ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಐಯ್ಯನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2018-19 ನೇ ಸಾಲಿಗೆ ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ರೈತ ಮಕ್ಕಳಿಗಾಗಿಯೇ ಜೂನ್ 1 ರಿಂದ ಮಾರ್ಚ್ 30 ರವರೆಗೆ (10 ತಿಂಗಳ ಕಾಲ) ನಡೆಯುವ ತೋಟಗಾರಿಕೆ ತರಬೇತಿಗೆ ನೇರ ನೇಮಕಾತಿ ಮೂಲಕ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಚಿತ್ರದುರ್ಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು(ಜಿಪಂ), ಹಿರಿಯ ಸಹಾಯಕ ನಿರ್ದೇಶಕರು (ರಾ.ವ) ಇವರ ಕಚೇರಿಯಿಲ್ಲಿ ಹಾಗೂ ಆಯಾ ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಅಥವಾ ವೆಬ್‍ಸೈಟ್ www.horticulture.kar.nic.inನಲ್ಲಿ ಮೇ 16 ರಿಂದ 24 ರವರೆಗೆ ಕಚೇರಿ ವೇಳೆಯಲ್ಲಿ ಪಡೆಯಬಹುದು.
ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ ರೂ.15/-, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.30/- ರ ಇಂಡಿಯನ್ ಪೋಸ್ಟಲ್ ಆರ್ಡರ್/ಡಿಮ್ಯಾಂಡ್ ಡ್ರಾಫ್ಟ್‍ನ್ನು ತೋಟಗಾರಿಕೆ ಉಪನಿರ್ದೇಶಕರು, ಜಿ.ಪಂ. ಚಿತ್ರದುರ್ಗ ಇವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿ ಜೊತೆ ಲಗತ್ತಿಸಬೇಕು.
ಅರ್ಜಿ ಸ್ವೀಕರಿಸಲು ಕೊನೆ ದಿನಾಂ ಮೇ 24 ರ ಸಂಜೆ 5-30 ರೊಳಗೆ. ಸಂದರ್ಶನ ಮಾಡುವ ದಿನಾಂಕ ಮೇ 26 ರಂದು ಬೆಳಿಗ್ಗೆ 10 ರಿಂದ. ಮೇ 28 ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಮತ್ತು ಪ್ರವೇಶಪತ್ರ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜೂನ್ 1 ರಿಂದ ತರಬೇತಿಗೆ ಹಾಜರಾಗಬೇಕು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ರೂ.1250/- ಶಿಷ್ಯವೇತನ ನೀಡಲಾಗುವುದು.
ತರಬೇತಿ ಪ್ರವೇಶ ಬಯಸುವ ಅಭ್ಯರ್ಥಿಯ ತಂದೆತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು, ಈ ಬಗ್ಗೆ ಪಹಣಿ ನೀಡಬೇಕಾಗುತ್ತದೆ, ಅಭ್ಯರ್ಥಿ ಕನಿಷ್ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು, ಪ.ಜಾತಿ/ಪಂಗಡದವರಿಗೆ 18 ರಿಂದ 33 ವರ್ಷ, ಸಾಮಾನ್ಯ ಅಭ್ಯರ್ಥಿಗೆ 18 ರಿಂದ 30 ವರ್ಷ ವಯೋಮಿತಿ ಇರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಚಿತ್ರದುರ್ಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು(ಜಿಪಂ), ಹಿರಿಯ ಸಹಾಯಕ ನಿರ್ದೇಶಕರು (ರಾ.ವ) ಇವರ ಕಚೇರಿಯಿಲ್ಲಿ ಹಾಗೂ ಆಯಾ ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಸಂಪರ್ಕಿಸಬಹುದಾಗಿದೆ.