ವರದಿ : ಚಳ್ಳಕೆರೆ ವೀರೇಶ್,

ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲ, ಇದ್ದ ಬೋರ್‍ನಲ್ಲೂ ಅರ್ಥ ಇಂಚು ನೀರು, ಆ ನೀರನ್ನೇ ಬಳಸಿ ಮಿಶ್ರಬೆಳೆ ಪದ್ದತಿ ಅಳವಡಿಸಿಕೊಂಡು ಯಶಸ್ಸಿನ ದಾರಿಯಿಂದ ಇತರ ರೈತರಿಗೂ ಹುಬ್ಬೇರಿಸುವಂತೆ ಮಾಡಿದ ರೈತ ಮಹಿಳೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆ ಕಾವಲು ಪ್ರದೇಶದಲ್ಲಿ ರೈತ ಮಹಿಳೆ ಕೆಂಚಮ್ಮಅಂಬಾಲಪ್ಪನವರ ಕೃಷಿ ಸಾಧನೆ ಎಲ್ಲರಿಗೂ ಮಾದರಿಯಾದೆ. ಇವರು ಎರಡು ಎಕರೆ ಜಾಗದಲ್ಲಿ ಈರುಳ್ಳಿ, ಕೊತ್ತಂಬರಿ, ಬ್ಯಾಡಗಿ ಮೇಣಸಿನ ಕಾಯಿ ಬೆಳೆಯುವ ಮೂಲಕ ಬರದಲ್ಲೂ ಕೃಷಿಯಿಂದ ಕೈತುಂಬಿಸಿಕೊಳ್ಳಬಹುದು ಎಂಬುವುದು ತೋರಿಸಿಕೊಟ್ಟಿದ್ದಾರೆ.

ಕೆಂಚಮ್ಮ ತಮ್ಮ ಮಗಳಾದ ಶಿವಾನುಪೂರ್ಣಮ್ಮನವರೊಂದಿಗೆ ಕಳೆದ ಹಲವಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ಧಾರೆ. ಥರಹೆವಾರಿ ಬೆಳೆಯನ್ನು ಬೆಳೆದು ಎಂದಿಗೂ ಕೃಷಿಯಲ್ಲಿ ನಷ್ಟಕಂಡವರಲ್ಲ. ಇದಕ್ಕೆ ಮೂಲ ಕಾರಣ ಇವರು ಪ್ರತಿಬಾರಿಯೂ ಮಿಶ್ರಬೆಳೆ ಪದ್ದತಿಯನ್ನು ಅಳವಡಿಸಿಕೊಂಡೇ ಕೃಷಿ ಕಾಯಕ ಮಾಡೋದು. ಮಿಶ್ರಬೆಳೆಯಲ್ಲಿ ಒಂದಲ್ಲಾ ಒಂದು ಬೆಳೆಯಿಂದ ಹಣ ಕೈಸೇರುತ್ತದೆ ಎಂಬುವುದನ್ನು ಇವರ ನಂಬಿಕೆ.

ಎರಡು ಎಕರೆಯಲ್ಲಿ ಈರುಳ್ಳಿ, ಬ್ಯಾಡಗಿ ಮೇಣಸಿನಕಾಯಿ, ಕೊತ್ತಂಬರಿಯನ್ನು ಮಿಶ್ರಬೆಳೆಯಾಗಿ ಹಾಕಲಾಗಿದೆ. ಇದಲ್ಲಿ ಈರುಳ್ಳಿ, ಬ್ಯಾಡಗಿ ಮೇಣಸಿನಕಾಯಿ ಹೆಚ್ಚಿನ ಲಾಭಗಳಿಸಿಕೊಟ್ಟಿದೆ. ಎರಡು ಎಕರೆಗೆ ಸುಮಾರು 3.5 ಸಾವಿರ ಬ್ಯಾಡಗಿ ಮೇಣಸಿನಕಾಯಿ ಸಸಿಗಳನ್ನು ಆಗಸ್ಟ್ ಕೊನೆಯ ವಾರದಲ್ಲಿ ನಾಟಿ ಮಾಡಿದ್ದೇವು ಅದೇ ಸಂದರ್ಭದಲ್ಲಿ 4 ಕೆ.ಜಿ.ಈರುಳ್ಳಿ, 2 ಕೆ.ಜಿಯಷ್ಟು ಕೊತ್ತಂಬರಿ ಸಸಿಗಳನ್ನು ನಾಟಿ ಮಾಡುವ ಮೂಲಕ ಎರಡು ಬೆಳೆಯಿಂದ ಉತ್ತಮ ಲಾಭಗಳಿಸಿದ್ದೇವೆ ಎಂದು ಅವರು ನುಡಿಯುತ್ತಾರೆ.

