ಸಾಮಾನ್ಯವಾಗಿ ರಾಜ್ಯದಲ್ಲಿ ರೈತರು ಹೈಬ್ರೀಡ್ ಬಾರೆಹಣ್ಣು ಬೆಳೆಯುವುದನ್ನು ನೋಡಿದ್ದೇವೆ ಹಣ್ಣು ತಿಂದಿದ್ದೇವೆ. ಆದರೆ ಇಲ್ಲಿ ಹೈಬ್ರೀಡ್ ತಳಿ ಬಾರೆಗಿಡ ಮತ್ತು ಹ್ಯಾಪಲ್‍ಗಿಡಕ್ಕೆ ನರ್ಸ್‍ರಿಯಲ್ಲಿ ಕ್ರಾಸ್ ಮಾಡಿದ ಸಸಿಗಳನ್ನು ನಾಟಿಮಾಡಿ ಬೆಳಸಿದ ಗಿಡವೇ ಹೊಸತಳಿಯ ಹ್ಯಾಪಲ್‍ಬಾರೆ. ಇಂತಹ ಕಸಿ ಮಾಡಿದ ಸಸಿಗಳನ್ನ ಇಲ್ಲೊಬ್ಬರು ರೈತ ತಂದು ನಾಟಿಮಾಡಿ ಬೆಳಸಿದ್ದು, ಈಗ ಬೆಳೆ ಫಸಲಿಗೆ ಬಂದಿರುವುದನ್ನು ಕಾಣಬಹುದು.

ಚಳ್ಳಕೆರೆ ತಾಲೂಕು ಸೀಮಾಂದ್ರ ಗಡಿಯ ಜಾಜೂರು ಗ್ರಾಮದ ಶ್ರೀನಿವಾಸ ರೆಡ್ಡಿ ವಯಸ್ಸು ಸುಮಾರು 54 ವರ್ಷ. ಈತ ಮೂಲತ ದಾವಣಗೆರೆ ಜಿಲ್ಲೆ ಕಾರಿಗನೂರು ಕ್ಯಾಂಪ್ ನಿಂದ ವಣಭೂಮಿ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಬೇಕು ಎಂಬ ಕನಸ್ಸು ಹೊತ್ತು ಬಯಲುಸೀಮೆಗೆ ಕಡೆಗೆ ಹೊಲಸೆ ಬಂದವ. ಗ್ರಾಮದ ಹೊರವಲಯದಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಸುಮಾರು ಎಂಟು ಎಕರೆ ಖುಷ್ಕಿ ಭೂಮಿಯ ಖರೀದಿಸಿ ಎರಡು ಕೊಳವೆ ಕೊರೆಸಿದ್ದು, ಒಂದರಲ್ಲಿ ಎರಡು ಇಂಚು ಮತ್ತೊಂದರಲ್ಲಿ ಒಂದುವರೆ ಇಂಚು ನೀರು ಬಂದಿದೆ. ಈ ನೀರಿನಲ್ಲಿ ಒಂದಿಷ್ಟು ಸೂಪರ್ ಭಗ್ವಾ ತಳಿಯ ದಾಳಿಂಬೆ ಬೆಳೆ, ಒಂದಿಷ್ಟು ಮನೆಗೆ ಹಣ್ಣು, ತರಕಾರಿ ಬೆಳೆ ಬೆಳೆಯುವ ಜತೆಗೆ ಮೂರು ಎಕರೆಯಲ್ಲಿ ಹ್ಯಾಪಲ್‍ಬಾರೆ ಗಿಡಗಳನ್ನು ನಾಟಿ ಮಾಡಿಸಿದ್ದಾರೆ.

