ಚಿತ್ರದುರ್ಗ: ಸತತವಾಗಿ ಮೂರ್‍ನಾಲ್ಕು ವರ್ಷಗಳಿಂದ ಮಳೆಬಾರದೆ ಬಿತ್ತನೆ ಮಾಡಿದ ಬೆಳೆಗಳು ಕೈ ಸೇರದೆ ಕಂಗಾಲಾಗಿದ್ದ ರೈತ ಸಮೂಹಕ್ಕೆ ಹುಬ್ಬೆ, ಉತ್ತರೆ ಹಾಗೂ ಅತ್ತ ಚಿತ್ತ ಮಳೆಗಳು ಸಕಾಲಕ್ಕೆ ಸುರಿದ ಕಾರಣ ರೈತ ಸಮೂಹಕ್ಕೆ ಸಂತಸ ಧೈರ್ಯ ತಂದಿತ್ತು.
ಆದ್ರೆ ಆ ಸಂತಸ ಬಹಳ ದಿನಗಳ ತನ ಉಳಿಯಲಿಲ್ಲ. ಏಕೆಂದರೆ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ಹೆಚ್ಚಿರುವ ತೇವಾಂಶದಿಂದ ಬಿತ್ತನೆ ಮಾಡಿದ ಬೆಳೆಗಳು ರೋಗಬಾದೆಗೆ ತುತ್ತಾಗಿರುವುದು
ರೈತನ ಮುಖದಲ್ಲಿ ಮಂದಹಾಸ ಮಾಯವಾಗಿದ್ದು ಆಂತಕದ ಛಾಯೆಮೂಡಿದೆ.

 ಪ್ರತ್ಯಕ್ಷ ವರದಿ

ಚಳ್ಳಕೆರೆ ತಾಲೂಕಿನಲ್ಲಿ ಖುಷ್ಕಿ ಪ್ರೇಶದಲ್ಲಿ ಶೇಂಗಾ 47523 ಹೆಕ್ಟೇರ್, ತೃಣಧಾನ್ಯ 383 ಹೆಕ್ಟೇರ್, ತೊಗರಿ4300 ಹೆಕ್ಟೇರ್, ಸೂರ್ಯಕಾಂತಿ 92 ಹೆಕ್ಟೇರ್ ಸೇರಿದಂತೆ ಹೆಸರು, ಜೋಳ, ಸಜ್ಜೆ, ಸೇರಿದಂತೆ 527727 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು. ಈಗ ಬೆಳೆಗಳಿಗೆ ಎಲೆಕೊರಕ ಬಿಳಿ ಹುಳುಗಳ ಬಾದೆಯಿಂದ ಎಲೆಗಳನ್ನು ತಿಂದು ಹಾಕುತ್ತಿವೆ. ಜಮೀನಿನಲ್ಲಿ ಕಾಲಿಟ್ಟರೆ ಸಾಕು ಬಿಳಿ ಹುಳುಗಳು ಕಾಲಿಗೆ ಅಂಟಿಕೊಳ್ಳುತ್ತವೆ, ಅಲಸಂದಿ, ಹೆಸರು, ಶೇಂಗಾ ಬೆಳೆಗಳ ಮೇಲೆ ಹಾಗೂ ಬದುವಿನಲ್ಲಿರುವ ತಂಗಟೆ ಗಿಡಗಳಲ್ಲೂ ಸಹ ಈ ಹುಳುಗಳು ಹೆಚ್ಚಾಗಿ ಕಾಣಿಸಿಕೊಂಡಿವೆ.
ಬಿಸಿಲು ಕಾಣದ ಬೆಳೆಗಳಿಗೆ ಸುರಿಯುತ್ತಿರುವ ಮಳೆಯಿಂದ ಎಲ್ಲಾ ಬೆಳೆಗಳಿಗೂ ಒಂದೊಂದು ರೀತಿಯಲ್ಲಿ ರೋಗ ಅಂಟಿಕೊಳ್ಳುತ್ತಿರುವುದರಿಂದ, ಬೆಳೆಗಳ ಬೆಳವಣಿಗೆ ಹಾಗೂ ಇಳುವರಿ ಕುಂಟಿತಗೊಳ್ಳುವ ಆತಂಕಕ್ಕೀಡಾಗಿ ರೋಗ ಅತೋಟಿಗೆ ಹೇಗೆ ತರಬೇಕೆಂಬ ಆತಂಕ ರೈತರಲ್ಲಿ ಮನೆಮಾಡಿದೆ.
ಕಳೆದ ನಾಲೈದು ವರ್ಷಗಳಿಂದ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತುತ್ತಾಗಿ ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸಂಬಂದ ಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ.

ಇಲಾಖೆಯ ಅಧಿಕಾರಿಗಳು ಹೇಳುವಂತೆ

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ರಾಗಿ,ತೊಗರಿ, ಹೆಸರು, ನವಣೆ ಸೇರಿದಂತೆ ಇತರ ಬೆಳೆಗಳಿಗೆ ಸತತವಾಗಿ ಮಳೆ ಬೀಳುತ್ತಿರುವ ಕಾರಣ ಭೂಮಿಯ ತೇವಾಂಶ ಹೆಚ್ಚಾಗಿ ಸೈನಿಕ ಹುಳುಗಳು ಕಾಣಿಸಿಕೊಂಡಿದ್ದು ರೈತರು ಎದೆ ಗುಂದದೆ ಪ್ರತಿ ಎಕರೆಗೆ 20 .ಕೆ.ಜಿ. ಭತ್ತದ ತೌಡು ,2 ಕೆ.ಜಿ. ಬೆಲ್ಲ, 250 ಮಿ.ಲೀ ಮಾನೋಕ್ರೋಟೋಪಾಸ್ 36ಎಸ್‌ಎಲ್, 100ಮಿ.ಲೀ ಡಿ.ಡಿ.ವಿ.ಪಿ ಅಥವಾ ನುವಾನ್ 76% ಇ ಸಿ, 4ಲೀ ನೀರು ಮಿಶ್ರಣ ಮಾಡಿ ಇದೇ ರೀತಿ ಸಿಂಪರಣೆ ಮಾಡಿದಾಗ ಬಿಳಿ ಹುಳು (ಸೈನಿಕ) ಹುಳುಗಳು ಅತೋಟಿಗೆ ಬರುತ್ತವೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

-ಗೋಪನಹಳ್ಳಿಶಿವಣ್ಣ
.