ಭರಣಿ, ರೋಹಿಣಿ ಯಿಂದ ಮುಂಗಾರು ಮಳೆ ಪ್ರಾರಂಭ: ಈ ಮೇಳೆ ಬಂದ್ರೆ ಮುಂಗಾರಿ ಜೋಳ, ಎಳ್ಳು, ಬೊಕಡ ಹತ್ತಿ, ಔಡಲ, ತೊಗರಿ, ಹಲಸಂದಿ, 3 ತಿಂಗಳ ಹೆಸರು, ಸೂರ್ಯಕಾಂತಿ, ಕುಸುಬೆ,
ಮೃಗಶಿರ ಹಾರಿದ್ರ ಮಳೆಯಲ್ಲಿ ಕಡ್ಲೆಕಾಯಿ
ದೊಡ್ಡಹುಸ್ಲೆಗೆ  ದೊಡ್ಡ ಸಜ್ಜೆ,  ಸಣ್ಣ ಹುಸ್ಲೆಗೆ ಸಣ್ಣ ಸಜ್ಜೆ ಬಿತ್ತನೆ
ಮೇಘ ಹುಬ್ಬೆ ಮಳೆ: ನವಣೆ, ಸಣ್ಣ ಹತ್ತಿ, ಕಡ್ಲೆಕಾಯಿ
ಮೋಘ ಹುಬ್ಬೆ ಬರದೆ ಇದ್ದರೆ ಬರಗಾಲ ಬರುತ್ತದೆ ಮತ್ತು ಹಾಕಿದಂತ ಬೆಳೆ ಇಳುವರಿ ಕಡಿಮೆ ಆಗುತ್ತದೆ.
ಅನುರಾಧ ಮಳೆ: ದೀಪಾವಳಿ ಆದ ನಂತರ ರಾಗಿ ಬಿತ್ತಿದರೆ ಶಿವರಾತ್ರಿಗೆ ಕಟಾವ್ ಬರುತ್ತದೆ.
ಹಿಂಗಾರು ಮಳೆ:
ಉತ್ತರೆ ಮಳೆ: ಬಿಳಿ ಜೋಳ, ಕಡ್ಲೆ ಕೊತ್ತಂಬರಿ, ಕುಸುಮೆ, ಸೂರ್ಯಕಾಂತಿ,
ಹಸ್ತ: ಚಿತ್ತ: ಮಳೆಯಲ್ಲಿ ಬಿತ್ತದ ಬೆಳೆಯ ಸಮಯದಲ್ಲಿ ಇಸಾಕಿ ಮಳೆ ಬಾರದೆ ಇದ್ದರೆ ಇಳುವರಿ ಕಡಿಮೆ ಆಗುತ್ತದೆ.
ಮಾಲದಂಡಿ ಜೋಳಕ್ಕೆ ಪೂರ್ವಗಾಳಿ ಬೀಸಿದರೆ ಇಳುವರಿ ಹೆಚ್ಚು.
ಬಿಳಿಜೋಳಕ್ಕೆ ಪಶ್ಚಿಮ ಗಾಳಿ ಬೀಸಿದರೆ ಮಾತ್ರ ಇಳುವರಿ ಹೆಚ್ಚು.
ಮಾಲ್ದಂಡಿ ಜೋಳಕ್ಕೆ ಇಬ್ಬನಿ ಬಿದ್ದರೆ ಇಳುವರಿ ಕಡಿಮೆ ಬೆಳೆ ನಾಶ. ಜೋನಿ ಬೀಳುತ್ತದೆ.
ಗಾಳಿ ಯಾವ ಕಡೆ ಬೀಸಿದರೆ ಒಳ್ಳೆಯದು: ಹಸ್ತ ಮತ್ತು ಚಿತ್ತ ಮಳೆ ಅಂದ್ರೆ ಆ ಸಮಯದಲ್ಲಿ ಪೂರ್ವಗಾಳಿ ಬೀಸುವುದರಿಂದ ನೀರಿನ ಜಲ ಮಟ್ಟ ಕಡಿಮೆ ಆಗುತ್ತದೆ. ಬೆಳೆಗಳು ನಾಶವಾಗುತ್ತದೆ, ಧನಕರುಗಳಿಗೆ ರೋಗ, ಬೆಳೆಗಳಿಗೂ ರೋಗ ಬೀಳುತ್ತದೆ.
ಪಶ್ಚಿಮದ ಗಾಳಿ ಬೀಸಿದರೆ ಉತ್ತಮ ಮಳೆ, ಧನಕರುಗಳು ಆರೋಗ್ಯವಾಗುತ್ತವೆ.
ಆದರೆ ಈಗ ಕಾಲ ಬದಲಾಗಿದೆ ಮಳೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಹಾಗಾಗಿ ಒಕ್ಕಲತನವೂ ಬದಲಾಗಿದೆ ಅಂತ ಹಿರಿಕರು ಹೇಳದೆ ಇರುವುದಿಲ್ಲ.
-ಸಂಗ್ರಹ