ಸಸಿಗಳನ್ನು ಕಳೆದ ಆರು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀಕಾಂತ್ ಎಂಬುವರ ನರ್ಸ್‍ರಿಯಿಂದ ಸಸಿಯೊಂದಕ್ಕೆ ಸಾಗಣೆ ವೆಚ್ಚಸೇರಿ ಪ್ರತಿ ಸಸಿಗೆ ಒಟ್ಟು 40 ರೂ ನಂತೆ ಒಟ್ಟು 1100 ಸಸಿಗಳನ್ನು ತರಿಸಿ ಸುಮಾರು ಮೂರು ಎಕರೆಗೆ 12 ರಿಂದ 6 ಅಡಿ ದಾಯದಲ್ಲಿ ನಾಟಿ ಮಾಡಿಸಿ ಹನಿ ನೀರಾವರಿ ಅಳವಡಿಸಿದ್ದಾರೆ. ಬೆಳೆಗೆ ಔಷ, ಗೊಬ್ಬರ, ಕಳೆ ಬೇಸಾಯ ಮತ್ತಿತರೆ ಎಲ್ಲಾ ಸೇರಿ ಸುಮಾರು ಮೂರುಲಕ್ಷ ಹಣ ಖರ್ಚು ಮಾಡಿದ್ದಾರೆ. ಗಿಡಗಳು ನಾಟಿ ಮಾಡಿದ ಆರೇಳು ತಿಂಗಳಿಗೆ ಉಲುಸಾಗಿ ಬೆಳೆದು ಫಸಲಗೆ ಬಂದಿವೆ. ಈಗ ಮೊದಲ ಹಂತದ ಬೆಳೆ ಕಟಾವಿಗೆ ಬಂದಿದ್ದು, ಮೊದಲ ವರ್ಷದ ಕಟಾವಿಗೆ ಮೂರ ರಿಂದ ಮೂರುವರೆ ಟನ್ ಹಣ್ಣು ಇಳುವರಿ ಬರುವ ನಿರೀಕ್ಷೆ ಇದೆ. ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹಣ್ಣಿನ ಬೆಲೆ 30 ರೂ 40 ರೂ ತನಕ ದರ ಇದ್ದು, ಈಸಲ ಒಟ್ಟು ಸುಮಾರು 1.5 ಲಕ್ಷ ಬೆಳೆ ಯಾಗಬಹುದು ಎನ್ನುತ್ತಾರೆ ರೈತ.
ದೀರ್ಘಾವದಿ ಬೆಳೆ ನೀರು ಖರ್ಚು ಕಮ್ಮಿ:
ಹ್ಯಾಪಲ್‍ಬಾರೆ ನಾಟಿಮಾಡಿದ ಮೊದಲ ಒಂದೆರಡು ವರ್ಷ ಗಿಡದ ಕಾಂಡ ದಪ್ಪ ಆಗುವತನಕ ನೀರು ಹಾಸಿದರೆ ಸಾಕು ನಂತರ ಮಳೆಗೆ ಬೆಳೆಯುತ್ತದೆ. ಗಿಡಗಳು ಬೆಳೆಯುತ್ತಾ ಮರಗಳಾಗಿ ಮಾರ್ಪಟ್ಟು ದೀರ್ಘಾವ ಅಂದರೆ ಕನಿಷ್ಟ 20-30 ವರ್ಷದ ತನಕ ಫಸಲು ಪಡೆಯಬಹುದು. ಈ ಬೆಳೆಯನ್ನು ಅತೀ ಕಡಿಮೆ ಖರ್ಚಿನಲ್ಲಿ ಬೆಳೆದು ಅಕ ಲಾಭ ಮತ್ತು ಇಳುವರಿಯನ್ನು ಪಡೆಯಬಹುದು. ಇಂತಹ ಹೊಸ ತಳಿಯ ಹ್ಯಾಪಲ್‍ಬಾರೆ ಬೆಳೆ ಪರಿಚಯಿಸಿ ಬೆಳೆಯಲು ಅಳಿಯ ದಾವಣಗೆರೆಯ ಪ್ರವೀಣ್‍ಕುಮಾರ್ ಸಲಹೆ, ಸಹಕಾರ ಎನ್ನುತ್ತಾರೆ

ಸಂಪರ್ಕ: ಶ್ರೀನಿವಾಸರೆಡ್ಡಿ. ಹೆಚ್ಚಿನ ಮಾಹಿತಿಗಾಗಿ 9686375234 ಗೆ

ಲೇಖನ: ಚಳ್ಳಕೆರೆ ವೀರೇಶ್.