ಮಣ್ಣಿನ ಗುಣದ ಬಗ್ಗೆ ನಮ್ಮ ಹಿರಿಯರು ಹಲವಾರು ಗಾದೆಗಳನ್ನೂ, ಹಾಡುಗಳನ್ನು ಕಟ್ಟಿ ಮಣ್ಣಿನ ಬಗ್ಗೆ ಕೊಂಡಾಡಿದ್ದಾರೆ. ಏಕೆಂದ್ರೆ ನಮ್ಮನ್ನೆಲ್ಲ ಸಲವುವಳು. ಅಂತ ಮಣ್ಣು ಅಂದ್ರೆ ಫಲವತ್ತಾದ ಮಣ್ಣು ರೈತನ ಬದುಕನ್ನು ಹಸನುಗೊಳಿಸುತ್ತದೆ. ಹಾಗಾಗಿ ಫಲವತ್ತಾದ ಮಣ್ಣು ಹೇಗಿರುತ್ತೆ ಎಂಬುದನ್ನು ಓದಿ..

-ಸಂ

ಮಣ್ಣನ್ನು ಕೈಯಲ್ಲಿ ಹಿಡಿದಾಗ, ಕೈ ತಂಪಾಗುವ ಅನುಭವ

ತೋರುಬೆರಳು ಮತ್ತು ಹೆಬ್ಬೆರಳ ನಡುವೆ ಹಿಡಿದಾಗ ಮೃದುವಾಗಿದೆ ಎಂಬ ಅನುಭವ

ಮಣ್ಣನ್ನು ಕೆಳಗೆ ನಿಧಾನವಾಗಿ ಹಾಕಿದಾಗ, ಹುಡಿಹುಡಿಯಾಗಿ ಉದುರುವ ರೀತಿ
ಸುವಾಸನೆ ಬೀರುವ ಮಣ್ಣು

ಸಾವಯವ ವಸ್ತುಗಳಾದ ಬೇರು, ಎಲೆ ಇತ್ಯಾದಿ ಕಾಣಿಸುವ ಮಣ್ಣು ದಟ್ಟ ಬಣ್ಣದಲ್ಲಿರುವ ಮಣ್ಣು

ಇರುವೆ, ಕೀಟಗಳು, ಎರೆಹುಳು ಇತ್ಯಾದಿ ಮಣ್ಣುಜೀವಿಗಳು  ಗೋಚರಿಸುವ ಮಣ್ಣು
ನೀರು ಸುರಿದಾಗ, ಸರಾಗವಾಗಿ ಹೀರಿಕೊಳ್ಳುವ ಮಣ್ಣು ಮೇಲೆ ಬಿರುಬಿಸಿಲಿದ್ದರೂ, ಗಿಡದ ಕೆಳಗೆ ತೇವಾಂಶದಲ್ಲಿರುವ  ಮಣ್ಣು

ಗಟ್ಟಿ ಪದರ ಇರದ ಮಣ್ಣು

ಅಧಿಕ ಸಂಖ್ಯೆಯಲ್ಲಿ ಮಣ್ಣು ಜೀವಿಗಳು ಹುಟ್ಟುವಂತೆ  ವಾತಾವರಣವಿರುವ ಮಣ್ಣು

ಒಣಗಿದ ಎಲೆ – ಕಡ್ಡಿ – ಹುಲ್ಲು ಇತ್ಯಾದಿ ಹೊದಿಸಿದ ಮಣ್ಣು