• ಚಳ್ಳಕೆರೆ ವೀರೇಶ್,
 • ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸೋಮಾರಿಗಳಿಗೆ ಹಿರಿಯರು ನೀನೇನು ಬದನೆ ಕಾಯಿ ಮಾಡುತ್ತೀಯ ಎಂದು ಹೇಳುವುದು ಸಹಜ. ಇಂತಹ ಬದನೆ ಕಾಯಿಯೇ ಉದ್ಯಮಿಯ ಬದುಕು ಅರಳಿಸಿದೆ ಎಂದರೆ ಅಚ್ಚರಿ ಪಡಬೇಕು.
  ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಾಲೆಳೆಯಷ್ಟು ದೂರವಿರುವ ನಗರಂಗೆರೆ ಗ್ರಾಮದ ರೈತ ಮೈನಕುಮಾರ್(ಬಾಬು) ಕಳೆದ ೧೫ ವರ್ಷಗಳಿಂದ ಲಾರಿ ಟ್ರಾನ್‌ಪೋರ್ಟ್ಸ್, ಹಾಲಿನ ಪಾಯಿಂಟ್‌ಗಳನ್ನು ಮಾಡಿ ಲಕ್ಷಾಂತರ ರೂಪಾಯಿ ಸಾಲಮಾಡಿಕೊಂಡ ಇವರಿಗೆ ಅಣ್ಣ ತಿಪ್ಪೇಸ್ವಾಮಿಯ ಸಲಹೆಯಂತೆ, ಇರುವ ೫ ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುವಂತೆ ಸಲಹೆ ನೀಡಿದರು. ನೀರಿಲ್ಲದೆ ಕೊಳವೆಬಾವಿ ಬತ್ತಿದೆ. ಈ ಸಂದರ್ಭದಲ್ಲಿ ಕೃಷಿ ಮಾಡಲೇ ಎಂದು ಕಿಚಾಯಿಸಿದ ಅವರು, ಒಮ್ಮೆ ನೋಡಲೇ ಎಂದು ಆಲೋಚಿಸಿ ಚಳ್ಳಕೆರೆ ನಗರದ ನರ್ಸರಿಯಲ್ಲಿ ರಾಂಪುಲಾ ಎಂಬ ತಳಿಯ ಬದನೆ ಸಸಿಗಳನ್ನು ೧ ರೂ ನಂತೆ ೧೦ ಸಾವಿರ ಸಸಿಗಳನ್ನು ಎರಡೂವರೆ ಎಕರೆಗೆ ನಾಟಿ ಮಾಡಿದರು. ಈಗ ಅದು ಫಸಲು ನೀಡಲಾರಂಭಿಸಿ ಕೈತುಂಬ ಹಣ ಗಳಿಸುತ್ತಿದ್ದಾರೆ. ಇತರೆ ಯಾವುದೇ ಕೆಲಸ ನನಗೆ ಬೇಡ್ರಪ್ಪ ಕೃಷಿಯೇ ಸಾಕು ಎಂದು ನೀರಾಳ ಬದುಕು ಕಟ್ಟಿಕೊಂಡಿದ್ದಾರೆ.
 • ಬೆಳೆ ಹೇಗೆ :- ಈ ಬದನೆ ಬೆಳೆ ಸಾಮಾನ್ಯವಾಗಿ ಬಿಳಿ, ಕಪ್ಪು ನೆಲದಲ್ಲಿ ೬ ರಿಂದ ೮ ತಿಂಗಳ ಬೆಳೆಯಾಗಿದ್ದು, ಉತ್ತಮ ಇಳುವರಿಗೆ ಹೆಚ್ಚು ನೀರು ಬೇಕಾಗುತ್ತದೆ. ತೋಟದಲ್ಲಿ ಒಂದು ಬೋರ್‌ವೆಲ್‌ವಿದ್ದು, ಅದರಲ್ಲಿ ಎರಡೂವರೆ ಇಂಚು ನೀರು ಸಿಗುತ್ತಿದೆ. ಬದನೆ ಜೊತೆಯಲ್ಲಿ ಮೆಣಸೀನ ಕಾಯಿ ಸಸಿಯನ್ನು ನಾಟಿ ಮಾಡಿದ್ದು, ಅದೂ ಸಹ ಅಲ್ಪಸ್ವಲ್ಪ ಹಣಗಳಿಸಿಕೊಟ್ಟಿದೆ.
