ಇರುವ ಒಂದೂವರೆ ಎಕರೆ ಜಾಗದಲ್ಲಿ ಏನು ಲಾಭ ಮಾಡಲು ಸಾಧ್ಯ. ಮಳೆ ಇಲ್ಲದ ಈ ಕಾಲದಲ್ಲಿ ಕೃಷಿಯನ್ನು ತೊರೆದು ನಗರಗಳತ್ತ ಕೆಲಸ ಹುಡುಕಿಕೊಂಡು ಹೋಗುವವರ ಸಂಖ್ಯೆ ಅಧಿಕ. ಇಂತಹ ರೈತರು ನಾಚುವಂತೆ ಇರುವ ಒಂದೂವರೆ ಎಕರೆ ಜಾಗದಲ್ಲಿ ಥರೇಹವಾರಿ ಬೆಳೆಯನ್ನು ಬೆಳೆ ನೆಮ್ಮದಿಯ ಕೃಷಿಯನ್ನು ಕಂಡುಕೊಂಡ ಯಶಸ್ವಿ ರೈತನ ಕಥೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದ ರೈತ ಉಪ್ಪಾರ ಈರಣ್ಣ ಕಡಿಮೆ ಭೂಮಿಯಲ್ಲೂ ಅಧಿಕ ಲಾಭವನ್ನು ಗಳಿಸಿ ಅಕ್ಕಪಕ್ಕದ ಇತರೆ ರೈತರಿಗೂ ಮಾದರಿಯಾಗಿದ್ದಾನೆ. ತಾನು ಬೆಳೆದ ಬೆಳೆಯನ್ನು ಕೆಲವೇ ಕಿ.ಮೀ ದೂರದಲ್ಲಿರುವ ಚಳ್ಳಕೆರೆ ನಗರಕ್ಕೆ ಪ್ರತಿನಿತ್ಯವೂ ತಂದು ತಾನೇ ಮಾರಾಟ ಮಾಡುತ್ತಾನೆ. ಬರುವ ಲಾಭ ನಷ್ಟವನ್ನೇಲ್ಲಾ ಅವನೇ ಅನುಭವಿಸುತ್ತಾನೆ.
ಇರುವ ಒಂದೂವರೆ ಎಕರೆ ಜಮೀನಲ್ಲಿ ೧ ಇಂಚು ನೀರು ಬರುವ ಬೊರ್‌ವೆಲ್ ಇದೆ. ಅದಕ್ಕೆ ಅನುಗುಣವಾಗಿ ಸಿಗುವ ಜವಳಿಕಾಯಿ, ಬೆಂಡೆ, ಮೆಣಸಿನಕಾಯಿ, ಟಮೊಟೋ, ಮೂಲಂಗಿ, ಬದನೆ, ಪಲಕ, ಸಬಾಕ್ಷಿ, ಕೊತೊಂಬರಿ, ಮೆಂಥೆ, ಹಾಗಲ, ಈರೆ, ಹೀಗೆ ಹಲವಾರು ತರಕಾರಿ ಬೆಳೆಯನ್ನು ಬೆಳೆಯುವ ಕಾಯಕ ಈ ಕುಟುಂಬದ್ದು. ಬೇರೆ ಬೇರೆ ಬೆಳೆಗಳಿಗೆ ಬೇರೆ ಬೇರೆ ಭಾಗವನ್ನಾಗಿಸಿಕೊಂಡು ಕಡಿಮೆ ಖರ್ಚು, ಅಧಿಕ ಲಾಭವನ್ನು ಕಾಣುತ್ತಿದ್ಧಾರೆ.
