೧. ನಮ್ಮ ಹೊಲ – ತೋಟಗಳು ಈಗಿರುವ ಸ್ಥಿತಿಯ ನಕ್ಷೆಯೊಂದನ್ನು ತಯಾರಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಅದು ಹೇಗೆ ರೂಪುಗೊಳ್ಳಬೇಕು
ಅಥವಾ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಕೋನವಿರಬೇಕು. ಹೊಲಗಳು ಇಳಿಜಾರುಗಳಿಂದ ಕೂಡಿದ್ದಲ್ಲಿ, ಅವುಗಳಿಗೆ ಅಡ್ಡವಾಗಿ ಬದುಗಳು –
ಸಮಪಾತಳಿ ಬದುಗಳು, ಮಳೆ ನೀರು ಸಂಗ್ರಹಿಸಲು ಕೃಷಿ ಹೊಂಡ, ಹೊಲ – ತೋಟಗಳ ಸುತ್ತಮುತ್ತಲೂ ಗಿಡ – ಮರಗಳು, ಜಾನುವಾರುಗಳಿಗಾಗಿ
ಕೊಟ್ಟಿಗೆ, ಕೃಷಿ ಉಪಕರಣಗಳಿಗಾಗಿ ಪ್ರತ್ಯೇಕ ಸ್ಥಳ, ಗೊಬ್ಬರ ತಯಾರಿಸಲು ಸ್ಥಳ. . . . . . ಇತ್ಯಾದಿ ನಮ್ಮ ಕಾರ್ಯಗುರಿಯಾಗಬೇಕು.
೨. ಮಣ್ಣು ಪರೀಕ್ಷೆ ಮಾಡಿಸಬೇಕು.
೩. ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಣ್ಣಿಗೆ ಕೊಡಬೇಕು. ಹಾಗೆಯೇ ಇರುವ ತಿಪ್ಪೆಗೊಬ್ಬರವನ್ನು ಸುಧಾರಿಸಿ ಮಣ್ಣಿಗೆ ಕೊಡಬೇಕು.
೪. ಹೊಲಗಳ ಇಳಿಜಾರಿಗೆ ಅಡ್ಡಲಾಗಿ ಅಗತ್ಯಕ್ಕೆ ತಕ್ಕಂತೆ ಸಮಪಾತಳಿ ಬದುಗಳನ್ನು ನಿರ್ಮಿಸಬೇಕು
೫. ಒಂದು ಎಕರೆ ಹೊಲದ ಸುತ್ತಲೂ ಕನಿ?ಂಔ ೧೦೦ ಮರಗಳನ್ನು ಬೆಳೆಸಲು ಜಾಗಗಳನ್ನು ಗುರುತಿಸಬೇಕು. ಹಾಗೆಯೇ ವೈವಿಧ್ಯಮಯ ಮರಗಳಿಗಾಗಿ
ನರ್ಸರಿಗಳಿಂದ ಆರೋಗ್ಯಪೂರ್ಣ ಸಸಿಗಳನ್ನು ತಂದು ನೆಡಬೇಕು
೬. ಮುಂಗಾರಿನ ಮಳೆ ಬೀಳುವ ಸಮಯದಲ್ಲಿ ಮಳೆ ನೀರು ಹರಿದು ಹೋಗುವ ಪಥವನ್ನು ಗುರುತಿಸಿ, ಹೊಲದಲ್ಲಿನ ತಗ್ಗು ಪ್ರದೇಶದಲ್ಲಿ ಕೃಷಿ ಹೊಂಡವನ್ನು
ನಿರ್ಮಿಸಬೇಕು
೭. ಆಳವಾಗಿ ಉಳುಮೆ, ಬದುಗಳು ಅಥವಾ ಸಮಪಾತಳಿ ಬದುಗಳ ನಿರ್ಮಾಣದಿಂದ ಮಣ್ಣಿನ ನಾಶ ಕಡಿಮೆಯಾಗುತ್ತದೆ. ಬದುಗಳಿರುವ ಕಾರಣ ಮಳೆ ನೀರು
ಹೊಲದಿಂದ ಹೊರಕ್ಕೆ ಕೊಚ್ಚಿಹೋಗದೆ, ಅಲ್ಲೇ ಇಂಗುತ್ತದೆ. ಮಣ್ಣು ಹೆಚ್ಚು ಕಾಲ ತಂಪಾಗಿರುತ್ತದೆ. ಅಂತರ್ಜಲದ ಮಟ್ಟ ಏರುತ್ತದೆ.
