ಲೇಖನ: ಚಳ್ಳಕೆರೆವೀರೇಶ್,

 

ಅದು ಬರಗಾಲದ ದಿನಗಳು ಹಾಕಿದ ಬೆಳೆಯೂ ಕೈ ಸೇರುತ್ತದೆ ಎಂಬ ನಿರೀಕ್ಷೆಗೂ ಇಲ್ಲದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಕಲ್ಲು, ಮಣ್ಣಿನ ಭೂಮಿಯನ್ನು ಕುಟುಂಬದ ಸದಸ್ಯರೇ ಸೇರಿ ಹಸನು ಮಾಡಿ, ಸಾಲಸೋಲದಿಂದ ಶೇಂಗಾ ಬಿತ್ತನೆ ಮಾಡಿದರು, ಮಳೆಯ ಅಭಾವ ಬೆಳೆಯೂ ಹೋಗಿ ನಷ್ಟ ಅನುಭವಿಸಿ, ಕೃಷಿ ಜೀವನಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಸ್ನೇಹಿತ ನೀಡಿದ ಸಲಹೆಯಂತೆ ಮಿಶ್ರ ಬೆಳೆ ಪದ್ದತಿ ಅಳವಡಿಸಿಕೊಂಡು ಯಶಸ್ಸಿ ಕಂಡ ರೈತ ವೀರಭದ್ರಪ್ಪ, ಪತ್ನಿ ಶಿವಮ್ಮ ಎಂದೂ ಕೃಷಿಯಿಂದ ಹಿಂತಿರುಗಿ ನೋಡಿಲ್ಲ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿಗೆ ಕೇವಲ 24 ಕಿ.ಮೀ ದೂರದಲ್ಲಿರುವ ಚನ್ನಮ್ಮನಾಗತಿಹಳ್ಳಿ ಗ್ರಾಮದ ರೈತ ದಂಪತಿಗಳು ಕಳೆದ 20 ವರ್ಷಗಳಿಂದ ತಮ್ಮ 5 ಎಕರೆ ಜಮೀನನಲ್ಲಿ ನಷ್ಟವನ್ನೇ ಅನುಭವಿಸಿದೆ ನೆಮ್ಮದಿಯ ಬದುಕು ಕಂಡಿಕೊಂಡ ರೈತರೆನ್ನಿಸಿದ್ದಾರೆ. ತಂದೆಯಿಂದ ಬಳುವಳಿಯಾಗಿ ಬಂದ 5 ಎಕರೆ ಜಮೀನಲ್ಲಿ ತಮ್ಮನಿಗೂ ಸಹ ಅರ್ಥ ಭಾಗವಿದ್ದು, ತಮ್ಮ ಕೃಷಿ ನಿರಾಕರಣೆಯಿಂದ ಅಣ್ಣನೇ ಎಲ್ಲಾ ಜಮೀನನ್ನು ನೋಡಿಕೊಳ್ಳುತ್ತಿದ್ದಾರೆ. ಪತಿಯಾಗೇ ಪತ್ನಿ ಶಿವಮ್ಮನ್ನೂ ಸಹ ಸಕ್ರಿಯವಾಗಿ ಕೃಷಿ ಕೆಲಸದಲ್ಲಿ ತೊಡಗಿಕೊಂಡು ಯಶಸ್ಸು ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಪತಿ ವೀರಭದ್ರಪ್ಪ.