ಮಿಶ್ರ ಬೆಳೆ ಪದ್ದತಿಯಿಂದ ಹೆಚ್ಚು ಲಾಭ :- ಇವರು ತಮ್ಮ ಹೊಲದಲ್ಲಿ ಎಂದಿಗೂ ಒಂದೇ ಬೆಳೆ ಬೆಳೆಯುವುದಿಲ್ಲ. ಮಿಶ್ರಬೆಳೆ ಪದ್ದತಿ ಅಳವಡಿಸಿಕೊಂಡಿದ್ಧಾರೆ. ಅವರು ಹಾಕಿದ ಮೂರು ಬೆಳೆಗೂ ಒಂದೇ ಬಾರಿ ಔಷಧಿ, ಗೊಬ್ಬರ, ಮಿತ ನೀರು ನೀಡುತ್ತಾರೆ. ಅದರ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಬಹುದು.
ಈ ಬಾರಿ ಬ್ಯಾಡಗಿ ಮೇಣಸಿನಕಾಯಿಗೆ ಸುಮಾರು 4 ಕ್ವಿಂಟಾಲ್ ದೊರಕಿದೆ. ಕೆ.ಜಿಗೆ 140 ರೂ ನಂತೆ ಚಳ್ಳಕೆರೆ ಮಾರುಕಟ್ಟೆಯಲ್ಲೇ ಮಾರಾಟವಾಗಿದ್ದು, ಸುಮಾರು 56 ಸಾವಿರದಷ್ಟು ಹಣ ಕೈಸೇರಿದೆ. ಮೂರು ತಿಂಗಳ ಬೆಳೆ ಇದಾಗಿದ್ದು, ಮೂರು ತಿಂಗಳಲ್ಲಿ ಯಾವುದೇ ಔಷಧಿ ಖರ್ಚು ಬರುವುದಿಲ್ಲ. ಈರುಳ್ಳಿಗೆ ಹಾಯಿಸುತ್ತಿದ್ದ ನೀರಿನಲ್ಲೇ ಕೊತ್ತಂಬರಿ, ಬ್ಯಾಡಗಿ ಮೇಣಸಿನಕಾಯಿ ಬೆಳೆಸಿದ್ದೇವೆ. ಕೇವಲ ಬ್ಯಾಡಗಿ ಮೇಣಸಿನಕಾಯಿಗೆ ಸಸಿಗೆ 2.500, ಕೊತ್ತಂಬರಿ 2 ಕೆ.ಜಿಗೆ 300ರೂ ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಪಡೆಯಬುದಾಗಿದೆ.

ಮಿಶ್ರ ಬೆಳೆಯ ಪದ್ದತಿ :- ಮಿಶ್ರ ಬೆಳೆ ಬೆಳೆಯುವ ಮುನ್ನ ಭೂಮಿಗೆ ಜಿಂಕ್, ಜಿಫ್ಸ್‍ಂ, ಕೊಟ್ಟಿಗೆ ಗೊಬ್ಬರ ನೀಡಿ ಒಂದು ವಾರದ ಕಾಲ ಒಣಬಿಡಲಾಗುತ್ತದೆ. ನಂತರ ಬದು ನಿರ್ಮಿಸಿ, ಎರಡ್ಮೂರು ಬಾರಿ ನೀರು ಹಾಯಿಸಿ ಭೂಮಿ ಪಕ್ವತೆ ಬಂದಿದೆ ಎಂಬುವುದನ್ನು ಜರುವಾತು ಮಾಡಿಕೊಂಡು ಯಾವುದಾದರೂ ಎರಡು ಅಥವಾ ಮೂರು ಬೆಳೆ ನಾಟಿ ಮಾಡಬೇಕು. ಬದುವಿನ ಮೇಲೆ ಬ್ಯಾಡಗಿ ಮೇಣಸಿನಕಾಯಿ, ಕೊತ್ತಂಬರಿಯನ್ನು ಒಂದು ಅಡಿಯ ಅಂತದಲ್ಲಿ ನಾಟಿ ಮಾಡಲಾಗಿದೆ. ನಂತರ ಬದುವಿನ ಕೇಳ ಭಾಗಕ್ಕೆ ಈರುಳ್ಳಿ ನಾಟಿ ಮಾಡುವ ಮೂಲಕ ಒಂದೇ ಬಾರಿಗೆ ನೀರು, ಗೊಬ್ಬರ, ಔಷಧವನ್ನು ವಿತರಣೆ ಮಾಡುವ ಮೂಲಕ ಖರ್ಚು ಕಡಿಮೆಗೊಳಿಸಿಕೊಂಡಿದ್ದೇನೆ. ಮನೆಯ ಮಂದಿಯೇ ಕೃಷಿ ಕಾರ್ಯನಿರ್ವಹಿಸುವುದರಿಂದ ಖರ್ಚು ಕಡಿಮೆ ಬರುವ ಆದಾಯ ಸಂಪೂರ್ಣ ಪಡೆಯಬಹುದು ಎನ್ನುತ್ತಾರೆ ಕೆಂಚಮ್ಮ.

ಹೆಚ್ಚಿನ ಮಾಹಿತಿಗೆ 9945830234(ಕೆಂಚಮ್ಮನ ಪುತ್ರ ದಯಾನಂದಮೂರ್ತಿ) ಸಂಪರ್ಕಿಸಬಹುದು.