೮. ಮೊದಲ ಮುಂಗಾರು ಮಳೆಯ ನಂತರ ಮಾಡುವ ಉಳುಮೆಯ ಸಮಯದಲ್ಲಿ, ಎಕರೆಗೆ ಕನಿಷ್ಟ೨೦ ಕೆ.ಜಿ.ಗಳಷ್ಟು ವೈವಿಧ್ಯಮಯ ಬಿತ್ತನೆಬೀಜಗಳನ್ನು
ಹಾಗೂ ಹಸಿರೆಲೆ ಗೊಬ್ಬರದ ಬೀಜಗಳನ್ನು ಮಿಶ್ರಣಮಾಡಿ ಚೆಲ್ಲಿ ಉಳುಮೆ ಮಾಡಬೇಕು. ನಂತರದ ಮೂರು ವಾರಗಳಲ್ಲಿ ಈ ಬೀಜಗಳು ಗಿಡಬಾಗಿ
ಬೆಳೆದಿರುತ್ತವೆ. ಅವನ್ನು ಹಾಗೆಯೇ ಮರು ಉಳುಮೆ ಮಾಡಬೇಕು. ಹೀಗೆ ಮಾಡುವುದರಿಂದ ಮೊದಲಿಗೆ ಹಸಿರೆಲೆಗಳು ಮಣ್ಣಲ್ಲಿ ಬೆರೆತು ಮಣ್ಣನ್ನು ಹದ
ಮಾಡುತ್ತವೆ. ಮಣ್ಣು ಸಡಿಲವಾಗಿ ಮಳೆ ನೀರು ಇಂಗಲು ಸಹಾಯಕವಾಗುತ್ತದೆ. ಹಸಿರೆಲೆಗಳು ಮಣ್ಣೊಳಗೆ ಸೇರಿ ಗೊಬ್ಬರವಾಗಿ ಮಾರ್ಪಾಡಾಗುತ್ತವೆ.
ಇದರಿಂದ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ.
೯. ಮುಂದಿನ ಬೆಳೆಗಾಗಿ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡುವಾಗ, ಮೊದಲಿಗೆ ದೇಸಿ ಅಥವಾ ನಾಟಿ ಅಥವಾ ಸ್ಥಳೀಯವಾಗಿ ಸಿಗುವ ಬಿತ್ತನೆ ಬೀಜಗಳನ್ನೇ
ಬಳಸಬೇಕು. ಇಂತಹ ಬಿತ್ತನೆ ಬೀಜಗಳು ಬರಗಾಲ – ಪೀಡೆ – ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಇಂತಹ ಬಿತ್ತನೆ ಬೀಜಗಳನ್ನು
ಆಯ್ಕೆ ಮಾಡಿ ನಂತರ ಅವುಗಳನ್ನು ಉಪಚರಿಸಬೇಕು. ಬೀಜೋಪಚಾರಕ್ಕಾಗಿ ಜೈವಿಕ ಗೊಬ್ಬರ, ಪಂಚಗವ್ಯ, ಹಸುವಿನ ಸಗಣಿ – ಗಂಜಲ ಸಾರಗಳನ್ನು
ಬಳಸಬೇಕು.
