ಚಿತ್ರದುರ್ಗ: ಚಿತ್ರದುರ್ಗ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನ ರೈತ ಫಲಾನುಭವಿಗಳಿಗೆ ಸಹಾಯಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನ.

ಪ್ರಸಕ್ತ ವರ್ಷದ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಲ್ಲಿ ಹೈಬ್ರಿಡ್ ತರಕಾರಿ, ಬಾಳೆ, ದಾಳಿಂಬೆ, ಮಾವು, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್‍ಹೌಸ್, ಹಸಿರುಮನೆ, ವೈಯಕ್ತಿಕ ಕೃಷಿಹೊಂಡ, ಸಮುದಾಯ ಕೃಷಿಹೊಂಡ, ಯಾಂತ್ರೀಕರಣ, ಮಲ್ಚಿಂಗ್ ಮತ್ತು ಪಕ್ಷಿನಿರೋಧಕ ಬಲೆ ಅಳವಡಿಕೆಯಂತಹ ಚಟುವಟಿಕೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ  ಜು. 30 ರ ಒಳಗಾಗಿ ಸಲ್ಲಿಸಬಹುದು.