳಿದ ಶೇ 8 ರಷ್ಟು ಸಕರ್ಾರ ಭರಿಸಲಿದೆ. ಪಹಣಿ, ಬೆಳೆ ದೃಢೀಕರಣ ಪತ್ರ, ಆಧಾರ್ ಕಾಡರ್್ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಸೇವಾ ಬ್ಯಾಂಕ್, ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ವಿಮೆಗೆ ನೊಂದಣಿ ಮಾಡಿಸಬಹುದಾಗಿದೆ. ಮತ್ತು ಮಾಹಿತಿಗೆ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿನ ಆಥರ್ಿಕ ಸಲಹಾ ಕೇಂದ್ರವನ್ನು ಸಂಪಕರ್ಿಸಬಹುದಾಗಿದೆ ಎಂದರು.
ಸಹಾಯಕ ಕೃಷಿ ನಿದರ್ೇಶಕರಾದ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ತಾಲ್ಲೂಕಿನಲ್ಲಿ ಮತ್ತೋಡು ಗ್ರಾಮದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರಗಳ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಸುಮಾರು 1700 ರೈತರು ಬಾಡಿಗೆ ಪಡೆದಿದ್ದು ಇದರಿಂದ ಸುಮಾರು 19 ಲಕ್ಷ ಸಂಗ್ರಹ ಮಾಡಲಾಗಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಸೇವಾ ಕೇಂದ್ರವಾಗಿದೆ. ತಾಲ್ಲೂಕಿನಲ್ಲಿ ಹೆಚ್ಚಾಗಿ ರಾಗಿ, ಜೋಳ, ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಕೃಷಿ ಕಾಮರ್ಿಕರ ಕೊರತೆಯಿಂದ ಈ ಬೆಳೆಗಳ ಕಟಾವು ಮಾಡುವಾಗ ಹೆಚ್ಚು ಕೂಲಿಯನ್ನು ನೀಡಬೇಕೆಂದು ಹಲವು ಕೃಷಿಕರು ರಾಗಿ, ಜೋಳ ಲಾಭದಾಯಕವಲ್ಲ ಎಂದುಕೊಂಡಿದ್ದಾರೆ. ಈ ಬೇಡಿಕೆಯನ್ನು ಪರಿಗಣಿಸಿ ಇಲಾಖೆಯಿಂದ ರಾಗಿ ಒಕ್ಕಣೆಯಂತ್ರ ಮತ್ತು ಬಹುಬೆಳೆ ಒಕ್ಕಣೆ ಯಂತ್ರಗಳನ್ನು ಪರಿಚಯಿಸಲಾಗಿದೆ. ಕೃಷಿಯಲ್ಲಿ ಈ ಯಂತ್ರಗಳ ಬಳಕೆ ಮಾಡಿಕೊಂಡು ಕೃಷಿ ಕಾಮರ್ಿಕರ ಕೊರತೆಯನ್ನು ನೀಗಿಸಿಕೊಳ್ಳಬಹುದಾಗಿದೆ ಎಂದ ಅವರು ಕೃಷಿಯಲ್ಲಿ ಹಲವು ತಾಂತ್ರಿಕ ಮಾಹಿತಿ ಮತ್ತು ಸೇವೆಗಾಗಿ ರೈತರು ಇಲಾಖೆಯೊಂದಿಗೆ ಒಡನಾಟವಿಟ್ಟುಕೊಳ್ಳಬೇಕೆಂದರು.
ಕೃಷಿಭಾಗ್ಯ ಯೋಜನೆಯಡಿ ಪಾಲಿಹೌಸ್ ನಿಮರ್ಾಣ ಮಾಡಿಕೊಂಡು ಕಾಣರ್ೀಶಿಯಾ ಮತ್ತು ಜಬರ್ೇರಿಯಾ ಹೊ ಬೆಳೆದು ಮಾದರಿಯಾದ ರೊಪ್ಪದ ಸಣ್ಣತಿಮ್ಮಪ್ಪ ಮತ್ತು ಕೃಷಿ ಯಂತ್ರಗಳ ಬಾಡಿಗೆ ಸೇವಾ ಕೇಂದ್ರದ ಉಪಯುಕ್ತತೆ ಕುರಿತು ರೈತರಾದ ರಂಗಸ್ವಾಮಿ ಮತ್ತು ರಾಮದಾಸಪ್ಪ ತಮ್ಮ ಅನಿಸಿಕೆ ಹಂಚಿಕೊಂಡರು.
ವಾತರ್ಾ ಇಲಾಖೆಯಿಂದ ಕೃಷಿ ಅಭಿಯಾನ ಕುರಿತು ಮುದ್ರಿಸಿರುವ ಕರಪತ್ರವನ್ನು ಜಿಲ್ಲಾ ಪಂಚಾಯತ್ ಸದಸ್ಯ ಅನಂತ್ ಬಿಡುಗಡೆ ಮಾಡಿದರು. ಕೃಷಿ ಅಭಿಯಾನದ ಅಂಗವಾಗಿ ಕೃಷಿ ವಸ್ತುಪ್ರದರ್ಶನ, ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಮತ್ತು ಕಲಾವಿದರಿಂದ ಜಾಗೃತಿಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.