೧೦. ಬೆಳೆಯುವ ಪ್ರಮುಖ ಬೆಳೆಯೊಂದಿಗೆ ಕನಿ?ಂಔ ಇತರ ೮ ಬೆಳೆಗಳನ್ನು ಬೆಳೆಸಲೇ ಬೇಕು. ಪ್ರತಿ ಗಿಡ ಮತ್ತು ಪ್ರತಿ ಸಾಲುಗಳ ನಡುವೆ ಂPಂ?ಂಂಔ ಅಂತರ
ಇರುವಂತೆ ಬಿತ್ತಬೇಕು.
೧೧. ಬಿತ್ತನೆಯಾದ ಪ್ರತಿ ೧೫ – ೨೦ ದಿನಕ್ಕೊಮ್ಮೆ ಬೆಳೆಗಳ ಮೇಲೆ ಹಸುವಿನ ಸಗಣಿ – ಗಂಜಲ – ನೀರು – ಬೆಲ್ಲ – ಅರಿಶಿಣ ಪುಡಿ ಮಿಶ್ರಿತ ತ್ರಿಮೂರ್ತಿ
ಟಾನಿಕ್ ಸಿಂಪಡಿಸಬೇಕು
೧೨. ಬಿತ್ತಿದ ಬೆಳೆಗಳು ಗಿಡವಾಗಿ ಹೂ ಅರಳುವ ಸಮಯಕ್ಕೆ ೫ ದಿನಕ್ಕೆ ಮುಂಚೆ ಪಂಚಗವ್ಯವನ್ನು ಬಳಸಬೇಕು. ಹಾಗೆಯೇ ಫಲ ಮೂಡುವ ೫ ದಿನಕ್ಕೆ ಮುಂಚೆ
ಪಂಚಗವ್ಯವನ್ನು ಮತ್ತೊಮ್ಮೆ ಬಳಸಬೇಕು. ನಂತರ ಖಟಾವಿಗೆ ೧೦ – ೧೫ ದಿನಗಳ ಮುಂಚೆ ಪಂಚಗವ್ಯವನ್ನು ಬಳಸಬೇಕು.
೧೩.ಬೆಳೆ ಪೀಡೆಗಳ ಸಂಖ್ಯೆ ಹೆಚ್ಚಳವಾಗುವುದನ್ನು ತಡೆಗಟ್ಟಲು ಮೋಹಕ ಬಲೆ ಅಳವಡಿಸಬೇಕು
೧೪.ಬೆಳೆಗಿಡಗಳ ಎಲೆಗಳ ಮೇಲೆ ಪತಂಗಗಳು ಮೊಟ್ಟೆಯಿಡುವುದನ್ನು ತಪ್ಪಿಸಲು ದೀಪದ ಬಲೆಗಳನ್ನು ಹೊಲ – ತೋಟಗಳಲ್ಲಿ ಉರಿಸಬೇಕು
೧೫.ಪೀಡೆಗಳನ್ನು ತಿನ್ನುವ ಪಕ್ಷಿಗಳು ಹೊಲ – ತೋಟಗಳಿಗೆ ಬರುವಂತಾಗಲು ಅಲ್ಲಲ್ಲಿ ಪಕ್ಷಿಗಳ ತಂಗುದಾಣವನ್ನು ನಿರ್ಮಿಸಬೇಕು
೧೬.ಬೆಳೆ ಪೀಡೆಗಳನ್ನು ನಿಯಂತ್ರಿಸಲು ಬೇವಿನ ಬೀಜದ ಸಾರ ಅಥವಾ ಬೇವಿನ ತೈಲದ ಸಾರ, ಬೆಳ್ಳುಳ್ಳಿ – ಹಸಿಮೆಣಸಿನ ಕಾಯಿ – ಶುಂಠಿಯ ರಸಸಾರ
ಮುಂತಾದ ಸಸ್ಯಸಾರಗಳನ್ನು ಬಳಸಬೇಕು ಆಗ ಮಾತ್ರ ನಮ್ಮ ಭೂಮಿ ಫಲತ್ತತೆಯಿಂದ ಕೂಡಿರುತ್ತದೆ.