ಚಿತ್ರದುರ್ಗ: ತೋಟಗಾರಿಕೆ ಅಭಿವೃದ್ದಿಗಾಗಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳ ಸಸ್ಯಗಾರ ಸ್ಥಾಪನೆಯಲ್ಲಿ ಸೀಬೆ, ಗೋಡಂಬಿ ಹಾಗೂ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳು, ಆಯ್ದ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆಯಡಿ ಹಣ್ಣಿನ ಬೆಳೆ ಬಾಳೆ, ದಾಳಿಂಬೆ, ಹೂವಿನ ಬೆಳೆಯಲ್ಲಿ ಸುಗಂಧರಾಜ, ಗ್ಲಾಡಿಯೋಲಾಸ್, ಆಸ್ಟರ್, ಗುಲಾಬಿ, ಚೆಂಡು ಹೂ, ಸೇವಂತಿಗೆ ತೋಟದ ಬೆಳೆಗಳು ಕೋಕೋ, ಸಾಂಬಾರು ಬೆಳೆಗಳು, ಕಾಳುಮೆಣಸು, ಸಮುದಾಯ, ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ, ಸಂರಕ್ಷಿತ ಬೇಸಾಯ ಪಾಲಿಮನೆ, ನೆರಳು ಪರದೆಮನೆ, ಮಲ್ಚಿಂಗ್, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆಗೆ ಸಹಾಯಧನ ಪಡೆಯಬಹುದಾಗಿದೆ.
ಮತ್ತು ತೋಟಗಾರಿಕೆಯಲ್ಲಿ ಯಾಂತ್ರೀಕರಣ ೨೦ ಪಿಟಿಒ ಹೆಚ್‌ಪಿ ಸಾಮರ್ಥ್ಯಕ್ಕಿಂತ ಕಡಿಮೆ ಟ್ರ್ಯಾಕ್ಟರ್ ಹಾಗೂ ೮ ಹೆಚ್‌ಪಿ ಸಾಮರ್ಥ್ಯಕ್ಕಿಂತ ಕಡಿಮೆಯ ಪವರ್ ಟಿಲ್ಲರ್, ಕೊಯ್ಲೋತ್ತರ ನಿರ್ವಹಣೆಯಡಿ ಪ್ಯಾಕ್‌ಹೌಸ್, ಈರುಳ್ಳಿ ಶೇಖರಣಾ ಘಟಕ, ಹಣ್ಣು ಮಾಗಿಸುವ ಘಟಕ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗಾಗಿ ಮೂಲಭೂತ ಸೌಕರ್ಯಗಳ ಸ್ಥಾಪನೆ, ಗ್ರಾಮೀಣ ಮಾರುಕಟ್ಟೆ, ರೀಟೈಲ್ ಮಾರುಕಟ್ಟೆ, ಎರೆಹುಳು ಘಟಕ, ಬಯೋಡೈಜೆಸ್ಟರ್ ಕಾರ್ಯಕ್ರಮ ಹಾಗೂ ರೈತರ ಹೊರ ರಾಜ್ಯ ಅಧ್ಯಯನ ಪ್ರವಾಸ ಸೌಲಭ್ಯವನ್ನು ಪಡೆಯಬಹುದಾಗಿದೆ.
ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಶೇ ೨೫ ರಿಂದ ೫೦ ರಷ್ಟು ಸಹಾಯಧನ ನೀಡಲು ಅವಕಾಶ ಇದ್ದು ರೈತರು, ಉದ್ಯಮಿಗಳು, ಸಂಘ, ಸಂಸ್ಥೆಯವರು ಯೋಜನೆಯ ಲಾಭ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಬಾಲಕೃಷ್ಣ ತಿಳಿಸಿದ್ದಾರೆ