ಮನೆಯವರೇ ಕೂಲಿಕಾರರು :- ವೀರಭದ್ರಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ನಾಲ್ಕು ಜನ ಮಕ್ಕಳು, ನಾಲ್ಕು ಮಕ್ಕಳೊಂದಿಗೆ ದಂಪತಿಗಳಿಬ್ಬರೂ ಸೇರಿ 5 ಎಕರೆ ಜಮೀನಿ ಬೆಳೆ ನಿರ್ವಹಣೆ ಮಾಡುತ್ತಾರೆ. ಜಮೀನು ತುಂಬ ಹಲವಾರು ತರಹೆವಾರಿ ಬೆಳೆಯನ್ನು ಹಾಕಿ ಒಂದಲ್ಲಾ ಬಂದರಲ್ಲಿ ಪ್ರತಿನಿತ್ಯ ಹಣ ಕೈಸೇರುವಂತೆ ಮಾಡಿಕೊಂಡಿದ್ದಾರೆ.
ಏನೇನು ಬೆಳೆ :- ಅವರ ಐದು ಎಕರೆ ಜಮೀನಿನಲ್ಲಿ ಈರುಳ್ಳಿ, ಸೇವಂತಿ, ಸುಗಂಧರಾಜು, ಕಲರ್ ಸೇವಂತಿ, ಜಣಿಮೆ, ಮಾರಿಗೋಲ್ಡ್ ಸೇವಂತಿ, ಶೇಂಗಾ, ಹುಣಸೆ, ನುಗ್ಗೆ ಹೀಗೆ ಹಲವಾರು ರೀತಿಯ ಬೆಳೆಗಳು ಅವರ ತೋಟದಲ್ಲಿ ಪ್ರತಿನಿತ್ಯವೂ ಆದಾಯದ ಮೂಲವನ್ನಾಗಿಸಿಕೊಂಡಿದ್ಧಾರೆ. ಒಂದಲ್ಲಾ ಒಂದು ಬೆಳೆ ಫಲ ನೀಡುತ್ತಿದ್ದು, ಪ್ರತಿದಿನ ಹಣ ಕೈಸೇರುತ್ತದೆ ಎಂಬುವುದು ದಂಪತಿಗಳ ಪುತ್ರಿ ಚೈತ್ರ ಮಾತು.
ಪ್ರಸ್ತುತ ಆದಾಯ ಬೆಳೆ :- ಹಾಲಿ ಇವರ ತೋಟದಲ್ಲಿ ಹೆಚ್ಚು ಆದಾಯವನ್ನ ತರುವ ಕಲರ್ ಸೇವಂತಿ, ಸುಗಂಧರಾಜ್ ಬೆಳೆ ಹೇರಳವಾಗಿದೆ. ಅವರ ಐದು ಎಕರೆ ಜಮೀನಲ್ಲಿ 2 ಇಂಚು ನೀರು ಸಿಗುತ್ತಿದೆ. ಅದರಲ್ಲಿ ಒಂದು ಎಕರೆಗೆ ಈರುಳ್ಳಿ, 1 ಎಕರೆ ಶೇಂಗಾ, ಒಂದೂವರೆ ಎಕರೆ ಕಲರ್ ಸೇವಂತಿ, ಒಂದು ಎಕರೆ ಸುಗಂಧರಾಜು, ಅರ್ಥ ಎಕರೆ ಮಾರಿಗೋಲ್ಡ್ ಸೇವಂತಿ ಹೂಗಳನ್ನು ಹಾಕಿದ್ಧಾರೆ. ಸುಗಂಧರಾಜು ಮತ್ತು ಕಲರ್ ಸೇವಂತಿ ಹೂಗಳು ಪ್ರಸ್ತುತ ಆದಾಯ ಮೂಲಗಳಾಗಿವೆ.

ಕಲರ್ ಸೇವಂತಿ :– ಕಳೆದ 10 ವರ್ಷಗಳಿಂದ ಈ ಬೆಳೆಯನ್ನು ಬೆಳೆಯುತ್ತಿದ್ದು, ಸ್ನೇಹಿತ ಭದ್ರಪ್ಪನವರ ತೋಟದಿಂದ ಹೂಗಳನ್ನು ತಂದು ತಾವೇ ಬೀಜೋಪಾಚಾರ ಮಾಡಿಕೊಂಡು ಬಿತ್ತನೆ ಮಾಡಿ ಪ್ರತಿವರ್ಷ ಇದೇ ಬೆಳೆಯನ್ನು ಬೆಳೆಯುತ್ತಾವೆ. ಕೊನೆಯ ಒಂದೆರಡು ಕೆಜಿ ಬೀಜಕ್ಕಾಗಿಯೇ ಬಿಟ್ಟು ಸಂಗ್ರಹಿಸುತ್ತೇವೆ. ಈ ವರ್ಷ ಫೆಬ್ರವರಿಯಲ್ಲಿ ತಿಂಗಳಲ್ಲಿ ಬೀಜೋಪಾಚಾರ ಮಾಡಿ ಒಂದು ಎಕರೆಗೆ ಬಿತ್ತನೆ ಮಾಡಲಾಗಿದೆ. ಹದ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಒಂದೆರಡು ಬಾರಿ ಮಡಿಕೆ ಹೊಡೆಸಲಾಗಿದೆ. ನಂತರ ಸಾಲಿಂದ ಸಾಲಿಗೆ 1 ಅಡಿ, ಗಿಡದಿಂದ ಗಿಡಕ್ಕೆ ಅರ್ಥ ಅಡಿ ಜಾಗ ಬಿಟ್ಟು ಬೀಜ ನಾಟಿ ಮಾಡಿದೆ. ನಾಟಿ ಮಾಡಿದ ಮರುದಿಂದಲೇ ನೀರು ಕಟ್ಟಬೇಕು. ತೇವಾಂಶ ಇರುವಂತೆ ನೋಡಿಕೊಂಡಲ್ಲಿ ಗಿಡಗಳು ಉತ್ಕøಷ್ಟತೆಯಿಂದ ಬರಲು ಸಾಧ್ಯವಾಗುತ್ತದೆ. ಮಾರ್ಚ್ ಕೊನೆಯ ವಾರದಲ್ಲಿ ಹೂ ಬಿಡಲು ಪ್ರಾರಂಬಿಸುತ್ತದೆ. ಈ ಬೆಳೆ ಎಂಟ್ಹತ್ತು ತಿಂಗಳ ಬೆಳೆಯಾಗಿದ್ದು, ಉತ್ತಮ ಔಷದೋಪಚಾರ ಮಾಡಿದಲ್ಲಿ ಇಳುವರಿಯೂ ಚನ್ನಾಗಿಯೇ ಬರುತ್ತದೆ ಎನ್ನುವುದು ಶಿವಮ್ಮನ ಮಾತು.