ಮೂಲಂಗಿ ಆದಾಯದ ಮೂಲವಾಗಿ ;- ಈ ಬೆಳೆಗಳಲ್ಲಿ ಈ ಬಾರಿ ಮೂಲಂಗಿ ಹೆಚ್ಚು ಲಾಭ ತಂದುಕೊಟ್ಟ ಬೆಳೆಯಾಗಿದೆ. ಒಂದೇ ಕಂಪನಿಯ ಬೀಜಗಳಿಗೆ ಎಂದಿಗೂ ಮೊರೆ ಹೋಗಲ್ಲ. ಒಂದೇ ಬೆಳೆಯನ್ನು ಪದೇ ಪದೇ ಅ ಭೂಮಿಗೆ ಹಾಕಲ್ಲ. ಈ ಪಾಲಿಸಿಯನ್ನು ಅನುಸರಿಸಿಕೊಂಡು ಬಂದ ಈರಣ್ಣ ಸೋಗಾಲ್ ಎಂಬ ಕಂಪನಿಯ ಬೀಜವನ್ನು ಸ್ಥಳೀಯ ಗೊಬ್ಬರ ಅಂಗಡಿಯಿಂದ ೧ ಪ್ಯಾಕೇಟ್‌ಗೆ ೭೫ ರಂತೆ ೪೦೦ ರೂಪಾಯಿಗಳ ಬೀಜವನ್ನು ಖರೀದಿ ೧.೫ ಸಾವಿದಿಂದ ೨ ಸಾವಿರ ಖರ್ಚು ಮಾಡಿದ್ದಾರೆ. ತಮ್ಮಲ್ಲಿ ಇರುವ ಮೇಕೆ, ದನ, ಕರುಗಳ ಸಗಣಿಯನ್ನೇ ಗೊಬ್ಬರವನ್ನಾಗಿಸಿಕೊಳ್ಳುವ ರೈತ ಈರಣ್ಣ ರಸಗೊಬ್ಬರವನ್ನು ಸಹ ಹಾಗಾಗೆ ಬಳಕೆ ಮಾಡುತ್ತಾರೆ. ಗುಣಾತ್ಮಕವಾಗಿ ಕಾಣುವ ಬೆಳೆ, ಹೆಚ್ಚು ಲಾಭ ಗಳಿಸುತ್ತಿದ್ದಾರೆ.
ಭೂಮಿ ಹದಮಾಡುವ ವಿಧಾನ ;- ಬೀಜ ಭೂಮಿಗೆ ಹಾಕುವ ಮುನ್ನ ಒಂದು ಬಾರಿ ಗೊಬ್ಬರ ಚೆಲ್ಲಬೇಕು. ಪಿಕಾಸೆಯಿಂದ ಮೇಲೆ ಕೆಳಗೆ ಗೊಬ್ಬರವನ್ನು ಮಾಡಿ, ಒಂದು ವಾರದ ನಂತರ ಮೂಲಂಗಿ ಅಥವಾ ಇತರೆ ತರಕಾರಿ ಬೀಜವನ್ನು ಚೆಲ್ಲಬೇಕು. ವಾರದ ನಂತರ ನೀರು ಹಾಯಿಸಬೇಕು. ಎರಡು ವಾರಕ್ಕೆ ಸಸಿಗಳು ಕಾಣಿಸಿಕೊಳ್ಳುತ್ತವೆ. ವಾರ, ಎರಡು ವಾರಕೊಮ್ಮೆ ನೀರು ಕಟ್ಟುವುದು, ಮೂರು ತಿಂಗಳ ಬೆಳೆಯಲ್ಲಿ ನಾಲ್ಕೈದು ಬಾರಿ ಗೊಬ್ಬರವನ್ನು ಕೊಟ್ಟಿದ್ದೇನೆ. ಉತ್ತಮ ಉತ್ಕೃಷ್ಟ ಮೂಲಂಗಿ ಬೆಳೆ ಬರಲು ಸಾಧ್ಯವಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಲಾಭವು ಸಿಗುತ್ತದೆ. ಈಗಾಗಲೇ ಒಂದು ಬೆಳೆಗೆ ೧೦ ಸಾವಿರ ಲಾಭ ಕಂಡಿದ್ದು,  ಪ್ರಸ್ತುತ ಬೆಳೆಯಲ್ಲಿ ೨೦ ರಿಂದ ೨೫ ಸಾವಿರ ಲಾಭ ಬರುವ ನಿರೀಕ್ಷೆ ಇದೆ. ಕುಟುಂಬ ಎಲ್ಲಾ ಸದಸ್ಯರು ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ನಮಗೆ ಕೂಲಿಗಾರರ ಖರ್ಚು ಬಳಹಷ್ಟು ಕಡಿಮೆ ಬರುತ್ತದೆ. ಮಾರುಕಟ್ಟೆಯೂ ಹತ್ತಿರದಲ್ಲೇ ಇರುವ ಕಾರಣ ಖರ್ಚು ಸಹ ಕಡಿಮೆಯಾಗಿದ್ದು ಹೆಚ್ಚಿನ ಲಾಭ ಕಾಣಲು ಸಾಧ್ಯವಾಗಿದೆ ಎಂದು ತನ್ನ ಸಂತಸವನ್ನು ಹಂಚಿಕೊಳ್ಳುತ್ತಾರೆ.

-ಚಳ್ಳಕೆರೆ ವೀರೇಶ್
ಮೊಬೈಲ್;-9980173050