 • ಭೂಮಿ ಸಿದ್ದತೆ :- ಇವರ ಐದು ಎಕರೆ ಜಮೀನು ಭೂಮಿ ಬಿಳಿ ಮಿಶ್ರಿತ ಕರಕಲು ಮಣ್ಣಿನಿಂದ ಕೂಡಿದ್ದು, ಪ್ರತಿ ಬೆಳೆಯ ನಂತರ ಮೂರು ತಿಂಗಳು ಭೂಮಿಗೆ ವಿಶ್ರಾಂತಿ ನೀಡಲಾಗುತ್ತದೆ. ಭೂಮಿಗೆ ರಾಸಾಯನಿಕ ಗೊಬ್ಬರ ಕಡಿಮೆ, ಒಂದು ಬೆಳೆಯ ನಂತರ ಭೂಮಿಗೆ ಬಿಡುವು ನೀಡಿ ನಂತರ ಬೇರೆ ಬೇರೆ ಬೆಳೆ ಬೆಳೆಯ ಒತ್ತು ನೀಡುತ್ತೇವೆ. ಇದರಿಂದ ಭೂಮಿಗೆ ಹೆಚ್ಚು ಗೊಬ್ಬರ ಬೇಕಿಲ್ಲ, ನೀರು ಸಹ ಹಿಡಿದಿಡುತ್ತದೆ. ನಾಟಿ ಮಾಡುವ ಮುನ್ನ ಒಮ್ಮೆ ಕುಂಟೆ ಹೊಡೆದು, ಬದು ನಿರ್ಮಿಸಿ ಸಸಿ ನಾಟಿ ಮಾಡಲಾಗುತ್ತದೆ. ನಾಟಿಯ ನಂತರ ಸಸಿ ರಕ್ಷಣೆಗೆ ರಾಸಾಯನಿಕ, ಮಂಗಳ, ಯೂರಿಯ, ಡಿಎಪಿ ೩ ದಿನಗಳ ನಂತರ ನೀಡಲಾಗುವುದು. ಮೂರ್‍ನಾಲ್ಕು ದಿನಗಳ ಬಳಿಯ ಬೆಳಗ್ಗೆ, ಸಂಜೆ ನೀರು ಹಾಯಿಸಿದಲ್ಲಿ ಒಂದು ತಿಂಗಳಿಗೆ ಹೂ ಬಿಡಲಾರಂಭಿಸುತ್ತದೆ. ಹೂ ಬಿಡುವಾಗ ಸಸಿಗೆ ಗೆಣ್ಣು, ಬಿಳಿ ತಲೆ ಹುಳುಗಳ ಕಾಟ ತಡೆಯಲು ಡೆಲಿಗೇಟ್ ಕಂಪನಿಯ ಔಷಧಿಯನ್ನು ಸಿಂಪಡೆ ಮಾಡುತ್ತಾ ಬಂದಿದ್ದೇವೆ. ಯಾವುದೇ ರೋಗವಿಲ್ಲದೆ ಉತ್ತಮ ಇಳುವರಿ ಸಿಕ್ಕಿದೆ ಎನ್ನುತ್ತಾರೆ ರೈತ ಮೈನಕುಮಾರ್,
 • ಮಾರುಕಟ್ಟೆ :- ಸಾಮಾನ್ಯವಾಗಿ ತರಕಾರಿ ಬೆಳೆದವರು ಎಂದಿಗೂ ನಷ್ಟಕ್ಕೊಳಗಾಗರು ಎಂಬುವುದು ಇವರ ಅಭಿಪ್ರಾಯ. ಆಗಸ್ಟ್ ತಿಂಗಳ ಕೊನೆಯ ವಾರದಿಂದ ಪ್ರಾರಂಭವಾದ ಫಸಲು ಪ್ರತಿ ತಿಂಗಳು ಕನಿಷ್ಟ (೧೫ ಕೆ.ಜಿಯ) ೨೫ ರಿಂದ ೩೦ ಚೀಲಗಳಾಗಿವೆ. ಚಳ್ಳಕೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿದ್ದು ಕೆ.ಜಿಗೆ ೩೦ ರಿಂದ ೩೫, ೪೦ ರೂವರೆಗೂ ಸಿಕ್ಕಿದೆ. ಇನ್ನೂ ಮೂರು ತಿಂಗಳು ಬೆಳೆ ಕೈಸೇರುವ ನಿರೀಕ್ಷೆ ಇದೆ. ಕೂಲಿ, ಸಸಿ, ಗೊಬ್ಬರ, ಔಷಧಿಗೆ ಸುಮಾರು ೭೦ ರಿಂದ ೯೦ ಸಾವಿರ ಖರ್ಚು ಬಂದಿದ್ದು, ಈಗಾಗಲೇ ೧.೫೦ ಲಕ್ಷ ಕೈಸೇರಿದೆ. ಇನ್ನೂ ೧ ಲಕ್ಷ ಕೈಸೇರುವ ಅಭಿಲಾಷೆ ಹೊಂದಿದ್ಧಾರೆ. ಈ ಬೆಳೆಗೆ ಮೊದಲಬಾರಿಗೆ ಕೈಹಾಕಿದ್ದು ಉತ್ತಮ ಲಾಭಸಿಕ್ಕಿದೆ ಎಂದು ನುಡಿಯುತ್ತಾರೆ ರೈತ. ಹೆಚ್ಚಿನ ಮಾಹಿತಿಗೆ ೭೬೭೬೧೯೨೫೩೫ ತಿಳಿಯಬಹುದು.
 • ತಿಪ್ಪೇಸ್ವಾಮಿ ರೈತನ ಅಣ್ಣ.
  ಪೋಟೋ೧ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಾಲೆಳೆಯಷ್ಟು ದೂರವಿರುವ ನಗರಂಗೆರೆ ಗ್ರಾಮದ ರೈತ ಮೈನಕುಮಾರ್(ಬಾಬು).
  ಪೋಟೋ೨ ಸಮೃದ್ದಿಯಾಗಿ ಬೆಳೆದ ಗಿಡಗಳಲ್ಲಿ ಬದನೆ ಬೆಳೆ.
  ಪೋಟೋ೩ ಮಾರುಕಟ್ಟೆಗೆ ಸಿದ್ದವಾಗಿರುವ ಬದನೆ ಬೆಳೆಯ ಚೀಲ.

ವಿಳಾಸ;- ಎನ್.ವೀರೇಶ್ ಸಂಪಿಗೆ ಬೀದಿ ಹಿಂಭಾಗದ ರಸ್ತೆ ಗಾಂಧಿನಗರ ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ-9980173050.