ಉಪಚಾರ ಹೇಗೆ :- ಬೀಜ ಚೆಲ್ಲಿದ ಮೂರ್ನಾಲ್ಕು ದಿನಗಳ ಕಾಲ ಡ್ರೀಪ್ ಮೂಲಕ ನೀರು ಹಾಯಿಸಲಾಗಿದೆ. ನಾಲ್ಕು ದಿನದ ನಂತರ ಬದು ನಿರ್ಮಿಸಿ 15 ದಿನಗಳ ಕಾಲ ಬೆಳಗ್ಗೆ, ಸಂಜೆ ನೀರು ಕಟ್ಟಬೇಕು. ಗಿಡ ಹೂ ಬಿಡಲು ಪ್ರಾರಂಭಿಸುವ ವರೆಗೂ ಒಂದು ಅಥವಾ ಎರಡು ಬಾರಿ ಕೃಷಿ ಇಲಾಖೆ ನಿರ್ದೇಶನದಂತೆ ಔಷಧಿಯನ್ನು ಸಿಂಪಡೆ ಮಾಡಬೇಕು. ಹೂಬಿಡಲಾರಂಭಿಸಿದಾಗ ಮ್ಯಾಕೋಜೆಟ್, ಕಾನ್‍ಪೀಡರ್ ಮುಂತಾದ ಔಷಧಿಗಳನ್ನು ಸಿಂಪಡಿಸಬೇಕು. ಪ್ರತಿನಿತ್ಯವೂ ಹೂಗಳನ್ನು ಗಿಡದಿಂದ ಬಿಡಿಸಬೇಕು ಇಲ್ಲವಾದಲ್ಲಿ ಗಿಡಕ್ಕೆ ರೋಗ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುವುದು ವೀರಭದ್ರಪ್ಪನವರ ಎಚ್ಚರ ಮಾತು.
ಮಾರುಕಟ್ಟೆ ಹೇಗೆ :- ಮನೆಯಲ್ಲೇ ತಯಾರಿಸಿದ ಬೀಜ, ಕುಟುಂಬಸ್ಥರೇ ಕೂಲಿಕಾರರು, ಔಷಧಿಗೆ 15 ಸಾವಿರ ಹಣ ಖರ್ಚು ಬಿಟ್ಟರೆ, ವಿದ್ಯುತ್ ಬಿಲ್ ಕಟ್ಟುವುದು ಸೇರಿ 20 ರಿಂದ 25 ಸಾವಿರ ಒಂದು ದಿನಗಳಿಗೆ ಖರ್ಚು ಬರುತ್ತದೆ. ನಾವು ಪ್ರತಿನಿತ್ಯ 50 ರಿಂದ 60 ಕೆಜಿಯಷ್ಟು ಕಲರ್ ಸೇವಂತಿ ಹೂವನ್ನು ಮಾರುಕಟ್ಟೆಗೆ ಹಾಕುತ್ತೇವೆ. 20 ರಿಂದ 25 ರೂವರೆಗೂ ಬೆಲೆ ಸಿಗುತ್ತಿದ್ದು, 1500 ಸಾವಿರ ಪ್ರತಿನಿತ್ಯದ ಆದಾಯವಾಗಿದೆ. ಇನ್ನು ದೀಪಾವಳಿ, ದಸರಾ ಹಬ್ಬಗಳನ್ನು ಇನ್ನೂ ಹೆಚ್ಚಿನ ಬೆಳೆ ಸಿಗುವ ನಿರೀಕ್ಷೆ ಎನ್ನುತ್ತಾರೆ. ಸುಗಂಧರಾಜು ಹೂ ಸಹ 30 ರಿಂದ 40 ರೂ ವರೆಗೂ ಮಾರುಕಟ್ಟೆ ಲಭ್ಯವಿದೆ ಎಂಬುವುದು ರೈತೆ ಶಿವಮ್ಮಳ ಮಾತು. ಹೆಚ್ಚಿನ ಮಾಹಿತಿಗೆ 9900297360ಗೆ ಸಂಪರ್ಕಿಸ ಬಹುದು.